ನಮಸ್ಕಾರ ರೈತ ಬಾಂಧವರೆ:

•  ಈಗ ನಾವು ಯಾವ ವಿಷಯದ ಬಗ್ಗೆ ಚರ್ಚೆ ಮಾಡಬೇಕೆಂದರೆ ಪ್ರತಿ ಒಂದು ಎಕರೆಗೆ 50 ರಿಂದ 50 ಕ್ವಿಂಟಲ್ ಮೆಕ್ಕೆಜೋಳ ಬೆಳೆಯುವ ವಿಧಾನಗಳು.

•  ಮೆಕ್ಕೆಜೋಳ ಪ್ರತಿ ಎಕರೆಗೆ 10 ರಿಂದ 15ಕ್ವಿಂಟಲ ಪ್ರತಿಯೊಬ್ಬರು ರೈತರು ಸರ್ವೇ ಸಾಮಾನ್ಯವಾಗಿ ಇಷ್ಟು ಇಳುವರಿಯನ್ನು ತೆಗೆದೇ ತೆಗೆಯುತ್ತಾರೆ ಇನ್ನೂ ಹೆಚ್ಚಿನ ಇಳುವರಿ ತೆಗೆಯಬೇಕಾದರೆ ಮೆಕ್ಕೆಜೋಳದ ಪದ್ಧತಿ ಬದಲಾವಣೆ ಮಾಡಿಕೊಳ್ಳಬೇಕು.

•  ನಾವು ಯಾವ ರೀತಿ ಕ್ರಮಗಳನ್ನು ಅನುಸರಿಸುತ್ತೇವೆ ಅದೇ ರೀತಿಯಾಗಿ ಬೆಳೆಯ ಬೆಳವಣಿಗೆಯನ್ನು ನಾವು ಕಂಡಿಕೊಳ್ಳಬಹುದಾಗಿದೆ ನಾವು ಪ್ರತಿ ಎಕರೆಗೆ ಅತಿ ಹೆಚ್ಚು ಎಂದರೆ 15 ರಿಂದ 20 ಕ್ವಿಂಟಲ್ ಮಾತ್ರ ಬೆಳೆಯುತ್ತೇವೆ.

•  ನಾವು ಬೇರೆ ದೇಶಗಳಿಗೆ ಹೋಲಿಸಿಕೊಂಡರೆ ನಾವು ಇಳುವರಿಯಲ್ಲಿ ಅವರು ಬೆಳೆಯುವ ಅರ್ಧದಷ್ಟು ನಾವು ಬೆಳೆಯುತ್ತೇವೆ. ಏಕೆಂದರೆ ನಾವು ಬೆಳೆಯುವ ಪದ್ಧತಿಗಳು ಹಾಗೂ ವ್ಯವಸಾಯ ಕ್ರಮಗಳು ಬೇರೆ ಆಗಿವೆ ಇದರಲ್ಲಿ ನಾವು ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಳ್ಳೋಣ ಮತ್ತು ಯಾವ ರೀತಿ ವ್ಯವಸಾಯ ಮಾಡಬೇಕು? ಮತ್ತು ಕೀಟಗಳ ನಿರ್ವಹಣೆ ನೀರಿನ ನಿರ್ವಹಣೆ ಮತ್ತು ರಸಗೊಬ್ಬರಗಳ ನಿರ್ವಹಣೆ! ಈ ಎಲ್ಲಾ ಚಟುವಟಿಕೆಗಳನ್ನು ಸರಿಯಾದ ಸಮಯದಲ್ಲಿ ಮಾಡಿದರೆ ಲಾಭವಾಗುವುದು ಖಂಡಿತ.

ಮೆಕ್ಕೆಜೋಳ ಬಿತ್ತುವ ಕ್ರಮಗಳು:

•  ಮೊದಲನೆಯದಾಗಿ ಭೂಮಿಯನ್ನು ಚೆನ್ನಾಗಿ ಉಳಿಮೆ ಮಾಡಬೇಕು.
• ಕೊಟ್ಟಿಗೆ ಗೊಬ್ಬರವನ್ನು ಸೇರಿಸಬೇಕು ಅದನ್ನು ಸರಿಯಾಗಿ ರೋಟೋವೇಟರ್ ನಿಂದ ಮಿಕ್ಸ್ ಮಾಡಬೇಕು.
•  ಮತ್ತು ಹಸಿರು ಎಲೆ ಗೊಬ್ಬರಗಳು ಕೂಡ ನಾವು ಭೂಮಿಗೆ ಹಾಕಬೇಕಾಗುತ್ತದೆ.



• ರೈತ ಬಾಂಧವರೇ ನೀವು ಬೀಜಗಳ ಆಯ್ಕೆ ಮಾಡುವಾಗ ಸರಿಯಾದ ಬೀಜಗಳ ಆಯ್ಕೆ ಮುಖ್ಯವಾಗುತ್ತದೆ ಹೆಚ್ಚು ಇಳುವರಿ ಕೊಡುವಂತಹ ಬೀಜಗಳನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು
•  ಮತ್ತು ಉತ್ತಮವಾದ ಹೈಬ್ರಿಡ್ ತಳಿಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಹೆಚ್ಚು ಇಳುವರಿಯನ್ನು ಪಡೆಯಬಹುದು ಮತ್ತು ರೋಗನಿರೋಧಕ ಶಕ್ತಿಯನ್ನು ಹೊಂದಿರುವಂತಹ ಬೀಜಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಕೆಲವೊಂದು ರೋಗಗಳು ಬರುತ್ತವೆ ಅಂಗಮಾರಿ ರೋಗ ಸೈನಿಕ ಹುಳದ ಕಾಟ ಇಂತಹ ರೋಗನಿರೋಧಕ ಶಕ್ತಿಯ ಹೊಂದಿರುವಂತಹ ಬೀಜಗಳನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಮತ್ತು ಉತ್ತಮ ಇಳುವರಿಯನ್ನು ಪಡೆಯಬಹುದು.



• ಬೀಜ ಉಪಚಾರ ಮಾಡಿದರೆ ಆಗುತ್ತಿಲ್ಲ ಮಾಡದೆ ಇರುವಂತಹ ಬೀಜಗಳಿಗೆ ನಾವು ಬಿಜೆಪಿ ಜಾರ ಮಾಡಲೇಬೇಕು ಕಾರ್ಬನ್ ಡೈಜಂ ನಿಂದ ಬೀಜಪಚಾರ ಮಾಡಬೇಕು ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

• ಬಿತ್ತನೆ ಮಾಡುವಾಗ ಸರಿಯಾದ ಅಂತರವನ್ನು ಕಳೆದುಕೊಳ್ಳಬೇಕು ಸಸಿಯಿಂದ ಸಸಿಗೆ 10 ರಿಂದ 12 ಇಂಚು ಇರಬೇಕು ಮತ್ತು ಸಾಲಿನಿಂದ ಸಾಲಿಗೆ  12 ರಿಂದ 15 ಇಂಚು ಇರಬೇಕು.
•  ಮತ್ತು ಬಿತ್ತನೆಯಾದ ಮರುದಿನ ಕಳೆನಾಶಕ ಸಿಂಪರಣೆ ಮಾಡಬೇಕು ಈ ಕಳೆನಾಶಕ  ಕಳೆಯನ್ನು ಹತೋಟಿಯಲ್ಲಿ ಇಡಬಹುದು ಮತ್ತು ಬಿತ್ತನೆಯಾದ 21 ರಿಂದ 25 ದಿವಸಗಳಲ್ಲಿ ಯೂರಿಯಾ ಕೊಡಬೇಕು ಮತ್ತು ಇದಾದ ನಂತರ ಎಡೆ ಕುಂಟೆ ಮಾಡಬೇಕು ಇದರಿಂದ ಉತ್ತಮವಾದ ಫಸಲು ಬೆಳೆಯಲು ಅನುಕೂಲವಾಗುತ್ತದೆ.
•  ಬಿತ್ತನೆಯಾದ 25 ದಿವಸದ ಒಳಗಡೆ ಸೈನಿಕ ಹುಳುವಿನ ಕಾಟ ಬಹಳ ಇರುತ್ತದೆ ಇದಕ್ಕೆ ನಾವು ಕೀಟನಾಶಕವನ್ನು ಸಿಂಪರಣೆ ಮಾಡಲೇಬೇಕು ಮತ್ತು ಇದರೊಂದಿಗೆ BIO 20 ಟಾನಿಕ್ ಅನ್ನೋ ಪ್ರತಿ ಲೀಟರ್ಗೆ ಮೂರರಿಂದ ನಾಲ್ಕು ಎಂಎಲ್ ಹಾಕಿ ಸಿಂಪರಣೆ ಮಾಡಬೇಕು ಇದು ಒಂದು ಉತ್ತಮ ಟಾನಿಕ್ ಆಗಿರುತ್ತದೆ ಇದರ ಸಿಂಪರಣೆಯಿಂದ ಉತ್ತಮವಾದಂತಹ ಗಿಡದಲ್ಲಿ ಬೆಳಗುವನಿಗೆ ಕಂಡುಬರುತ್ತದೆ ಈ ರೀತಿ ಮಾಡಿದಾಗ ಗಿಡದ ಬೆಳವಣಿಗೆ ಹಾಗೂ ಕೀಟದ ಹಾವಳಿ ಬಹಳ ಕಡಿಮೆ  ಆಗುತ್ತದೆ ಪ್ರತಿಯೊಂದು ಮೆಕ್ಕೆಜೋಳದ ಸಸಿಗೆ ಸುಳಿಯಲ್ಲಿ ತಾಗುವಂತೆ ಕೀಟನಾಶಕವನ್ನು ಸಿಂಪರಣೆ ಮಾಡಬೇಕು ಆಗ ಮಾತ್ರ ಈ ಕೀಟದಲ್ಲಿ ನಿರ್ವಹಣೆ ಮಾಡಲು ಸಾಧ್ಯ.

ಬೀಜ ಉಪಚಾರ :

ಬೀಜಗಳ ಆಯ್ಕೆ:

ರಸಗೊಬ್ಬರ ಗಳ ನಿರ್ವಹಣೆ:

•  ಪ್ರತೀಕರಿಗೆ 50 ಕೆಜಿ ಯೂರಿಯ ಮತ್ತು 30 ರಿಂದ 35 ಕೆಜಿ ಪೋಟ್ಯಾಶ್ ಒಂದು ಕೆಜಿ ಹೋಮಿಕ್  ಆಸಿಡ್ ಐದು ಕೆಜಿ ಜಿಂಕ ಒಂದು ಕೆಜಿ ಸ್ವಲ್ಪರ್ ಮಿಕ್ಸ್ ಮಾಡಿ ಪ್ರತೀ ಎಕರೆಗೆ 50 ರಿಂದ 55ರ ದಿವಸದ ಒಳಗಾಗಿ ಈ ಗೊಬ್ಬರವನ್ನು ಕೆಳಗೊಬರವಾಗಿ ಉಪಯೋಗಿಸಬೇಕು.
•  ಈ ಹಂತದಲ್ಲಿ ಕೂಡ ಇನ್ನೊಮ್ಮೆ ಕೀಟನಾಶಕ ಮತ್ತು  BIO 20 ಟಾನಿಕ್ ಹಾಕಿ ಚೆನ್ನಾಗಿ ಎಲ್ಲ ಕಡೆ ಸ್ಪ್ರೇ ಆಗುವಂತೆ ಸಿಂಪರಣೆ ಮಾಡಬೇಕು ಇದರಿಂದ ಬೆಳೆಯಲ್ಲಿ ಉತ್ತಮವಾದಂತಹ ಬೆಳವಣಿಗೆ ಕಂಡುಬರುತ್ತದೆ.



1) ಬೆಂಕಿ ರೋಗ:

ಈ ಹಂತದಲ್ಲಿ ಕಂಡುಬರುವಂತಹ ರೋಗಗಳು:

•  ಇದನ್ನು ನಿರ್ವಹಣೆ ಮಾಡಬೇಕಾದರೆ ಮೈಕ್ರೋಜಿಬ್ 75 ಪ್ರತಿ ಲೀಟರಿಗೆ 2 ಗ್ರಾಂ ಹಾಕಿ ಸಿಂಪರಣೆ ಮಾಡಬೇಕು

2)ಕರಿ ಹೇನು :

•  ಈ ಕರಿ ಹೇನು ಇದನ್ನು ನಿರ್ವಹಣೆ ಮಾಡಲು ಟಾಪ್ಗಾರ್ ಎಂಬ ಕೀಟನಾಶಕವನ್ನು ಸಿಂಪರಣೆ ಮಾಡಬೇಕು ಇದು ಪ್ರಮಾಣ ಪ್ರತಿ ಲೀಟರ್ಗೆ ಎರಡು ಎಂ ಎಲ್ ಹಾಕಿ ಸಿಂಪರಣೆ ಮಾಡಿದಲ್ಲಿ ಈ ಕೀಟದ ಅವಳಿಯನ್ನು ನಿಯಂತ್ರಣದಲ್ಲಿ ಬರುತ್ತದೆ

3)ಸೈನಿಕ ಹುಳುವಿನ ಕಾಟ :

•  ಈ ಹುಳು ಕಂಡು ಬಂದರೆ Emamectin benzoate ಪ್ರತಿ ಲೀಟರ್ ನೀರಿಗೆ ಅರ್ಧ ಗ್ರಾಂ ಹಾಕಿ ಪ್ರತಿ ಗಿಡಕ್ಕೆ ಸುಳಿಯಲ್ಲಿ ತಾಗುವಂತೆ ಶಿಂಪಾರಣೆ ಮಾಡಬೇಕು ಈ ರೀತಿ ಮಾಡಿದ್ದಲ್ಲಿ ಇಕಿ ಈ ಸೈನಿಕ ಹುಳುವಿನ ಕಾಟ ನಿಯಂತ್ರಿಸಬಹುದು.

•  ರೈತರು ಈ ರೀತಿಯಾಗಿ ಹಲವಾರು ಕ್ರಮಗಳನ್ನು ಕೈಗೊಂಡರೆ ಉತ್ತಮವಾದಂತಹ ಬೆಳೆಯು ತೆಗೆಯಬಹುದು.

ಎಲ್ಲಾ ನಮ್ಮ ರೈತ ಬಾಂಧವರು ಈ ರೀತಿ ಕ್ರಮಗಳನ್ನು ಅನುಸರಿಸಿದರೆ ಉತ್ತಮ ಆದಾಯ ಬರುವುದು ನಿಶ್ಚಿತ ಎಂದು ಹೇಳಬಹುದು.

Leave a Reply

Your email address will not be published. Required fields are marked *