ಎರೆಹುಳು ಕೃಷಿ ಮಾಡಿ ಉತ್ತಮ ಆದಾಯ ಗಳಿಸಿ :

ರಾಸಾಯನಿಕ ಗೊಬ್ಬರಗಳನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸುತ್ತ ಎರೆಹುಳು ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿದಲ್ಲಿ ಭೂಮಿಯು ಅತಿ ಉತ್ತಮ  ಇರುತ್ತದೆ

ರೈತನ ಮಿತ್ರ ಹಾಗೂ ಭೂಮಿಯನ್ನು ಅತಿ ಹೆಚ್ಚು ಫಲವತ್ತಾಗಿ ನೋಡಿಕೊಳ್ಳುವಂತಹ ಅದೇ ಹುಳುವೆ ರೈತನ ಮಿತ್ರರೈತನ ಮಿತ್ರ ಎಂದು ಕರೆಸಿಕೊಂಡು ರೈತರಿಗೆ ಅತ್ಯಂತ ಸಹಾಯಕಾರಿ ಆದ ಈ ಹುಳು ಕಾರ್ಯ ಚಟುವಟಿಕೆಗಳು ತುಂಬಾ ರೈತರಿಗೆ ಅನುಕೂಲವಾಗಿವೆ ಇದರಿಂದ ರೈತರ ಭೂಮಿಯು ಅತಿ ಹೆಚ್ಚು ಫಲವತ್ತಾಗಿ ಅತಿ ಹೆಚ್ಚಿನ ಪೋಷಕಾಂಶಗಳನ್ನು ಪೂರೈಸುವ ಜೀವಿ ಎಂದು ಹೇಳಬಹುದು ಈ ಎರೆಹುಳು ಎಲ್ಲಿ ಇರುತ್ತದೆಯೋ ಆ ಭೂಮಿಯು ಅತಿ ಹೆಚ್ಚು ಬೆಳೆಗಳನ್ನು ಫಲವತ್ತಾಗಿ ಹಾಗೂ ಇಳುವರಿಯಲ್ಲಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ

ಇವಳು ರೈತರ ತೋಟಗಳಲ್ಲಿ ಸಿಗುವಂತಹ ಕಚ್ಚಾ ವಸ್ತುಗಳಾದ ಮರದ ಎಲೆಗಳು ಒಣಗಿದ್ದ ಕಸ ಕಡ್ಡಿ ಇನ್ನೂ ದನದ ಕೊಟ್ಟಿಗೆಯಲ್ಲಿ ಸಿಗುವಂತಹ ಸಗಣಿ ಇದನ್ನೆಲ್ಲಾನು ತಿಂದು ರೈತರಿಗೆ ಒಳ್ಳೆಯ ಕಾಂಪೋಸ್ಟ್ ಗೊಬ್ಬರ ನೀಡುತ್ತದೆ  ರೈತನ ಮಿತ್ರ ಎಂದು ಕರೆಯಲ್ಪಡುವ ಎರೆಹುಳು, ನಿಸರ್ಗದಲ್ಲಿ ನಿರಂತರವಾಗಿ ಮಣ್ಣನ್ನು ಉಳುಮೆ ಮಾಡುವ ಜೀವಿಯಾಗಿರುವುದು. ಮಣ್ಣಿನ ಫಲವತ್ತತೆ ಕಾಪಾಡುವಲ್ಲಿ ಎರೆಹುಳುಗಳದ್ದು ಪ್ರಮುಖ ಪಾತ್ರ. ಎರೆಹುಳು ತಳದ ಮಣ್ಣನ್ನು ಮೇಲೆ ತಂದು. ಸಾವಯವ ವಸ್ತುಗಳನ್ನು ತನ್ನ ಜಠರದಲ್ಲಿ ವಿಭಜಿಸಿ, ವಿವಿಧ ಪೋಷಕಾಂಶಗಳನ್ನು ಒಳಗೊಂಡ ಎರೆಹುಳು ಗೊಬ್ಬರವನ್ನು ಹಿಕ್ಕೆ ರೂಪದಲ್ಲಿ ಕೊಡುತ್ತದೆ.

ಎರೆಹುಳ ಜೀವನಚಕ್ರ :

ಪ್ರತಿಯೊಂದು ಎರೆಹುಳು ತನ್ನ ಜೀವಿತ ಅವಧಿಯಲ್ಲಿ ಸುಮಾರು 50- 100 ಕೋಶಗಳನ್ನು ಇಡುತ್ತದೆ. ಪ್ರತಿ ಕೋಶದಿಂದ 2 – 3 ಮರಿಗಳು 15 – 20 ದಿವಸಗಳಲ್ಲಿ ಹೊರಗೆ ಬರುತ್ತವೆ. ಮುಂದೆ 40-60 ದಿವಸಗಳಲ್ಲಿ ಅವು ಅರೆಪ್ರೌಢಾವಸ್ಥೆ ಮುಗಿಸಿ ಪ್ರೌಢಾವಸ್ಥೆಯನ್ನು ತಲುಪುತ್ತವೆ. ಈ ರೀತಿಯಲ್ಲಿ ಒಂದು ಎರೆಹುಳು ತನ್ನ ಜೀವನಚಕ್ರವನ್ನು ಮುಗಿಸಲು ಸುಮಾರು 50-80 ದಿನಗಳನ್ನು ತೆಗೆದುಕೊಳ್ಳುತ್ತದೆ.

