ನಮಸ್ಕಾರ ರೈತ ಬಾಂಧವರೇ ಹಲವಾರು ಕೃಷಿ ಚಟುವಟಿಕೆ ಮಾಡುವಾಗ ರೈತರಿಗೆ ಅನುಕೂಲವಾಗುವಂತಹ ಯಂತ್ರಗಳು ಉಪಕರಣಗಳು ಸಹಜವಾಗಿ ಕೆಲಸ ಕಾರ್ಯಗಳಲ್ಲಿ ಬೇಕಾಗುತ್ತವೆ ಯಾವುದೇ ಕೆಲಸ ಮಾಡಲು ಅತಿ ಕಡಿಮೆ ಸಮಯದಲ್ಲಿ ಪಾತ್ರ ಬಹಳಷ್ಟು ಇದೆ ಯಂತ್ರದಿಂದ ರೈತರಿಗೆ ಸಮಯದ ಕೊರತೆನೂ ನೀಗಿಸಬಹುದು ಮತ್ತು ಅತಿ ಆಳುಕೂಡ ಕಡಿಮೆ ಮಾಡಬಹುದು
ರೈತರಿಗೆ ಅನುಕೂಲವಾಗಲೆಂದು ನಮ್ಮ ಸರ್ಕಾರ ರೈತರಿಗೆ ಸಬ್ಸಿಡಿಯಲ್ಲಿ ನೇಗಿಲು ಹರಗುವ ಕುಂಟೆ, ಬಿತ್ತುವ ದಿಂಡು ತಾಳಿನ ಬೀಜ ಮತ್ತು ಗೊಬ್ಬರ ಬಿತ್ತುವ ಕೂರಿಗೆ, ತಾಳಿನ ಬೀಜ ಮತ್ತು ಗೊಬ್ಬರ ಬಿತ್ತುವ ಕೂರಿಗೆ, ಸ್ಪ್ರಿಂಗ್ ಟ್ರೈನ್ ಮಾದರಿಯ ಬಿತ್ತುವ ದಿಂಡು, ಕುಂಟೆ ದಿಂಡು ಎಡೆ ಹೊಡೆಯುವ ದಿಂಡು, ಸೈಕಲ್ ವಿಡಿರ್,
ಮಾನವ ಚಾಲಿತ ಸೈಕಲ್ ಮಾದರಿಯ ಬಿತ್ತನೆಯ ಕೂರಿಗೆ, ಬೂದು ಮಾಡುವ ದಿಂಡು ಹಾಗೂ ಎತ್ತು ಚಾಲಿತ ಮಾನವ ಚಾಲಿತ ಕೂರಿಗೆ,ದಿಂಡು. ಇನ್ನೂ ಹಲವಾರು ರೈತರಿಗೆ ಉಪಯೋಗವಾಗುವಂತಹ ಉಪಕರಣಗಳನ್ನು ಸರ್ಕಾರ ಯೋಜನೆಯಲ್ಲಿ ಸಬ್ಸಿಡಿ ದರದಲ್ಲಿ ರೈತರಿಗೆ ವಿತರಿಸಲಾಗುತ್ತಿದೆ ಮತ್ತು ರೈತರು ಈ ಯೋಜನೆಯನ್ನು ಎಲ್ಲರೂ ಪಡೆದುಕೊಳ್ಳಬೇಕು ಇನ್ನೂ ಹೆಚ್ಚಿನ ಬೆಳೆಗಳಲ್ಲಿ ಬೇಕಾದಂತಹ ವಸ್ತುಗಳು ಕೂಡ ಇವೆ ಬಿತ್ತುವ ಕೂರಿಗೆಗಳು ಹರಗುವ ಕುಂಟೆ ಡಕ ಪೊಟ್ ಟೈಪ್ ಕಲ್ಟಿ ವೇಟರ್ ತೊಗರಿಯಲ್ಲಿ ಕಳೆ ತೆಗೆಯಲು ಮೇಲು ಗೊಬ್ಬರ ಹಾಕಲು ಕೃಷಿ ಉಪಕರಣ ಎತ್ತು ಚಾಲಿತ ಹಾಗೂ ಮಾನವ ಚಾಲಿತ ಕೃಷಿ ಉಪಕರಣಗಳು ಲಭ್ಯ ವಾಗಿವೆ
• ಟ್ರ್ಯಾಕ್ಟರ್ ಚಾಲಿತ ಭೂಮಿ ಸಿದ್ಧತಾ ಮಾಡಿಕೊಳ್ಳುವ ಉಪಕರಣ
ರೈತರು ಬೇಸಿಗೆಯಲ್ಲಿ ಭೂಮಿಯನ್ನು ಸಿದ್ಧಪಡಿಸಿಕೊಳ್ಳಬೇಕು
1)ಹರಗುವ ಕುಂಟೆ 6 ft:
ಇದು ಕೂಡ ಸಬ್ಸಿಡಿ ದರದಲ್ಲಿ ಲಭ್ಯವಿದೆ
ಇದರ ವೈಶಿಷ್ಟತೆಗಳು
• ಹೆವಿ ಡ್ಯೂಟಿ ಮೇನ್ ಪ್ರಿಮಿನ ಅಳವಡಿಕೆ
• ಉತ್ತಮ ಗುಣಮಟ್ಟದ ಲೋಹದ ಬ್ಲೇಡಿನ ಅಳವಡಿಕೆ
ಹೆವಿ ಡ್ಯೂಟಿ ಟೈಮ್ ಬಳಕೆ.
2) ಡಕ್ ಫೂಟ್ ಟೈಪ್ ಕಲ್ಟಿವೇಟರ್:
• ಇದರ ವೈಶಿಷ್ಟ್ಯತೆಗಳು
• ಉತ್ತಮ ಗುಣಮಟ್ಟದ ಬಾಕ್ಸ್ ಮಾದರಿಯ ಪ್ರೇಮ್ ಅಳವಡಿಕೆ
• ಹೆವಿ ಡ್ಯೂಟಿ ಪಾಯಿಂಟ್ ಸ್ಟೀಲ್ ಬಳಕೆ
• ಹೆವಿ ಡ್ಯೂಟಟ್ರೈನ್ ಅಳವಡಿಕೆ
ಇದು ಕೂಡ ಸಬ್ಸಿಡಿ ದರದಲ್ಲಿ ಲಭವಿದೆ
3) ಟ್ರ್ಯಾಕ್ಟರ್ ಚಾಲಿತ 6 ತಾಳಿನ ಬೀಜ ಮತ್ತು ಗೊಬ್ಬರ ಬಿತ್ತುವ ಕೂರಿಗೆಗಳು:
• ಇದು ಕೂಡ ಸಬ್ಸಿಡಿ ದರದಲ್ಲಿ ಲಭ್ಯವಿದೆ
• ಇದರ ವೈಶಿಷ್ಟತೆಗಳು:
• ಗಾಯತ್ರಿ ಮಾದರಿಯ ರಿಸಿದ್ ಫಿಕ್ಸೆಡ್ ತಾಳಗಳು ಹೊಂದಿರುತ್ತವೆ
• ಹೊಂಬಲಾ ಉತ್ತಮ ಗುಣಮಟ್ಟದ ಆಗಿರುತ್ತವೆ
• ಉತ್ತಮ ಗುಣಮಟ್ಟದ ಲೋಹದ ಬಳಕೆ ಬಾಕ್ಸ್
• ಸಾಲಗಳ ನಡುವಿನ ಅಂತರವನ್ನು ಬದಲಾಯಿಸುವಂತಹ ವ್ಯವಸ್ಥೆ
• ಬಿತ್ತನೆಯ ಬೀಜಗಳ ಮುಚ್ಚುವಿಕೆಯು ವ್ಯವಸ್ಥೆ ಇರುತ್ತದೆ
• ನೀರಾವರಿ ವ್ಯವಸ್ಥೆಯಲ್ಲಿ ಬಿತ್ತನೆ ಮಾಡಲಿಕ್ಕೆ ಸಾರ ಯಂತ್ರದ ಲಭ್ಯತೆ ಹಾಗೂ ಬೂದು ಮಾಡುವ ಸಲುವಾಗಿ ಇರುತ್ತದೆ
• ಆಯಾ ಬೀಜಗಳ ಗಾತ್ರಕ್ಕೆ ತಕ್ಕಂತೆ ಆಂಗಲ್ ದಡಸ್ ನಂಬರ್ ಗುರುತಿಸಿಕೊಂಡು ಮಂಡಿ ಹಾಲರ್ ಅಳವಡಿಕೆ ಬಿತ್ತನೆ ಕಾರ್ಯವನ್ನು ಸುಲಭವಾಗಿ ಕೈಗೊಳ್ಳಬಹುದಾಗಿದೆ
• ಎಲ್ಲಾ ಬೇರಿಂಗಿಗಳಿಗೆ ಗ್ರೀಸಿಂಗ್ ಮಾಡುವ ವ್ಯವಸ್ಥೆ
• ಬೀಜ ಬಿತ್ತುವ ಆಳವನ್ನು ಬದಲಾಯಿಸುವ ವ್ಯವಸ್ಥೆ ಇರುತ್ತದೆ
ಹೆಚ್ಚು ಇಳುವರಿ ಅಧಿಕ ಲಾಭ
4)5,7,9,ತಾಳಿನ ಬೀಜಮತ್ತು ಗೊಬ್ಬರ ಬಿತ್ತುವ ಕೂರಿಗೆ.(ರಿಜಿಡ್ ಟೈನ್ ಮಾದರಿ)
• ಇದರ ವೈಶಿಷ್ಟತೆಗಳು
• ತಾಳುಗಳ ಹೊಂದಾಣಿಕೆ ಮಾಡುವ ವ್ಯವಸ್ಥೆ
• ಬಿತ್ತನೆಯ ಬೀಜಗಳ ಮುಚ್ಚುವಿಕೆ ವ್ಯವಸ್ಥೆ
• ಸಾಲಗಳ ನಡುವಿನ ಅಂತರವನ್ನು ಬದಲಾಯಿಸುವ ವ್ಯವಸ್ಥೆ
• ಆಯಾ ಬೀಜಗಳ ಗಾತ್ರಕ್ಕೆ ಅನುಗುಣವಾಗಿ ಬೀಜದ ಪ್ಲೇಟಿಂಗ್ ನಂಬರ್ ಕ್ಕೆ ಅನುಗುಣವಾಗಿ ಬಿತ್ತನೆ ವ್ಯವಸ್ಥೆ
• ಎಲ್ಲಾ ಬೇರಿಂಗ್ ಗಳಿಗೆ ಗ್ರೀಟಿಂಗ್ ಮಾಡುವ ವ್ಯವಸ್ಥೆ
• ಬಿತ್ತನೆಯ ಕಾರ್ಯ ಮಿಗಿದ ನಂತರ ಗೊಬ್ಬರ ಬಾಕ್ಸನ್ನು ನೀರಿನಿಂದ ಸ್ವಚ್ಛವಾಗಿ ತೊಳೆಯಬೇಕು
• ಏಕಕಾಲಕ್ಕೆ ಬೀಜ ಮತ್ತು ಗೊಬ್ಬರ ಬಿತ್ತನೆ ವ್ಯವಸ್ಥೆ
• ಬೀಜದಿಂದ ಬೀಜಕ್ಕೆ ಸಮಾನವಾದ ಅಂತರ ಬಿತ್ತನೆ ವ್ಯವಸ್ಥೆ
• ಹೆಚ್ಚು ಉಳುವರಿ ಅಧಿಕ ಲಾಭ.
ಇಂಟರ್ ಕಲ್ಟಿವೇಟರ್ ಕಂ ವೀಡಿಯೋಸ್( ಅಂತರ ಬೇಸಾಯ ಉಪಕರಣ)
• ಉತ್ತಮ ಗುಣಮಟ್ಟದ ಬಾಕ್ಸ್ ಮಾದರಿಯ ಪ್ರೇಮ್ ಅಳವಡಿಕೆ
• ಹೆವಿ ಡ್ಯೂಟಿ ಟೈನ್ ಅಳವಡಿಕೆ
ತೊಗರಿ ಬೆಳೆಯಲ್ಲಿ ಮತ್ತು ಹತ್ತಿ ಬೆಳೆಯಲ್ಲಿ ಅಂತರ ಬೇಸಾಯ ಮತ್ತು ಮೇಲು ಗೊಬ್ಬರ ಹಾಕುವ ಕಾರ್ಯಕ್ಕೆ ಅನುಕೂಲಕರವಾದ ಉಪಕರಣ
5) ಎಡೆ ಕುಂಟೆ ಒಂಬತ್ತು ಇಂಚ್ ಹಾಗೂ 11 ಇಂಚು ಮತ್ತು ಹೊಂದಾಣಿಕೆ ಕುಂಟೆ
• ಇವುಗಳ ವೈಶಿಷ್ಟತೆಗಳು
• ಉತ್ತಮ ಗುಣಮಟ್ಟದ ಲೋಹದಿಂದ ತಯಾರಿಸಲಾದ ಉಪಕರಣಗಳಾಗಿವೆ
• ಉತ್ತಮ ಗುಣಮಟ್ಟದ ಬ್ಲೇಡ್ ಅಳವಡಿಸಲಾಗಿದೆ
• 9 ರಿಂದ 11 ಇಂಚಿನವರೆಗೆ ಕುಡಿದ ಬ್ಲೇಡಿನ ಲಭ್ಯತೆ
• ಸಜ್ಜೆ ಕಡಲೆ ಜೋಳ ಗೋಧಿ ವಿವಿಧ ರೀತಿಯ ಬೆಳೆಗಳಲ್ಲಿ ಕಳೆ ತೆಗೆಯಬಹುದಾದ ಉಪಕರಣವಾಗಿವೆ
• ತೊಗರಿ ಬೆಳೆಯಲ್ಲಿ ಮತ್ತು ಹತ್ತಿ ಬೆಳೆಯಲ್ಲಿ ಕಳೆ ತೆಗೆಯಬಹುದಾದ ಉತ್ತಮ ಉಪಕರಣ
• ಉತ್ತಮ ಗುಣಮಟ್ಟದ ಲೋಹದಿಂದ ತಯಾರಿಸಲಾಗುವ ಉಪಕರಣಗಳಾಗಿವೆ
ಬಿತ್ತಿದ ಸಾಲುಗಳಲ್ಲಿ 24 ರಿಂದ 32 ಇಂಚಿನವರೆಗೂ ಹೊಂದಾಣಿಕೆ ವ್ಯವಸ್ಥೆ.
6) ಎತ್ತು ಚಾಲಿತ ಹಾಗೂ ಮಾನವ ಚಾಲಿತ ಕೃಷಿ ಉಪಕರಣಗಳು( 3 ಮತ್ತು 4 ತಾಳಿನ ಬೀಜ ಮತ್ತು ಗೊಬ್ಬರ ಬಿತ್ತನೆಯ ಸಂಯುಕ್ತ ಕುರಿಗೆ )
• ವೈಶಿಷ್ಟತೆಗಳು
• ಏಕಕಾಲಕ್ಕೆ ಮೂರು ನಾಲ್ಕು ಸಾಲುಗಳಲ್ಲಿ ಬಿತ್ತನೆ ಕಾರ್ಯ ಮಾಡಬಹುದು
• ಸಾಲುಗಳ ನಡುವಿನ ಅಂತರವನ್ನು ಹೆಚ್ಚು ಕಡಿಮೆ ಮಾಡಬಹುದು
• ಉತ್ತಮ ಗುಣಮಟ್ಟದ ಲೋಹದಿಂದ ತಯಾರಿಸಲಾಗಿದೆ
ಮತ್ತು ಉತ್ತಮ ಲಾಭ.
7) ಮಾನವ ಚಾಲಿತ ಕೃಷಿ ಉಪಕರಣಗಳು ಸೈಕಲ್ ರೀಡರ್ ಮತ್ತು ಮಾನವ ಚಾರಿತ ಸೈಕಲ್ ಮಾದರಿಯ ಬಿತ್ತನೆಯ ಕೂರಿಗೆ:
• ಸೈಕಲ್ ರೀಡರ್ ವಿಶೇಷತೆಗಳು:
• ಬೆಳೆಗಳ ಸಾಲುಗಳ ನಡುವಿನ ಕಳೆ ತೆಗೆಯಬಹುದಾಗಿದೆ
• ಪುರುಷರು ಮತ್ತು ರೈತ ಮಹಿಳೆಯರು ಸುಲಭವಾಗಿ ಕಳೆ ತೆಗಿಯಬಹುದಾದ ಉತ್ತಮ ಉಪಕರಣ
• ಹೊಂದಾಣಿಕೆ ಮಾಡಿಕೊಳ್ಳಬಹುದಾದ ಕುಡದ ಲಭ್ಯತೆ
• ಉಪಕರಣ ಹ್ಯಾಂಡಲ್ ಅನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು.
• ಉತ್ತಮ ಗುಣಮಟ್ಟದ ಲೋಹದಿಂದ ತಯಾರಿಸಲಾಗಿದೆ
• ಹತ್ತಿ ಜೋಳ ಇರುಳಿ ಕುಸುಬಿ ಮತ್ತು ವಿವಿಧ ರೀತಿಯ ಬೆಳೆಗಳ ಬೀಜಗಳನ್ನು ಬಿತ್ತನೆ ಮಾಡಲು ಉಪಯುಕ್ತವಾಗಿದೆ
• ಉತ್ತಮ ಸಾಕಾಣಿಕೆ ಮತ್ತು ಕಡಿಮೆ ನಿರ್ವಹಣಾ ವೆಚ್ಚ
8) ಸಾರಾ ಯಂತ್ರ :
• ಕಬ್ಬು ಮತ್ತು ಹತ್ತಿ ಬೆಳೆಗಳಲ್ಲಿ ಮಡಿಗಳನ್ನು( ಬೋದು) ಮಾಡಲು ವ್ಯವಸ್ಥೆ
• ಉತ್ತಮ ಗುಣಮಟ್ಟದ ಲೋಹದಿಂದ ತಯಾರಿಸಲಾಗಿದೆ
• ಉತ್ತಮ ಗುಣಮಟ್ಟದ ಬ್ಲೇಡ್ ಅಳವಡಿಸಲಾಗಿರುತ್ತದೆ
• ಉತ್ತಮ ಸಾಗಾಣಿಕೆ ಕಡಿಮೆ ನಿರ್ವಹಣಾ ವೆಚ್ಚ
ಈ ರೀತಿಯ ಎಲ್ಲ ಉಪಕರಣಗಳು ಲಭ್ಯವಾಗಿವೆ ರೈತರಿಗೆ ತಮಗೆ ಬೇಕಾದ ವಸ್ತುವನ್ನು ಈ ಕೆಳಕಂಡ ವಿಳಾಸಕ್ಕೆ ಭೇಟಿಕೊಟ್ಟು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕು.
ಶ್ರೀ ಗಾಯತ್ರಿ ವಿಶ್ವಕರ್ಮ ಇಂಡಸ್ಟ್ರೀಸ್ ವಿಜಯಪುರ
ಸಿಂದಿಗೆ ರಸ್ತೆ ಮುನೇಶ್ವರ ಭಾಗ ಹತ್ತಿರ ವಿಜಯಪುರ
ಮೊಬೈಲ್ ಸಂಖ್ಯೆ: 9449143 061, 9880735 074.
ರೈತರಿಂದ ಮೆಚ್ಚುಗೆ ಪಡೆದಿರುವ ಹಾಗೂ ರೈತರ ಅನುಕೂಲಕ್ಕೆ ತಕ್ಕಂತೆ ಸ್ಥಳೀಯವಾಗಿ ಬೇಕಾಗುವ ಉಪಕರಣಗಳನ್ನು ತಯಾರಿಸಿಕೊಡುವ ವ್ಯವಸ್ಥೆ ಇರುತ್ತದೆ.
ತಂಗಿನ ತೋಟದಲ್ಲಿ ಕಪ್ಪು ತಲೆ ಹುಳುವಿನ ನಿರ್ವಹಣೆ ಮಾಡುವುದು ಹೇಗೆ?
ನಮಸ್ಕಾರ ರೈತ ಬಾಂಧವರೇ:
ಈಗ ನಾವು ಚರ್ಚಿಸಲ್ಪಡುವ ವಿಷಯವೇನೆಂದರೆ ತೋಟಗಾರಿಕೆ ಬೆಳೆಗಳಾದಂತಹ ತೆಂಗಿನ ಬೆಳೆಯಲ್ಲಿ ಕೂಡ ಹಲವಾರು ರೋಗಲ ಲಕ್ಷಣಗಳು ಮತ್ತು ಅದರ ಜೊತೆಗೆ ಕೀಟಗಳವಾದೆಯೂ ಕೂಡ ತುಂಬಾ ಇರುತ್ತದೆ
ತೆಂಗಿನ ಗಿಡ ಬೆಳೆದು ದೊಡ್ಡದಾದಂತೆ ಆದಂತೆ ಕೂಡ ಕೆಲವು ಕೀಟಗಳು ಆಗುತ್ತವೆ ಅದರಲ್ಲಿ ಈ ಅದರಲ್ಲಿಯೂ ಕೂಡ ಈ ಕಪ್ಪು ತಲೆ ಇರುವಂತ ಹುಳುವು ತುಂಬಾ ತೆಂಗಿನ ಗಿಡಗಳಿಗೆ ಹಾನಿ ಉಂಟು ಮಾಡುವುದಲ್ಲದೆ ಅತೀವ ನಷ್ಟ ಉಂಟು ಮಾಡುತ್ತದೆ ಹೀಗಾಗಿ ರೈತರು ಭಯಪಡುವ ಅವಶ್ಯಕತೆ ಇಲ್ಲ
ಪ್ರಮುಖವಾಗಿ ತೆಂಗಿನ ಬೆಳೆಗಳಲ್ಲಿ ಕೀಟಗಳು ಎಲೆ ತಿನ್ನುವ ಕಪ್ಪು ತಲೆ ಹುಳುಗಳು ಇರುತ್ತವೆ ತೆಂಗಿನ ಬೆಳೆಯು ಯಾವ ಹಂತದಲ್ಲಿ ಈ ಕೀಟವ ಬರುತ್ತದೆ ಎಂಬುದು ನಾವು ತಿಳಿದುಕೊಳ್ಳೋಣ ಈ ಕೀಟಬಾಧೆಯು ಮರಗಳಲ್ಲಿ ತೆಂಗಿನಕಾಯಿ ಇಳುವರಿ ಬಹಳ ಕಡಿಮೆ ಪ್ರಮಾಣದಲ್ಲಿ ಆಗುವಂತೆ ಮಾಡುತ್ತದೆ
ಈ ಕೀಟ ದಿಂದ ಹಲವಾರು ತೆಂಗಿನ ಮರಗಳು ನಾಶವನ್ನು ಹೊಂದುತ್ತವೆ
ಈ ಕೀಟದ ಹಾವಳಿಗೆ ಒಳಗಾದ ತೆಂಗಿನ ಮರದ ಲಕ್ಷಣಗಳು
ಕಪ್ಪು ತಲೆ ಹುಳುವಿನ ಜೀವನ ಚಕ್ರದಲ್ಲಿ ಮರಿ ಹುಳುಗಳು ಬೆಳೆಗಳಿಗೆ ಹಾನಿ ಆನೆ ಮಾಡುವುದಲ್ಲದೆ ಹಂತ ಹಂತವಾಗಿ ಕಪ್ಪು ತಲೆ ಹುಳುಗಳು ಗರಿಗಳ ತಳ ಭಾಗದಲ್ಲಿ ಹೋಗಿ ಗರಿಗಳ ಹಸಿರು ಭಾಗದ ಎಲೆಗಳನ್ನು ಕೆರೆದು ತಿನ್ನುತ್ತವೆ ಹೀಗಾಗಿ ಮರವು ತುಂಬಾ ಹಾನಿಗೆ ಒಳಗಾಗುತ್ತದೆ ಈ ರೀತಿ ಕೆರೆದು ತಿನ್ನುವುದರಿಂದ ಗರಿಗಳ ಮೇಲೆ ಒಣ ಹುಲ್ಲಿನ ರೀತಿ ಕಾಣುತ್ತದೆ ಕ್ರಮೇಣ ಮಚ್ಚುಗಳು ಹರಡಿ ಇಡೀ ಗರಿಗಳೆಲ್ಲ ಒಣಗುತ್ತವೆ ಕೆಳಗಡೆ ಇರುವ ಗರಿಗಳ ಪ್ರ ಪ್ರಾರಂಭವಾಗಿ ಕ್ರಮೇಣ ಮೇಲಿನ ಗರಿಗಳಿಗೆ ಹರಡುತ್ತದೆ ಮುಳುಭಾದಿತ ಮರಗಳಲ್ಲಿ ಸುಟ್ಟಂತೆ ಕಾಣುವ ಗರಿಗಳನ್ನು ದೂರದಿಂದ ಕಾಣಬಹುದು ಹುಳುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾಗ ಕಾಯಿಯರುಗಳನ್ನು ಸಹ ಕೆರೆದು ತಿನ್ನುತ್ತವೆ
ಒಂದು ತೆಂಗಿನ ತೋಟದಲ್ಲಿ ಈ ಕೀಟವು ಮರದಿಂದ ಮರಕ್ಕೆ ಕ್ರಮೇಣವಾಗಿ ಹರಡುತ್ತದೆ ಒಂದು ತೋಟದಿಂದ ಪಕ್ಕದ ತೋಟಕ್ಕೆ ಕೂಡ ಇದು ಹರಡುತ್ತದೆ ಆದರೆ ಇದರ ನಿರ್ವಹಣೆಯೂ ತುಂಬಾ ಅತಿ ಅವಶ್ಯಕ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹರಡುವುದು
ಈ ಕಿಟ ಶ್ರೀಲಂಕಾ ದಕ್ಷಿಣ ಭಾರತ ಮತ್ತು ಮ್ಯಾನ್ಮಾರ್ ವರೆಗೆ ಹರಡುತ್ತದೆ ಈ ಹುಳುವಿನ ಬಾಧೆ ತೆಂಗಿನ ಮರಗಳಲ್ಲಿ ಅಧಿಕವಾಗಿದ್ದೆ ತೆಂಗಿನ ಜಾತಿಗೆ ಸೇರಿದ ಇತರ ಮರಗಳಾದ ಸಾಗು ಮುಂತಾದವುಗಳಲ್ಲಿ ಸ್ವಲ್ಪಮಟ್ಟಿಗೆ ಇರುತ್ತದೆ ಅಡಿಕೆ ಮರಗಳಿಗೆ ಇದರಿಂದ ಯಾವ ರೀತಿಯೂ ಬಾಧೆ ಇರುವುದಿಲ್ಲ
ಈ ಕೀಟದ ಹಾವಳಿ ಒಳನಾಡಿನ ತೆಂಗು ಪ್ರದೇಶಗಳಲ್ಲಿ ವರ್ಷದ ಎಲ್ಲಾ ಕಾಲದಲ್ಲಿಯೂ ಈ ಹುಳುಗಳು ಕಾಟ ಇರುತ್ತದೆ ಜನವರಿ ತಿಂಗಳಲ್ಲಿ ಪ್ರಾರಂಭವಾಗಿ ಮೇ ತಿಂಗಳಿನಿಂದ ಜುಲೈ ತಿಂಗಳವರೆಗೆ ಕೀಟವು ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧಿಗೊಂಡು ಹೆಚ್ಚಿನ ಭಾದೆಯನ್ನು ಉಂಟುಮಾಡುತ್ತದೆ ಮಳೆಯ ಕೊರತೆಯೇ ಇದ್ದಲ್ಲಿ ಈ ಬಾಧೆ ಮುಂದುವರೆಯುವುದರಿಂದ ಈ ಮಧ್ಯ ಚೆನ್ನಾಗಿ ಮಳೆಯಾದಲ್ಲಿ ಕೀಟದ ಸಂಖ್ಯೆ ಕಡಿಮೆಯಾಗಿ ನಂತರ ಸಪ್ಟೆಂಬರ್ ಅಕ್ಟೋಬರ್ ಕಾಲದಲ್ಲಿ ಹೆಚ್ಚು ಹರಡುತ್ತದೆ
ಇದನ್ನು ಜೈವಿಕ ರೀತಿಯಲ್ಲಿ ನಿಯಂತ್ರಣ ಮಾಡುವುದು ಹೇಗೆ :
ಕೀಟಗಾದೆ ಇನ್ನೂ ಕೆಳ ಭಾಗದ ಗರಿಗಳಲ್ಲಿ ಇದು ತೀವ್ರತೆಯ ಹಂತ ತಲುಪಿದಾಗ ಪ್ರಯೋಗಾಲಯದಲ್ಲಿ ಪರೋಪ ಜೀವಿಗಳನ್ನು ತೋಟಗಳಲ್ಲಿ ಬಿಡುವುದರಿಂದ ಕೀಟಗಳ ಬಾಧೆಯನ್ನು ನಿಯಂತ್ರಿಸಬಹುದು ಕೀಟವು ಮರಿ ಹುಳುವಿನ ಹಂತದಲ್ಲಿದ್ದಾಗ ಗಣಿಯೋಜಸ್ ಎಂಬ ಪರೋಪ ಜೀವಿಗಳನ್ನು ಪ್ರತಿ ಕೀಟ ಬಾತಿತ ಮರಕ್ಕೆ ಸುಮಾರು 15 ದಿನಗಳಿಗೊಮ್ಮೆ ಕನಿಷ್ಠ 4 ಬಾರಿ ಬಿಡುಗಡೆ ಮಾಡಬೇಕು ಜೊತೆಗೆ ತಮ್ಮ ವಂಶವನ್ನು ಅಭಿವೃದ್ಧಿಗೊಳಿಸುತ್ತವೆ ಈ ವಿಧಾನವು ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲೂ ಹಾಗೂ ಕೀಟನಾಶಕಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಪ್ಪಿಸುವ ಉದ್ದೇಶದಿಂದಲೂ ಮಹತ್ವವಾಗಿರುತ್ತದೆ ಈ ವಿಧಾನಕ್ಕೆ ಹೆಚ್ಚಿನ ಒತ್ತುಕೊಡಲಾಗಿದೆ.
ಈ ಕೀಟದ ರಾಸಾಯನಿಕ ನಿಯಂತ್ರಣ:
ಚಿಕ್ಕಮರಗಳಾದರೆ ಸಿಂಪರಣೆ ಸಾಧ್ಯವಾಗುವುದರಿಂದ ಪ್ರತಿ ಲೀಟರ್ ನೀರಿಗೆ ಒಂದು ಪಾಯಿಂಟ್ ಐದು ml ಮೊನೊ ಪ್ರೋಟೋಪಾಸ್ ಕೀಟನಾಶಕವನ್ನು ಬೆರೆಸಿ ಗರಿಗಳು ಸಂಪೂರ್ಣ ಒದ್ದೆಯಾಗುವಂತೆ ಸಿಂಪಡಣೆ ಮಾಡಬೇಕು
ಬೇರಿನ ಮೂಲಕ ಕೀಟ ನಿಯಂತ್ರಣ :
7 / 8 ವರ್ಷಗಳಿಗೆ ಮೇಲ್ಪಟ್ಟ ಮರಗಳಿಗೆ ಸಿಂಪರಣೆ ಕಷ್ಟ ಆಗುತ್ತದೆ ಮತ್ತು ಕೀಟಗಳಿಗೆ ಔಷಧಿ ತಾಗುವುದಿಲ್ಲ ಮರದ ಬೇರಿನ ಮೂಲಕ ಈ ಕೀಟದ ನಿರ್ವಹಣೆ ಮಾಡಬೇಕಾಗುತ್ತದೆ ಬುಡದಿಂದ ಸುಮಾರು ಎರಡರಿಂದ ಮೂರು ಅಡಿ ದೂರದಲ್ಲಿ ಭೂಮಿಯನ್ನು ಸ್ವಲ್ಪ ಅಗೆದು ಬೇರುಗಳನ್ನು ಕಂಡುಬರುತ್ತವೆ ಅವುಗಳಲ್ಲಿ ಕೆಂಪು ಅಥವಾ ಒಂದು ಎಳೆಯ ಕಿರುಬೆರಳಿ ಗಾತ್ರದ ಬೇರು ಆಯ್ಕೆ ಮಾಡಿ ಓರೆಯಾಗಿ ಕತ್ತರಿಸಿ ಶಿದ್ದ ಮಾಡಿಕೊಳ್ಳಬೇಕು 1.5 ಇಂಚು ಅಗಲ ಮತ್ತು 6 ಇಂಚು ಉದ್ದದ ಪಾಲಿಥೀನ್ ಚೀಲಗಳಲ್ಲಿ 25 ವರ್ಷಗಳ ಒಳಗಿನ ಮರಗಳಿದ್ದರೆ 7.5 ಮಿಲಿ ಮೋನೋಕ್ರೋಟೊಪಾಸ್ ಅಥವಾ 10 ಮಿಲಿ ಆಜಾಡಿರಾಕ್ತಿನ್ ಉಳ್ಳ ಬೇವಿನ ಬೀಜದಿಂದ ತಯಾರಿಸಿದ ಕೀಟನಾಶಕಗಳನ್ನು ತೆಗೆದುಕೊಂಡುಸಿದ್ಧಮಾಡಿರುವ ದೇರು ಔಷಧಿಯೊಳಗೆ ಸರಿಯಾಗಿ ಮಳೆದುಕೊಂತು. ಅದಕ್ಕೆ ಅಲ ಸಲದ ಬಾಯಿಯನ್ನು ಕಟ್ಟಬೇಕು. ಸಾಮಾನ್ಯವಾಗಿ ಬೇರು ಕೀಟನಾಶಕವನ್ನು 24 ಗಂಟೆಯೊಳಗೆ ಹೀರಿಕೊಳ್ಳುತ್ತದೆ. ಬೇರು ಕೀಟನಾಶಕವನ್ನು ಹೀರಿಕೊಳ್ಳದಿದ್ದಲ್ಲಿ, ಇನ್ನೊಂದು ಸೂಕ್ತ ಬೇರನ್ನು ಆಯ್ಕೆ ಮಾಡಿ ಮೇಲೆ ಸೂಚಿಸಿರುವ ರೀತಿಯಲ್ಲೇ ಉಪಚಾರ ಕೈಗೊಳ್ಳಬೇಕು, ಬೇರಿನಿಂದ ಹೀರಲ್ಪಟ್ಟ ಕೀಟನಾಶಕವು ಶೀಘ್ರವಾಗಿ ಎಲೆಗಳಲ್ಲೆಲ್ಲಾ ವ್ಯಾಪಿಸುವುದರಿಂದ ಎಲೆಗಳನ್ನು ತಿಂದ ಮರಿಹುಳುಗಳು ಸಾಯುತ್ತವೆ. ಕೀಟನಾಶಕವನ್ನು ಉಣಿಸಿದ ಕನಿಷ್ಠ ನಾಲ್ಕು ವಾರಗಳವರೆಗೆ ಉಪಚರಿಸಿದ ಮರಗಳ ಕಾಯಿಯನ್ನಾಗಲಿ (ಅಡುಗೆಗೆ) ಅಥವಾ ಎಳನೀರನ್ನಾಗಲಿ ಉಪಯೋಗಿಸ ಬಾರದು.
