ನಮ್ಮ ಗ್ರಾಮ ಪಂಚಾಯತಿಯ ಸದಸ್ಯರು ಉಪಾಧ್ಯಕ್ಷರು ಅಧ್ಯಕ್ಷರು ಇವರ ಕೆಲಸಗಳು ಏನು…?

ನಮಸ್ಕಾರ ರೈತ ಬಾಂಧವರೇ……!


ಈ ವಿಷಯದಲ್ಲಿ ನಾವು ಗ್ರಾಮ ಪಂಚಾಯಿತಿಯ ಸದಸ್ಯರ ಕರ್ತವ್ಯಗಳು ತಿಳಿದುಕೊಳ್ಳೋಣ ನಾವು ಪ್ರತಿ ಐದು ವರ್ಷಕ್ಕೊಮ್ಮೆ ಅವರನ್ನು ಚುನಾಯಿಸಿ ಗ್ರಾಮ ಪಂಚಾಯಿತಿ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದೇವೆ   ಕೆಲಸ ಕಾರ್ಯಗಳು ಏನು ಎಂಬುದರ ಬಗ್ಗೆ ಹಲವಾರು ಜನರಿಗೆ ಗೊತ್ತೇ ಇರುವುದಿಲ್ಲ ಹಾಗಾಗಿ ಈ ವಿಷಯದಲ್ಲಿ ನಿಮಗೆ ತಿಳಿಸಿಕೊಡುತ್ತೇನೆ ಏಕೆಂದರೆ ನಾವು ಗ್ರಾಮ ಪಂಚಾಯಿತಿಯ ಸದಸ್ಯರನ್ನು ಆಯ್ಕೆ ಮಾಡಿಕೊಂಡಾಗ ಅವರಲ್ಲಿ ನಾವು ಗ್ರಾಮದ ಅಭಿವೃದ್ಧಿ ಹಾಗೂ ಊರಿನಲ್ಲಿ ಬಡವರ ಮನೆ ಹಾಗೂ ಶೌಚಾಲಯ ರಸ್ತೆ ನಿರ್ಮಾಣ ನೀರಿನ ಸೌಕರ್ಯ ಕೆರೆಯಲ್ಲಿನ ಹೋಳು ಎತ್ತುವುದು ಹಾಗೂ ವಿದ್ಯುತ್  ಮತ್ತು ರಸ್ತೆ ದೀಪಗಳು ಕುಡಿಯುವ ನೀರಿನ ಸೌಲಭ್ಯ ಎಲ್ಲಾ ಹಲವಾರು ಮೂಲಭೂತ ಸೌಕರ್ಯ ನಮ್ಮ ಜನರಿಗೆ ಅತಿ ಅವಶ್ಯಕ ಇದರೊಂದಿಗೆ ಇನ್ನು ಹೆಚ್ಚಿನ ವಿಷಯಗಳು ನಮಗೆ ತಿಳಿದಿರುವುದಿಲ್ಲ ಮತ್ತು ಈಗೆಲ್ಲ ಸೌಕರ್ಯಗಳು ಒದಗಿಸಬೇಕಾದರೆ ಗ್ರಾಮ ಪಂಚಾಯಿತಿಯ ಸದಸ್ಯರುಗಳು ಕಾರ್ಯ ಮುಖ್ಯವಾಗುತ್ತದೆ.
ಗ್ರಾಮ ಪಂಚಾಯತಿ ಸದಸ್ಯರ ಕಾರ್ಯಗಳು ಪ್ರತಿಯೊಬ್ಬ ಪ್ರಜೆಗೂ ತಿಳಿಯಲೇಬೇಕು

ನಮ್ಮ ದೇಶದಲ್ಲಿ ಪಂಚಾಯತ್ ರಾಜ್  ತಿದ್ದುಪಡಿ ವಿಧೇಯಕ  ಬಂದಿರುವುದೇ ನಮ್ಮ ಕರ್ನಾಟಕ ರಾಜ್ಯದಲ್ಲಿ ಮೊದಲನೆಯದಾಗಿರುತ್ತದೆ.



1} ಗ್ರಾಮ ಪಂಚಾಯತಿಯ ಸದಸ್ಯನ ತಮ್ಮ ವಾರ್ಡ್ನಲ್ಲಿ ಬರುವಂತಹ ಜನಗಳ ಮರಣ ಹಾಗೂ ಜನಾಂಗ ಪ್ರತಿಯೊಂದು ಮಾಹಿತಿಯು ಅದಕ್ಕೆ ಸಂಬಂಧಪಟ್ಟವರಿಗೆ ಮಾಹಿತಿಯನ್ನು ನೀಡಬೇಕು.


2} ತಮ್ಮ ತಮ್ಮ ಗ್ರಾಮಗಳಲ್ಲಿ ಬರುವಂಥ ಸದಸ್ಯನ ವಾರ್ಡ್ನಲ್ಲಿ  ಚರಂಡಿ ವ್ಯವಸ್ಥೆ ಕೂಡ ಮಾಡಿಸಬೇಕು ಮತ್ತು ಈಗಾಗಲೇ ಚರಂಡಿ ವ್ಯವಸ್ಥೆ ಮಾಡಿದ್ದರೆ ಅದು ಹಾಳಾಗಿರುವ ಸ್ಥಿತಿಯಲ್ಲಿ ಇದ್ದರೆ ಅದನ್ನು ದುರಸ್ತಿ ಮಾಡುವ ಕೆಲಸ ಅವರದ್ದಾಗಿರುತ್ತದೆ.


3} ಸಾರ್ವಜನಿಕ ಆಸ್ತಿ ಇವುಗಳನ್ನು ಬೇರೆಯವರ ಅತಿಕ್ರಮಣಗಳಿಂದ ಒಳಗೊಂಡಿದ್ದರೆ ಅದನ್ನು ತಿರುಗುಗೊಳಿಸುವ ಕಾರ್ಯ ಇವರದ್ದಾಗಿರುತ್ತದೆ.


4} ಸದಸ್ಯರ ತಮ್ಮ ವಾರ್ಡ್ಗಳಲ್ಲಿ ಪ್ರತಿಯೊಂದು ರಸ್ತೆ ಹಾಗೂ ಜನಸಂದಣಿ ಇರುವ ಪ್ರದೇಶದಲ್ಲಿ ವಿದ್ಯುತ್ ದ್ವೀಪದ ಮಾಡಿಸುವ ವ್ಯವಸ್ಥೆ ಮಾಡಿಕೊಡಬೇಕು.
5} ಕೊಳಚೆ ಪ್ರದೇಶದಲ್ಲಿ ನಿರ್ಮೂಲನ್ನು ಮಾಡಿಸುವುದು ಹಾಗೂ ಅನಗತ್ಯವಾದ ಅಂತಹ ಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಿಸಬೇಕಾಗುತ್ತದೆ ಇದಲ್ಲದೆ ಅನಾರೋಗ್ಯ ಇರುವ ಪ್ರದೇಶಗಳನ್ನು ಆರೋಗ್ಯಕರವಾದ ಪ್ರದೇಶವನ್ನಾಗಿ ಮಾಡಿಸಬೇಕಾಗುತ್ತದೆ.


6} ಜನರು ದೈನಂದಿನ ಚಟುವಟಿಕೆಗಳಲ್ಲಿ ಬಳಸುವಂತಹ ತ್ಯಾಜ್ಯ ವಸ್ತುಗಳನ್ನು ಒಂದೇ ಕಡೆಯಾಗಿ ಇಡುವ ವ್ಯವಸ್ಥೆಗಾಗಿ ಗುಂಡಿಗಳನ್ನು ತೋಡಿ ಇಡಬೇಕಾಗಿರುತ್ತದೆ ಇದರಿಂದ ಅವರ ವಾರ್ಡಗಳು ಕೂಡ ಸ್ವಚ್ಛವಾಗಿ ಇರುತ್ತವೆ
ಜನರು ವಾಸವಾಗಿರುವ ಪ್ರದೇಶಗಳನ್ನು ಬಿಟ್ಟು ಸ್ವಲ್ಪ ದೂರದಲ್ಲಿ ತಿಪ್ಪೆ ಗುಂಡಿಗಳನ್ನು ನಿರ್ಮಿಸಿ, ಅದರಲ್ಲಿ ಕಸವನ್ನು ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕವನ್ನು ನಿರ್ಮಿಸಬೇಕು
ತಮ್ಮ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಇವರದ್ದಾಗಿರುತ್ತದೆ.


7} ಗ್ರಾಮ ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವಂತಹ ಮಕ್ಕಳಿಗೆ ರೋಗನಿರೋಧಕ ಚುಚ್ಚುಮದ್ದನ್ನು ನೀಡುವ ಕಾರ್ಯ ಕ್ರಮ ಮಾಡುವುದು ಇವರದಾಗಿರುತ್ತದೆ.


8} ತಮ್ಮ ವ್ಯಾಪ್ತಿಯಲ್ಲಿ ಬರುವಂತಹ ಜನರಿಗೆ ಉದ್ಯೋಗ ಕಾರ್ಡ್ ಚೀಟಿ ನೀಡುವ ವ್ಯವಸ್ಥೆ ಮಾಡುವುದು ಇವರದಾಗಿರುತ್ತದೆ.ಮತ್ತು ಈ ಯೋಜನೆ ಅಡಿಯಲ್ಲಿ ಒಂದು ನೂರು ದಿನದ ಕೆಲಸ ಸಿಗುವಂತೆ ಮಾಡುವುದು ಇವರ ಕರ್ತವ್ಯವಾಗಿದೆ ಮತ್ತು ಆರ್ಥಿಕವಾಗಿ ಸದೃಢವಾಗಿ ಗಳಿಸುವ ಕೆಲಸ ಇವರದಾಗಿರುತ್ತದೆ.


9}ಕಾಲಕಾಲಕ್ಕೆ ಬರುವಂತಹ ಗ್ರಾಮೀಣ ಅಭಿವೃದ್ಧಿ ಯೋಜನೆಗಳು
ಯೋಜನೆಗಳನ್ನು ಜಾರಿ ರೂಪ ತರುವುದು ಇವರ ಕೆಲಸವಾಗಿರುತ್ತದೆ.


10} ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡುವುದು ಇವರ ಕರ್ತವ್ಯವಾಗಿರುತ್ತದೆ.

ಗ್ರಾಮ ಪಂಚಾಯತಿಯ  ನೈತಿಕ ಜವಾಬ್ದಾರಿಗಳು ಕೂಡ ಇವೆ.


1}  ತಮ್ಮ ವಾರ್ಡಿನಲ್ಲಿ ಯಾರಾದರೂ ಮರಣ ಹೊಂದಿದ್ದರೆ ಅವರ ಅಂತ್ಯಕ್ರಿಯೆಗೆ ಸಹಕರಿಸಬೇಕು

2}ತಮ್ಮ ವಾರ್ಡಿನಲ್ಲಿ ಬರುವಂತಹ ನಲ್ಲಿಯ ಕಲೆಕ್ಷನ್ ಕೂಡ ಇವರು ಮಾಡಿಸಬೇಕಾಗುತ್ತದೆ

3} ಅಂಗವಿಕಲರಿಗೆ ಹಾಗೂ ವಿಕಲಚೇತನರಿಗೆ ಪಂಚಾಯಿತಿಯಲ್ಲಿ ಲಭ್ಯವಿರುವ ಸಹಾಯಧನ ಒದಗಿಸುವ ಕಾರ್ಯ ಇವರದ್ದಾಗಿರುತ್ತದೆ