ಎರೆಹುಳು ಆಹಾರದೊಡನೆ ಸೂಕ್ಷ್ಮಾಣುಜೀವಿಗಳನ್ನು ತನ್ನ ಅನ್ನನಾಳದಲ್ಲಿ ತೆಗೆದುಕೊಳ್ಳುತ್ತದೆ. ಈ ಸೂಕ್ಷ್ಮಾಣುಜೀವಿಗಳು ಎರೆಹುಳುವಿನ ಅನ್ನನಾಳದಲ್ಲಿ ಅಧಿಕ ಸಂಖ್ಯೆಯಲ್ಲಿ ವೃದ್ಧಿಹೊಂದಿ ಹಿಕ್ಕೆಯೊಡನೆ ಹೊರಬರುತ್ತವೆ. ಇದರಲ್ಲಿ ಇರುವ ಬ್ಯಾಕ್ಟಿರಿಯಾ ಮತ್ತು ಎಕ್ಟಿನೋಮೈಸಿಟೀಸ್ ಜೀವಿಗಳು ಬೆಳೆಗಳಿಗೆ ಅತ್ಯವಶ್ಯವಿರುವ ಬೆಳೆವರ್ಧಕ, ವಿಟ್ಯಾಮಿನ್ ಮತ್ತು ಆ್ಯಂಟಿಬಯೋಟಿಕ್ ಪದಾರ್ಥಗಳನ್ನು ಹೇರಳವಾದ ಪ್ರಮಾಣದಲ್ಲಿ ಉತ್ಪಾದಿಸುತ್ತವೆ.

1}ಎರೆಹುಳ ಗೊಬ್ಬರ  ತಯಾರಿಸುವಾಗ ತೊಟ್ಟಿ ಹೇಗೆ ನಿರ್ಮಾಣ ಮಾಡಬೇಕು :

ಎರೆಹುಳ ಗೊಬ್ಬರ ತೊಟ್ಟಿ ತಯಾರು ಮಾಡುವಾಗ ಪ್ರಮುಖವಾಗಿ ನೆರಳಿನ ಪ್ರದೇಶದಲ್ಲಿ ತೊಟ್ಟಿಯನ್ನು ತಯಾರ ಮಾಡಬೇಕು ಮತ್ತು ಇದರಿಂದ ಎರೆಹುಳ ಜೀವನ ಅತಿ ಸುಗಮವಾಗಿ ಸಾಗುತ್ತಾ ನಮಗೆ ಒಳ್ಳೆಯ ರೀತಿಯ ಗೊಬ್ಬರವನ್ನು ಒದಗಿಸಿಕೊಡುತ್ತದೆ ಪ್ರಾರಂಭಿಕ ಹಂತದಲ್ಲಿ ಎರೆಹುಳುಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ವೃದ್ಧಿಪಡಿಸ ಬೇಕಾಗಿರುವುದರಿಂದ. 10 ಮೀ. ಉದ್ದ, 1 ಮೀ. ಅಗಲ ಮತ್ತು 0.3 ಮೀ. ಆಳದ
ತಳವನ್ನು ಹೊರತುಪಡಿಸಿ ನಾಲ್ಕು ಬದಿಗಳ ಒಳಮೈಗೆ ತೆಳುವಾದ ಕಲ್ಲುಗಳನ್ನು ಸುಮಾರು 5 ಸೆಂ.ಮೀ. ಭೂಮಿಯ ಮೇಲೆ ಕಾಣುವಂತೆ ಜೋಡಿಸಿದ ಮಡಿಯು ಸೂಕ್ತವಾಗಿರುವುದು. ನೀರಾವರಿ ಪ್ರದೇಶದಲ್ಲಿ ಭೂಮಿಯ ಮೇಲೆ ತೆಳುವಾದ ಕಲ್ಲುಗಳಿಂದ ಅಥವಾ ಇಟ್ಟಿಗೆಯ ಗೋಡೆಯಿಂದ ನಿರ್ಮಿಸಿದ ಮಡಿಗಳು ಸೂಕ್ತವಾಗಿರುತ್ತವೆ.

ಮಡಿಯು ತಯಾರಾದ ಕೂಡಲೇ ಮಡಿಯಲ್ಲಿ ಗೆದ್ದಲು, ಇರುವೆಗಳ ಚಟುವಟಿಕೆ ಕಂಡುಬಂದಲ್ಲಿ ಕ್ಲೋರ್‌ಪೈರಿಫಾಸ್ 20 ಇಸಿ. ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ 2 ಮಿ.ಲೀ. ಬೆರೆಸಿ ಮಡಿಗೆ ಸರಿಯಾಗಿ ಸಿಂಪರಣೆ ಮಾಡಬೇಕು. 10 ದಿನಗಳ ನಂತರ ಸಾವಯವ ತ್ಯಾಜ್ಯ ಪದಾರ್ಥಗಳು ಮತ್ತು ಸಗಣಿಯನ್ನು

ತ್ಯಾಜ್ಯ ಪದಾರ್ಥ ಹೊಂದಿದ ಕಚ್ಚಾವಸ್ತುಗಳಿಂದ ಈ ಕೆಳಗೆ ತಿಳಿಸಿದಂತೆ ತುಂಬಬೇಕು.
ಮಡಿಯ ತಳದಿಂದ ಅನುಕ್ರಮವಾಗಿ

2}ನಾವು ಯಾವ ರೀತಿಯಾಗಿ ಗೊಬ್ಬರದ ತೊಟ್ಟಿಯಲ್ಲಿ ಹಂತ ಹಂತವಾಗಿ ಕಸ ಒಣಗಿದ  ಎಲೆಗಳನ್ನು ಹಾಕಿದರೆ ಮಾತ್ರ ಉತ್ತಮವಾದ ಗೊಬ್ಬರ ಉಂಟಾಗುತ್ತದೆ?

ಗೊಬ್ಬರದ ತೊಟ್ಟಿಯ ತಳಭಾಗದಲ್ಲಿ ಹಾಕಬೇಕಾದಂತಹ ವಸ್ತುಗಳು

1. ತೆಂಗಿನ ಸಿಪ್ಪೆ ಅಥವಾ ನೀರು ಹಿಡಿಯುವ ವಸ್ತು

2. ಸಗಣಿ ಅಥವಾ ಬಯೋಗ್ಯಾಸ್ ಪ್ಲೆಡ್ಜ್ ಅಥವಾ ಯಾವುದೇ ಪ್ರಾಣಿಯ ಹಿಕ್ಕೆ.

1). ಭತ್ತದ ಹುಲ್ಲು, ಸಾವಿಯ ಹುಲ್ಲು, ಜೋಳದ ದಂಟು ಇತ್ಯಾದಿ.

2) ಎರೆಮಣ್ಣು ಅಥವಾ ತೋಟದ ಮಣ್ಣು.

3. ಕೃಷಿ ತ್ಯಾಜ್ಯ ವಸ್ತುಗಳು ಅಥವಾ ಒಣಗಿದ ಕಸಕಡ್ಡಿ.

4. ಸಗಣಿ ಅಥವಾ ಬಯೋಗ್ಯಾಸ್ ಪ್ಲೆಡ್ಜ್ ಅಥವಾ ಯಾವುದೇ ಪ್ರಾಣಿಯ ಹಿಕ್ಕೆ.

5. ಹಸಿರು ಎಲೆಗಳು (ಹುಲ್ಲು, ಕಳೆ ಇತ್ಯಾದಿ).

ಮಡಿಯಲ್ಲಿ ತೇವಾಂಶ ಕಾಪಾಡುವುದು

ಎರೆಹುಳು ಗೊಬ್ಬರ ತಯಾರು ಮಾಡಬೇಕಾದರೆ ಪ್ರಮುಖವಾಗಿ ನೀರು ಅತಿ ಅವಶ್ಯಕ ಸರಿಯಾದ ಸಮಯಕ್ಕೆ ನೀರನ್ನು ಹಾಕಿದರೆ ಮಾತ್ರ ಒಳ್ಳೆಯ ಗೊಬ್ಬರ ಸಿಗುತ್ತದೆ

ಎರೆಗೊಬ್ಬರದ ಉತ್ಪಾದನೆಯಾಗುವವರೆಗೆ, ಪ್ರತಿದಿನ ಮಡಿಗೆ ಶೇ. 60-70 ರಷ್ಟು ತೇವಾಂಶ ಇರುವ ಹಾಗೆ ನೀರನ್ನು ಹಾಕುತ್ತಾ ಹೋಗಬೇಕು. ಕೊನೆಯ ಪದರಾದ ಹುಲ್ಲನ್ನು ಯಾವಾಗಲೂ ಒದ್ದೆ ಇರುವಂತೆ ಮಾಡಿದರೆ ಮಡಿಯಲ್ಲಿ ಇರುವ ನಿಗದಿತ ತೇವಾಂಶವನ್ನು ಕಾಪಾಡಬಹುದು. ಇದಲ್ಲದೇ ಎರೆಹುಳು ಮಡಿಗಳು ಯಾವಾಗಲೂ ನೆರಳಲ್ಲಿ ಇರುವಂತೆ ಚಪ್ಪರವನ್ನು ಹಾಕಿ ಅದರ ಮೇಲೆ ತರಕಾರಿ (ಹಾಗಲ/ಅವರೆ/ತೊಂಡೆ/ಹೀರೆಕಾಯಿ) ಬೆಳೆಯುವುದರಿಂದ ಎರೆಗೊಬ್ಬರ ಉತ್ಪಾದನೆಯಾಗುವದಲ್ಲದೇ, ತರಕಾರಿಯಿಂದಲೂ ಹೆಚ್ಚಿನ ಆದಾಯ ಪಡೆಯಬಹುದು. ಪ್ರತಿದಿನ (ಬೇಸಿಗೆಯಲ್ಲಿ) ಅಥವಾ ವಾರದಲ್ಲಿ ಎರಡು ಬಾರಿ (ಮಳೆಗಾಲ ಮತ್ತು ಚಳಿಗಾಲದಲ್ಲಿ) ನೀರನ್ನು ಹಾಕುತ್ತಾ ಹೋದಲ್ಲಿ ಮಡಿಯ ತೇವಾಂಶ ನಿಗದಿತ ಪ್ರಮಾಣದಲ್ಲಿ ಉಳಿಯುತ್ತದೆ. ನೀರು ಹಾಕಲು ಮಡಿಗಳಿಗೆ ಮೈಕ್ರೋಸ್ಟಿಂಕ್ಲರ್‌ಗಳನ್ನು ಅಳವಡಿಸುವುದರಿಂದ ನಿಗದಿತ ಪ್ರಮಾಣದ ತೇವಾಂಶವನ್ನು ಕಾಪಾಡಬಹುದಲ್ಲದೇ, ನೀರು ಮತ್ತು ನೀರು ಹಾಕಲು ಬಳಸಬಹುದಾದ ಮಾನವ ಸಂಪನ್ಮೂಲವನ್ನುಉಳಿಸಬಹುದಾಗಿದೆ
ಸೂಚನೆ: ತರಕಾರಿ ಬೆಳೆದರೆ ರಾಸಾಯನಿಕ/ಕೀಟ/ರೋಗನಾಶಕಗಳನ್ನು ಪೀಡೆ ನಿರ್ವಹಣೆಗೆ ಬಳಸಬಾರದು.

3}ಎರೆಗೊಬ್ಬರದ ಉತ್ಪಾದನೆ:

ಎರೆಹುಳುಗಳನ್ನು ಮಡಿಗೆ ಬಿಟ್ಟನಂತರ ಸುಮಾರು 30-45 ದಿನಗಳಲ್ಲಿ ಮಡಿಯ ಮೇಲ್ಪದರದಲ್ಲಿ ಎರೆಗೊಬ್ಬರದ ಶೇಖರಣೆ ಪ್ರಾರಂಭವಾಗಿರುವುದು ಕಂಡುಬರುವುದು. ಒಟ್ಟು 60-75 ದಿನಗಳಲ್ಲಿ ಎರೆಗೊಬ್ಬರವು ಹೇರಳವಾದ ಪ್ರಮಾಣದಲ್ಲಿ ಉತ್ಪಾದನೆ ಆಗಿರುತ್ತದೆ. ಈ ವೇಳೆಗೆ ಮಡಿಯಲ್ಲಿ ಉಪಯೋಗಿಸಿದಂತಹ ಎಲ್ಲಾ ತ್ಯಾಜ್ಯ ವಸ್ತುಗಳು ಶೇ. 75 ರಷ್ಟು ಎರೆಗೊಬ್ಬರವಾಗಿ ಮಾರ್ಪಾಟಾಗಿರುತ್ತವೆ. ಹೀಗೆ ಮೇಲ್ಪದರದಲ್ಲಿ ಸಂಗ್ರಹವಾದಂತಹ ಎರೆಗೊಬ್ಬರವನ್ನು ಮಡಿಯಿಂದ ತೆಗೆಯಬೇಕು. ಗೊಬ್ಬರ ಸಂಗ್ರಹಿಸುವುದಕ್ಕಿಂತ ಮೂರು ದಿನ ಮೊದಲು ನೀರು ಹಾಕುವುದನ್ನು ನಿಲ್ಲಿಸಬೇಕು. ಹೀಗೆ ಮಾಡುವುದರಿಂದ ಮಡಿಯ ಮೇಲ್ಪದರವು ತೇವಾಂಶವನ್ನು ಕಳೆದುಕೊಂಡು, ಎರೆಹುಳುಗಳು ಮಡಿಯ ಕೆಳಭಾಗಕ್ಕೆ ಹೋಗುತ್ತವೆ. ತದನಂತರ ಎರೆಗೊಬ್ಬರವನ್ನು ಸಂಗ್ರಹಿಸಿ, ಸಾಣಿಗೆಗೆ ಹಾಕಿ ಅಥವಾ ಕೃಷಿ ವಿಶ್ವವಿದ್ಯಾಲಯ, ಧಾರವಾಡ ಅಭಿವೃದ್ಧಿ ಪಡಿಸಿದ ಯಾಂತ್ರಿಕ ಸಾಣಿಗೆಯಿಂದ ಸಾಣಿಸುವುದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚಿನ ಎರೆಗೊಬ್ಬರವನ್ನು ಸಾಣಿಸುವುದಲ್ಲದೇ, ಈ ಕೆಲಸಕ್ಕೆ ತಗಲವು ಕಾರ್ಮಿಕರ ಮೇಲಿನ ಖರ್ಚನ್ನು ಕಡಿಮೆ ಮಾಡಬಹುದಾಗಿದೆ. ನಂತರ ಎರೆಗೊಬ್ಬರವನ್ನು ಚೀಲಗಳಲ್ಲಿ ತುಂಬಿಡಬೇಕು. ಒಂದು ಗುಂಟೆ ವಿಸ್ತೀರ್ಣದ ಮಡಿಗಳಿಂದ ಮೂರು ತಿಂಗಳಲ್ಲಿ ಸುಮಾರು 3 ರಿಂದ 5 ಟನ್ ತ್ಯಾಜ್ಯ ಉಪಯೋಗಿಸಿ 2-4 ಟನ್ ಎರೆಗೊಬ್ಬರವನ್ನು ಉತ್ಪಾದಿಸಬಹುದಾಗಿದೆ. ಅಂದರೆ ಒಂದು ವರ್ಷದಲ್ಲಿ ಒಂದು ಗುಂಟೆಯಲ್ಲಿ 8-16 ಟನ್ ಎರೆಗೊಬ್ಬರವನ್ನು ಉತ್ಪಾದಿಸಲಿಕ್ಕೆ ಸಾಧ್ಯವಿದೆ.

