ನಿಮ್ಮ ಭೂಮಿ ಒತ್ತುವರಿ ಆಗಿದೆಯೇ..?

ಹಾಗಿದ್ದರೆ ಮೊದಲು ಈ ಕೆಲಸ ಮಾಡಿ…!

ನಮಸ್ಕಾರ ರೈತ ಬಾಂಧವರೇ…!


ರೈತರು ಆಸ್ತಿ ಹೊಂದಿರುತ್ತಾರೆ ಪ್ರತಿಯೊಬ್ಬರೂ ಆಸ್ತಿ ಹೊಂದಿದ್ದ ರೈತರು ಈ ವಿಷಯವನ್ನು ತಿಳಿದುಕೊಳ್ಳಲೇಬೇಕು ಇದು ಜಮೀನಿಗೆ ಸಂಬಂಧಪಟ್ಟಂತ ಅತಿ ಮುಖ್ಯವಾದ ವಿಷಯವಾಗಿರುತ್ತದೆ ಹದ್ದುಬಸ್ತು ಈ ವಿಷಯ ತಿಳಿದುಕೊಳ್ಳಬೇಕು ಜಮೀನಿನ ಹತ್ತುವಸ್ತು ಎಂದರೇನು ಇದನ್ನು ಬಾಂಧರ್ ಮೋಜುಣಿ ಎಂದು ಕರೆಯುತ್ತಾರೆ ನಾವು ಈಗ ನಿಮಗೆ ಹೇಳುವುದೇನೆಂದರೆ 10 ಬಸ್ಸು ಅಂದರೇನು ಅದ್ದುಬಸ್ತಿಗೆ ಅರ್ಜಿ ಎಲ್ಲಿ ಸಲ್ಲಿಸಬೇಕು ಎಂಬುದರ ವಿಷಯದ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ ಅರ್ಜಿಯನ್ನು ಸಲ್ಲಿಸುವಾಗ ಯಾವ ದಾಖಲೆಗಳೊಂದಿಗೆ ನೀವು ಅರ್ಜಿ ಸಲ್ಲಿಸಬೇಕು ಮತ್ತು ಎಲ್ಲಿ ಸಲ್ಲಿಸಬೇಕು ಎನ್ನುವುದು ಈ ವಿಷಯದಲ್ಲಿ ಸಹ ವಿಸ್ತಾರವಾದ ಮಾಹಿತಿಯನ್ನು ನಿಮಗೆ ಕೊಡಲಾಗಿರುತ್ತದೆ
ಹದ್ದು ಬಸ್ಲಿ ಎಂದರೇನು ರೈತರ ಮುಖ್ಯವಾಗಿ ತಿಳಿದುಕೊಂಡಿರಬೇಕು
ವಿಷಯದಲ್ಲಿ ಸರ್ವೆ ಇಲಾಖೆಯವರು ಅವರ ಪಾತ್ರೇನನ್ನು ಎಂಬುದರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ

1} ಹದ್ದುಬಸ್ತು. ಎಂದರೇನು?

ಇದರ ಬಗ್ಗೆ ನಾವು ತಿಳಿದುಕೊಳ್ಳೋಣ
ನಿಮ್ಮ ದಾಖಲೆಗಳಲ್ಲಿ ಇರುವ ಆಸ್ತಿಯ  ಮತ್ತು ನೀವು ಸಾಗುವಳಿ ಮಾಡುವ ಜಮೀನಿನ ವಿಸ್ತೀರ್ಣಕ್ಕೂ ಈ ಎರಡರಲ್ಲಿ ವ್ಯತ್ಯಾಸ ಕಂಡು ಬಂದರೆ ನೀವು ಮಾಡಬೇಕಾದ ಕೆಲಸವೇ ಹದ್ದು ಬಸ್ತು ಕೆಲಸವಾಗಿರುತ್ತದೆ  ಇದನ್ನು ನಾವು. ಹದ್ದುಬಸ್ತು ಎಂದು ಕರೆಯುತ್ತೇವೆ.
ದಾಖಲೆಯಲ್ಲಿ ಇರುವಂತಹ ವಿಸ್ತೀರ್ಣವನ್ನು ತೆಗೆದುಕೊಂಡು ಭೂಮಾಪಕರು ಬಂದು ವಿಸ್ತೀರ್ಣವನ್ನು ಅಳೆದುಕೊಟ್ಟು ಹೋಗುತ್ತಾರೆ
ಮತ್ತು ಅದನ್ನು ಗುರುತಿಸಿ ಬಾರ್ಡರ್ ಹಾಕಿ ಕೊಡ್ತಾರೆ
ನಿಮ್ಮ ಹೊಲಗಳಲ್ಲಿ ಈ ರೀತಿ ಅದ್ದುಬಸ್ತಿನಲ್ಲಿ ಏರುಪೇರು ಆಗಿದ್ದರೆ ಈ ಕೆಲಸ ಮಾಡಲೇಬೇಕಾಗುತ್ತದೆ  ಆಸ್ತಿಯಲ್ಲಿ ಹಲವಾರು ತಂಟೆ ತಕರಾರುಗಳು ಇರುತ್ತವೆ ಆಸೆಯಲ್ಲಿ ಅಕ್ಕಪಕ್ಕದವರು ಜೊತೆ ಸಾಮಾನ್ಯವಾಗಿ ಹದ್ದು ಬಸ್ತಿನ  ಗೋಸ್ಕರ ಗಲಭೆಗಳು ಉಂಟಾಗುತ್ತಲೇ ಇರುತ್ತವೆ. ಇವುಗಳನ್ನು ಬಗೆಹರಿಸಿಕೊಳ್ಳಬೇಕಾದರೆ ಹದ್ದುಬಸ್ತಿಗೆ ಅರ್ಜಿ ಕೊಡಲೇಬೇಕಾಗುತ್ತದೆ ಕಲ್ಲಿನ ಗೂಟಗಳು ಮಾಯವಾಗಿದ್ದರೆ ಅಥವಾ ನಿಮ್ಮ ಆಸ್ತಿಯ ಬದಿಯುವರು ಒತ್ತುವರಿ ಮಾಡಿದ್ದರೆ ಹಿಂದಿ ಅರ್ಜಿ ಸಲ್ಲಿಸಿ ಇಲ್ಲವಾದಲ್ಲಿ ಗಲಭೆಗಳು ಕಲಹ ಉಂಟಾಗುತ್ತದೆ
ನಿಮ್ಮ ಆಸ್ತಿಯಲ್ಲಿ ಕೆಲವು ಪದಗಳು ಒಡೆದು ಹೋಗಿದ್ದರೆ ಹಾಗೂ ಕಲ್ಲಿನ ಗೂಟಗಳು ಕಾಣದಿದ್ದರೆ ಅವುಗಳನ್ನು ಮರು ನಿರ್ಮಾಣ ಮಾಡಿ ಭೂಮಾಪನ ಇಲಾಖೆಯವರು ಕೊಡುತ್ತಾರೆ
ನೀವೇನಾದರೂ ಹದ್ದು ಬಸ್ತಿಗೆ  ಅರ್ಜಿ ಸಲ್ಲಿಸಲು ವಿಚಾರಿಸದರೆ ಈ ಅರ್ಜಿ ಎಲ್ಲಿ ಸಲ್ಲಿಸಬೇಕು ಮತ್ತು ಹೇಗೆ ಸಲ್ಲಿಸಬೇಕು.

2} ಈ ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳು ಯಾವುವು?

