ರೈತ ಸಂಪರ್ಕ ಕೇಂದ್ರದಲ್ಲಿ ದೊರೆಯುವ ಸೌಲಭ್ಯಗಳು ಯಾವುವು?

ರೈತ ಸಂಪರ್ಕಿ ಕೇಂದ್ರದಲ್ಲಿ ನೀವೆಷ್ಟು ಸೌಲಭ್ಯ ಪಡೆದಿದ್ದೀರಿ

ನಮಗೆ ತಿಳಿದಷ್ಟು ಮಾಹಿತಿ ನಿಮಗಾಗಿ

ನಮಸ್ಕಾರ ರೈತ ಬಾಂಧವರೇ…!

ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಇದರ ಬಗ್ಗೆ ನಿಮಗೆಷ್ಟು ಗೊತ್ತು?

ರೈತ ಸಂಪರ್ಕ ಕೇಂದ್ರ ರೈತರಿಗೆ ಎಷ್ಟು ಉಪಯುಕ್ತವಾದುದು.

ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸಿಗುವ ಸೌಲಭ್ಯಗಳೇನು..?

ರೈತರಿಗೆ ಉಪಯುಕ್ತವಾಗುವಂತ ಯಂತ್ರಗಳು ಕೃಷಿ ಉಪಕರಣಗಳು ದೊರೆಯುತ್ತವೆ…?

ಎಂಬುದರ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ.

ರೈತರಿಗೆ ಅನುಕೂಲವಾಗಲೆಂದು ರೈತ ಸಂಪರ್ಕ ಕೇಂದ್ರಗಳನ್ನು ತೆರೆಯಲಾಗಿದೆ ರೈತ ಸಂಪರ್ಕ ಕೇಂದ್ರದಲ್ಲಿ ಹಲವಾರು ರೈತರಿಗೆ ಅನುಕೂಲವಾಗುವಂತಹ ಉಪಕರಣಗಳು ಹಾಗೂ ಯೋಗ್ಯ ದರದಲ್ಲಿ ಬೀಜ ಗೊಬ್ಬರ ವಿತರಣೆ ಮಾಡಲಾಗುತ್ತದೆ. ಅವುಗಳ ಜೊತೆಯಲ್ಲಿ ರೈತರಿಗೆ ಉಪಯುಕ್ತವಾಗುವಂತಹ ಹೈನುಗಾರಿಕೆಗೆ ಉಪಯೋಗಿಸುವ ಚಾಪ್ ಕಟರ್ ಅಥವಾ ವಣಹುಲ್ಲು ಕತ್ತರಿಸುವ ಯಂತ್ರಗಳು ಕೂಡ ಅಲ್ಲಿ ದೊರೆಯುತ್ತವೆ ಹಾಗೂ ಯೋಗ್ಯ ದರದಲ್ಲಿ ಔಷಧಿ ಕೂಡ ಸಿಗುತ್ತವೆ ಔಷಧಿ ಯಾವುದು ಎಂದರೆ ಕಡಿಮೆ ಬೆಲೆಯಲ್ಲಿ ಕೂಡ ದೊರೆಯುತ್ತವೆ.
ಹಾಗೂ ರಸಗೊಬ್ಬರು ಕೂಡ ದೊರೆಯುತ್ತವೆ ಈ ಎಲ್ಲ ಮಾಹಿತಿ ಇನ್ನು ಹೆಚ್ಚಿನ ಬಗ್ಗೆತಿಳಿದುಕೊಳ್ಳೋಣ.
ಪ್ರತಿಯೊಂದು ಊರಿನಲ್ಲಿ ತಮ್ಮದೇ ಆದಂತ ಸರ ಹದ್ದಿನಲ್ಲಿ ರೈತ ಸಂಪರ್ಕ ಕೇಂದ್ರಗಳನ್ನು ತೆರೆದಿಯಲಾಗುತ್ತಿರುತ್ತದೆ.
ಅಲ್ಲಿ ದೊರೆಯುವಂತ ಸೌಲಭ್ಯಗಳು ಯಾವುವು ಮತ್ತು ಏನು ದೊರೆತೇವೆ ಎಂಬುದರ ಬಗ್ಗೆ ರೈತರಿಗೆ ಅಷ್ಟೊಂದು ತಿಳಿದಿರುವುದಿಲ್ಲ.
ಗೊತ್ತಿದ್ದಷ್ಟು ಮಾಹಿತಿ ಈ ಒಂದು ವಿಷಯದಲ್ಲಿ ಚರ್ಚಿಸಲಾಗಿದೆ ಅವುಗಳ ಮಾಹಿತಿಯನ್ನು ಪಡೆದುಕೊಳ್ಳುವುದಲ್ಲದೆ ಅವುಗಳನ್ನು ಕೂಡ ನೀವು ಬಳಸುವುದು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಈ ಒಂದು ಯೋಜನೆಯನ್ನು ಪ್ರತಿ ರೈತರು ತಿಳಿದುಕೊಳ್ಳುವುದು ಮುಖ್ಯವಾಗಿದೆ.
ರೈತರಿಗೆ ಕೃಷಿ ಉಪಕರಣಗಳ ಬಗ್ಗೆ ಗೊತ್ತಿರುವುದಿಲ್ಲ ಹಾಗಾಗಿ ಈ ವಿಷಯದಲ್ಲಿ ಸ್ವಲ್ಪ ಚರ್ಚಿಸೋಣ.
ರೈತ ಸಂಪರ್ಕ ಕೇಂದ್ರದಲ್ಲಿ ಮೊದಲನೆದಾಗಿ ರೈತರಿಗೆ ಸಿಗುವ ಮೊದಲನೆಯದು.

1} ಬೀಜ ಮತ್ತು ರಸಗೊಬ್ಬರಗಳು:



ರೈತರಿಗೆ ಅನುಕೂಲವಾಗಲೆಂದು ಬೀಜ ಮತ್ತು ರಸಗೊಬ್ಬರುಗಳು ವಿತರಣೆ ಮಾಡಲಾಗುತ್ತದೆ.


ಉತ್ತಮ ಗುಣಮಟ್ಟದ ಬೀಜ ಮತ್ತು ರಸಗೊಬ್ಬರುಗಳು ಕೂಡ ಸಿಗುತ್ತವೆ ರಿಯಾಯಿತಿ ದರದಲ್ಲಿ ಪ್ರತಿ ವರ್ಷವೂ ಕೂಡ ವಿತರಣೆ ಮಾಡಲಾಗುತ್ತದೆ ಇಲ್ಲಿ ಸಾಮಾನ್ಯ ವರ್ಗದ ರೈತರಿಗೆ 50% ರಿಯಾಯಿತಿ ದರದಲ್ಲಿ ಕೊಡಲಾಗುತ್ತದೆ
ಮತ್ತು ಎಸ್ಸಿ ಎಸ್ಟಿ ರೈತರಿಗೆ ಶೇಕಡಾ 75 ರಷ್ಟು ರಿಯಾಯಿತಿ ದರದಲ್ಲಿ ಕೊಡಲಾಗುತ್ತದೆ.

2} ಕೀಟನಾಶಕ ಔಷಧಿಗಳು:



ರೈತರಿಗೆ ಕೀಟಗಳ ಹಾವಳಿಗಳು ತುಂಬಾ ಕಾಡುವುದರಿಂದ ಅವುಗಳ ನಿಯಂತ್ರಣಕ್ಕಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಕಡಿಮೆ ದರದಲ್ಲಿ.     ಕೀಟನಾಶಗಳು ದೊರೆಯುತ್ತವೆ ಹಾಗೂ ಉತ್ತಮ ಫಸಲು ಪಡೆಯಲು ಉತ್ತಮವಾದಂತಹ ಟಾನಿಕ್ ಅಥವಾ ಮೈಕ್ರೋ ನ್ಯೂಟ್ರಿಯಂಟ್ಸ್ ಹೊಂದಿರುವ ಔಷಧಿಗಳ ದೊರೆಯುತ್ತವೆ ಇವುಗಳ
ಉಪಯೋಗ ಕೂಡ ಪಡೆಯಬಹುದು ಇವುಗಳನ್ನು ವರ್ಷ ಪೂರ್ತಿ ಪ್ರಾದೇಶಿಕ ಅನುಗುಣವಾಗಿ ಕೊಡಲಾಗುತ್ತದೆ.

3} ಕೃಷಿ ಯಂತ್ರೋಪಕರಣಗಳು:

ರೈತರಿಗೆ ಅನುಕೂಲವಾಗಲೆಂದೆ ಕೃಷಿ ಯಂತ್ರೋಪಕರಣಗಳನ್ನು ಗೌರ್ಮೆಂಟ್ ಸಹಾಯಧನದಿಂದ ವಿತರಿಸಲಾಗುತ್ತದೆ ಇವುಗಳು ಕೂಡ ರೈತರಿಗೆ ಅತಿ ಕಡಿಮೆ ಬೆಳಗಲಲ್ಲಿ ದೊರೆಯುತ್ತವೆ ಹಾಗೂ ರೈತರಿಗೆ ಅನುಕೂಲವಾಗಲಿದೆ ಸಹಾಯಧನದ ಅಡಿಯಲ್ಲಿ ಇವುಗಳನ್ನು ವಿತರಿಸಲಾಗುತ್ತದೆ ಈ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ರೈತರು ಕೂಡ ಪಡೆಯಬಹುದಾಗಿದೆ ಏಕೆಂದರೆ ಪ್ರತಿಯೊಬ್ಬ ರೈತರನ್ನು ತಮ್ಮ ತಮ್ಮ ಹೊಲಗಳಲ್ಲಿ ಉಳಿಮೇ ಮಾಡಲು ನೇಗಿಲುಗಳು ಬೇಕಾಗುತ್ತವೆ. ಇವುಗಳು ಕೂಡ ಸಬ್ಸಿಡಿ ದರದಲ್ಲಿ ದೊರೆಯುತ್ತವೆ.

೧} ಚಾಪ್ ಕಟ್ಟರ್ ( ಕನಿಕಿ ಕತ್ತರಿಸುವ ಯಂತ್ರ):

ಈ ಯಂತ್ರದ ಕೂಡ ಹಲವು ಮುಖ್ಯ ಕಾರ್ಯಗಳನ್ನು ನಿರ್ವಹಿಸುತ್ತದೆ ಇದರ ಕೆಲಸ ಏನಂದರೆ ರೈತರಿಗೆ ಹಸಿವು ಸಾಕಲು ಹಾಗೂ ಹೈನುಗಾರಿಕೆ ಮಾಡಲು ಇದು ಮಷಿನ್ ಅತಿಉಪ್ತಯುಕ್ತವಾಗಿರುತ್ತದೆ ಏಕೆಂದರೆ ಹಸಿವಿಗೆ ಆಹಾರ ಕೊಡಬೇಕಾದರೆ ಹಲವಾರು ವಿಧದಲ್ಲಿ ಹಾರಗಳನ್ನು ಕೊಡಬೇಕಾಗುತ್ತದೆ ಇದರಲ್ಲಿ ಕನಿಕಿ ಕತ್ತರಿಸುವ ಯಂತ್ರ ಕೂಡ ಅತಿ ಉಪಯುಕ್ತವಾದ ಮಷೀನ್ ಆಗಿರುತ್ತದೆ ಯಾವುದೇ ರೀತಿಯಿಂದ ಆಹಾರಧಾನ್ಯಗಳು ಹಾಳಾಗದಂತೆ ಈ ಮಿಷನ್ ಉಪಯುಕ್ತವಾಗುತ್ತದೆ.

೨) ರೋಟೋವೇಟರ್:



ರೈತರ ತಮ್ಮ ತಮ್ಮ ಭೂಮಿಗಳನ್ನು ಹದಗೊಳಿಸಲು ಅತಿ ಮುಖ್ಯವಾದ ಅಂತಹ ರೋಟವೇಟರ್ ಇದು ಒಂದು ಕೂಡ ಕೆಲಸ ನಿರ್ವಹಿಸಲು ಉಪಯುಕ್ತವಾಗಿದೆ. ಇದು ಕೂಡ ಸಬ್ಸಿಡಿಗರದಲ್ಲಿ ದೊರೆಯುತ್ತದೆ.

೩) ರಾಶಿ ಮಾಡುವ ಯಂತ್ರ:



ರಾಶಿ ಮಾಡುವ ಯಂತ್ರ ಕೂಡ ರೈತರಿಗೆ ದೊರೆಯುತ್ತದೆ ಈ ಯಂತ್ರವೂ ಕೂಡ  ಸಹಾಯಧನದಡಿಯಲ್ಲಿ ದೊರೆಯುತ್ತದೆ
ಇದರ ಉಪಯೋಗ ಕೂಡ ರೈತರು ಪಡೆದುಕೊಳ್ಳಬಹುದು.