4}ಎರೆಹುಳು ಅಭಿವೃದ್ಧಿ:

ಸುಮಾರು 50-70 ದಿನಗಳಲ್ಲಿ ಎರೆಹುಳು ತನ್ನ ಒಂದು ಜೀವನ ಚಕ್ರವನ್ನು ಮುಗಿಸುತ್ತದೆ. ಈ ವೇಳೆಗೆ ಮಡಿಯಲ್ಲಿ ಸಾಕಷ್ಟು ಕೋಶಗಳು, ಮರಿಹುಳುಗಳು ಮತ್ತು ಅರೆಪ್ರೌಢ ಹುಳುಗಳು ಕಾಣುತ್ತವೆ. ಎರೆಹುಳುಗಳು ಮೂರು ತಿಂಗಳ ಅವಧಿಯಲ್ಲಿ ಸಂಖ್ಯೆಯಲ್ಲಿ 10-15 ಪಟ್ಟು ವೃದ್ಧಿ ಹೊಂದುತ್ತವೆ. ಚಳಿಗಾಲ ಮತ್ತು ಮಳೆಗಾಲದ ಅವಧಿಯು ಎರೆಹುಳು ಬೆಳವಣಿಗೆ ಹಾಗೂ ಎರೆಗೊಬ್ಬರ ಉತ್ಪಾದನೆಗೆ ಹೆಚ್ಚು ಸೂಕ್ತವಾಗಿರುವುದು.
ಎರೆಹುಳುವಿನ ವೈರಿಗಳ ನಿರ್ವಹಣೆ

ವೈರಿಗಳಲ್ಲಿ ಚಪ್ಪಟೆ ಹುಳು, ಗೆದ್ದಲು, ಇರುವೆ, ಇಲಿ, ಶತಪದಿ, ಕಪ್ಪೆ, ಪಕ್ಷಿಗಳು, ಹಂದಿ ಇತ್ಯಾದಿಗಳು ಇದ್ದು, ಗೆದ್ದಲು ಮತ್ತು ಇರುವೆ ಅತೀ ಮುಖ್ಯವಾದ ವೈರಿಗಳು. ಈ ವೈರಿಭಕ್ಷಗಳ ಬಾಧೆ ತಗುಲಿದಾಗ ಸೂಕ್ತ ಹತೋಟಿ ಕ್ರಮಗಳನ್ನು ತೆಗೆದುಕೊಂಡು ಎರೆಮಡಿಗಳನ್ನು ರಕ್ಷಿಸಬೇಕು.

1. ಎರೆಕುಣಿಯನ್ನು ಕಸಕಡ್ಡಿಗಳಿಂದ ತುಂಬುವುದಕ್ಕಿಂತ ಮುಂಚೆ 2 ಮಿ.ಲೀ. ಕ್ಲೋರ್‌ಪೈರಿಫಾಸ್ 20 ಇ.ಸಿ. ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

2. ಎರೆಕುಣಿಗಳನ್ನು ತುಂಬಿದ ನಂತರ ಮುಖ್ಯ ವೈರಿಗಳ ಹಾವಳಿ ತಪ್ಪಿಸಲು ಶೇ. 40-50 ರಷ್ಟು ತೇವಾಂಶವನ್ನು ಯಾವಾಗಲೂ ಕಾಪಾಡುವುದರಿಂದ ಗೆದ್ದಲು. ಇರುವೆ ಮತ್ತು ಇಲಿಗಳ ಹಾವಳಿಯನ್ನು ಕಡಿಮೆ ಮಾಡಬಹುದು.

3. ಇಲಿ, ಮುಂಗಲಿ, ಪಕ್ಷಿ ಮತ್ತು ಕಪ್ಪೆಗಳ ನಿಯಂತ್ರಣಕ್ಕಾಗಿ ಮಡಿಯ ಮೇಲೆ ಕಬ್ಬಿಣದ ಜಾಳಿಗೆ ಅಳವಡಿಸಬೇಕು.

4. ಎರೆಹುಳುಗಳ ಕುಣಿಗಳ ಸುತ್ತಲೂ ಅರಿಷಿಣ ಸಸಿಗಳನ್ನು ನೆಡುವುದರಿಂದ ಇರುವೆಗಳ ಹಾವಳಿಯನ್ನು ಕಡಿಮೆ ಮಾಡಬಹುದು.

5. ಶೇ. 1-2 ಬೇವಿನ ಹಿಂಡಿಯನ್ನು ತ್ಯಾಜ್ಯಗಳೊಂದಿಗೆ ಕೂಡಿಸುವುದರಿಂದ ವೈರಿಗಳ ಬಾಧೆಯನ್ನು ಕಡಿಮೆ ಮಾಡಬಹುದಾಗಿದೆ.

5}ಎರೆಗೊಬ್ಬರದ ಪೋಷಕಾಂಶಗಳು:

ತಯಾರಾದಂತಹ ಎರೆಹುಳು ಗೊಬ್ಬರದಲ್ಲಿ ಅತ್ಯಂತ ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತದೆ

ಪ್ರತಿ ಕ್ವಿಂಟಾಲ್ ಎರೆಗೊಬ್ಬರವು ಸುಮಾರು 800-1000 ಗ್ರಾಂ ಸಾರಜನಕ, 800-1100 ಗ್ರಾಂ ರಂಜಕ ಮತ್ತು 500 ರಿಂದ 900 ಗ್ರಾಂ ಪೋಟ್ಯಾಷ್‌ನ್ನು ಹೊಂದಿರುತ್ತದೆ. ಎರೆಗೊಬ್ಬರ ಸಗಣಿ ಗೊಬ್ಬರಕ್ಕಿಂತ ಎರಡು ಪಟ್ಟು ಸಾರಜನಕ, 5 ಪಟ್ಟು ರಂಜಕ ಹಾಗು 5 ಪಟ್ಟು ಹೆಚ್ಚು ಪೋಟ್ಯಾಷ್ನ್ನು ಹೊಂದಿರುತ್ತದೆ. ಎರೆಗೊಬ್ಬರವು ಮೆಗ್ನೆಸಿಯಂ, ಕ್ಯಾಲ್ಸಿಯಂ, ಬೋರಾನ್, ಮೊಲಿಬಿನಮ್, ಸತುವು ಮತ್ತು ಬೆಳೆವರ್ಧಕಗಳನ್ನು ಹೊಂದಿರುತ್ತದೆಯಲ್ಲದೇ ಸಸ್ಯ ಉಪಯೋಗಿ ಸೂಕ್ಷ್ಮಾಣುಜೀವಿಗಳನ್ನೂ ಹೊಂದಿರುತ್ತದೆ.

ಎರೆಗೊಬ್ಬರದ ಉಪಯೋಗದಿಂದ ಮಣ್ಣಿನ ಭೌತಿಕ ಗುಣಗಳ ಬದಲಾವಣೆಗಳು

ಎರೆಗೊಬ್ಬರವನ್ನು ಸತತವಾಗಿ ಉಪಯೋಗಿಸುವದರಿಂದ ಮಣ್ಣಿನ ನೀರು ಹಿಡಿದುಟ್ಟುಕೊಳ್ಳುವ ಗಾಳಿಯಾಡುವಿಕೆ ಗುಣ ಹೆಚ್ಚುವುದು. ಮಣ್ಣಿನಲ್ಲಿರುವ ಹಾನಿಕಾರಕ
ಲವಣಗಳ ಕಡಿಮೆಯಾಗುತ್ತಾ ಹೋಗುವುದು. ಬೆಳೆಗಳಿಗೆ ಬೇಕಾಗುವಂತಹ ಸಸ್ಯ ಪೋಷಕಾಂಶಗಳು ಮಿಶ್ರಣಗೊಂಡು ಬೇಗನೇ ಲಭ್ಯವಾಗುವವು. ಇದಲ್ಲದೇ ಮಣ್ಣಿನ ಸವೆತ ಸಹ ಕಡಿಮೆಯಾಗುವುದು.

1}ಎರೆಜಲ

ಎರೆಹುಳುಗಳನ್ನು ತ್ಯಾಜ್ಯ ಪದಾರ್ಥ ಮತ್ತು ಸಗಣಿಯಲ್ಲಿ ಸಾಕಾಣಿಕೆ ಮಾಡುವಾಗ ಎರೆಹುಳುಗಳನ್ನು ನೀರಿನಿಂದ ತೊಳೆದು ಬಂದ ದ್ರಾವಣಕ್ಕೆ ಎರೆಜಲ ಎನ್ನುವರು. ಎರೆಜಲವು ಬೆಳೆ ಪ್ರಚೋದಕ ವಸ್ತು, ಹಲವಾರು ಪೋಶಕಾಂಶಗಳು ಮತ್ತು ಸೂಕ್ಷ್ಮಣುಜೀವಿಗಳಿಂದ ಸಮೃದ್ಧಿಯಾಗಿದ್ದು ಬೆಳೆಗಳಿಗೆ ಸಿಂಪರಣೆ ಅಥವಾ ಗಿಡಗಳ ಬುಡಕ್ಕೆ ಹಾಕುವ ಮೂಲಕ ಬಳಸಬಹುದಾಗಿದೆ.

