*ಕುರಿ ಸಾಕಾಣಿಕೆಗೆ ತರಬೇತಿ ಯೊಂದಿಗೆ* ಊಟ – ವಸತಿ ಸಹಿತ ಉಚಿತ ತರಬೇತಿ;

1} ಸ ವಿಸ್ತಾರವಾದ ಮಾಹಿತಿ*:

1.  ನಮ್ಮ ಜೀವನದಲ್ಲಿ ಸ್ವಾವಲಂಬಿ ಜೀವನ ನಡೆಸಲು ಸಹಯವಾಗುವಂತೆ ಯುವಕ-ಯುವತಿಯರನ್ನು ಗುರುತಿಸಿ ಪ್ರೇರೆಪಿಸಿ ಸ್ವಯಂ ಉದ್ದೋಗ ತರಬೇತಿ ನೀಡುವುದು

• ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಗಳನ್ನು ಅಭಿವೃದ್ಧಿ ಪಡಿಸುವುದು. ಸ್ವಯಂ ಉದ್ಯೋಗ ಮಾಡಲು ಸಹಾಯವಾಗುವಂತೆ ಆರಂಭಿಸಲು ಸಮಾಲೋಚನೆ,ನೇರವು ಜೊತೆಗೆ ಮಾರ್ಗದರ್ಶನ ನೀಡುವುದು ರುಡ್ ಸೆಟ್  ನಿರ್ಧಾರ ಗೊಂಡಿದೆ.

• ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಮಾರ್ಗದ ಮಧ್ಯ ಇರುವ  ಈ ರುಡ್ ಸೇಟ್ ಸಂಸ್ಥೆ ಇದುವರಿಗೆ ಸರಿ ಸುಮಾರು ಇಪ್ಪತ್ತು ಸಾವಿರ ನಿರುದೋಗಿ ಯುವಕರಿಗೆ ಸ್ವಂತ ಉದ್ಯೋಗ ಕೈಗೊಳ್ಳುವಂತೆ ತರಬೇತಿ ನೀಡಿ ಅದರಲ್ಲಿ ಹದಿನೇಳು ಸಾವಿರಕ್ಕಿಂತ ಹೆಚ್ಚುನಿರುದ್ಯೋಗಿ ಯುವಕರಿಗೆ ಬದುಕು ಕಟ್ಟಿ ಕೊಳ್ಳಲು1987 ರಲ್ಲಿಸಿಂಡಿಕೇಟ್ ಬ್ಯಾಂಕ್ ಮತ್ತು ಕೆನಾರ ಬ್ಯಾಂಕ್ ಹಾಗೂ ಶ್ರೀ ಕ್ಷತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುವ ಈ ಸಂಸ್ಥೆ ಗ್ರಾಮೀಣ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಹೊಣೆ ಹೊತ್ತುಕೊಂಡಿದೆ.                                                                           
•  ಈಗ ಕರ್ನಾಟದಲ್ಲಿ ಆರು ಕೇಂದ್ರಗಳು ಸೇರಿದಂತ್ತೆ 17 ರಾಜ್ಯಗಳಲ್ಲಿ ಒಟ್ಟು 27 ಅಂಗಸಂಸ್ಥೆಗಳನ್ನು ಹೊಂದಿ ನಿರುದ್ಯೋಗವನ್ನು ಬುಡಸಹಿತ ಕಿತ್ತ್ತೆಯಸೆವುದಕ್ಕೆ ಪಣತೊಟ್ಟಿದೆ.             
• ಪೋಟೊ ಗ್ರಾಫಿ , ವಿಡಿಯೋ ಗ್ರಾಫಿ, ಹೊಲಿಗೆ ಯಂತ್ರ ತರಬೇತಿ ,ಗಣಕ ಯಂತ್ರ ತರಬೇತಿ ಎರೆಹುಳು ಗೊಬ್ಬರ ತಯಾರಿಕೆ ಸೇರಿದಂತೆ 55-60 ವಿವಿಧ ಬಗೆಯ ತರಬೇತಿಗಳನ್ನು ಯುವಕ-ಯುವತಿಯರ ಸ್ವಂತ ಉದ್ಯೋಗಕ್ಕೆ ತಯಾರು ಮಾಡಲಾಗುತ್ತಿದೆ.                                                                                                                     
•  ಇದರಿಂದ ತರಬೇತಿ ಪಡೆದ ನಂತರದಲ್ಲಿ ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನಾರ ಬ್ಯಾಂಕ್ ಗಳಿಂದ ಸಬ್ಸಿಡಿ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಉದ್ಯೋಗ ಸಹ ಕಲ್ಪಿಸಿ ಕೊಡುತ್ತದೆ.

2} ಎಲ್ಲಿ ತರಬೇತಿ ನಡೆಸಲಾಗುತ್ತದೆ?     

ಬೆಂಗಳೂರು  ಗ್ರಾಮಾಂತರ ಜಿಲ್ಲೆ:                                                                                             

• ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್ಸೆಟ್ ಸಂಸ್ಥೆಯ ವತಿಯಿಂದ ನಡೆಸುವ ಈ ತರಬೇತಿಗೆ 10 ದಿನಗಳ ಕುರಿ ಸಾಕಾಣಿಕೆ ಉಚಿತ ತರಬೇತಿಯು ನಡೆಸಲಾಗುತ್ತದೆ.   

                                          
9 ಸೆಪ್ಟಂಬರ್ 2024 ರಿಂದ ಆಯೋಜಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ, ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.

       

•  18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು.      

3} ತರಬೇತಿ ಪಡೆಯುವವರ ವಯೋಮಿತಿ.       

•  ಗ್ರಾಮೀಣ ಪ್ರದೇಶದ ಆಧಾರ್ ಕಾರ್ಡ್ ಹೊಂದಿರಬೇಕು ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.

ತರಬೇತಿಯು ಹೇಗೆ ನಡೆಯುತ್ತದೆ.        

•  ತರಬೇತಿಯು ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.                   
                                 ಅರ್ಜಿ ಸಲ್ಲಿಸಲು ಸೆಪ್ಟಂಬರ್ 5 ಕೊನೆಯ ದಿನವಾಗಿದೆ ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು.

4} ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ   . 

 

ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ,                                                             ದೂರವಾಣಿ ಸಂಖ್ಯೆ 9241482541 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *