ಒಂದು ಎಕರೆಯಲ್ಲಿ ಕಬ್ಬು ಬೆಳೆಯುವದು ಹೇಗೆ. ? ಸಂಪೂರ್ಣ ಮಾಹಿತಿ

•  ಕಬ್ಬು ಬೆಳೆಯಲು ಪ್ರಮುಖ ಅಂಶಗಳು

• ಎಲ್ಲಾ ನನ್ನ ರೈತ ಮಿತ್ರರಿಗೆ ನಮಸ್ಕಾರಗಳು ರೈತರು ಹಲವಾರು ರೀತಿಯ ಕಬ್ಬುಗಳನ್ನು ಬೆಳೆಯುತ್ತಾರೆ ಅದರಲ್ಲಿ ರೈತರು ಮಾಡಬೇಕಾದ ಕೆಲಸ ಹಲವಾರು ಇವೆ ಉತ್ತಮವಾದಂತಹ ಚಟುವಟಿಕೆಗಳನ್ನು ಕಬ್ಬಿನಲ್ಲಿ ಕೈಗೊಂಡರೆ ಉತ್ತಮ ಇಳುವರಿಯನ್ನು ಪಡೆಯಬಹುದು. ಇದರಿಂದಾಗಿ ಲಾಭ ಕೂಡ ಆಗುತ್ತದೆ ಕಬ್ಬು ಬೆಳೆಯಬೇಕಾದರೆ ಮೊದಲಿಗೆ ತಳಿಗಳ ಆಯ್ಕೆ ಮಹತ್ವದ್ದಾಗಿದೆ  ತಳಿಗಳ ಆಯ್ಕೆ 10 ರಿಂದ 15 ಪರ್ಸೆಂಟ್    ಇಳುವರಿ ಜಾಸ್ತಿ ಕೊಡುತ್ತದೆ. 

1}ಕಬ್ಬು ಬೆಳೆಯಲು ರಸಗೊಬ್ಬರಗಳ ಬಳಕೆ :

ಬೆಳೆಸಲು ರಸಗೊಬ್ಬರಗಳು ಹಾಗೂ  ಮತ್ತು ಅತಿ ಅವಶ್ಯಕವಾದದ್ದು ನೀರು ಉತ್ತಮವಾದ ಮಣ್ಣು ಇವು ಎಲ್ಲವೂ ನಮಗೆ ಸರಿಯಾದ ರೀತಿಯಲ್ಲಿ ಇದ್ದರೆ ಕಬ್ಬು ಹೆಚ್ಚು ಉಳಿಯುವ ಪಡೆಯಲು ಸಾಧ್ಯವಾಗುತ್ತದೆ ರೈತರು ಮೊದಲಿಗೆ ಭೂಮಿಯನ್ನು ಟ್ರ್ಯಾಕ್ಟರ್ ಯಂತ್ರದ ಮೂಲಕ  ಇದು ಮುಖ್ಯವಾಗಿರುತ್ತದೆ ಇದರಿಂದ ಭೂಮಿಯು ಹದಗೊಳ್ಳುತ್ತದೆ ರೈತರು ಮೊದಲಿಗೆ ಕಬ್ಬನ್ನು ಬೆಳೆಯಬೇಕಾದರೆ ಮೊದಲು ಹೆಚ್ಚು ಇಳುವರಿ ಪಡೆಯುವಂತಹ ಕಬ್ಬನ್ನು ಆಯ್ಕೆ ಮಾಡಿಕೊಳ್ಳಬೇಕು ಅದನ್ನು ಆಯ್ಕೆ ಮಾಡಿಕೊಂಡ ನಂತರ ಸಾಲುಗಳ ಅಂತರ ನೋಡಿಕೊಳ್ಳಬೇಕಾಗುತ್ತದೆ

•  ನಮಗೆ ಅತಿ ಉತ್ತಮವಾದ ಸಾಲುಗಳ ಅಂತರ ಐದು ಅಡಿ ಇರಲೇಬೇಕು ಇದು ಅತಿ ಹೆಚ್ಚು ಒಳ್ಳೆಯ ರೀತಿಯ ಸಾಲಿನಿಂದ ಸಾಲಿಗೆ ಇರುವಂತಹ ಅಂತರವಾಗಿದೆ ಇದರಿಂದ ಕಬ್ಬು ಬೆಳೆಯಲು ಅತಿ ಅವಶ್ಯಕವಾಗುತ್ತದೆ


•  ಈ ರೀತಿ ಸಾಲಿನಿಂದ ಸಾಲಿಗೆ ಅಂತರ ಕೊಟ್ಟಾಗ ಕಬ್ಬಿಗೆ ಯಾವುದೇ ರೀತಿಯ ಅಡಚಣೆಗಳು ಉಂಟಾಗುವುದಿಲ್ಲ ಮತ್ತು ಕಬ್ಬಿನಲ್ಲಿ ಗಣಿಕೆ ಹೆಚ್ಚಳ ಮತ್ತು ದಪ್ಪವಾಗುವುದು ಜೊತೆಗೆ ಸದೃಢವಾಗಿ ಕೂಡ ಬೆಳೆಯುತ್ತದೆ

2}ಸಾಲಿನಿಂದ ಸಾಲಿಗೆ ಎಷ್ಟು ಅಂತರ ಇರಬೇಕು?

•  ನಾಟಿ ಮಾಡುವ ಬೀಜಗಳನ್ನು ತೆಗೆದುಕೊಂಡು ಬೀಜ ಉಪಚಾರಕ್ಕೆ ಜಿಂಕ್ ಸಲ್ಫೇಟ್  ಕ್ಲೋರೋಪರಿಪಾಸ್  ಯೂರಿಯಾ ನಲ್ಲಿ ಸುಮಾರು 6 ಗಂಟೆಗಳ ಕಾಲ ಬೀಜವನ್ನು ನೆನೆಸಿಡಬೇಕು ಇದರಿಂದ ಯಾವುದೇ ರೋಗ ಬರುವುದಿಲ್ಲ ಕೀಟಗಳಬಾದೇ ಆಗುವುದಿಲ್ಲ.

•  ಕಬ್ಬು ನಾಟಿ ಮಾಡುವಾಗ ಸಾಲಿನಿಂದ ಸಾಲಿಗೆ ಐದು ಹೊಡಿ ಅಂತರ ಕೊಡಬೇಕು.


•  ಮತ್ತು ಸಸಿಯಿಂದ ಸಸಿಗೆ 1.5 ಬೂಟ್ ಅಂತರ ಕೊಡಬೇಕು.


• ಒಂದು ಅಥವಾ ಎರಡು ಕಣ್ಣುಗಳು  ಇದ್ದರೆ ಸಾಕು


•  ಈ ರೀತಿ ಮಾಡಿದಾಗ ಕಬ್ಬಿನಲ್ಲಿ ಅತಿ ಹೆಚ್ಚು ಇಳುವರಿಯನ್ನು ಪಡೆಯಬಹುದು


•  ಸಾಲಿನ ಆಳ ಎಷ್ಟು ಇರಬೇಕು ಎಂದರೆ 14 ರಿಂದ 16ಇಂಚು ಸಾಕಾಗುತ್ತದೆ

3}ಗೊಬ್ಬರ ಹಾಕುವ ವಿಧಾನ

•   ಪ್ರತಿ ಒಬ್ಬ ರೈತರು ಇದನ್ನು ತಿಳಿದುಕೊಳ್ಳಲೇಬೇಕು ಯಾವ ಸಮಯದಲ್ಲಿ ಯಾವ ರೀತಿ ಪೋಷಕಾಂಶಗಳನ್ನು ಕೊಟ್ಟರೆ ಯಾವ ರೀತಿ ಬೆಳೆಯುತ್ತದೆ ಅನ್ನೋದು ಮೊದಲೇ ತಿಳಿದುಕೊಳ್ಳಬೇಕು


•  ಎರೆಹುಳ ಗೊಬ್ಬರ ಮತ್ತು ರಸ ಗೊಬ್ಬರಗಳು ಅದರ ಜೊತೆಗೆ ಕೊಟ್ಟಿಗೆ ಗೊಬ್ಬರಗಳು ಸಮಯಕ್ಕೆ ತಕ್ಕ ಹಾಗೆ ಕೊಡಬೇಕಾಗುತ್ತದೆ.


•  ಎರೆಹುಳ, ಎನ್ ಪಿ ಕೆ ಅಂಶ,ಹೊಂದಿರುವ ರಸ ಗೊಬ್ಬರ ಮತ್ತು ಮೈಕ್ರೋ ನ್ಯೂಟ್ರಿಯಂಟ್ ಇರುವಂತಹ ಗೊಬ್ಬರಗಳನ್ನು ಮಿಕ್ಸ್ ಮಾಡಿಕೊಂಡು ಕಬ್ಬು ಹಚ್ಚಲು ಮಾಡಿರುವಂತಹ ಸಾಲಿನಲ್ಲಿ ಪ್ರಮಾಣದಲ್ಲಿ ಹಾಕುತ್ತಾ ಹೋಗಬೇಕು


•  ನಂತರ ಸಸಿ ನಾಟಿದ ಬಳಿಕ ಕೆಲವೊಂದು ಸಸಿಗಳನ್ನು ನಾವು ಮುಂಚೆ ಮಾಡಿಕೊಂಡಿರಬೇಕು ಏಕೆಂದರೆ ಕೆಲವು ಬೀಜಗಳು ನಾಟುವುದಿಲ್ಲ ಇದರಿಂದ ಅಂತರ ಹೆಚ್ಚಾಗುತ್ತದೆ

•  ಮಾಡಿ ಇಟ್ಟುಕೊಂಡಿರುವಂತಹ ಸಸಿಗಳನ್ನು ಬೀಜ ನಾಟಕ ಜಾಗಗಳಲ್ಲಿ ಅದನ್ನು ನಾವು ಹಚ್ಚಬೇಕು  ಗ್ಯಾಪ್ ಫೀಲಿಂಗ್ ಆಗುತ್ತದೇ

• ಮುಂದೆ 45 ರಿಂದ 50 ದಿವಸಗಳ ನಂತರ ಕಬ್ಬಿಗೆ   ತಳ ಗೊಬ್ಬರ ವಾಗಿ ಬೂಸ್ಟರ್ ಡೋರ್    ಅಥವಾ ಎಕ್ಕರ್ ಡೋಸ್, ನೈಟ್ರೋಜನ್ ಫಸ್ಫರಸ್  ಗೊಬ್ಬರಗಳನ್ನು ಕೊಡಬೇಕಾಗುತ್ತದೆ.

4}ಹುಟ್ಟು ಕಬ್ಬನ್ನು ಎಷ್ಟು ದಿನದಲ್ಲಿ ಮುರಿಯಬೇಕು?

• ನಾಟಿಯಾದ 65 ದಿವಸದಲ್ಲಿ ಹುಟ್ಟು ಕಬ್ಬನ್ನು ಮುರಿಯಬೇಕಾಗುತ್ತದೆ ಏಕೆಂದರೆ ಉಳಿದ ಮರಿಗಳು ಸರಿಯಾದ ಪ್ರಮಾಣದಲ್ಲಿ.

•  ಕಬ್ಬ ಮುರಿದ  ಎಂಟರಿಂದ ಹನ್ನೆರಡು ಮರಿಗಳು ಬಂದರೆ ಸಾಕು.

•  ನಂತರ ಯಂತ್ರದ ಸಹಾಯದಿಂದ ಬೋದು       ಎರಿಸಬೇಕು ಮಧ್ಯದಲ್ಲಿ ಕವಲು ಮಾಡಬೇಕು.

•  ಇದರಿಂದ ನೀರು ಹರಿಸಲು ಸಹಾಯವಾಗುತ್ತದೆ


•  ಒಂದು ಸ್ಥಳಕ್ಕೆ ಎಂಟು ರಿಂದ 10 ಮರಿಗಳನ್ನು ಕಾಯದರೆ ಸಾಕು


•  ಪ್ರತಿ  ಒಂದು ನೂರು ಟನ್ ತೆಗಿಯಬೇಕಾದರೆ ಕಬ್ಬಿನ ಮರಿಗಳ      ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಾಯ್ದುಕೊಂಡು ಇರಬೇಕು
  ಕಬ್ಬಿನ ತೂಕ ಹೆಚ್ಚಿಸಲು ಹಸಿರೆಲೆ ಗೊಬ್ಬರಗಳನ್ನು         ಹಾಕಬೇಕು.

5}ಕೀಟಗಳ ನಿರ್ವಹಣೆ:

•  ಬಿಳಿ ಉಣ್ಣೆಗಳು ಮತ್ತು ಕರಿಹೇನು ಇವುಗಳ ನಿಯಂತ್ರಣ ಮಾಡಲೇಬೇಕು

•  ಗೊಣ್ಣೆ ಹುಳುವಿನ ನಿಯಂತ್ರಣ ಮಾಡಬೇಕು
•  ಕಬ್ಬಿನಲ್ಲಿ ಸುಳಿ ಕೊರಕಕ್ಕೆ ಕೀಟನಾಶಕ  ಬಳಸಬೇಕು
•  ಮತ್ತು ಕಬ್ಬಿನಲ್ಲಿ ರವಧಿಯನ್ನು ತೆಗೆದು ಹಾಕಬೇಕು
•  ಇದರಿಂದ ಸ್ವಚ್ಛತೆ ಬಹಳ ಮುಖ್ಯವಾಗುತ್ತದೆ ಮತ್ತು ಕೀಟಗಳ    ಹಾವಳಿಯನ್ನು ನಿಯಂತ್ರಿಸಬಹುದು ಯಾವುದೇ ಕೀಟಗಳು  ಕೀಟನಾಶಕವನ್ನು ಸಿಂಪಡಿಸಬೇಕು
      ಇದೇ ರೀತಿ ರೈತರು ಕ್ರಮಗಳನ್ನು  ಅನುಕರಿಸಿದರೆ         ಒಳ್ಳೆಯ ಇಳುವರಿಯನ್ನು ಪಡೆಯಬಹುದು.

ದಯಮಾಡಿ ರೈತರು ಬೆಳೆಯಲ್ಲಿ ಬರುವಂತಹ ಎಲೆ ರವಧಿಗಳನ್ನು ಯಾವುದೇ ಕಾರಣಕ್ಕೂ ಸುಡಬಾರದು.

6}ಕಬ್ಬಿನ ರವದಿಯನ್ನು ಸುಡಬಾರದುಏಕೆ?


•  ಕಬ್ಬಿನ ರವದಿ ಸುಡುವುದರಿಂದ ಪೋಷಕಾಂಶಗಳು ಹಾಳಾಗುತ್ತವೆ
•  ರವಧಿ ಸುಲಿದು ಕಬ್ಬಿನ ಕೆಳಗಡೆ ಬಿಡುವುದರಿಂದ ಎರೆಹುಳು ತಯಾರಾಗುತ್ತದೆ
•  ಎರೆಹುಳು ತಯಾರಾಗುವುದರಿಂದ ಪೋಷಕಾಂಶಗಳ ಜೊತೆಗೆ ಮಣ್ಣು ಫಲವತ್ತತೆಯಿಂದ ಇರುತ್ತದೆ
•  ಇದರಿಂದ ಸಾವಯುವ ಗೊಬ್ಬರ ತಯಾರಾಗುತ್ತದೆ
•  ಇದರಿಂದ ಕಳೆ ಕೂಡ ನಿರ್ವಹಣೆಯಲ್ಲಿ ಇರುತ್ತದೆ

ಹಲವಾರು ರೀತಿಯ ಕ್ರಮಗಳನ್ನು ರೈತರು ಸಮಯಕ್ಕೆ ತಕ್ಕಂತೆ ಮಾಡಿಕೊಂಡು ಹೋದರೆ ಯಾವುದೇ ರೀತಿಯ ತೊಂದರೆ ಬೆಳೆಯಲಿ ಕಾಣುವುದಿಲ್ಲ ಮತ್ತು ಕಬ್ಬಿನಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ಸಮೀಪದ ಕೃಷಿ ವಿದ್ಯಾಲಯಕ್ಕೆ ಭೇಟಿ ನೀಡಬೇಕು ಅಲ್ಲಿ ನೀಡುವಂತಹ ಮಾಹಿತಿಯನ್ನು ರೈತರು ತಮ್ಮ ಹೊಲಗಳಲ್ಲಿ ಉಪಯೋಗಿಸಿ ಕೊಳ್ಳಬೇಕು ಇದರಿಂದ ರೈತರು ತೋಟಗಳಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ

Leave a Reply

Your email address will not be published. Required fields are marked *