ಎರೆಜಲ ಪಡೆಯುವ ವಿಧಾನ

ಒಂದು ದೊಡ್ಡ ಪಾತ್ರೆಯಲ್ಲಿ ಒಂದು ಸಣ್ಣಪಾತ್ರೆಯನ್ನು ತಲೆಕೆಳಗಾಗಿ ಇಡಬೇಕು. ಎರಡೂ ಪಾತ್ರೆಗಳ ಒಳಗೆ ಸೇರುವಂತೆ ಒಂದು ಫೈನ್ ಸೇರಿಸಿ ಹೊರಗಡೆ ಒಂದು ನಳವನ್ನು ಜೋಡಿಸಬೇಕು. ನಂತರ ಚೆನ್ನಾಗಿ ಕಳೆತ ಸಾವಯವ ವಸ್ತುಗಳನ್ನು ದೊಡ್ಡಪಾತ್ರೆಯಲ್ಲಿರುವ ಉಸಿಕಿನ ಪದರಿನ ಮೇಲೆ ತುಂಬಿ, ಪ್ರತಿ 100 ಕಿ.ಗ್ರಾಂ ಸಾವಯವ ವಸ್ತುವಿನಲ್ಲಿ 5 ಕಿ.ಗ್ರಾಂ ಎರೆಹುಳಗಳನ್ನು ಬಿಡಬೇಕು. ನಂತರ ದಿನಂಪ್ರತಿ 5 ಲೀಟರ್ ನೀರನ್ನು 50 ನೇ ದಿನದವರೆಗೆ ಹಾಕಬೇಕು. ಈ ನೀರು ಎರೆಹುಳು ಮತ್ತು ಎರೆಗೊಬ್ಬರವನ್ನು ತೊಳೆದು, ಬಸಿದು ಸಣ್ಣ ಪಾತ್ರೆಯಲ್ಲಿ ಸಂಗ್ರಹವಾಗುತ್ತದೆ. ಇದುವೇ ಎರೆಜಲ.

ಎರೆಜಲವನ್ನು ಇನ್ನೂ ಹಲವಾರು ತರಹದ ಪಾತ್ರೆಗಳು ಅಥವಾ ಡಬ್ಬಿಗಳಿಂದ ತಯಾರಿಸಿದ ಉಪಕರಣಗಳನ್ನು ಬಳಸಿಕೊಂಡು ತೆಗೆಯಬಹುದಾಗಿದೆ. ಉದಾ: ಪ್ಲಾಸ್ಟಿಕ್ ಡಬ್ಬಿಗಳಿಂದ ತಯಾರಿಸಿದ ಉಪಕರಣದಿಂದಲೂ ಎರೆಜಲ ತೆಗೆಯಬಹುದಾಗಿದೆ. ಬೆಳೆಗಳಲ್ಲಿ ಎರೆಜಲವನ್ನು 1:3 ರಿಂದ 1:5 (ಎರೆಜಲ : ನೀರು) ಅನುಪಾತದಲ್ಲಿ ಬಳಸಿದಾಗ ಬೆಳೆಯ ಬೆಳವಣಿಗೆ ಸುಧಾರಣೆಯಾಗುವುದಲ್ಲದೆ, ಇಳುವರಿ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತದೆ.

1}ಕೃಷಿಯಲ್ಲಿ ಎರೆಗೊಬ್ಬರದ ಉಪಯೋಗ

ಸಾಮಾನ್ಯವಾಗಿ ಎಲ್ಲ ತರಹದ ಬೆಳೆಗಳಿಗೆ ಬಿತ್ತುವ ವೇಳೆಯಲ್ಲಿ ಪ್ರತಿ ಹೆಕ್ಟೇರಿಗೆ 2.5 ಟನ್ ಪ್ರಮಾಣದಲ್ಲಿ ಎರೆಗೊಬ್ಬರವನ್ನು ಕೊಡಬೇಕು.

