ಕಳೆ ನಿರ್ವಹಣೆ:
ನಮಸ್ಕಾರ ರೈತ ಬಾಂಧವರೇ!
ನಾವು ಈಗ ಚರ್ಚಿಸುವಂತಹ ವಿಷಯವೇನೆಂದರೆ ರೈತರು ಬೆಳೆ ಬೆಳೆಯುವಲ್ಲಿ ಹಲವಾರು ಕಷ್ಟಗಳನ್ನು ಅನುಭವಿಸುತ್ತಾರೆ ಅದರಲ್ಲಿಯೂ ಕೂಡ ಬೆಳೆಗಳಿಗೆ ಅಡೆತಡೆ ಉಂಟುಮಾಡುವಂತಹ ಕಳೆಗಳು ಕೂಡ ಇರುತ್ತವೆ ಅದನ್ನು ನಿವಾರಿಸಲು ಹಲವಾರು ಕಷ್ಟಗಳನ್ನು ಅನುಭವಿಸುತ್ತಾರೆ
ತೋಟದಲ್ಲಿ ಹೂಗಸ ಕರೀಕೆ ಮುಳುಸಜ್ಜೆ ಕಹಿ ಕಸ ಹುಲ್ಲು ಮುಂತಾದ ತರಹ ಕಸಗಳನ್ನು ನಾವು ಕಾಣುತ್ತೇವೆ ಅದರ ನಿರ್ವಹಣೆ ಹೇಗೆ ಮಾಡಬೇಕೆಂಬುದು ಈ ವಿಷಯದಲ್ಲಿ ಚರ್ಚಿಸಲಾಗಿದೆ ರೈತರು ಗಮನದಲ್ಲಿ ಇಟ್ಟುಕೊಂಡು ಯಾವ ಔಷಧಿ ಯಾವ ರೀತಿ ಸಿಂಪಡಿಸಬೇಕು ಎನ್ನುವುದರ ಬಗ್ಗೆ ಖಚಿತವಾದ ಮಾಹಿತಿಯನ್ನು ಪಡೆದುಕೊಂಡು ಔಷಧಿ ಸಿಂಪಡಣೆ ಮಾಡಬೇಕು ಇಲ್ಲವಾದಲ್ಲಿ ಬೆಳಗ್ಗೆ ಹಾನಿ ಉಂಟುಮಾಡುತ್ತದೆ
ಕಳೆಯನ್ನು ನಿಯಂತ್ರಿಸುವುದರಲ್ಲಿ ಹಲವಾರು ಕ್ರಮಗಳಿವೆ
ಕಳೆಗಳನ್ನು ನಿಯಂತ್ರಿಸುವುದರಿಂದ ಬೆಳೆಗಳಲ್ಲಿ ಉನ್ನತ ಮಟ್ಟದ ಬೆಳವಣಿಗೆಯನ್ನು ಕಾಣಬಹುದು ಮತ್ತು ಇಳುವರಿಯನ್ನು ಕೂಡ ನಾವು ಹೆಚ್ಚಿಸಬಹುದು ಮತ್ತು ಬೆಳೆಗಳಿಗೆ ಬರುವಂತಹ ರೋಗರುಜನಗಳು, ಕೀಟಗಳು ಇದರಲ್ಲಿ ಕೂಡ ಇದರಿಂದಲೇ ಆಗುತ್ತದೆ ತೋಟಗಳನ್ನು ಕಸದಿಂದ ಮುಕ್ತವಾಗಿರಿಸಿದರೆ ಮಾತ್ರ ರೈತರಿಗೆ ಬೆಳೆಯಲು ಅನುಕೂಲವಾಗುತ್ತದೆ ಏಕೆಂದರೆ ಕಸ ಹುಲ್ಲು ಇರುವಂತಹ ತೋಟಗಳಲ್ಲಿ ಅತಿ ಅತಿ ಕಡಿಮೆ ಇಳುವರಿಯನ್ನು ಪಡೆಯಬಹುದಾಗುತ್ತದೆ
ಸ್ವಚ್ಛತೆ ಎಷ್ಟು ಕಾಪಾಡಿಕೊಳ್ಳುತ್ತೇವೆ ಅಷ್ಟು ನಮ್ಮ ತೋಟದಲ್ಲಿ ಇಳುವರಿಯನ್ನು ಕೂಡ ಹೆಚ್ಚಿಗೆ ಪಡೆಯಬಹುದು ಕಳೆಗಳ ನಿಯಂತ್ರಿಸುವಲ್ಲಿ ರಾಸಾಯನಿಕ ಪಾತ್ರ ಬಹಳ ಮುಖ್ಯವಾಗಿದೆ ರಾಸಾಯನಿಕ ಔಷಧಿಗಳನ್ನು ಸಿಂಪರಣೆ ಮಾಡುವಾಗ ಯಾವ ಬೆಳೆಯಲ್ಲಿ ಯಾವ ರಾಸಾಯನಿಕ ಸಿಂಪರಣೆ ಮಾಡಬೇಕು ಎಂಬುದು ಅರಿತಿರಲೇಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಹಾಕಿ ಸಿಂಪರಣೆ ಮಾಡಬೇಕು ಎಂಬುದು ಮೊದಲೇ ತಿಳಿದುಕೊಳ್ಳಬೇಕು
ದನಕರಗಳು ಮೇಯುವ ಜಾಗಗಳಲ್ಲಿ ಔಷಧಿಯನ್ನು ಸಿಂಪರಣೆ ಮಾಡಬಾರದು
ಮತ್ತು ಔಷಧಿ ಸಿಂಪಲ್ ಮಾಡುವಾಗ ಕೈಗಳಿಗೆ ತ್ಯಾಗದಂತೆ ಕವರ್ ಗಳನ್ನು ಹಾಗೂ ರಕ್ಷಾ ಕವಚಗಳನ್ನು ಹಾಕಿಕೊಂಡು ಔಷಧಿಯನ್ನು ಸಿಂಪಡಣೆ ಮಾಡಬೇಕು ಮುನ್ನೆಚ್ಚರಿಕೆ ಕ್ರಮಗಳನ್ನು ಎಚ್ಚರಿಕೆಯಿಂದ ಮಾಡುವುದು ತುಂಬಾ ಒಳಿತು
ಕಳೆಗಳ ನಿಯಂತ್ರಣದಿಂದ ಬೆಳೆಯ ಇಳುವರಿಯನ್ನು ಗಣನೀಯವಾಗಿ ಹೆಚ್ಚಿಸಬಹುದು ಕಳೆಗಳಿಂದ ಬೆಳೆಗಳ ಇಳುವರಿಯಲ್ಲಿ ಶೇ. 40 ರ ವರೆಗೆ ಕಡಿಮೆಯಾಗುವುದೆಂದು ಅಂದಾಜು ಮಾಡಲಾಗಿದೆ. ಕಳೆಗಳು ಬೆಳೆಗಳೊಂದಿಗೆ ