ನಮಸ್ಕಾರ ರೈತ ಬಂದವರೇ….!
ನಮಸ್ಕಾರ ರೈತ ಬಾಂಧವರೇ ನಾವು ಈಗ ಚರ್ಚಿಸಲ್ಪಡುವ ವಿಷಯ ಏನೆಂದರೆ ಪಹಣಿ ಎಂದರೇನುಆಕಾರ್ ಬಂದ ಎಂದರೇನು? ಜಮೀನಿಗೆ. ಸಂಬಂಧಪಟ್ಟ ಮಾಹಿತಿಯನ್ನು ಕೊಡುತ್ತೇನೆ…!
1} ನಿಮ್ಮ ಜಮೀನಿಗೆ ಸಂಬಂಧಪಟ್ಟ ಟಿಪ್ಪಣಿ ಎಂದರೆ ಏನು..?
2} ನಿಮ್ಮ ಜಮೀನಿನ ಆಕಾರ ಬಂದ್ ಎಂದರೆ ಏನು?
3} (TRC ) ಪಹಣಿ ಎಂದರೆ ಏನು…?
ಈ ಮೇಲಿನ ದಾಖಲಾತಿಗಳು ನಿಮ್ಮ ಜಮೀನಿಗೆ ಯಾವ ರೀತಿ ಸಂಬಂಧ ಹೊಂದಿವೆ ಇದರ ಬಗ್ಗೆ ಮುಖ್ಯವಾಗಿ ತಿಳಿದುಕೊಳ್ಳೋಣ..
1} ಟಿಪ್ಪಣಿ ಎಂದರೆ ಏನು..?
ಟಿಪ್ಪಣಿ ಎಂದರೆ ಏನು? ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಮೊದಲಿಗೆ ಮೈಸೂರು ಸಂಸ್ಥಾನದವರು ಅಳತೆ ಮಾಡಿರುವ ಭೂಮಿಯನ್ನು ಮೂಲ ಸರ್ವೆ ಎಂದು ಕರೆಯುತ್ತಾರೆ.
2} ಹಿಸ್ಸ ಎಂದರೆ ಏನು?
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಭೂಮಿಯನ್ನು ಮಾಪನ ಮಾಡಿರುವುದನ್ನು ಹಿಸ್ಸ ಎಂದು ಕರೆಯುತ್ತಾರೆ
ಹಿಸ ಸರ್ವೇ ಕಾಲದಲ್ಲಿ ಮಾಡಿದ ಮಾಪನದ ನಕ್ಷೆಯನ್ನು ಟಿಪ್ಪಣಿ ಎಂದು ಕರೆಯುತ್ತೇವೆ.
3} ನಿಮ್ಮ ಟಿಪ್ಪಣಿ ಎಲ್ಲಿ ದೊರೆಯುತ್ತದೆ
ಎಲ್ಲಾ ಜಮೀನಿನ ಟಿಪ್ಪಣಿಯು ನಿಮ್ಮ ಹತ್ತಿರದ ತಹಸೀಲ್ದಾರ್ ಆಫೀಸಿನಲ್ಲಿ ಭೂಮಾಪನ ಶಾಖೆಯಲ್ಲಿ 10 ರೂಪಾಯಿ ಪೀ ಅನ್ನು ಕಟ್ಟಿದ ನಂತರ ಏಳು ದಿನದಲ್ಲಿ ಟಿಪ್ಪಣಿ ದೊರೆಯುತ್ತದೆ
ಕೆಲವೊಂದು ರೈತರ ಜಮೀನಿಗೆ ಟಿಪ್ಪಣಿ ಇರುವುದಿಲ್ಲ ಇಂಥವರು ಏನು ಮಾಡಬೇಕು ಎನ್ನುವುದು ಅವರಿಗೆ ತಿಳಿಯುವುದಿಲ್ಲ ಅಂತವರು ಮೊದಲಿಗೆ 11E ಅಥವಾ ಫೋಡಿಗೆ ಅರ್ಜಿ ಸಲ್ಲಿಸ ಬೇಕು ಅಲ್ಲಿಂದ ಸರ್ಕಾರಿ ಭೂಮಾಪನ ಇಲಾಖೆಯವರು ನಿಮ್ಮ ಭೂಮಿಗೆ ಟಿಪ್ಪಣಿಯನ್ನು ರಚಿಸಿಕೊಂಡು ಮತ್ತು ಭೂ ಕಂದಾಯ ಇಲಾಖೆಯಿಂದ ಫೈನಲ್ ಅಪ್ಲೋಡ್ ಆದಮೇಲೆ ನಿಮ್ಮ ಜಮೀನಿಗೆ ಹೊಸ ಟಿಪ್ಪಣಿ ರೆಡಿ ಆಗುತ್ತದೆ
4} ಆಕಾರ ಬಂದ ಎಂದರೆ ಏನು?
ಆಕಾರ ಬಂದ ಎಂದರೆ ಯಾವುದೇ ಒಂದು ಅಂತಿಮ ಜಮೀನಿನ ವಿಸ್ತೀರ್ಣದ ಬಗ್ಗೆ ದಾಖಲೆ ಇರುವ ಪತ್ರವನ್ನು ಆಕಾರ ಬಂದ ಎಂದು ಕರೆಯುತ್ತೇವೆ ಅದರಲ್ಲಿ ಒಟ್ಟು 29 ಕಾಲಂಗಳು ಹೊಂದಿರುತ್ತದೆ.ಮೊದಲನೇ ಕಾಲಂ ನಲ್ಲಿ ಸರ್ವೇ ನಂಬರ್ ಇರುತ್ತದೆ.ಎರಡನೇ ಕಾಲಂ ನಲ್ಲಿ ಕೂಡ ಸರ್ವೇ ನಂಬರ್ ಇರುತ್ತದೆ ಮೂರನೇ ಕಾಲಂನಲ್ಲಿ ಹಿಸ್ಸಾ ನಂಬರ್ ಇರುತ್ತದೆ.ಮತ್ತು ನಾಲ್ಕನೇ ಕಾಲಂನಲ್ಲಿ ಜಮೀನಿನ ಒಟ್ಟು ವಿಸ್ತೀರ್ಣ ಕೊಟ್ಟಿರುತ್ತಾರೆ 5ನೇ ಕಾಲದಲ್ಲಿ ಕರಾವಿನ ಬಗ್ಗೆ ತಿಳಿಸಿರುತ್ತಾರೆ.ಆರನೇ ಕಾಲಂನಲ್ಲಿ ಸಾಗು ಭೂಮಿಯ ವಿಸ್ತೀರ್ಣಕೊಟ್ಟಿರುತ್ತಾರೆಇನ್ನು ಹಲವಾರು ವಿಷಯಗಳನ್ನು ಮುಂದಿನ ಕಾಲಂನಲ್ಲಿ ಕೊಟ್ಟಿರುತ್ತಾರೆ.
ನಿಮ್ಮ ಜಮೀನಿಗೆ ಪಹಣಿ ಫೈನಲ್ ಡಾಕುಮೆಂಟ್ಸ್ ಆಗಿರುವುದಿಲ್ಲ ಮುಖ್ಯವಾಗಿ ಆಕಾರ್ ಬಂದ್ ಜಮೀನಿನ ದಾಖಲಾತಿ ಆಗಿರುತ್ತದೆ
ಆಕಾರ್ ಬಂಧ ಇದ್ದಂತೆ ಪಹಣಿಯನ್ನ ರಚಿಸಲಾಗುತ್ತದೆ ಆಕರ್ ಬಂದ್ ಹೇಗಿರುತ್ತದೆ ಹಾಗೆಯೇ ಪಹಣಿಯನ್ನು ತಿದ್ದುಪಡಿ ಮಾಡಬಹುದು ಆಕಾರ್ ಬಂದು ಕೂಡ ತಿದ್ದುಪಡಿ ಮಾಡಬಹುದು ಈ ತಿದ್ದುಪಡಿ ಯಾವಾಗ ಮಾಡಬೇಕು ಎಂದರೆ ಪಹಣಿಯಲ್ಲಿ ಹೆಚ್ಚಿನ ಜಮೀನು ಹೊಂದಿದ್ದು ಸ್ಥಳದಲ್ಲಿ ಹೆಚ್ಚಿನ ಜಮೀನು ಇರುವುದಿಲ್ಲ ಇಂತಹ ಸಮಯದಲ್ಲಿ ನಾವು ತಿದ್ದುಪಡಿ ಮಾಡಬಹುದು
5} ಪಹಣಿ ಎಂದರೇನು, ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ:
ಜಮೀನು ಯಾರ ಹೆಸರಿನಲ್ಲಿ ಇದೆ ಎಂಬುದರ ಬಗ್ಗೆ ತಿಳಿದುಕೊಳ್ಳುವುದೇ ಪಹಣಿ ಎಂದು ಕರೆಯುತ್ತಾರೆ ಆ ಜಮೀನಿನಲ್ಲಿ ಯಾವ ಬೆಳೆಯನ್ನು ಆ ವರ್ಷದಲ್ಲಿ ಬೆಳೆಯಲಾಗಿದೆ ಎಂಬುದರ ಬಗ್ಗೆ ಪಹಣಿಯಲ್ಲಿ ತಿಳಿಸಲಾಗಿರುತ್ತದೆ ಜಮೀನು ಹೇಗೆ ವರ್ಗಾವಣೆಗೊಂಡಿತು ದಾನದ ಮೂಲಕ ವಿಭಾಗದ ಮೂಲಕ ಈ ಎಲ್ಲ ಮಾಹಿತಿಯನ್ನು ಪಹಣಿ ತಿಳಿಸಿಕೊಡುತ್ತದೆ ಇದರ ಜೊತೆಗೆ ಪಹಣಿದಾರರು ಯಾವ ಬ್ಯಾಂಕಿನಲ್ಲಿ ಸಾಲವನ್ನು ಪಡೆದಿರುತ್ತಾರೆ ಎಂಬ ಮಾಹಿತಿಯನ್ನು ಕೂಡ ಅದರಲ್ಲಿ ವಿವರಿಸಿರುತ್ತಾರೆ
ಉದಾಹರಣೆಗಾಗಿ ಕೃಷಿ ಸಾಲ ಆಗಿರಬಹುದು ಕೆಲವೊಂದು ಸಮಯದಲ್ಲಿ ಪಹಣಿಯೂ ಆಕಾರ ಬಂದಕ್ಕೆ ಹೊಂದಾಣಿಕೆ ಆಗದಿದ್ದಲ್ಲಿ ಇಂತಹ ಸಮಯದಲ್ಲಿ ಆಕಾರ್ ಬಂದ್ ಇದ್ದಹಾಗೆ ಪಹಣಿಯನ್ನು ತಿದ್ದುಪಡೆ ಮಾಡಬಹುದು