ಸಮಗ್ರ ನಿಯಂತ್ರಣ : ಕಪ್ಪು ತಲೆ ಹುಳುವಿನ ದೀರ್ಘಾವಧಿ ಹತೋಟಿಗೆ ಕೆಲವೊಂದು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಕೇವಲ ಕೀಟನಾಶಕವನ್ನು ಬಳಸಿದರೆ ಸಾಲದು, ಒಂದು ಸಮಗ್ರ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು. ಈ ಸಮಗ್ರ ದೃಷ್ಟಿಯ ಮುಖ್ಯಾಂಶವೆಂದರೆ ಸಸ್ಕಾಂತರ್ವ್ಯಾಪಿ ಕೀಟನಾರಕವನ್ನು ಬೇರಿನ ಮೂಲಕ ಉಣಿಸುವುದು ಮತ್ತು ಸೂಕ್ತ ಸಮಯದಲ್ಲಿ ಪರೋಪ ಜೀವಿಗಳನ್ನು ಉಪಯೋಗಿಸುವುದು.
ತೆಂಗಿನ ಕಪ್ಪು ತಲೆ ಹುಳು ಕಾಣಿಸಿಕೊಂಡ ತಕ್ಷಣ ಸಂರಕ್ಷಣೆ ಕೈಗೊಳ್ಳುವುದು ಸೂಕ್ತ. ಇಲ್ಲವಾದಲ್ಲಿ ಇಳುವರಿ ಇಳಿಮುಖವಾಗುವುದು ಖಂಡಿತ. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಬಾಧೆಗೊಳಗಾದ ತೋಟಗಳಲ್ಲೆಲ್ಲಾ ಸಾಮೂಹಿಕವಾಗಿ ಸಸ್ಯ ಸಂರಕ್ಷಣೆ ಕೈಗೊಳ್ಳುವುದರಿಂದ ಕೀಟದ ಬಾಧೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.
ಕೀಟಬಾಧೆ ಹೆಚ್ಚಾಗಿದ್ದರೆ ಮೇಲೆ ತಿಳಿಸಿದಂತೆ ಮೊನೊಕ್ರೋಟೋಫಾಸ್ ಕೀಟನಾಶಕವನ್ನು ಬೇರಿನ ಮೂಲಕ ತೆಂಗಿನ ಮರಕ್ಕೆ ಉಣಿಸಬೇಕು. ಆದರೆ ಕಪ್ಪುತಲೆ ಹುಳು ಕ್ರಿಯಾಂತರ (ಮರಿಹುಳು) ಹಂತದಲ್ಲಿದ್ದಾಗ ಮಾತ್ರವೇ ಈ ಕ್ರಮವನ್ನು ಕೈಗೊಳ್ಳಬೇಕು. ಸಾಮಾನ್ಯವಾಗಿ ಕಪ್ಪು ತಲೆ ಹುಳುವು ಬೆಳವಣಿಗೆಯ ಮೊದಲನೆಯ ಮತ್ತು ಎರಡನೆಯ ಹಂತದಲ್ಲಿದ್ದಾಗ ಈ ಕ್ರಮ ಹೆಚ್ಚಿನ ಪರಿಣಾಮಕಾರಿಯಾಗಿರುತ್ತದೆ.