ರೈತರು ತಮ್ಮ ಹೊಲಗಳಲ್ಲಿ ದುಡಿಯುತ್ತಲೇ ಇರುತ್ತಾರೆ ಅವರಿಗೆ ಉತ್ತಮ ಆದಾಯ ಗಳಿಸಲು ಆಗುವುದಿಲ್ಲ ಏಕೆಂದರೆ ಕಾರಣಗಳು ಹಲವಾರು ಇವೆ ಅವು ಉಂಟಾಗುತ್ತವೆ ಅತಿವೃಷ್ಟಿ ಆಗಿರಬಹುದು ಅನಾವೃಷ್ಟಿ ಬರಗಾಲ ಹೆಚ್ಚುಮಳೆಗಾಲ ಹೆಚ್ಚಾಗಿ ಕೀಟಗಳ ಬಾದೆ ರೋಗಗಳು ಕಾಡುತ್ತಲೇ ಇರುತ್ತವೆ ಇವೆಲ್ಲವೂ ಆಗಬಹುದು.ಇವುಗಳ ಜೊತೆಯಲ್ಲಿ ರೈತರು ಜೀವನ ಸಾಗಿಸಬೇಕಾಗಿದೆ. ಉತ್ತಮ ಕ್ರಮಗಳನ್ನು ಯಾವುದೇ ತೊಂದರೆಗಳು ಬಂದರೆ ಅದನ್ನು ನಿವಾರಿಸಿಕೊಂಡು ಹೋಗಬಹುದು
1} ತೊಗರಿ ಬೆಳೆಯಲ್ಲಿ ಆದಾಯ ಪಡೆಯುವುದು ಹೇಗೆ..?.
• ತೊಗರಿ ಬೆಳೆ ಇದು ದೀರ್ಘ ಅವಧಿ ಬೆಳೆ ಆಗಿದೆ ಬಿತ್ತನೆ ಮಾಡಬೇಕಾದರೆ ಮೇ ಜೂನ್ ತಿಂಗಳಗಳಲ್ಲಿ ಇದ್ದರೆ ಮಾಡುವುದು ಅತಿ ಸೂಕ್ತ ಕಾಲ ಇನ್ನು ಮಳೆಯ ಅಭಾವದಿಂದ ಸ್ವಲ್ಪ ತಡವಾದರೆ ಜುಲೈ ತಿಂಗಳಲ್ಲಿ ಕೂಡ ರೈತರು ಬಿತ್ತನೆ ಮಾಡಬಹುದುತೊಗರಿ ಬೀಜ ಸುಮಾರು ಒಂದು ಎಕರೆಗೆ ಆರು ಕೆಜಿ ಉಪಯೋಗಿಸಬೇಕು ಬಿತ್ತನೆ ಮಾಡುವ ಗಿಂತ ಮೊದಲು ಬೀಜೋಪಚಾರ ಬಹಳ ಮುಖ್ಯ ವಾಗುವುದು ಅದನ್ನು ರೈತರು ಮಾಡಲೇಬೇಕು
• ಬಿತ್ತನೆ ಬೀಜಗಳನ್ನು ಮೊದಲು ನೆನೆಸಿ ಅವುಗಳನ್ನು ಬಿತ್ತನೆ ಮಾಡಲೇಬೇಕು ಬಿತ್ತನೆ ಮಾಡುವಾಗ ಸಾಲಿನಿಂದ ಸಾಲಿಗೆ ನಾಕು ಅಡಿ ಅಂತರವನ್ನು ಕೊಡಬೇಕು ಮತ್ತು ಗಿಡದಿಂದ ಗಿಡಕ್ಕೆ ಒಂದು ಅಡಿ ಅಂತರವನ್ನು ಕೊಡಬೇಕು ಇದರಿಂದಾಗಿ ಗಿಡವು ಬಹಳ ಚೆನ್ನಾಗಿ ಬೆಳೆಯಲು ಅನುಕೂಲವಾಗುತ್ತದೆ ಮತ್ತು ಗಿಡವು ಜಾಸ್ತಿ ಕವನಗಳು ಹೊಡೆಯಲು ಅನುಕೂಲವಾಗುತ್ತದೆ ಮತ್ತು ತಡವಾಗಿ ಬಿತ್ತನೆ ಮಾಡಿದರೆ ಸಾಲಿನಿಂದ ಸಾಲಿಗೆ ಎರಡುವರೆಯಿಂದ ಮೂರು ಅಡಿ ಅಗಲದ ವರೆಗೆ ನಾವು ಸಾಲವನ್ನು ಇಟ್ಟುಕೊಳ್ಳಬೇಕಾಗುತ್ತದೆ ಮತ್ತು ಸಸಿಯಿಂದ ಸಸಿಗೆ ಒಂದು ಅಡಿಯಲ್ಲಿ ಎರಡು ಬೀಜಗಳನ್ನು ಹಾಕಬೇಕಾಗುತ್ತದೆ
2} ಮಾಡುವಾಗ ರೈತರು ಮೊದಲಿಗೆ ಅರಿಯಬೇಕಾದ ಕ್ರಮಗಳು
• ತೊಗರಿ ಬೆಳೆ 45 ರಿಂದ 52 ದಿವಸದವರೆಗೆ ಇದು ಗಿಡ ಬಹಳ ನಿಧಾನವಾಗಿ ಬೆಳೆಯುತ್ತದೆ ಈ ಅವಧಿಯಲ್ಲಿ ರೈತರು ತಮ್ಮ-ತಮ್ಮ ಮಲೆಗಳಲ್ಲಿ ಕಳೆ ತೆಗೆಯುವುದು ಇದರಲ್ಲಿ ತೊಡಗಿರುತ್ತಾರೆ ರೈತರು ಟ್ರಾಕ್ಟರ್ ಬಳಸಿಕೊಂಡು ಕಳೆ ತೆಗೆಯುವ ದಿಂಡಿನಿಂದ ಅದನ್ನು ಕಳೆ ತೆಗೆಯುವ ಕೆಲಸದಲ್ಲಿ ತೊಡಗಿರುತ್ತಾರೆ, ಇನ್ನು ರೈತರು ಆಳುಗಳನ್ನು ಹಚ್ಚಿ ಕಳೆಗಳನ್ನು ತೆಗೆಯುತ್ತಾರೆ.
• ಕೀಟವಾದೆಗೆ ಔಷಧಿ ಉಪಯೋಗಿಸುವುದು ಹೇಗೆ?
• ಮೊದಲಿಗೆ ನಾವು ಬಿತ್ತನೆ ಮಾಡುವ ಎರಡು ದಿನಗಳ ಅಥವಾ ಮೂರು ದಿನಗಳ ಹಿಂದೆ ನಾವು ಹೊಲದಲ್ಲಿ ಈ ಔಷಧಿಯನ್ನು ಸಿಂಪಡಿಸಬೇಕಾಗುತ್ತದೆ ಇದರಿಂದ ಬಿತ್ತನೆ ಮಾಡಿದ ನಂತರ ಕಳೆಯು, ನಾಟುವುದನ್ನು ಕಡಿಮೆ ಆಗುತ್ತದೆ ಕಳೆನಾಶಕ ಔಷಧಿ ಯಾವುದು
ಹಂತ 1
• ಎಂದರೆ ಅಲಕ್ಲೂರ್ ಪೆಂಡಿಮಿಥನಲ್ ಈ ಕಳೆನಾಶಕ ಔಷಧಿಯನ್ನು ಬಳಸಬಹುದು ಇದು ಪ್ರತಿ ಒಂದುಎಕರೆಗೆ 700 ml ಸಾಕಾಗುತ್ತದೆ ಈ ಔಷಧವನ್ನು ಬಿತ್ತುವ ಎರಡು ದಿನಗಳ ಮುಂಚಿತವಾಗಿ ಇದನ್ನು ಸ್ಪ್ರೇ ಮಾಡಿಕೊಂಡಿರಬೇಕು ಉತ್ತಮ ಬೆಳೆ ಬೆಳೆಯಲು ಅನುಕೂಲವಾಗುತ್ತದೆ.
ಹಂತ 2
• ಸುಮಾರು ಎರಡು ನೂರು ಲೀಟರ್ ನೀರಿಗೆ ಇಮ್ಯಾಝತಾಪೇರ್ ಎಂಬ ದ್ರಾವಣವನ್ನು 400ml ಸೇರಿಸಿ ಒಂದು ಎಕರೆಗೆ ಸ್ಪ್ರೇ ಮಾಡಬಹುದು.ಈ ಕಳೆನಾಶಕ ಬಳಸುವಾಗ ಕಸವು ಎರಡರಿಂದ ಮೂರು ಎಲೆಗಳ ಇರುವ ಹಂತದಲ್ಲಿ ಇದನ್ನು ಸ್ಪ್ರೇ ಮಾಡಬೇಕು ಇದರಿಂದ ಕಳೆಯು ಬೇಗನೇ ನಾಶವಾಗುತ್ತದೆ ಮತ್ತು ಸ್ಪ್ರೇ ಮಾಡುವಾಗ ನೊಝಲ್ ಗಳನ್ನು ಬಳಸಬೇಕಾದರೆ ಮುಂದೆ ಗನ್ ಇರುವ ಸ್ಥಳಕ್ಕೆ ಪ್ಲಾಸ್ಟಿಕ್ ಹೂಡ್ ಅನ್ನು ಹಾಕಬೇಕು ಇದರಿಂದ ತೊಗರಿ ಬೆಳೆಗೆ ಔಷಧಿ ಸಿಡಿಯುವುದಿಲ್ಲ. ಇದರಿಂದಾಗಿ ಕಳೆಯ ಮಾತ್ರ ನಾಶವಾಗುತ್ತದೇ.
ಹಂತ 3
• ಸುಮಾರು 40 ರಿಂದ 50 ದಿನಗಳ ನಂತರ ಕುಳಿ ಚೂಟುವುದು ತುಂಬಾ ಮುಖ್ಯವಾಗಿರುತ್ತದೆ. ಇದರಿಂದ ಕವಲುಗಳು ಒಡೆದು ಹೆಚ್ಚಿನ ಪ್ರಮಾಣದಲ್ಲಿ ಕವನಗಳು ಒಡೆದು ಹೂವಿನ ಸಂಖ್ಯೆ ಹಾಗೂ ಕಾಯಿಗಳ ಸಂಖ್ಯೆ ಹೆಚ್ಚಾಗುತ್ತದೆ ಅದಲ್ಲದೆ ಇಳುವರಿಯಲ್ಲಿ ಕೂಡ 15% ರಿಂದ 20 % ನಾವು ಇಳುವರಿಯನ್ನು ಪಡೆಯಬಹುದು ಈ ಪದ್ಧತಿಯು ಗುಲ್ಬರ್ಗದಲ್ಲಿ ರೈತರು ಹೆಚ್ಚಾಗಿ ಮಾಡುತ್ತಾರೆ ಇದರಿಂದ ಗುಲ್ಬರ್ಗ ಏರಿಯಾದಲ್ಲಿ ಅತಿ ಹೆಚ್ಚು ತೊಗರಿ ಇಳುವರಿಯನ್ನು ಪಡೆಯುತ್ತಾರೆ ಇದೇ ಮುಖ್ಯ ಕಾರಣವಾಗಿದೆ ಇದರಿಂದ ಎಲ್ಲ ರೈತರು ಈ ಒಂದು ಕುಳಿ ಚಟುವ ಕೆಲಸ ಮಾಡಲೇಬೇಕು.
3} ತೊಗರಿ ಗಿಡ ಹೂವಿನ ಹಂತ :
• ಈ ಹಂತದಲ್ಲಿ ಬಂದಾಗ ನೀರನ್ನು ಕ್ರಮಯವಾಗಿ ಉಪಯೋಗಿಸಬೇಕಾಗುತ್ತದೆ ಈ ಹಂತದಲ್ಲಿ ನೀರು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಬೇಕು ಇಲ್ಲದಿದ್ದರೆ ಹೂವು ಉದುರುವುದು ಜಾಸ್ತಿ ಆಗಬಹುದು.
ಹಂತ 4
• ಇನ್ನೂ ಕೆಲವು ರೈತರ ಡ್ರಿಪ್ ಮುಖಾಂತರ ಬೆಳೆಯುತ್ತಾರೆ ಇದರಿಂದ ಅವರಿಗೆ ಇಳುವರಿ ಚೆನ್ನಾಗಿ ಬರುತ್ತದೆ ಮತ್ತು ನೀರಿನ ಪ್ರಮಾಣ ಹತೋಟಿಯಲ್ಲಿ ಇಡಬಹುದು ನೀರಿನಲ್ಲಿ ಕರಗುವ ಗೊಬ್ಬರಗಳನ್ನು ಸಹ ಗಿಡಕ್ಕೆ ನೀಡಬಹುದು ಈ ಅನುಕೂಲದಿಂದ ಪ್ರತಿ ಗಿಡಕ್ಕೆ ಉತ್ತಮವಾದ ಪೋಷಕಾಂಶಗಳು ದೊರಕುವದರ ಜೊತೆಗೆ ಬೆಳಗುವನಿಗೆಯೂ ಕೂಡ ಉತ್ತಮ ರೀತಿಯಲ್ಲಿ ಆಗುತ್ತದೆ ಮತ್ತು ಹೂವಿನ ಸಂಖ್ಯೆಯೂ ಕೂಡ ಜಾಸ್ತಿ ಆಗುತ್ತದೆ ಇಳುವರಿಯೂ ಕೂಡ 15 ರಿಂದ 20 ಪರ್ಸೆಂಟ್ ಜಾಸ್ತಿ ಆಗುತ್ತದೆ
ಹಂತ 5
• ಈ ಹಂತದಲ್ಲಿ ಸುಮಾರು ಗಿಡಗಳ ಹೂವಿನ ಸಂಖ್ಯೆ ಹೆಚ್ಚಾಗಿರುವುದಲ್ಲದೆ ಒಳ್ಳೆಯ ಚಿಗುರು ಕೂಡ ಬಂದಿರುತ್ತದೆ ಇದರಲ್ಲಿ ತುಂಬಾ ಕೀಟಗಳ ಬಾಧೆ ಹೆಚ್ಚಾಗಿ ಕಂಡುಬರುತ್ತದೆ ಇದರಲ್ಲಿ ಮುಖ್ಯವಾಗಿ ರೈತರು ಬಿತ್ತನೆ ಬೀಜದಲ್ಲಿ ಜೋಳವನ್ನು ಕೂಡಿಸಬೇಕು ಜೋಳದ ಮೇಲೆ ಕುಳಿತು ಕೀಟಗಳನ್ನು ಆಯ್ದು ತಿನ್ನುತ್ತವೆ ಕೀಟಗಳ ಸಂಖ್ಯೆ ಕಡಿಮೆ ಆಗುವುದು.
4} ಕೀಟಗಳ ಹತೋಟಿಗೆ ಔಷಧಿ ಸಿಂಪರಣೆ ಯಾವುದು?
• ಕಾಯಿ ಕೊರಕ ತುಂಬಾ ಹೆಚ್ಚಾಗಿ ಕಾಣುತ್ತದೆ ಇದರಿಂದ ಕಾಯಿಗಳು ಹುಳುಕು ಆಗುವ ಸಾಧ್ಯತೆ ಇರುತ್ತದೆ ಇದರ ಒಂದು ನಿಯಂತ್ರಣಕ್ಕೆ ರೈತ ಮುನ್ನೆಚ್ಚರಿಕೆ ವಹಿಸಬೇಕು ಹುಳು ಸ್ವಲ್ಪ ಸ್ವಲ್ಪ ಕಾಣುವುದರಲ್ಲಿ ಔಷಧಿ ಸಿಂಪರಣೆ ಮಾಡಬೇಕು.
• 1) ರೈಪರ್- 0.5 gm – ಪ್ರತಿ ಒಂದು ಲೀಟರ್ ನೀರಿಗೆ ಹಾಕಿ ಸಿಂಪಡಿಸಬೇಕು.
• 2) Bio -20 ಪ್ರತಿ 1ಲೀಟರ ನೀರಿಗೆ 2ml ಹಾಕಿಇದರೊಂದಿಗೆ ಉತ್ತಮವಾದ ಟಾನಿಕ್ ಕೂಡ ಆಗುತ್ತದೆ. ಅದರಲ್ಲಿ ಮಿಕ್ಸ್ ಮಾಡಿ ಸ್ಪ್ರೇ ಮಾಡಬೇಕು ಎಷ್ಟು ಸಲ ಸ್ಪ್ರೇ ಮಾಡಬೇಕು ಎಂದರೆ ಇದೇ ರೀತಿ ಹುಳಗಳು ಕಾಣತೊಡಗಿದರೆ ಎರಡನೇ ಸ್ಪ್ರೇ ಕೂಡ ಮಾಡಿಕೊಳ್ಳಬಹುದು. ಇದರಿಂದ
ಸಸ್ಯ ಪೋಷಕಾಂಶಗಳ ಕೊರತೆಯ ಲಕ್ಷಣಗಳು
ಸಸ್ಯಗಳ ಬೆಳವಣಿಗೆಯಲ್ಲಿ ಅನೇಕ ಪೋಷಕಾಂಶಗಳು ಅಗತ್ಯವಿದ್ದು, ಅವುಗಳ ಕೊರತೆಯಿಂದ ಬೆಳೆಗಳ ಇಳುವರಿ ಉತ್ಪನ್ನದ ಗುಣಮಟ್ಟದ ಮೇಲೆ ಸಾಕಷ್ಟು ಪರಿಣಾಮಗಳಾಗುತ್ತವೆ. ಕೃಷಿಯಲ್ಲಿ ಅತೀ ಅವಶ್ಯವಿರುವ ಪೋಷಕಾಂಶಗಳು, ಅವುಗಳ ಕೊರತೆಯಿಂದ ವಿವಿಧ ಬೆಳೆಗಳಲ್ಲಿ ಕಾಣುವ ಲಕ್ಷಣಗಳು ಹಾಗೂ ಅವುಗಳನ್ನು ನಿವಾರಿಸುವ ಕ್ರಮಗಳ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ
ಸಾರಜನಕ
ಸಾರಜನಕವು ಸಸ್ಯ ಬೆಳವಣಿಗೆಯಲ್ಲಿ ಪ್ರಧಾನ ಪೋಷಕ ವಾಗಿದ್ದು, ಪತ್ರ ಹರಿತ್ತು. ಪ್ರೋಟೋಪ್ಲಾಸಂ, ಪ್ರೋಟಿನ್ ಮತ್ತು ನ್ಯೂಕ್ಲಿಕ್ ಆ್ಯಸಿಡ್ ಅಂಶವಾಗಿದೆ.
ಕೊರತೆಯ ಲಕ್ಷಣಗಳು
ಬೆಳವಣಿಗೆ ಕುಂಠಿತವಾಗುವುದುಕೆಳಭಾಗದ ಎಲೆಗಳು ತುದಿಯಿಂದ ತಳಭಾಗಕ್ಕೆ ತಿಳಿ ಹಸಿರು ಅಥವಾ ಹಳದಿ ಬಣ್ಣಕ್ಕೆ ತಿರುಗುವುವು ನಂತರ ಎಲೆ ಒಣಗಿ ಉದುರುವುದು.