ಆಕಾರ್ ಬಂದ್ ಇದು ಒಂದು ಮೂಲ ದಾಖಲಾತಿ ಎನ್ನಬಹುದು
ಪಹಣಿಯಲ್ಲಿ ಮುಖ್ಯವಾಗಿ 16 ಕಾಲಂ ಗಳನ್ನು ಹೊಂದಿರುತ್ತದೆ ಕಾಲಂ 3 ಮತ್ತು 9ರಲ್ಲಿ ಮುಖ್ಯವಾಗಿ ಕಾಲ ಮೂರರಲ್ಲಿ ಜಮೀನ ವಿಸ್ತೀರ್ಣದ ಬಗ್ಗೆ ಮಾಹಿತಿಯನ್ನು ಕೊಟ್ಟಿರುತ್ತಾರೆ
ಕಾಲ 9ರಲ್ಲಿ ಜಮೀನಿನ ಕಳೆದಂತಹ ಕರಾಬ್
ಕಳೆದು ಉಳಿದಿರುವಂತಹ ಜಮೀನನ್ನು ಸಾಗುವಳಿ ಭೂಮಿ ಎಂದು ಕರೆಯುತ್ತಾರೆ ಈ ಭೂಮಿಯ ಸಂಪೂರ್ಣ ಮಾಹಿತಿ ಇರುತ್ತದೆ ಪಹಣಿಯಲ್ಲಿ ಪ್ರಮುಖವಾಗಿ ಇದರಲ್ಲಿ ಸರ್ವೆ ನಂಬರ್ ಹಾಗೂ ಹಿಸ್ಸಾ ಜಮೀನಿನ ಮಾಲೀಕನ ಹೆಸರು ಹೊಂದಿರುತ್ತದೆ ಮತ್ತು ಜಿಲ್ಲೆಯ ಹೆಸರು ತಾಲೂಕಿನ ಹೆಸರು ಊರಿನ ಹೆಸರು ಹಾಗೂ ಇತರೆ ಬ್ಯಾಂಕಿನಿಂದ ಪಡೆದಂತಹ ಸಾಲದ ಮಾಹಿತಿ ಕೂಡ ಇದರಲ್ಲಿ ಇರುತ್ತದೆ
ಈ ಎಲ್ಲ ಮಾಹಿತಿಯು ಒಳಗೊಂಡಿರುತ್ತದೆ
ಇನ್ನೂ ಹೆಚ್ಚಿನ ಮಾಹಿತಿಗಾಗಿ ಕರಾಬ್ ಎಂದರೇನು? ಇದರ ಬಗ್ಗೆ ತಿಳಿದುಕೊಳ್ಳೋಣ ಕರಾಬ್ ಜಮಿನಿಗೆ ಏಕೆ ಮುಖ್ಯವಾಗಿರುತ್ತದೆ ಮತ್ತು ಕರಾಬ್ ಎಂದರೆ ಏನು. ಅ ಮತ್ತು ಬ ಕರಾಬ್ ಇವುಗಳ ನಡುವಿನ ವ್ಯತ್ಯಾಸ ಏನು ಹಾಗೂ ಇದರ ಮಾಹಿತಿಯನ್ನು ತಿಳಿದುಕೊಳ್ಳೋಣ
ಕರಾಬ್ ಆದಂತಹ ಭೂಮಿಯನ್ನು ಸಾಗುವಳಿ ಮಾಡಬಹುದಾ ಅಥವಾ ಇಲ್ಲ ಎಂಬುದರ ಬಗ್ಗೆ ತಿಳಿದುಕೊಳ್ಳೋಣ
ಜಮೀನಿಗೆ ಸಂಬಂಧಪಟ್ಟಂತೆ ಕರಾಬು ಅದರ ಮಾಹಿತಿ ಎಲ್ಲರಿಗೆ ಅತಿ ಅವಶ್ಯಕವಾಗಿರುತ್ತದೆ
ಕರಾಬ್ ಭೂಮಿ ಎಂದರೇನು?
ಆಸ್ತಿಯಲ್ಲಿ ಕೃಷಿಗೆ ಯೋಗ್ಯವಲ್ಲದಂತಹ ಭೂಮಿಯನ್ನು ಕರಾಬ್ ಎಂದು ಕರೆಯುತ್ತಾರೆ ಖರಾಬ್ ನಲ್ಲಿ ಎರಡು ವಿಧಗಳಿವೆ ಅ ಮತ್ತು ಬಾ ಕರಾಬ್ ಎರಡು ವಿಧಗಳಿವೆ
ಮೊದಲಿಗೆ ಅ ಕರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ
ಭೂಮಿಯನ್ನು ಉಳುಮೆಗೆ ಬಾರದಂತಹ ಭೂಮಿಯನ್ನು ಎಂದು ಕರೆಯುತ್ತಾರೆ ಕರಾಬ್ ಭೂಮಿಯ ವಿಸ್ತೀರ್ಣವು ಎಷ್ಟು ಇರುತ್ತದೆ ಅಷ್ಟು ಪಹಣಿಯಲ್ಲಿ ದಾಖಲಿ ಆಗಿರುತ್ತದೆ ಈ ಭೂಮಿಯು ಕೃಷಿಗೆ ಯೋಗ್ಯವಲ್ಲದ ಕಾರಣ ಅದನ್ನು ಇದಕ್ಕೆ ಟ್ಯಾಕ್ಸ್ ವಿಧಿಸುವದಿಲ್ಲ ಜಮೀನ್ ನಲ್ಲಿ ಗುಡ್ಡ ಬದು
ಪಾಳು ಜಮೀನು ಮರಡಿ ಜಮೀನು ಈ ಎಲ್ಲ ಮಾಹಿತಿಯು ಅ ಕರಾಬ್ ನಲ್ಲಿ ಬರುತ್ತದೆ.
2} ಬ ಕರಾಬ್ ಎಂದರೆ ಏನು,,?
ಬಕರಾಬ್ ಎಂದರೆ ಭೂಮಿಯನ್ನು ಸಾರ್ವಜನಿಕ ಉಪಯೋಗಕ್ಕೆ ಬಿಟ್ಟಿರುವಂತಹ ಭೂಮಿಯನ್ನು ಇರುತ್ತದೆ ಉದಾಹರಣೆಗಾಗಿ: ಹಳ್ಳ ಬಂಡಿ ದಾರಿ ರಸ್ತೆ ಕಾಲುದಾರಿ ಸ್ಮಶಾನ ಈ ಎಲ್ಲವನ್ನು ಒಳಗೊಂಡಿರುತ್ತದೆ ಮತ್ತು ನಿಮ್ಮ ಜಮೀನಿನಲ್ಲಿ ಬರುವ ತರಹ ಇದ್ದರೆ ಸಾರ್ವಜನಿಕರ ಉಪಯೋಗಕ್ಕೆ ನೀವು ಅಡ್ಡಿಪಡಿಸಬಾರದು
ಮತ್ತು ನೀವು ಆ ಕರಾಬ್ ನಲ್ಲಿ ಬೆಳೆಯನ್ನು ಬೆಳೆಯಬಹುದಾದರೆ ಅದನ್ನು ನೀವು ನಿಮ್ಮ ಹತ್ತಿರದ ತಲಾಟಿಯವರಿಗೆ ಭೇಟಿ ನೀಡಿ ಇದರ ಬಗ್ಗೆ ಮಾಹಿತಿಯನ್ನು ಕೊಡಬೇಕು ಇಲ್ಲವಾದರೆ ನಿಮಗೆ ಬೆಳೆಯ ಸಮೀಕ್ಷೆ ಆಗದಿರಬಹುದು ಮತ್ತು ಪರಿಹಾರ ವಿಮೆ ಕೂಡ ಬಾರದಂತೆ ಇರಬಹುದು
ನೀವು ಈ ಮಾಹಿತಿಯನ್ನು ನಿಮ್ಮ ಹತ್ತಿರದ ವಿಲೇಜ್ ಅಕೌಂಟಿಗೆ ಮಾಹಿತಿಯನ್ನು ನೀಡಲೇಬೇಕು ಇಲ್ಲವಾದಲ್ಲಿ ಬೆಳೆ ಪರಿಹಾರವೂ ಕೂಡ ಬರದಂತೆ ಆಗಬಹುದು ಈ ಮಾಹಿತಿಯನ್ನು ವಿಲೇಜ್ ಅಕೌಂಟ್ ಗೆ ನೀಡಲೇಬೇಕು
ಈ ಎಲ್ಲ ಮಾಹಿತಿಯು ಅತಿ ಉಪಯುಕ್ತವಾಗಿರುತ್ತದೆ
ಇನ್ನು ಹೆಚ್ಚಿನ ಮಾಹಿತಿ
5} ಪಹಣಿಯಲ್ಲಿ ಹೆಸರುಗಳನ್ನು ತಿದ್ದುಪಡಿ ಮಾಡುವುದು ಹೇಗೆ?
ಪಹಣಿಯಲ್ಲಿ ಹೆಸರುಗಳನ್ನು ತಿದ್ದುಪಡಿ ಮಾಡಬೇಕೆಂದರೆ ಎಂಬುದರ ಬಗ್ಗೆ ನಾವು ಮುಂದೆ ತಿಳಿದುಕೊಳ್ಳೋಣ ಮತ್ತು ಪಹಣಿಯಲ್ಲಿ ಹೆಸರುಗಳನ್ನು ತಿದ್ದುಪಡಿ ಮಾಡಬೇಕಾದರೆ ಎಲ್ಲಿ ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂಬುದರ ಬಗ್ಗೆ ನಾವು ಮಾಹಿತಿಯನ್ನು ತಿಳಿಸಿಕೊಡುತ್ತೇವೆ
ಪಹಣಿಯ ತಿದ್ದುಪಡಿಯ ಮಾಡಿದರೆ ನಿಮಗೇನು ಉಪಯೋಗ ಪಹಣಿಯನ್ನು ತಿದ್ದುಪಡಿ ಮಾಡಿ ಮಾಡಬೇಕಾದರೆ ಮೊದಲಿಗೆ ಹಲವಾರು ದಾಖಲಾತಿಗಳು ಬೇಕಾಗುತ್ತವೆ
1} ಮೊದಲಿಗೆ ನಾವು 1964 ರಿಂದ ಇಲ್ಲಿಯವರೆಗೆ ಪ್ರತಿವರ್ಷದ ಪಾಣಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ನಿಮ್ಮ ಹತ್ತಿರದ ತಾಲೂಕ ಆಫೀಸ್ ಈ ಎಲ್ಲ ದಾಖಲಾತಿಗಳು ಸಿಗುತ್ತವೆ ಅಲ್ಲಿ ನೀವು ಇದರ ದಾಖಲಾತಿಗಳನ್ನು ಪಡೆಯಬಹುದು
2} ಈ ಸ್ಟ್ಯಾಂಪ್ ಪೇಪರ್ ಅನ್ನು ಹೊಂದಿರಬೇಕು 20 ರೂಪಾಯಿ ಮಾತ್ರ ಹೊಂದಿರಬೇಕು
ಹೆಸರು ತಿದ್ದುಪಡಿ ಮಾಡುವಂಥವರ ಹೆಸರು ಇದರಲ್ಲಿ ನಮೂದಿಸಿ ಇದನ್ನು ನೋಟ್ರಿ ಮಾಡಿಸಿಕೊಂಡಿರಬೇಕು
3} ಮಾದರಿ ಅರ್ಜಿಯನ್ನು ಸಿದ್ಧಪಡಿಸಿಕೊಂಡಿರಬೇಕು ಇದರಲ್ಲಿ ಹೆಸರು ನಮೂದಿಸಿರಬೇಕು ನಾವು ಪಹಣಿಯಲ್ಲಿ ಏನು ತಿದ್ದುಪಡಿ ಮಾಡುತ್ತಿದ್ದೇವೆ ಎಂಬುದರ ಮಾಹಿತಿ ಇದರಲ್ಲಿ ಸ್ಪಷ್ಟವಾಗಿ ನಮೂದಿಸಿ ಇರಬೇಕು ಇದರ ಮಾಹಿತಿಯು ನುರಿತ ಟೈಪಿಸ್ಟ್ಗಳಲ್ಲಿ ಕೇಳಿ ಪಡೆಯಬಹುದು
4} ಆಧಾರ್ ಕಾರ್ಡ್ ಹೊಂದಿರಬೇಕು