4}  ಬಡವರಿಗೆ ಮನೆ ಇಲ್ಲದವರಿಗೆ ನಿರಾಶ್ರಿತರಿಗೆ ಮನೆಯನ್ನು ಒದಗಿಸುವ ಕಾರ್ಯ ಇವರದಾಗಿರುತ್ತದೆ

  5} ಸಣ್ಣಪುಟ್ಟ ವಾದ ವಿವಾದಗಳನ್ನು ಬಗೆಹರಿಸುವ ಕೆಲಸ ಇವರದ್ದಾಗಿರುತ್ತದೆ
ಗ್ರಾಮ ಪಂಚಾಯಿತಿಯ ಪ್ರತಿಯೊಬ್ಬ ಸದಸ್ಯರಿಗೂ ಇವರು ಸೇವೆಯ ಅಡಿಯಲ್ಲಿ ಕೆಲಸ ಮಾಡುವ ಇದರಿಂದ ಇವರಿಗೆ ಯಾವುದೇ ವೇತನ ಕೂಡ ಇವರಿಗೆ ಇರುವುದಿಲ್ಲ.


6} ಹೀಗಾಗಿ ಪ್ರತಿಯೊಬ್ಬ ಸದಸ್ಯರಿಗೂ ಸರ್ಕಾರ ಪ್ರತಿ ತಿಂಗಳು ಇವರಿಗೆ 1000 ಗೌರವ ಧನವಾಗಿ ನೀಡುತ್ತದೆ

ಇನ್ನು ನಾವು ಗ್ರಾಮ ಪಂಚಾಯಿತಿಯಲ್ಲಿ ಬರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕಾರ್ಯಗಳನ್ನು ತಿಳಿದುಕೊಳ್ಳೋಣ.


ನಿಮ್ಮ ಹಳ್ಳಿಯು ಒಂದು ಮಾದರಿ ಗ್ರಾಮ ಆಗಬೇಕಾದರೆ ಅಲ್ಲಿನ ಗ್ರಾಮ ಪಂಚಾಯತಿ ವ್ಯವಸ್ಥೆ ಒಂದು ವ್ಯವಸ್ಥಿತವಾದಂತಹ ರೂಪ ದಲ್ಲಿ ಇರಬೇಕು ಅಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುವ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕೆಲಸ ಅತಿ ಮುಖ್ಯವಾಗಿರುತ್ತದೆ
ಗ್ರಾಮಕ್ಕೆ ಅನುಕೂಲವಾಗುವಂತ ಕೆಲಸಗಳ ಮಾಡುವಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಕರ್ತವ್ಯ ತುಂಬಾ ಮುಖ್ಯವಾಗಿರುತ್ತದೆ
ಮೊದಲನೇದಾಗಿ ಬಡ ಕಾರ್ಮಿಕರಿಗೆ ಜಾಬ್ ಕಾರ್ಡ್ ಮಾಡಿಸುವ ಕರ್ತವ್ಯ ಇರುತ್ತದೆ ಮತ್ತು ಒಂದು ನೂರು ದಿನಗಳ ಕೆಲಸ ಕೊಡಿಸುವ ಜವಾಬ್ದಾರಿ ಇವರದ್ದಾಗಿರುತ್ತದೆ ಮತ್ತು ಕೂಲಿ ಕಾರ್ಮಿಕರನ್ನು ಆರ್ಥಿಕವಾಗಿ ಸದೃಗೊಳಿಸುವ ಕಾರ್ಯ ಇವರದ್ದಾಗಿರುತ್ತದೆ
ಗ್ರಾಮದಲ್ಲಿ ಇರುವ ಜನರ ಆಸ್ತಿ ನೋಂದಣಿ ಮತ್ತು ಆಸ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ನಿರ್ವಹಣೆ ಮಾಡುವುದು
ಗ್ರಾಮ ಪಂಚಾಯಿತಿಯಲ್ಲಿ ನಾಗರಿಕರ ಸಮಸ್ಯೆಯನ್ನು ಆಲಿಸಲು ಗ್ರಾಮ ಸಭೆಗಳನ್ನು ಕಾಲಕ್ಕೆ ತಕ್ಕಂತೆ ಇವರು ಮಾಡಬೇಕಾಗುತ್ತದೆ ಮತ್ತು ಇದನ್ನು ಪರಿಹಾರ ರೂಪದಲ್ಲಿ ತರಬೇಕಾಗುತ್ತದೆ.

 

ದಾಖಲೆಗಳು ಹಾಗೂ ಪರಿಶೀಲಿಸುವ ಅಧಿಕಾರ ಇವರು ಹೊಂದಿರುತ್ತಾರೆ:


ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಗ್ರಾಮಕ್ಕೆ ಸಂಬಂಧಪಟ್ಟ ಯಾವುದೇ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದು ಇವರ ಕೆಲಸವಾಗಿರುತ್ತದೆ
ಕಾಲಕಾಲಕ್ಕೆ ಬರುವ ಗ್ರಾಮೀಣ ಅಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಕೆಲಸ ಇವರದ್ದಾಗಿರುತ್ತದೆ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರಿಗೆ ಕಾನೂನು ಬದ್ಧವಾಗಿ ವ್ಯವಸ್ಥಿತವಾಗಿ ತಲುಪುವ ಕಾರ್ಯವನ್ನು ಇವರು ಮಾಡಬೇಕಾಗುತ್ತದೆ
ಗ್ರಾಮ ಪಂಚಾಯತಿಯಲ್ಲಿ ಪ್ರತಿಯೊಂದು ಕೆಲಸ ಕಾರ್ಯಗಳು ಪಾರದರ್ಶಕವಾಗಿ ಮಾಡುವಂತೆ ಇವರು ನೋಡಿಕೊಳ್ಳಬೇಕು
ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಡಿಯಲ್ಲಿ ನೌಕರರ ಮಾಡುವ ಕೆಲಸದ ಮೇಲೆ ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಇವರು ಹೊಂದಿರುತ್ತಾರೆ
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಮನೆಗೆ ಶೌಚಾಲಯ ಒದಗಿಸುವ ವ್ಯವಸ್ಥೆಯ ಇವರು ಹೊಂದಿರಬೇಕಾಗುತ್ತದೆ
ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹಳ್ಳಿಗಳಲ್ಲಿ ಬರುವಂತಹ ಪುರುಷರು ಮತ್ತು ಮಹಿಳೆಯರ ಸಮುದಾಯದ ಶೌಚಾಲಯಗಳನ್ನು ನಿರ್ಮಿಸುವುದು ಮತ್ತು ಅವುಗಳನ್ನು ನಿರ್ವಹಿಸುವುದು
ವಾರ್ಷಿಕವಾಗಿ ಕರಾರಿನ ಮೂಲಕ ಗ್ರಾಮದಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು
ಮತ್ತು ಹಳ್ಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಿಸಬೇಕು
ಸರ್ಕಾರದ ಅಧಿನಿಯಮದ ಅಡಿ ವಿಧಿಸಬೇಕಾದ ತೆರಿಗೆಯ ದರಗಳು ಮತ್ತು ಶುಲ್ಕಗಳು ನಿಯತಕಾಲಿಕವಾಗಿ ಪರಿಶೀಲಿಸುವುದು ಮತ್ತು ವಸೂಲಿ ಮಾಡುವುದು ಮತ್ತು ಇದನ್ನು ಸರ್ಕಾರಕ್ಕೆ ಜಮಾ ಮಾಡುವ ಕರ್ತವ್ಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಹೊಂದಿರುತ್ತಾರೆ
ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಾಖಲಾತಿಗಳನ್ನು ಅವಾಗವಾಗ ಅವರನ್ನು ಪರಿಶೀಲಿಸಬೇಕು ಮತ್ತು ಇವರು ದಾಖಲಾತಿಯನ್ನು ಖಚಿತಪಡಿಸಿಕೊಳ್ಳಬೇಕು
ಹಳ್ಳಿಯಲ್ಲಿ ಬರುವ ಮಕ್ಕಳ ಸಾರ್ವತ್ರಿಕವಾಗಿ ರೋಗನಿರೋಧಕ ಚುಚ್ಚುಮದ್ದನ್ನು ಕೊಡಿಸುವ ಕಾರ್ಯ ಕ್ರಮ ಇವರು ಮಾಡಬೇಕಾಗುತ್ತದೆ
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಹಳ್ಳಿಯಲ್ಲಿ ಚರಂಡಿ ವ್ಯವಸ್ಥೆ ಕೂಡ ಮಾಡಿಸಬೇಕು
ಮುಖ್ಯವಾಗಿ ಇವರು ಸಾರ್ವಜನಿಕ ರಸ್ತೆ ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಆಗಿರುವ ಪ್ರದೇಶಗಳನ್ನು ತೆರವುಗೊಳಿಸಿ ಕಾರ್ಯ ಇವರದ್ದು ಆಗಿರುತ್ತದೆ
ಮತ್ತು ಸರ್ಕಾರದ ಸ್ಥಳಗಳನ್ನು ಒತ್ತುವರಿ ಆಗದಂತೆ ಇವರು ನೋಡಿಕೊಳ್ಳಬೇಕು
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಹಳ್ಳಿಗಳಿಗೆ ರಸ್ತೆ ಬದಿ ದೀಪಗಳನ್ನು ಇವರು ಹಾಕಿಸಬೇಕು ಮತ್ತು ವಿದ್ಯುತ್ ದೀಪದ ಶುಲ್ಕವನ್ನು ಸಂದಾಯ ಮಾಡುವುದು ಕೆಲಸ ಇವರದ್ದಾಗಿರುತ್ತದೆ
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತಹ ರಸ್ತೆ ಗುಂಡಿಗಳು ಹಾಗೂ ಚರಂಡಿಯ ಗುಂಡಿಗಳು ಇವುಗಳ ತೆರವುಗೊಳಿಸುವ ಕಾರ್ಯ ಇವರದ್ದಾಗಿರುತ್ತದೆ
ಇನ್ನು ಅತಿ ಮುಖ್ಯವಾಗಿ ಗ್ರಾಮ ಪಂಚಾಯಿತಿಯಲ್ಲಿ ಬರುವಂತಹ ಜನಗಣತಿ ಹಾಗೂ ದನಗಳ ಗಣತಿ ಬೆಳೆಗಳ ಗಣತಿ ನಿರುದ್ಯೋಗಿಗಳ ಗಣತಿ ಬಡತನ ರೇಖೆಗಳಿಗೆ ಇರುವಂಥವರ ಗೆಣತಿ ಯುಗಳ ಸಂಬಂಧಪಟ್ಟ ದಾಖಲೆಗಳನ್ನು ನಿರ್ವಹಣೆ ಮಾಡೋದು ಇರುವ ಕೆಲಸವಾಗಿರುತ್ತದೆ.

*ಇವುಗಳು ಗ್ರಾಮ ಪಂಚಾಯತಿಯ ಸದಸ್ಯ ಅಧ್ಯಕ್ಷರು ಉಪಾಧ್ಯಕ್ಷರು ಅವರ ಕಾರ್ಯಗಳು ಆಗಿರುತ್ತದೆ ಈ ವಿಷಯವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು.

Leave a Reply

Your email address will not be published. Required fields are marked *