ಅತಿ ಹೆಚ್ಚಿನ ಕೊರತೆ ಇದ್ದಾಗ ಹೂ ಬಿಡುವುದು ಕಡಿಮೆಯಾಗಿ
ಇಳುವರಿ ಕಡಿಮೆಯಾಗುತ್ತದೆ.
ನಿರ್ವಹಣೆ : ಕೊರತೆಯ ಲಕ್ಷಣಗಳು ಕಂಡ ತಕ್ಷಣ ಶೇ 2 ರ ಯೂರಿಯಾ ದ್ರಾವಣ (20 ಗ್ರಾಂ. ಯೂರಿಯಾವನ್ನು 1 ಲೀ. ನೀರಿನಲ್ಲಿ ಕರಗಿಸುವುದು) ಸಿಂಪಡಿಸುವುದು. ಆಯಾ ಬೆಳೆಗೆ ಶಿಫಾರಸು ಮಾಡಿದ ಪ್ರಮಾಣದಲ್ಲಿ ಸಾರಜನಕಯುಕ್ತ ರಸಗೊಬ್ಬರಗಳನ್ನು ಇತರ ಸಸ್ಯ ಪೋಷಕಾಂಶಗಳೊಂದಿಗೆ ಒದಗಿಸಬೇಕು.
ರಂಜಕ
ಸಸ್ಯಗಳ ಹಾಗೂ ಬೇರುಗಳ ಬೆಳವಣಿಗೆಯನ್ನು ವೃದ್ಧಿ ಮಾಡುತ್ತದೆ. ಕಾಳು ಮತ್ತು ಹಣ್ಣುಗಳ ಉತ್ಪಾದನಾ ಕಾರ್ಯದಲ್ಲಿ ಸಹಕಾರಿ ಹಾಗೂ ಬೆಳ ಇಳುವರಿ ಹೆಚ್ಚಳಕ್ಕೆ ಪ್ರೇರಕ. ನ್ಯೂಕ್ಲಿಕ್ ಆಸಿಡ್ಸ್. ಪೋಟಿನ್ ಫಾಸ್ಟೋಲಿಪಿಡ್ಸ್ ಎನ್.ಎ.ಡಿ.. ಎನ್.ಎ.ಡಿ.ಪಿ ಮತ್ತು ಎ.ಟಿ.ಪಿ ಗಳ ಅಂಶವಾಗಿದೆ.
ಕೊರತೆಯ ಲಕ್ಷಣಗಳು
ಬೇರುಗಳು ಸರಿಯಾಗಿ ಬೆಳೆಯದೇ ಎಲೆ ಮತ್ತು ಕಾಂಡಗಳ ಕುಂಠಿತ ಬೆಳವಣಿಗೆಎಲೆ ಮತ್ತು ಕಾಂಡಗಳು ಕಂದು ಬಣ್ಣಕ್ಕೆ ತಿರುಗುವುದು
ಮಾಗಿದ ಎಲೆಗಳು ನೀಲಿ ಮಿಶ್ರಿತ ಹಳದಿ ಬಣ್ಣಕ್ಕೆ ತಿರುಗುವುದು
ತಡವಾಗಿ ಕೊಯ್ಲಿಗೆ ಬರುವಿಕೆ
ಸರಿಯಾಗಿ ಕಾಳು ಅಥವಾ ಕಾಯಿ ಕಚ್ಚದಿರುವುದು
ನಿರ್ವಹಣೆ : ಕೊರತೆಯ ಲಕ್ಷಣಗಳು ಕಂಡಾಗ ಶೇ 2 ರ ಡಿಎಪಿ ದ್ರಾವಣ ಸಿಂಪಡಿಸುವುದು/ಶಿಫಾರಸು ಮಾಡಿದ ಪ್ರಮಾಣದಲ್ಲಿ ರಂಜಕಯುಕ್ತ ರಸಗೊಬ್ಬರಗಳನ್ನು ಇತರೆ ಸಸ್ಯ ಪೋಷಕಾಂಶಗಳೊಂದಿಗೆ ಒದಗಿಸಬೇಕು.ಹುಳಿ ಮಣ್ಣಿಗೆ ರಂಜಕವನ್ನು ಬೇಸಿಕ್ಸ್ಲಾಗ್ ಅಥವಾ ಶಿಲಾರಂಜಕದ ಮೂಲಕ ಒದಗಿಸುವುದು.
ಪೋಟ್ಯಾಷ್
ಸಸ್ಯಗಳ ಬೆಳವಣಿಗೆಯಲ್ಲಿ ಉಪಯೋಗವಾಗುವ ಪ್ರಧಾನ ಆಹಾರಾಂಶವಾಗಿದೆ. ಎಲೆ ಹಸಿರು (ಪತ್ರ ಹರಿತ್ತು) ವೃದ್ಧಿಗೆ, ಬೆಳೆ ಸರಿಯಾಗಿ ಬೆಳೆಯಲು ಹಾಗೂ ರೋಗರುಜಿಗಳ ಭಾದೆಯನ್ನು ತಡೆಯುವ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ. ಇದು ಸಸ್ಯಗಳ ಕಾಂಡಗಳಲ್ಲಿ ಬಿರುಸುತನವನ್ನು ಒದಗಿಸುತ್ತದೆ ಹಾಗೂ ಪಿಷ್ಟ, ಸಕ್ಕರೆ ಹಾಗೂ ಎಣ್ಣೆಗಳ ನಿರ್ಮಾಣ ಮತ್ತು ಸಾಗಾಣಿಕೆಗೆ ನೆರವಾಗುತ್ತದೆ. ತರಕಾರಿ ಮತ್ತು ಹಣ್ಣುಗಳ ಗುಣಮಟ್ಟವನ್ನು ವೃದ್ಧಿಸುತ್ತದೆ.
ಕೊರತೆಯ ಲಕ್ಷಣಗಳು
ಬೆಳೆ ಕಂದು ಬಣ್ಣಕ್ಕೆ ತಿರುಗಿ ಸುಟ್ಟಂತಾಗಿ ಬೆಳವಣಿಗೆ ಕುಂಠಿತವಾಗುವುದು ಕೆಳಗಿನ ಎಲೆಗಳು ತುದಿಯಿಂದ ಒಣಗಲು ಪ್ರಾರಂಭವಾಗಿ ಅಂಚುಗಳನ್ನು ಆವರಿಸುವುದು ಹಾಗೂ ಮಧ್ಯದ ಭಾಗ ಹಸಿರಾಗಿಯೇ ಇರುವುದು. ತೆನೆಗಳ ಕುಂಠಿತ ಬೆಳವಣಿಗೆಹಣ್ಣುಗಳಲ್ಲಿ ಯೋಗ್ಯ ಬಣ್ಣ, ರುಚಿ ಮತ್ತು ಪರಿಮಳ ಬರುವುದಿಲ್ಲ ಹಾಗೂ ಸಂಗ್ರಹಣಾ ಶಕ್ತಿ ಕಡಿಮೆಯಾಗುವುದು
ನಿರ್ವಹಣೆ : ಅಗತ್ಯಕ್ಕನುಗುಣವಾಗಿ ಶಿಫಾರಸು ಮಾಡಿದ ಪ್ರಮಾಣದಲ್ಲಿ ಪೋಟ್ಯಾಷ್ ಯುಕ್ತ ರಸಗೊಬ್ಬರವನ್ನು ಇತರೆ ಪೋಷಕಾಂಶಗಳ ಜೊತೆಗೆ ಬೆಳೆಗೆ ಹಾಕಬೇಕು.
ಸುಣ್ಣ (ಕ್ಯಾಲ್ಸಿಯಂ)
ಸುಣ್ಣವು ಸಸ್ಯ ಜೀವಕೋಶಗಳ ಗೋಡೆಗಳ ಒಂದು ಅಂಶವಾಗಿದ್ದು ಕ್ಯಾಲ್ಸಿಯಂ ಪೆಕ್ಟೇಟ್ ರೂಪದಲ್ಲಿರುತ್ತದೆ. ಇದು ಜೀವಕೋಶಗಳ ವಿಭಜನೆಯಲ್ಲಿ ಅಗತ್ಯವಾಗಿರುತ್ತದೆ. ಹಲವಾರು ಕಿಣ್ವಗಳ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತದೆ. ಸಸ್ಯಗಳ ಬೆಳವಣಿಗೆಯಲ್ಲಿ ಸುಣ್ಣದ ಪ್ರಾಮುಖ್ಯತೆ ಕೆಳಗಿನಂತಿದೆ.
ಪ್ರಾರಂಭದಲ್ಲಿ ಬೇರು ಮತ್ತು ಕುಡಿಗಳ ಬೆಳವಣಿಗೆಗೆ ನೆರವಾಗುತ್ತದೆ. ಭೂಮಿಯಲ್ಲಿ ಸಸ್ಯ ವಸ್ತು ಕಳೆಯಲು ಹಾಗೂ ಆ ವಸ್ತುಗಳಿಂದ ನೈಟ್ರೇಟ್ ಸಿದ್ಧವಾಗಲು ಸಹಾಯವಾಗಿ ಮಣ್ಣಿನ ಭೌತಿಕ ಸ್ಥಿತಿಯನ್ನು ಸುಧಾರಿಸುತ್ತದೆ.ಆಮ್ಲತೆಯನ್ನು ಕಡಿಮೆ ಮಾಡಿ ನಂಜಿನ ವಸ್ತುಗಳಿಂದಾಗುವ ಹಾನಿಯನ್ನು
ತಪ್ಪಿಸುತ್ತದೆ.ಎಲೆ ಮುದುರುವಿಕೆ ಮೊದಲಾದ ರೋಗಗಳಿಂದ ಸಸ್ಯಗಳನ್ನು ರಕ್ಷಿಸುತ್ತದೆ
ಇತರೆ ಸಸ್ಯ ಪೋಷಕಾಂಶಗಳನ್ನು ಬೆಳೆಗಳು ಪಡೆಯಲು ನೆರವಾಗುತ್ತದೆ.
ಕೊರತೆಯ ಲಕ್ಷಣಗಳು
ಕೊರತೆಯ ಲಕ್ಷಣಗಳು ಸಾಮಾನ್ಯವಾಗಿ ಹುಳಿ ಮಣ್ಣುಗಳಲ್ಲಿ ಕಂಡುಬರುತ್ತದೆ.ಸಸ್ಯಗಳ ತುದಿಗಳು ಸರಿಯಾಗಿ ಬೆಳೆಯುವುದಿಲ್ಲ ಹಾಗೂ ಬಾಡಿದಂತೆ ಕಾಣುತ್ತವೆ ಹಾಗೂ ಸರಿಯಾಗಿ ಹೂವು ಬಿಡುವುದಿಲ್ಲ
ಎಲೆಗಳ ಅಂಚುಗಳು ವಿಕೃತಗೊಂಡು ಎಳೆ ಎಲೆಗಳು ಹಳದಿ ಕಪ್ಪು ವರ್ಣದಿಂದ ಮುದುರಿಕೊಂಡಿರುತ್ತವೆ.
ನಿರ್ವಹಣೆ : ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಭೂಮಿಗೆ ಸುಣ್ಣ ಹಾಕುವುದು.
ಮೆಗ್ನಿಷಿಯಂ
ಮೆಗ್ನಿಷಿಯಂ ಪತ್ರ ಹರಿತ್ತಿನ ಒಂದು ಭಾಗವಾಗಿದ್ದು, ಬೆಳೆಗಳಿಗೆ ದಟ್ಟ ಹಸಿರು ಬಣ್ಣ ಬರಲು ಕಾರಣವಾಗಿದೆ. ಹಲವಾರು ಕಿಣ್ವಗಳ ಕ್ರಿಯೆಯಲ್ಲಿ ಪಾತ್ರವಹಿಸುತ್ತದೆ. ಮೆಗ್ನಿಷಿಯಂ ತೆನೆಗಳ ನಿರ್ಮಾಣ ಹಾಗೂ ಬೆಳೆಗಳ ಮಾಗುವಿಕೆಯಲ್ಲಿ, ದ್ವಿದಳ ಧಾನ್ಯಗಳ ಬೇರುಗಳ ಮೇಲಿನ ಗಂಟುಗಳ ನಿರ್ಮಾಣ, ತೆಂಡೆಗಳು ಹೊಡೆಯುವುದಕ್ಕೆ ನೆರವಾಗುತ್ತದೆ.
ಕೊರತೆಯ ಲಕ್ಷಣಗಳು
ಕೆಳಗಿನ ಎಲೆಗಳ ಕೆಳಭಾಗವು ತೆಳು ನೇರಳೆ ಬಣ್ಣಕ್ಕೆ ತಿರುಗುವುದು
ಎಲೆಗಳು ಬಹಳ ತೆಳುವಾಗುತ್ತವೆ ಹಾಗೂ ಮೇಲ್ಬಾಗಕ್ಕೆ ಮುದುರಿಕೊಳ್ಳುತ್ತವೆ.
ಎಳೆ ಎಲೆಗಳು ಒಣಗಿ ಉದುರುತ್ತವೆ.
ನಿರ್ವಹಣೆ : ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಮೆಗ್ನಿಷಿಯಂ ಸಲ್ವೇಟ್
ಉಪಯೋಗಿಸುವುದು.ಸಾಕಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರದ ಬಳಕೆ ಮಾಡುವುದು ಹುಳಿ ಮಣ್ಣಿಗೆ ಡೋಲೋಮೈಟ್ ಸುಣ್ಣ ಬೆರೆಸುವುದು.
ಗಂಧಕ
ಗಂಧಕವು ಪ್ರತಿ ವರ್ಷ ಮಳೆ ನೀರಿನ ಜೊತೆಗೆ ಹಾಗೂ ಸಾವಯವ ಗೊಬ್ಬರಗಳೊಂದಿಗೆ ಮಣ್ಣಿನಲ್ಲಿ ಸೇರುವುದು. ಇದು ಸಸ್ಯಗಳಲ್ಲಿನ ಅಮಿನೋ ಆಮ್ಲ ಮತ್ತು ಪ್ರೋಟಿನ್ ಜೀವಕಣಗಳ ಒಂದಂಶವಾಗಿದೆ. ಬೇರುಗಳ ಬೆಳವಣಿಗೆಯಲ್ಲಿನೆರವಾಗುತ್ತದೆ ಹಾಗೂ ಬೀಜಗಳ ಬೆಳವಣಿಗೆಯಲ್ಲೂ ಚೇತನ ನೀಡುವುದು. ಬೀಜಗಳಲ್ಲಿ ಎಣ್ಣೆ ಅಂಶ ಹೆಚ್ಚಿಸಲು ಸಹಾಯವಾಗಿ ಪೈರು ಶಕ್ತಿಯುತವಾಗಿ ಬೆಳೆಯಲು ಸಹಕಾರಿ.
ಕೊರತೆಯ ಲಕ್ಷಣಗಳು
ಎಳೆ ಎಲೆಗಳು ತಿಳಿ ಹಸಿರು ಬಣ್ಣದ್ದಿದ್ದು ಹಳದಿ ಬಣ್ಣಕ್ಕೆ ತಿರುಗುತ್ತವೆ.
ಕಾಂಡಗಳು ಚಿಕ್ಕದಾಗಿ ಮೃದುವಾಗಿ ಬೆಳವಣಿಗೆ ಕುಂಠಿತಗೊಳ್ಳುವುದು
ಕಾಯಿಗಳು ಸರಿಯಾಗಿ ಮಾಗದೆ ತಿಳಿ ಹಸಿರು ಬಣ್ಣಕ್ಕೆ ತಿರುಗುತ್ತವೆ.
ತೆನೆಗಳು ಚಿಕ್ಕದಾಗಿ ಕಾಳುಗಳು ಸಂಖ್ಯೆ ಕಡಿಮೆಯಾಗುತ್ತದೆ.
ಬೆಳೆ ಮಾಗುವುದು ನಿಧಾನವಾಗುವುದು
ನಿರ್ವಹಣೆ : ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಗಂಧಕವನ್ನು (ಜಿಪ್ಪಂ) ಬೆಳೆಗೆ ಒದಗಿಸಬೇಕು ಹಾಗೂ ಶಿಫಾರಸು ಮಾಡಿದ ಪ್ರಮಾಣದಲ್ಲಿ ಸಾವಯವ ಗೊಬ್ಬರಗಳನ್ನು ಹಾಕಬೇಕು.
ಕಬ್ಬಿಣ
ಕಬ್ಬಿಣವು ಪತ್ರ ಹರಿತ್ತಿನ ತಯಾರಿಕೆಯಲ್ಲಿ ಅವಶ್ಯಕವಾಗಿದೆ. ಆದರೆ ಇದು ಪತ್ರ ಹರಿತ್ತಿನಲ್ಲಿರುವುದಿಲ್ಲ. ಇದು ಹಲವಾರು ಕಿಣ್ವಗಳ ಕ್ರಿಯೆಗಳಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಸಸ್ಯಗಳ ಉಸಿರಾಡುವಿಕೆ. ದ್ಯುತಿ ಸಂಶ್ಲೇಷಣಾ ಕ್ರಿಯೆಗಳನ್ನು ನಿಯಂತ್ರಿಸುವಲ್ಲಿ ಪಾತ್ರವಹಿಸುತ್ತದೆ.
ಕೊರತೆಯ ಲಕ್ಷಣಗಳು
ಚಿಗುರೆಲೆಗಳ ನರಗಳು ಹಸಿರಿದ್ದು ನರಗಳ ಮಧ್ಯಭಾಗ ಹಳದಿಯಾಗಿರುತ್ತದೆ. ಹೆಚ್ಚಿನ ಕೊರತೆಯಾದಾಗ ಎಳೆ ಎಲೆಗಳು ಪತ್ರ ಹರಿತ್ತಿಲ್ಲದ ಕಾರಣ ಬಿಳಿಚಿಕೊಳ್ಳುತ್ತವೆ. ನಂತರ ಒಣಗಿ ಕಾಗದದ ಹಾಗೆ ಆಗಿ ಉದುರುತ್ತವೆ.ಕಾಳಿನ ಬೆಳೆಗಳಲ್ಲಿ ಕಾಳು ಸರಿಯಾಗಿ ಆಗುವುದಿಲ್ಲ.ಸಾರಜನಕ ಸಾಕಷ್ಟು ಇದ್ದಾಗಲೂ ಕೊರತೆ ಲಕ್ಷಣಗಳು ಕಂಡುಬಂದರೆ ಕಬ್ಬಿಣದ ಕೊರತೆಯನ್ನು ಎತ್ತಿ ತೋರಿಸುತ್ತದೆ.ಮಣ್ಣಿನಲ್ಲಿ ಪೋಟ್ಯಾಷ್, ಸುಣ್ಣ ಇಲ್ಲವೇ ಮ್ಯಾಂಗನೀಸ್ ಹೆಚ್ಚಿರುವಾಗ ಕಬ್ಬಿಣದ ಕೊರತೆಗಳು ಕಾಣಿಸುವುವು.
ನಿರ್ವಹಣೆ :