ತೋಟದ ಬೆಳೆಗಳಲ್ಲಿ (ಹಣ್ಣು ಮತ್ತು ಪ್ಲಾಂಟೇಶನ್ ಬೆಳೆಗಳು ಇತ್ಯಾದಿ) ಎರೆಹುಳುಗಳನ್ನೇ ಬಿಟ್ಟು ಎರೆ ಕೃಷಿ ಮಾಡುವುದು ಸ್ಥಾನಿಕ ಎರೆಕೃಷಿ. ಬೆಳೆಗಳಲ್ಲಿಎರೆಹುಳುಗಳನ್ನು ಮಣ್ಣಿನಲ್ಲಿ ಸಾಲುಗಳ ಮಧ್ಯ ಅಥವಾ ಗಿಡದ ಸುತ್ತ ಬಿಟ್ಟು, ಸಾಕಷ್ಟು ಪ್ರಮಾಣದಲ್ಲಿ ಸಾವಯವ ಕಚ್ಚಾ ಪದಾರ್ಥಗಳನ್ನು ಮಣ್ಣಿನ ಮೇಲೆ ಹರಡಬೇಕು. 10 ರಿಂದ 15 ದಿನಕ್ಕೊಮ್ಮೆ ನೀರನ್ನು ಕೊಡುತ್ತಾ ಹೋದಲ್ಲಿ ಹುಳುಗಳು ಭೂಮಿಯಲ್ಲಿ ಇದ್ದು, ಸಾವಯವ ಪದಾರ್ಥಗಳನ್ನು ತಿಂದು ಉತ್ತಮವಾದ ಗೊಬ್ಬರವನ್ನು ಬೆಳೆಯ ಸಾಲುಗಳಲ್ಲಿಯೇ ಉತ್ಪಾದಿಸುತ್ತವೆ. ಈ ಪದ್ಧತಿಯನ್ನು ಅಳವಡಿಸಿದಾಗ ಮಣ್ಣಿನಲ್ಲಿ ಯಾವುದೇ ತರಹದ ರಾಸಾಯನಿಕಗಳನ್ನು ಮಿಶ್ರಣ ಮಾಡಬಾರದು. ಅವಶ್ಯಕತೆ ಇದ್ದಲ್ಲಿ ಎಲೆಗಳ ಮುಖಾಂತರ ಪೋಷಕಾಂಶಗಳನ್ನು ಮತ್ತು ಕೀಟನಾಶಕಗಳನ್ನು ಸಿಂಪರಣೆ ಮಾಡಬಹುದು.

2}ಎರೆಹುಳು ಕೃಷಿಯ ಆರ್ಥಿಕತೆ:

ಎರೆಹುಳು ಕೃಷಿಯು ಅತೀ ಕಡಿಮೆ ಹಣ ತೊಡಗಿಸಿ ಮಾಡುವಂತಹ ಕೃಷಿಪೂರಕ ಉಪಕಸಬು ಆಗಿದೆ. ಒಂದು ಗುಂಟೆ ಜಾಗದಲ್ಲಿ ಎರೆಗೊಬ್ಬರ ಉತ್ಪಾದಿಸಲು ತಗಲುವ ಖರ್ಚು ಅಂದಾಜು ರೂ. 3000 ರಿಂದ 4000. ಪ್ರತಿ ಟನ್ ತ್ಯಾಜ್ಯದಿಂದ ಸುಮಾರು 6-7 ಕ್ವಿಂಟಾಲ್ ಎರೆಗೊಬ್ಬರ ಉತ್ಪಾದಿಸಬಹುದು. ಅಂದಾಜು 8 ರಿಂದ 16 ಟನ್ ನಷ್ಟು ಎರೆಗೊಬ್ಬರವನ್ನು ಇಷ್ಟು ಜಾಗದಲ್ಲಿ ಉತ್ಪಾದಿಸಬಹುದು. ಈ ಎರೆಗೊಬ್ಬರ ಸದ್ಯ ಟನ್‌ಗೆ ರೂ. 2000 ರಿಂದ 4000 ಮಾರಾಟವಾಗುತ್ತಿದ್ದು, ಪ್ರತಿ ಗುಂಟೆಗೆ ಅಂದಾಜು 10-25 ಸಾವಿರ (ಸರಾಸರಿ 15,000 ರೂ.) ನಿವ್ವಳ ಲಾಭ ಪಡೆಯಬಹುದಾಗಿದೆ. ಕೋಳಿ ಮತ್ತು ಮೀನು ಸಾಕಾಣಿಕೆಯಲ್ಲಿ ಎರೆಹುಳುಗಳನ್ನು ಆಹಾರವಾಗಿ ಉಪಯೋಗಿಸಬಹುದಾಗಿದೆ. ಮನೆ ಅಂಗಳದಲ್ಲಿಯ ಮತ್ತು ಪಟ್ಟಣದಲ್ಲಿಯ ಕಸವನ್ನು ಗೊಬ್ಬರವಾಗಿ ಪರಿವರ್ತಿಸಿ ಪರಿಸರವನ್ನು ಸ್ವಚ್ಛವಿಡಬಹುದಾಗಿದೆ.

ರೈತರು ಇರುಳ ಗೊಬ್ಬರಗಳನ್ನು ಬ್ಯಾಗಿನಲ್ಲಿ ತುಂಬಿ ಅದನ್ನು ಮಾರಾಟ ಮಾಡಬಹುದು ಅಥವಾ ತಮ್ಮ ಭೂಮಿಗೆ ಉಪಯೋಗಿಸಿದರೆ ಇನ್ನೂ ತುಂಬಾ ಒಳ್ಳೆಯದು

ಎರೆಹುಳುಗಳನ್ನು ಸಾಕಿ ತಮ್ಮ ಭೂಮಿಯನ್ನು ಫಲವತ್ತಾಗಿ ಇಟ್ಟುಕೊಳ್ಳಿ….!

Leave a Reply

Your email address will not be published. Required fields are marked *