ಇನ್ನೂ ಮುಂದೆ ತಿಳಿಸಿಕೊಡಲಾಗುವುದು ದಾಖಲೆಗಳು ಹಲವಾರುಗಳು ಹಲವಾರು ಇರುತ್ತವೆ ಅವುಗಳನ್ನು ನೀವು ರೆಡಿ ಮಾಡಿ ಇಟ್ಟುಕೊಳ್ಳಬೇಕು
ಅರ್ಜಿಗಳನ್ನು ಕೊಡಬೇಕಾದರೆ ನೀವು ಕೈ ಬರಹದಲ್ಲಿ ಕೊಡಬೇಕು ಅಥವಾ ನಿಮ್ಮ ಹತ್ತಿರದ ಜೆರಾಕ್ಸ್ ಅಂಗಡಿಗಳಲ್ಲಿ ಒಂದು ಫಾರ್ಮೆಟ್ ಸಿಗುತ್ತದೆ ಅದನ್ನು ಪೂರ್ಣ ಸಂಪೂರ್ಣವಾಗಿ ತುಂಬಿ ಅರ್ಜಿ ಸಲ್ಲಿಸಬೇಕು
ಇದಕ್ಕೆ ಸರ್ಕಾರದಿಂದ ಯಾವುದೇ ನಿಗದಿತ ಅರ್ಜಿ ಫಾರ್ಮಗಳು ದೊರೆಯುವದಿಲ್ಲ ಹೀಗಾಗಿ ಕೈಬರಹದ ಮೂಲಕ ನೀವು ಅರ್ಜಿ ಸಲ್ಲಿಸಲೇಬೇಕು ಇದಕ್ಕೆ ಯಾವುದೇ ರೀತಿಯ ದೊಡ್ಡ ಖರ್ಚು ಕೂಡ ಇರುವುದಿಲ್ಲ
ಅರ್ಜಿ ಸಲ್ಲಿಸಬೇಕಾದರೆ ಮಾಲೀಕನ ಹೆಸರು ಮತ್ತು ಆಧಾರ್ ಕಾರ್ಡ್ ನಂಬರ್ ಹಾಗೂ ಮೊಬೈಲ್ ನಂಬರ್ ಸರ್ವೇ ನಂಬರ್ ಈ ಎಲ್ಲ ಮಾಹಿತಿಯನ್ನು ನೀವು ಕೊಡಬೇಕಾಗುತ್ತದೆ
ನಿಮ್ಮ ಆಸ್ತಿಯ ನಾಲ್ಕು ದಿಕ್ಕಿಗೆ ನಲ್ಲಿರುವ ಚೆಕ್ ಬಂಡಿಯನ್ನು ಕೂಡ ತಯಾರಿಸಿ ನೀವು ಕೊಡಬೇಕಾಗುತ್ತದೆ.

3} ನೀವು ಹದ್ದಿಬಸ್ತಿಗೆ ಅರ್ಜಿ ಸಲ್ಲಿಸಬೇಕಾದರೆ ಇದಕ್ಕೆ ಮುಖ್ಯ ಕಾರಣಗಳು ಏನು ಎಂಬುದನ್ನು ವಿವರಣೆಯಾಗಿ ಬರೆಯಬೇಕಾಗುತ್ತದೆ..!

ಇದಕ್ಕೆ ಆಸ್ತಿಯಲ್ಲಿ ಏಕ ಮಾಲೀಕತ್ವ ಹೊಂದಿರಬೇಕು ಇಲ್ಲವಾದಲ್ಲಿ ಅರ್ಜಿ ಸಲ್ಲಿಸಲು ಬರುವುದಿಲ್ಲ ಏಕ ಮಾಲೀಕತ್ವ ಇದ್ದರೆ ಮಾತ್ರ ಈ ಅರ್ಜಿ ಸಲ್ಲಿಸಲು ಬರುತ್ತದೆ

ಹದ್ದಿಬಸ್ತಿಗೆ ಅರ್ಜಿ ಸಲ್ಲಿಸಲು ಎಲ್ಲಿ ಸಲ್ಲಿಸಬೇಕು ಮತ್ತು ಹೇಗೆ ಸಲ್ಲಿಸಲು ಬೇಕು ಎಂಬುದರ ಮಾಹಿತಿ
ನೀವು ಅರ್ಜಿ ಸಲ್ಲಿಸಬೇಕಾದರೆ ಮೊದಲು ಆಧಾರ್ ಕಾರ್ಡ್ ಮತ್ತು ಜಮೀನಿನ ಪಹಣಿ ಪತ್ರ ಬೇಕಾಗುತ್ತದೆ
ಈ ಎಲ್ಲಾ ಕಾಗದಪತ್ರಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ನೆಮ್ಮದಿ ಕೇಂದ್ರ ಅಥವಾ ನಾಡಕಚೇರಿಗೆ ಆಫೀಸಿಗೆ ಅರ್ಜಿಯನ್ನು ಸಲ್ಲಿಸಬೇಕು
ನಾಡಕಛೇರಿ ಹಾಗೂ ನೆಮ್ಮದಿ ಕೇಂದ್ರ ಇರುವಂತಹ ಸ್ಥಳಗಳಲ್ಲಿ ಜೆರಾಕ್ಸ್ ಅಡಿಗಳು ಇದ್ದೇ ಇರುತ್ತದೆ ಅಲ್ಲಿ ದೊರೆಯುವಂತಹ ಅರ್ಜಿಯಿಂದ ನೀವು ತುಂಬಿ ಅರ್ಜಿ ಸಲ್ಲಿಸಬೇಕು.


  ಭೂಮಿಯ ಆಜು ಬಾಜು ಅವರ ಹೆಸರುಗಳು ಹಾಗೂ ಅವರ ಆಧಾರ್ ಕಾರ್ಡ್ ಮೊಬೈಲ್ ನಂಬರ್ ಇನ್ನಿತರ ವಿಷಯಗಳನ್ನು ತಿಳಿದಿರುತ್ತಾರೆ ಅವುಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಕೊಡತಕ್ಕದ್ದು
ಈ ಎಲ್ಲಾ ಫಾರ್ಮುಲನು ತುಂಬಿ ನಾಡಕಛೇರಿ ಅಥವಾ ನೆಮ್ಮದಿ ಕೇಂದ್ರಗಳಲ್ಲಿ ಕೊಟ್ಟರೆ ಅವರು ಈ ಅರ್ಜಿಯನ್ನು ಸಲ್ಲಿಸುತ್ತಾರೆ ಸಲ್ಲಿಸಿದ ನಂತರ  ಎಕ್ನಾಲಜಿ ರಿಸಿಪ್ಟನ್ನು ಪಡೆದುಕೊಳ್ಳಿ.
ಅರ್ಜಿ ಶುಲ್ಕ ಅವಾಗವಾಗ ವ್ಯತ್ಯಾಸವಾಗುತ್ತಿರುತ್ತದೆ ನಿಮ್ಮ ಕೇಂದ್ರಗಳಲ್ಲಿ ಕೇಳಿ ದುಡ್ಡನ್ನು ತುಂಬಬೇಕಾಗುತ್ತದೆ.
ಹಕ್ಕುಗಳನ್ನು ಹೊಂದಿರುತ್ತಾರೆ.
ಈ ಅರ್ಜಿಯನ್ನು ಇಲಾಖೆಯವರು ಕೂಲಂಕುಶವಾಗಿ ಪರಿಶೀಲಿಸುತ್ತಾರೆ
ಮತ್ತು ಇಲಾಖೆಯಲ್ಲಿ ದೊರೆಯುವಂತಹ ಹಳೆ ದಾಖಲೆಗಳನ್ನು ಕೂಡ ಇವರು ಪರಿಶೀಲಿಸಿ ನಂತರ ಇದಕ್ಕೆ ಒಂದು ಟಿಪ್ಪಣಿಯನ್ನು ರೆಡಿ ಮಾಡುತ್ತಾರೆ
ಮತ್ತು ಹಿಸ್ಸ ಪ್ರತಿ ಕೂಡ ಇವರು ನಕಲು ಪ್ರತಿ ರೆಡಿ ಮಾಡಿ ಇಟ್ಟುಕೊಳ್ಳುತ್ತಾರೆ.


ತದನಂತರದಲ್ಲಿ ನೀವು ಕೊಟ್ಟಂತಹ ಹದ್ದುಬಸ್ತಿ ಆಸ್ತಿಯೇ ಇಲ್ಲಿನ ನಾಲ್ಕು ದಿಕ್ಕಿನ ಮಾಲೀಕರಿಗೆ ಅವರು ನೋಟೀಸ್ ಅನ್ನು ಕಳಿಸುತ್ತಾರೆ.
ನಂತರ ನೋಟಿಸು ನೀಡಿದ ನಂತರ ಒಂದು ನಿಗದಿತ ದಿನಾಂಕವನ್ನು ಆ ನೋಟಿಸಿನಲ್ಲಿ ನಮೂದಿಸಿರುತ್ತಾರೆ. ಹೀಗಾಗಿ ಅವರು ಅದೇ ದಿನಾಂಕದಂದು ಅಲ್ಲಿ ಬಂದು ಹದ್ದುಬಸ್ತುನ್ನು ಮಾಡಿಕೊಡುತ್ತಾರೆ
ಹದ್ದುಬಸ್ತು ಮಾಡಿಸಬೇಕಾದರೆ ಮೊದಲು ತಿಳಿದುಕೊಳ್ಳಬೇಕಾದ ಮುಖ್ಯ ಅಂಶಗಳು
ಹದ್ದುಬಸ್ತು ಮಾಡುವಾಗ ಹೊಲಗಳಲ್ಲಿ ಬೆಳೆಗಳು ಇದ್ದರೆ ಅವರು ಭೂಮಾಪಕರು ಹಿಂಬರಹ ಕೊಟ್ಟು ಅದನ್ನು ರದ್ದು ಪಡಿಸುವ ಅಧಿಕಾರವನ್ನು ಹೊಂದಿರುತ್ತಾರೆ.


ಹದ್ದು ಬಸ್ತು ಮಾಡಿಸುವಾಗ ಏಕ ಮಾಲೀಕತ್ವದ ವನ್ನು ಹೊಂದಿರುತ್ತದೆ ಇದಕ್ಕೆ ಯಾವುದೇ ರೀತಿಯ ರೈತರು ಅಥವಾ ಸಾರ್ವಜನಿಕರು ಅಡ್ಡಿಪಡಿಸಲು ಬರುವುದಿಲ್ಲ
ಇಲ್ಲಿ ಇನ್ನೊಬ್ಬರ ಆಸಕ್ತಿ ಇಚ್ಛೆಯಂತೆ ಅವರು ಹೇಳಿದ ಹಾಗೆ ಇಲ್ಲಿ ಕೇಳಲಾಗುವುದಿಲ್ಲ
ಹದ್ದುಬಸ್ತನು ನಿಲ್ಲಿಸಬೇಕಾದರೆ ಆಸಕ್ತರು ನ್ಯಾಯಾಲಯದಿಂದ ತಡೆ ಆಜ್ಞೆ ತಂದಿದ್ದರೆ ಮಾತ್ರ ಇದನ್ನು ಇವರು ನಿಲ್ಲಿಸಬಹುದು
ನಕ್ಷೆ ಒಂದು ಕಡೆ ಮತ್ತು  ಕಬ್ಜಾ ಇನ್ನೊಂದು ಕಡೆ ಇದ್ದರೆ ಭೂಮಾಪಕರು ಇದನ್ನು ಪರಿಗಣಿಸುವುದಿಲ್ಲ
ಇದನ್ನು ಪರಿಗಣಿಸಿ ವಾಸ್ತವಿಕ ಅರ್ಜಿ ಪಡೆದು ಮೇಲಾಧಿಕಾರಿಗಳಿಗೆ ತಿಳಿಸುತ್ತಾರೆ.

4}ಹದ್ದು ಬಸ್ತು ಮಾಡಿದ ನಂತರ ರೈತರ ಜವಾಬ್ದಾರಿಗಳು:


ನಿಮ್ಮ ಪಕ್ಕದಲ್ಲಿ ಮಾಡಿದ್ದಾರೆ ಅದನ್ನು ಕೇಳಿ ಪಡೆದುಕೊಳ್ಳಬೇಕು ಮತ್ತು ಯಾವುದೇ ರೀತಿಯ ಜಗಳಗಳನ್ನು ಮಾಡಕೂಡದು
ಭೂಮಿಯ ಎದುರುದಾರ ಭೂಮಿಯನ್ನು ಕೊಡಲು ಒಪ್ಪದಿದ್ದರೆ ಇದನ್ನು ಪಂಚನಾಮೇ ಮೂಲಕ ಇದನ್ನು ಬಗೆಹರಿಸಿಕೊಳ್ಳಬೇಕು.
ಈ ಎಲ್ಲದರ ಮೂಲಕ ಎದುರುದಾರ ಮಾತು ಕೇಳದಿದ್ದರೆ ಹತ್ತಿರದ ಪೊಲೀಸ್ ಠಾಣೆಯಲ್ಲಿ ಸಹಾಯ ಪಡೆದು ಇದನ್ನು ಬಗೆಹರಿಸಿಕೊಳ್ಳಬೇಕು
ಮತ್ತು ಕೋರ್ಟ್ ಕೇಸು ಇವುಗಳನ್ನು ಮಾಡುವುದು ಉತ್ತಮವಲ್ಲ ವೈ ಮನಸು ಇಟ್ಟುಕೊಳ್ಳಬಾರದು ಯಾವುದೇ ರೀತಿಯಿಂದ ಮಾತುಕತೆ ಮೂಲಕ ರಾಜಿ ಆಗುವುದರ ಮೂಲಕ ಬಗೆಹರಿಸಿಕೊಳ್ಳುವುದು ಉತ್ತಮ.

Leave a Reply

Your email address will not be published. Required fields are marked *