ಈ ಎಲ್ಲಾ ಮೇಲೆ ಹೇಳಿರುವಂತಹ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಭೂಮಿ ಕೇಂದ್ರಕ್ಕೆ ಈ ಎಲ್ಲದ ಕಲೆಗಳನ್ನು ಸಲ್ಲಿಸಬೇಕು ನಂತರ ಭೂಮಿ ಕೇಂದ್ರದವರು ನಿಮ್ಮ ಊರಿಗೆ ಸಂಬಂಧಪಟ್ಟಂತಹ ದಾಖಲೆಗಳನ್ನು ಇವರು ಗ್ರಾಮ ಲೆಕ್ಕಾಧಿಕಾರಿಗೆ ಕಳುಹಿಸುತ್ತಾರೆ ದಾಖಲೆಗಳು ಸರಿಯಾಗಿ ಇವೆ ಎಂಬುದರ ಬಗ್ಗೆ ನಿರ್ಣಯವನ್ನು ಕೈಗೊಳ್ಳುತ್ತಾರೆ ದಾಖಲೆಗಳು ತಪ್ಪಾಗಿದ್ದರೆ ಈ ಅರ್ಜಿಯನ್ನು ವಜಾ ಗೊಳಿಸುವ ಅಧಿಕಾರ ಹೊಂದಿರುತ್ತಾರೆ ಸರಿಯಾದ ಮಾಹಿತಿಯನ್ನು ಹೊಂದಿದ್ದರೆ ತಿದ್ದುಪಡಿ ಮಾಡುವ ಅಧಿಕಾರ ಹೊಂದಿರುತ್ತಾರೆ
ಇವರ ಆದೇಶದ ಮೇರೆಗೆಯಂತೆ ಭೂಮಿ ಕೇಂದ್ರದವರು ಹೆಸರು ತಿದ್ದುಪಡಿ ಮಾಡಿಕೊಡುತ್ತಾರೆ
ಸುಮಾರು ದಿನಗಳ ನಂತರ ನಿಮಗೆ ಸರಿಯಾದ ಪಹಣಿ ದೊರೆಯುತ್ತದೆ ಈ ರೀತಿಯಾಗಿ ಪಾಹಣಿ ಯ ಹೆಸರುಗಳನ್ನು ತಿದ್ದುಪಡಿ ಮಾಡಬಹುದು.
5} ಪಹಣಿಯಲ್ಲಿ ಹೆಸರು ತಿದ್ದುಪಡಿ ಆಗುವುದರಿಂದ ನಿಮಗೆ ಏನು ಉಪಯೋಗ?
ಭೂಮಿಯನ್ನು ದಾನ ಮಾಡುವುದಕ್ಕೆ ಮತ್ತು ವಿಭಾಗ ಮಾಡುವುದಕ್ಕೆ ಉಪಯೋಗವಾಗುತ್ತದೆ
1) ನಿಮ್ಮ ಪಹಣಿಯಲ್ಲಿ ಹೆಸರುಗಳನ್ನು ತಿದ್ದುಪಡಿ ಅನುಕೂಲ ಬಹಳಷ್ಟಿದೆ
1} ಪಿಎಂ ಕಿಸಾನ್ ಯೋಜನೆಯ ದುಡ್ಡು ಕೂಡ ಬರುತ್ತದೆ
2} ಪಹಣಿಯಲ್ಲಿರುವ ಹೆಸರು ಮತ್ತು ಆಧಾರ್ ಕಾರ್ಡ್ ನಲ್ಲಿರುವ ಹೆಸರು ಒಂದಕ್ಕೊಂದು ಲಿಂಕ್ ಇದ್ದರೆ ಬ್ಯಾಂಕಿನಿಂದ ಸಾಲಗಳನ್ನು ಪಡೆಯಲು ತುಂಬಾ ಅನುಕೂಲವಾಗುವುದು ಅನುಕೂಲವಾಗುತ್ತದೆ
ಈ ರೀತಿ ಹಲವಾರು ವಿಷಯಗಳನ್ನು ಮುಂದಿನ ವಿಷಯದಲ್ಲಿ ತಿಳಿಸಿಕೊಡುತ್ತೇನೆ.