೪) ಸೈಕಲ್ ಎಡೆ ಕುಂಟೆ:



ಈ ಸೈಕಲ್ ಕಡೆ ಅತಿ ಉಪಯುಕ್ತವಾಗಿದೆ ಏಕೆಂದರೆ ಅತಿ ಸಣ್ಣ ರೈತರು ಇದು ಉಪಯೋಗಿಸಬಹುದಾದಂತ ಯಂತ್ರವಾಗಿದೆ ಕಡಿಮೆ ಖರ್ಚಿನಲ್ಲಿ ಕೈಗೆಟ್ಟುವಂತ ಮಷೀನ್ ಇದಾಗಿರುತ್ತದೆ ಇದರಿಂದ ಹಲವಾರು ಉಪಯೋಗಗಳು ಕೂಡ ಇವೆ ಸ್ವಲ್ಪ ಸ್ವಲ್ಪ ಹೊಲ ಇರುವಂತಹ ರೈತರು ಇದು ಉಪಯೋಗಿಸಲು ಅತಿ ಉಪಕ್ತವಾಗಿದೆ ಇದರಿಂದ ಕಳೆಗಳ ನಿರ್ವಹಣೆ ಕೂಡ ಮಾಡಬಹುದು.

೫) ಬಿತ್ತನೆ ಮಾಡುವ ಯಂತ್ರ:



ರೈತರಿಗೆ ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡಲು ಯಂತ್ರ ಕೂಡ ಸಬ್ಸಿಡಿ ದರದಲ್ಲಿ ದೊರೆಯುತ್ತದೆ.

ಈ ಎಲ್ಲಾ ವಸ್ತುಗಳು ರೈತ ಸಂಪರ್ಕ ಕೇಂದ್ರದಲ್ಲಿ ದೊರೆಯುತ್ತವೆ ಮತ್ತು ಯಾವ ರೈತರಿಗೆ ಎಷ್ಟು ದರದಲ್ಲಿ ದೊರೆಯುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಯಂತ್ರೋಪಕರಣಗಳ ಸೌಲಭ್ಯಗಳ ಮಾಹಿತಿ:



1) ಸಾಮಾನ್ಯ ವರ್ಗದ ರೈತರಿಗೆ ಶೇಕಡ 50ರಷ್ಟು ರಿಯಾಯಿತಿ ದರದಲ್ಲಿ ದೊರೆಯುತ್ತವೆ.

2) ಎಸ್ ಸಿ ಮತ್ತು ಎಸ್ ಟಿ ರೈತರಗೆ ಶೇಕಡ 75 ರಷ್ಟು ರಿಯಾಯಿತಿ ದರದಲ್ಲಿ ದೊರೆಯುತ್ತದೆ.

3) ಇದಲ್ಲದೆ ರಾಶಿ ಮಾಡುವ ಯಂತ್ರಗಳು ಕೂಡ ಬಾಡಿಗೆ ದರದಲ್ಲಿ ಕೊಟ್ಟು ರೈತರು ಬಳಸಬಹುದು.

4) ಕೃಷಿ ಸಂಬಂಧಿತ ಉಪಕರಣಗಳಾದ ಟ್ರ್ಯಾಕ್ಟರ್ ಕಾರಕುಟ್ಟುವ ಮಷೀನ್ ಹಿಟ್ಟಿನ ಗಿರಣಿ ರಿಯಾಯಿತಿ ದರದಲ್ಲಿ ಸಿಗುತ್ತವೆ.

ರೈತ ಸಂಪರ್ಕ ಕೇಂದ್ರದ ಮುಖ್ಯ ಅಂಶಗಳು ಹಾಗೂ: ಮಾನದಂಡಗಳು:

1) ರೈತರು ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ನಗರದಲ್ಲಿ ಯಂತ್ರಪ್ಪ ಕರ್ಣಗಳನ್ನು ಪಡೆಯಲು ಎಫ್ಐಡಿ ನಂಬರ್ ಹೊಂದಿರಬೇಕು.

