ದನದ ಶೆಡ್ ನಿರ್ಮಾಣ ಮಾಡಲು ರೂ. 57,000/- ಆರ್ಥಿಕ ನೆರವು

ರೈತ ಬಾಂಧವರೇ ನೀವು ನಿಮ್ಮ ದನಗಳ ಷಡ್ ನಿರ್ಮಾಣ ಬೇಕೆಂದು ಅಂದುಕೊಂಡಿದ್ದೀರಾ ಹಾಗಾದರೆ ಈ ಕೆಲಸ ಮೊದಲು ಮಾಡಬೇಕಾಗುತ್ತದೆ

ದನಗಳ ಷಡ್ ನಿರ್ಮಾಣ ಮಾಡಲು ಸರ್ಕಾರ ಹಲವಾರು ಯೋಜನೆಗಳನ್ನು ತಂದಿರುತ್ತದೆ ಏಕೆಂದರೆ ಹಾಲಿನ ಉತ್ಪನ್ನವನ್ನು ಹೆಚ್ಚಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಧನದ ಶೆಡ್ ನಿರ್ಮಾಣ ಮಾಡಲು ಈ ಯೋಜನೆ ರೈತರಿಗಾಗಿ ತರಲಾಗಿದೆ
ರೈತರು ಹಾಗೂ ಯುವಕರು ನಿರುದ್ಯೋಗ ಯುವಕರು ಈ ಯೋಜನೆಯ  ಜೀವನೋಪಾಯಕ್ಕೆ ಉಪಯೋಗಕಾರಿಯಾಗಿದೆ.

ರೈತರಿಗೆ ಉಚಿತವಾಗಿ ಪಶು ಸಂಗೋಪನೆ ಇಲಾಖೆಯಿಂದ ಉಚಿತವಾಗಿ  ಉಚಿತವಾಗಿ ರೈತರಿಗೆ ನೀಡಲಾಗುತ್ತಿದೆ.ಅದಲ್ಲದೆ ದನಗಳರೋಗಕ್ಕೆ ಲಸಿಕೆಯನ್ನು ಕೂಡ ಉಚಿತವಾಗಿ ನೀಡಲಾಗುತ್ತಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರೆ ನಿಮ್ಮ ಹತ್ತಿರದ ಪಶು ಆರೋಗ್ಯ ಇಲಾಖೆಗೆ  ವೈದ್ಯರನ್ನು ವಿಚಾರಿಸಬೇಕು.

ಹಲವಾರು ವಿಧವಾದ ಯೋಜನೆಗಳು ಇವೆ  ಹಸು ಸಾಲ ಎಮ್ಮೆ ಸಾಲ ಇನ್ನು ಅನೇಕ ವಿಧವಾದ ಯೋಜನೆಗಳು ರೈತರಿಗೆ ಅನುಕೂಲವಾಗಲೆಂದು ಸರ್ಕಾರ ಜಾರಿಗೊಳಿಸಿದೆ.  ಧನದ ಶೆಡ್ ನಿರ್ಮಾಣ ಮಾಡಲು ಸುಮಾರು 57,000  ನಮ್ಮ ಸರ್ಕಾರ ರೈತರಿಗೆ ನೀಡಿದೆ.

ಈ ಯೋಜನೆಯಿಂದ ಹಲವಾರು ರೈತರು ಬದುಕು ಕಟ್ಟಿಕೊಳ್ಳಬಹುದು. ಹಾಗೂ ನೀವು ಷಡ್ ನಿರ್ಮಾಣ ಮಾಡಬೇಕೆಂದರೆ ಮೊದಲು ನಿಮ್ಮ ಜಮೀನಿನಲ್ಲಿ ಯೋಗ್ಯವಾದ ಸ್ಥಳವನ್ನು ಗುರುತಿಸಿ.
ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿರಿ ಮತ್ತು ಇದನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆಯಿಂದ ಸೌಲಭ್ಯವನ್ನು  ಪಡೆಯಬಹುದಾಗಿದೆ.ರೈತರು ಬೆಳೆ ಸಾಲ ಹಾಗೂ ಕೃಷಿ ಹೊಂಡ. ಸ್ಪಿಂಕ್ಲರ್ ಪೈಪ್ ಮುಂತಾದವುಗಳು ಸಹಾಯ ಪಡೆದಂತೆ ಈ ದನಗಳ ಷಡ್ ಕೂಡ ಪಡೆಯಬಹುದು ಕುರಿಗಳು ಸಾಗಾಣಿಕೆ  ಮೀನುಗಾರಿಕೆ ಜೇನು ಸಾಗಾಣಿಕೆ  ಯೋಜನೆಗಳಿಗೆ ರೈತರು ಸಹಾಯಧನ ಪಡೆಯಬಹುದಾಗಿದೆ

ಈ ದನಗಳ ಸೆಡ್ ನಿರ್ಮಾಣ ಮಾಡಲು ಎಲ್ಲ ವರ್ಗದವರು 57,000 ಪಡೆಯಬಹುದಾಗಿದೆ
ಮೊದಲು ಸಾಮಾನ್ಯ ವರ್ಗದ ರೈತರು19500 ಮಾತ್ರ ಪಡೆಯಬಹುದಿತ್ತು.
ಎಸ್ ಸಿ/ ಎಸ್ ಟಿ ವರ್ಗದ ರೈತರಿಗೆ ರೂ. 43,000 ಸಿಗುತ್ತಿತ್ತು

ಈಗಿನ ಯೋಜನೆಯಲ್ಲಿ ಸುಮಾರುರೂ. 11000/- ರೂಪಾಯಿ ಕೂಲಿಯಾಗಿ ಪಡೆಯಬಹುದು
ಉಳಿದ ಹಣವನ್ನು ರೂ.46000/- ರೂಪಾಯಿ ಸಹಾಯಧನವನ್ನಾಗಿ ಪಡೆದುಕೊಂಡು ಶಡ್ ನಿರ್ಮಾಣ ಮಾಡಬಹುದಾಗಿದೆ
ಈ ಯೋಜನೆಯ  ಕಾಮಗಾರಿಯನ್ನು ಪಡೆಯಲು ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಜಾಬ್ ಕಾರ್ಡ್ ಹೊಂದಿರಬೇಕು
ಜಾಬ್ ಕಾರ್ಡ್ ಇಲ್ಲದಂತಹ  ರೈತರು ತಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪಡೆದುಕೊಳ್ಳಬಹುದು

ನಿಮ್ಮ ಹತ್ತಿರದ ಪಶು ವೈದ್ಯ ಅಧಿಕಾರಿಯಿಂದ  ಈ ಮೂಲಕ ಅರ್ಜಿ ಸಲ್ಲಿಸಬಹುದು ಮತ್ತು ಹೆಚ್ಚಿನ ಯಾವುದೇ ರೀತಿಯ ಮಾಹಿತಿ ಬೇಕಾದರೆ ನಿಮ್ಮ ಗ್ರಾಮ ಪಂಚಾಯಿತಿಗೆ ನೀವು ಒಂದು ಸಲ ಭೇಟಿ ನೀಡಿ.

1} ಕೃಷಿ ಮಾಹಿತಿ ರೈತರಿಗಾಗಿ :

ಕೃಷಿ ಹಾಗೂ ಕೃಷಿ ಪೂರಕ ಕಸಬುಗಳ ವ್ಯವಸ್ಥಿತ ಅಳವಡಿಕೆಯೇ ಸಮಗ್ರ ಕೃಷಿ ಪದ್ಧತಿ. ಈ ಪದ್ಧತಿಯು ಕೃಷಿ ಕ್ಷೇತ್ರದಲ್ಲಿ ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ನಿರ್ಧಿಷ್ಟ ಕಾರ್ಯತಂತ್ರಗಳ ಮೂಲಕ ನಿರ್ವಹಣೆ ಮಾಡಿ ಆರ್ಥಿಕ ಮತ್ತು ಉತ್ಪಾದನೆಯಲ್ಲಿ ಸುಸ್ಥಿರತೆಯನ್ನು ಹೊಂದುವುದು ಮುಖ್ಯ ಉದ್ದೇಶ. ಸಮಗ್ರ ಕೃಷಿ ಪದ್ಧತಿಯು ಸಂಕೀರ್ಣ ವ್ಯವಸ್ಥೆಯಾಗಿದ್ದು, ಇದು ಮಣ್ಣು, ಸಸ್ಯಗಳು, ಪ್ರಾಣಿಗಳು, ಉಪಕರಣಗಳು, ಶಕ್ತಿ, ಬಂಡವಾಳ ಮತ್ತು ಇತರ ಪರಿಕರಗಳನ್ನು ಒಂದಕ್ಕೊಂದು ಪೂರಕವಾಗಿ ನಿರ್ವಹಣೆ ಮಾಡುವ ಕೃಷಿ ಪದ್ಧತಿಯಾಗಿದೆ. ಈ ಪದ್ಧತಿಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಸಾಗುವಳಿಯು ಮೂಲ ಚಟುವಟಿಕೆಯಾಗಿದ್ದು ಉಳಿದ ಚಟುವಟಿಕೆಗಳು ಇದಕ್ಕೆ ಪೂರಕವಾಗಿರುತ್ತವೆ.

ಅನುಕೂಲತೆಗಳು

ಒಂದು ಉತ್ಪಾದನಾ ವ್ಯವಸ್ಥೆಯ ತ್ಯಾಜ್ಯಗಳನ್ನು ಇನ್ನೊಂದರಲ್ಲಿ ತೋಡಗಿಸಿ ಮರುಬಳಕೆ ಮಾಡಿ ಕೃಷಿ ಕ್ಷೇತ್ರದಲ್ಲಿ ಕೃಷಿ ಪರಿಕರಗಳನ್ನು ಲಭ್ಯಗೊಳಿಸಬಹುದಾಗಿದೆ.ತಾಂತ್ರಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಉತ್ತಮವಿದ್ದು, ಎಲ್ಲ ಕೃಷಿಕರು ಅಳವಡಿಸಿಕೊಳ್ಳಬಹುದಾಗಿದೆ.ಎಲ್ಲಾ ತಾಂತ್ರಿಕ ಹಾಗೂ ವಾತಾವರಣದ ಅಂಶಗಳನ್ನು ಒಳಗೊಂಡಿದೆಯಲ್ಲದೆ, ಅವುಗಳಿಂದ ಉದ್ಭವಿಸುವ ಸಮಸ್ಯೆಗಳನ್ನು ಒಳಗೊಂಡಿರುತ್ತದೆ.ಕೃಷಿಕರೇ ಭಾಗವಹಿಸಿ ನಿರ್ವಹಿಸುವ ಒಂದು ವ್ಯವಸ್ಥೆಯಾಗಿದೆ.ತಾಂತ್ರಿಕತೆಯ ವರ್ಗಾವಣೆ ಮತ್ತು ಅಳವಡಿಸುವ ಪ್ರಮಾಣ ಹೆಚ್ಚಾಗಿರುತ್ತದೆ.ಎಲ್ಲಾ ಕೃಷಿ ವಿಜ್ಞಾನ ವಿಭಾಗಗಳನ್ನು ಉಪಯೋಗಿಸಿಕೊಂಡು ಜಟಿಲ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸುತ್ತದೆ.ಕುಟುಂಬದ ವಿವಿಧ ಬೇಡಿಕೆಗಳನ್ನು ಪೂರೈಸಿ ವರ್ಷವಿಡೀ ಆದಾಯ ಒದಗಿಸುವುದು.

1} ಕೃಷಿ ಪದ್ಧತಿ:

. ಬೆಳೆ ಆಧಾರಿತ ಸಮಗ್ರ ಕೃಷಿ ಪದ್ಧತಿ: ಈ ಪದ್ಧತಿಯಲ್ಲಿ ಬೆಳೆ ಉತ್ಪಾದನೆ ಮುಖ್ಯ ಉದ್ದೇಶವಾಗಿದ್ದು, ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಆದಾಯ ದೊರೆತು ಇನ್ನುಳಿದ ಪದ್ಧತಿಗಳು ಈ ನಿರಂತರ ಆದಾಯಕ್ಕೆ, ಪೂರಕವಾಗಿರುತ್ತವೆ.ಜಾನುವಾರು ಆಧಾರಿತ ಸಮಗ್ರ ಕೃಷಿ ಪದ್ಧತಿ: ಇದರಲ್ಲಿ ಜಾನುವಾರು ಸಾಕಾಣಿಕೆ ಮುಖ್ಯ ಕಸಬಾಗಿದ್ದು, ಇದರಿಂದ ಹೆಚ್ಚಿನ ಆದಾಯ ದೊರೆಯುತ್ತದೆ. ಬೆಳೆ ಉತ್ಪಾದನೆಯುದನಕರುಗಳಿಗೆ ಮೇವನ್ನು ಒದಗಿಸಲು ಸಹಕಾರಿಯಾಗುತ್ತದೆ. ಉದಾ: ಆಕಳು ಮತ್ತು ಎಮ್ಮೆ ಸಾಕಾಣಿಕೆ, ಕುರಿ ಮತ್ತು ಕೋಳಿ ಸಾಕಾಣಿಕೆ. ಮೀನು ಮತ್ತು ಬಾತುಕೋಳಿ ಸಾಕಾಣಿಕೆ ಮುಂತಾದವುಗಳು.

* ಅರಣ್ಯ ಆಧಾರಿತ ಸಮಗ್ರ ಕೃಷಿ ಪದ್ಧತಿ: ವಿವಿಧೋದ್ದೇಶ ಗಿಡ, ಮರಗಳನ್ನು ಬೆಳೆದು ಅವುಗಳಿಂದ ಗೊಬ್ಬರ, ಮೇವು, ಕಟ್ಟಿಗೆ ಮತ್ತು ಉರುವಲುಗಳನ್ನು ಪಡೆಯುವುದು. + ತೋಟಗಾರಿಕೆ ಆಧಾರಿತ ಸಮಗ್ರ ಕೃಷಿ ಪದ್ಧತಿ: ಈ ಪದ್ಧತಿಯಲ್ಲಿ ಹಣ್ಣಿನ ಗಿಡಗಳು ಮತ್ತು ತರಕಾರಿಗಳು ಮುಖ್ಯ ಪಾತ್ರವಹಿಸುತ್ತವೆ. ಉದಾ: ತೋಟಗಾರಿಕೆ ಮತ್ತು ಕೃಷಿ ಬೆಳೆಗಳ ಪದ್ಧತಿ.

2} ಹೈನುಗಾರಿಕೆ

ಹೈನುಗಾರಿಕೆ ಅವಲಂಬಿತ ಮಿಶ್ರ ಬೇಸಾಯ ಪದ್ಧತಿಯಲ್ಲಿ ಒಂದು ಹೆಕ್ಟೇ‌ರ್ ಪ್ರದೇಶದಲ್ಲಿ ಬೆಳೆ ಯೋಜನೆಯ ಜೊತೆಗೆ 3-4 ಹಾಲು ಕೊಡುವ ಆಕಳುಗಳನ್ನು ಸಾಕುವುದರಿಂದ ಹೆಚ್ಚಿನ ಆದಾಯವನ್ನು ಪಡೆಯಬಹುದು. ಅವುಗಳಲ್ಲಿ ಎರಡು ಆಕಳುಗಳು ವರ್ಷವಿಡೀ ಹಾಲು ಕೊಟ್ಟರೆ ಬೆಳೆಯ ಆದಾಯದ ಜೊತೆಗೆ ಹಾಲಿನ ಮಾರಾಟದಿಂದಲೂ ಹೆಚ್ಚಿನ ಆದಾಯ ಬರುವುದು. ಆಹಾರ ಬೆಳೆಗಳ ಮೇವನ್ನು ದನಗಳಿಗೆ ಆಹಾರವನ್ನಾಗಿ ಬಳಸಿ, ದನಗಳಿಂದ ಬಂದಂತಹ ಸಗಣಿಯನ್ನು ಗೊಬ್ಬರವನ್ನಾಗಿ ಮಾಡಿ ಬೆಳೆ ಉತ್ಪಾದನೆಯಲ್ಲಿ ಬಳಸಬಹುದು. ಒಣ ಪ್ರದೇಶದಲ್ಲಿ ಜರ್ಸಿ ತಳಿಯನ್ನು ಅಥವಾ ಎಮ್ಮೆಗಳನ್ನು ಹಾಗೂ ನೀರಾವರಿ ಪ್ರದೇಶದಲ್ಲಿ ಎಚ್‌. ಎಫ್., ಜರ್ಸಿ ಅಥವಾ ಇತರೆ ಸುಧಾರಿತ ತಳಿಯನ್ನು ಸಾಕಾಣಿಕೆ ಮಾಡಬಹುದು. ಬೆಳೆಗೆ ಬೇಕಾಗುವ ರಾಸಾಯನಿಕ ಗೊಬ್ಬರದ ವೆಚ್ಚದಲ್ಲಿ ಉಳಿತಾಯ ಮಾಡಬಹುದು. 20 ಗುಂಟೆ ಪ್ರದೇಶದಲ್ಲಿ ಹುಲ್ಲು ಬೆಳೆಗಳನ್ನು ಬೆಳೆದು ಉಪಯೋಗಿಸಿದರೆ ಆದಾಯ ಇನ್ನೂ ಹೆಚ್ಚು ಬರುವುದು,

3} ರೇಷ್ಮೆ ಕೃಷಿ

ಕೃಷಿಯಲ್ಲಿ ರೇಷ್ಮೆ ಕೃಷಿಯು ಒಂದು ಮುಖ್ಯವಾದ ಅಂಗವಾಗಿದ್ದು, ಬೇಸಾಯಗಾರರಿಗೆ ಅಧಿಕ ಆದಾಯವನ್ನು ಕೊಡುವುದು. ಹಿಪ್ಪು ನೇರಳೆಯು ರೇಷ್ಮೆ ಹುಳುಗಳಿಗೆ ಪ್ರಮುಖ ಆಹಾರವಾಗಿದ್ದು, ಇದು ಬಹುವಾರ್ಷಿಕ ಬೆಳೆಯಾಗಿರುವುದರಿಂದ ವರ್ಷದಲ್ಲಿ 5-6 ಬಾರಿ ರೇಷ್ಮೆ ಹುಳು ಸಾಕಣೆ ಮಾಡಬಹುದು. ರೇಷ್ಮೆ ಬೇಸಾಯದಲ್ಲಿ ಉತ್ಪತ್ತಿಯಾಗುವ ಉಪ ಪದಾರ್ಥಗಳಾದ ರೇಷ್ಮೆ ಹುಳುವಿನ ಹಿಕ್ಕೆಯನ್ನು ಜೈವಿಕ ಅನಿಲ ಉತ್ಪಾದನೆಯಲ್ಲಿ ಮೀನಿನಆಹಾರವಾಗಿಉಪಯೋಗಿಸಬಹುದು. ಹುಳುಗಳು ತಿಂದು ಬಿಟ್ಟ ಸೊಪ್ಪನ್ನು ದನಗಳ ಆಹಾರವಾಗಿ ಬಳಸಬಹುದು. ಒಂದು ನೂರು ಡಿ.ಎಫ್.ಎಲ್ ಗಳನ್ನು ಸಾಕಣೆ ಮಾಡಲು 20 ಗುಂಟೆ ಹಿಪ್ಪು ನೇರಳೆಯನ್ನು ಬೆಳೆಸಬೇಕಾಗುತ್ತದೆ.

4} ಜೇನು ಸಾಕಣೆ

ಜೇನು ಸಾಕಾಣೆಕೆಯನ್ನು ಸಮಗ್ರ ಕೃಷಿ ಪದ್ಧತಿಯಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಅಳವಡಿಸಿಕೊಳ್ಳಬಹುದಾದಂತಹ ಒಂದು ಉಪಕಸುಬು. ಒಂದು ಹೆಕ್ಟೇರ್ ಪ್ರದೇಶಕ್ಕೆ 4-5 ಜೇನು ಗೂಡುಗಳನ್ನು ಇಟ್ಟು ಹೆಚ್ಚಿನ ಆದಾಯ ಪಡೆಯಬಹುದು. ಜೇನು ಹುಳುಗಳು ನೈಸರ್ಗಿಕವಾಗಿ ದೊರೆಯುವ ಹೂವುಗಳ ಪರಾಗವನ್ನು ಉಪಯೋಗಿಸಿಕೊಂಡು ಜೇನು ಉತ್ಪಾದನೆ ಮಾಡುತ್ತವೆ. ಹೀಗಾಗಿ ಅವುಗಳ ಆಹಾರಕ್ಕಾಗಿ ಯಾವುದೇ ವೆಚ್ಚ ಮಾಡಬೇಕಾಗಿಲ್ಲ. ಇಷ್ಟಲ್ಲದೇ ಬೆಳೆಗಳ ಇಳುವರಿಯನ್ನೂ ಕೂಡ ಹೆಚ್ಚಿಸಬಹುದು. ಜೇನುಗೂಡುಗಳನ್ನು ಇಟ್ಟ ಆರು ತಿಂಗಳಲ್ಲಿ ಮೊದಲನೇ ಸಲ ಜೇನನ್ನು ಪಡೆಯಬಹುದು.ನಂತರದ ದಿನಗಳಲ್ಲಿ ಒಂದು ತಿಂಗಳಲ್ಲಿ ಎರಡು ಸಲ ಜೇನನ್ನು ಪಡೆಯಬಹುದು. ಒಂದು ಜೇನು ಗೂಡಿನಿಂದ ವರ್ಷಕ್ಕೆ 8-9 ಕಿ. ಗ್ರಾಂ ಜೇನು ತುಪ್ಪವನ್ನು ಪಡೆಯಬಹುದು.

5} ಅಣಬೆ ಉತ್ಪಾದನೆ

ಅಣಬೆಯು ಒಂದು ಶೀಲಿಂದ್ರ ಜಾತಿಗೆ ಸೇರಿದ ಪೌಷ್ಟಿಕ ಆಹಾರವಾಗಿದ್ದು, ಇದನ್ನು ಅನೇಕ ಆಹಾರ ಪದಾರ್ಥಗಳನ್ನು ತಯಾರಿಸುವಲ್ಲಿ ಉಪಯೋಗಿಸಲಾಗುತ್ತದೆ. ಮಿಶ್ರ ಕೃಷಿ ಪದ್ಧತಿಯಲ್ಲಿ ಅಣಬೆ ಕೃಷಿ ಒಂದು ಸರಳ ತಾಂತ್ರಿಕತೆ ಹಾಗೂ ವಿಧಾನ. ಸಣ್ಣ ಹಾಗೂ ಅತೀ ಸಣ್ಣ ರೈತರು ತೋಟದ ಮನೆಗಳಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಅಣಬೆ ಉತ್ಪಾದನೆಯನ್ನು ಮಾಡಬಹುದು. ಫ್ಲೋರೋಟಸ್ ಒಂದು ಸಾಮಾನ್ಯವಾಗಿ ಸುಲಭದಲ್ಲಿ ಬೆಳೆಯಬಹುದಾದ ಖಾದ್ಯ ಅಣಬೆ. ಭತ್ತದ ಹುಲ್ಲು ಅಣಬೆ ಉತ್ಪಾದನೆಯಲ್ಲಿ ಉಪಯೋಗಿಸುವ ಒಂದು ಕಡಿಮೆ ವೆಚ್ಚದ ಮತ್ತು ಉತ್ತಮ ಆಧಾರ ನೀಡುವ ವಸ್ತುವಾಗಿದೆ. ಪ್ರತಿ ದಿನಕ್ಕೆ 1.5 – 2.0 ಕಿ. ಗ್ರಾಂ ಅಣಬೆ ಉತ್ಪಾದಿಸಲು 5 ಮೀ. ಉದ್ದ ಹಾಗೂ 2 ಮೀ. ಅಗಲದ ಅಣಬೆ ಶೆಡ್ಡನ್ನು ಕಟ್ಟಿದರೆ ಲಾಭದಾಯಕ.

6} ಆಡು ಸಾಕಾಣಿಕೆ

ಇದು ಒಣ ಪ್ರದೇಶಕ್ಕೆ ಸೂಕ್ತ. ಪ್ರಾರಂಭದಲ್ಲಿ ಐದು ಹೆಣ್ಣು ಆಡು ಮತ್ತು ಒಂದು ಗಂಡು ಆಡನ್ನು ಸಾಕಾಣಿಕೆ ಮಾಡುವುದು ಲಾಭದಾಯಕ. ಮಳೆಯಾಶ್ರಿತ ಮತ್ತು ನೀರಾವರಿ ಪ್ರದೇಶಕ್ಕೆ ಸುಧಾರಿತ ಆಡು ತಳಿಗಳಾದ ಸಿರೋಹಿ, ಬಾರಬರಿ ಹಾಗೂ ಜಮುನಾಪಾರಿ ಕ್ರಮವಾಗಿ ಉತ್ತಮ ಉತ್ಪಾದನಾ ಸಾಮರ್ಥ್ಯ ಹೊಂದಿರುತ್ತವೆ.

7} ಕುರಿ ಸಾಕಾಣಿಕೆ

ಒಣ ಪ್ರದೇಶಕ್ಕೆ ಸೂಕ್ತವಾಗಿದ್ದು, ಆರಂಭದಲ್ಲಿ 20 ಕುರಿ ಮತ್ತು ಒಂದು ಟಗರನ್ನು ಸಾಕಾಣಿಕೆ ಮಾಡುವುದು ಲಾಭದಾಯಕ. ಆರು ತಿಂಗಳ ನಂತರ, ಒಂದು ಕುರಿಯು ಒಂದರಿಂದ ಎರಡು ಮರಿಗಳನ್ನು ಹಾಕುತ್ತದೆ.

8} ಮೊಲ ಸಾಕಾಣಿಕೆ

ಇದು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯವನ್ನು ಕೊಡುವ ಉಪಕಸುಬು. ಒಂದು ಜೊತೆ ಮೊಲ ಸಾಕಿದರೆ ಆರು ತಿಂಗಳ ನಂತರ 5-8 ಮರಿಗಳನ್ನು 20 ದಿನಗಳಿಗೊಮ್ಮೆ ಪಡೆಯಬಹುದು. ಇದರ ಮಾಂಸವು ಕೊಲೆಸ್ಟೆರಾಲ್‌ದಿಂದ ಮುಕ್ತವಾಗಿದ್ದು, ಹೃದಯ ತೊಂದರೆಯಿಂದ ಬಳಲುವ ರೋಗಗಳಿಗೆ ಸೂಕ್ತ. ನ್ಯೂಜಿಲೆಂಡ್ ವೈಟ್ ಹಾಗೂ ಕ್ಯಾಲಿಫೊರ್ನಿಯಾ ವೈಟ್ ಇವು ಮಾಂಸ ಉದ್ದೇಶಿತ ತಳಿಗಳಾಗಿವೆ.

ಜೈವಿಕ ಅನಿಲ ಉತ್ಪಾದನೆ

ಬೆಳೆ ಯೋಜನೆಯ ಜೊತೆಗೆ ದನಕರುಗಳನ್ನು ಹೊಂದಿರುವಂತಹ ರೈತರು ತಮ್ಮ ತೋಟದ ಮನೆಯ ಹತ್ತಿರವೇ 2 ಘನ ಮೀಟರ್ ಸಾಮರ್ಥ್ಯದ ಜೈವಿಕ

Leave a Reply

Your email address will not be published. Required fields are marked *