ಏನಿದು ಈ ಎಫ್ ಐ ಡಿ ನಂಬರ್?ಫಾರ್ಮರ್ ಐಡೆಂಟಿಫಿಕೇಶನ್ ಕಾರ್ಡ್( ರೈತ ಸಂಪರ್ಕ ಕೇಂದ್ರದಿಂದ ಕೊಡಲಾಗುವ ರೈತರಿಗೆ ಗುರುತಿನ ಚೀಟಿ).
ಕೃಷಿ ಕೇಂದ್ರದ ಸವಲತ್ತುಗಳನ್ನು ಪಡೆಯಲು ಈ ಎಫ್ ಐ ಡಿ ಬೇಕಾಗುತ್ತದೆ.
ಎಫ್ ಐ ಡಿ ಇಲ್ಲದೆ ಇರುವಂತ ರೈತರುಏನು ಮಾಡಬೇಕು?.

ರೈತರು ತಮ್ಮ ಹೊಲದ ಪಹಣಿಯನ್ನು ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್ ಇವುಗಳ ನಕಲು ಪ್ರತಿಯನ್ನು ತೆಗೆದುಕೊಂಡು ಸಂಬಂಧ ಪಟ್ಟಂತಹ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಟ್ಟು ಇವುಗಳನ್ನು
ತಕ್ಷಣ ಎಫ್ ಐಡಿ ನಂಬರ್ ಅನ್ನು ಪಡೆಯಬಹುದು
ದೊಡ್ಡ ರೈತ ಹಾಗೂ ಸಣ್ಣ ರಹಿತ ಎಂಬ ಭೇದಭಾವ ಇಲ್ಲದೆ ಎಲ್ಲಾ ರೈತರಿಗೆ ಸಮಾನವಾದ ಹಂಚಿಕೆ ಮಾಡಲಾಗುತ್ತದೆ.

ಗರಿಷ್ಠ ಎರಡು ಹೆಕ್ಟರ್ ಹೊಂದಿರುವ ರೈತರಿಗೆ ಮಾತ್ರ ಈ ಎಲ್ಲ ಸೌಲಭ್ಯಗಳು ದೊರೆಯುತ್ತವೆ
ಉದಾಹರಣೆಗಾಗಿ: 15 ಎಕರೆ ಜಮೀನು ಹೊಂದಿರುವ ರೈತರಿಗೆ ಇವರಿಗೆ ಕೇವಲ ಐದು ಎಕರೆಗೆ ಸಾಕಾಗುವಷ್ಟು ಬೀಜ ಮತ್ತು ಗೊಬ್ಬರಗಳು ವಿತರಣೆ ಮಾಡಲಾಗುತ್ತದೆ.
ಬೀಜ ಮತ್ತು ರಸಗೊಬ್ಬರಗಳನ್ನು ಖರೀದಿಸುವಾಗ ರೈತರು ಅವುಗಳ ಗುಣಮಟ್ಟ ಹಾಗೂ ಮುಕ್ತಾಯದ ಅವಧಿಯನ್ನು ಪರಿಶೀಲಿಸಿ ತೆಗೆದುಕೊಳ್ಳಬೇಕು

ರೈತರು ಕೃಷಿ ಉಪಕರಣಗಳನ್ನು ಪಡೆಯಬೇಕಾದರೆ ಯಾವ ದಾಖಲೆಗಳನ್ನು ಕೊಡಬೇಕು.?



1) ಪಹಣಿ ಪತ್ರ
2) ಬ್ಯಾಂಕ್ ಪಾಸ್ ಬುಕ್
3) ಎಫ್ ಐ ಡಿ ನಂಬರ್
4) ಆಧಾರ್ ಕಾರ್ಡ್

ರೈತರು ಕೃಷಿ ಉಪಕರಣಗಳ ಸೌಲಭ್ಯ ಪಡೆಯಲು ಈ ಈ ಎಲ್ಲ ದಾಖಲೆಗಳ ಜೆರಾಕ್ಸ್ ಪ್ರತಿಯನ್ನು ಕೊಡಬೇಕಾಗುತ್ತದೆ.


ಸೂಚನೆ:

ಇನ್ನು ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಸಹಾಯವನ್ನು ಪಡೆದುಕೊಳ್ಳಬೇಕು.

Leave a Reply

Your email address will not be published. Required fields are marked *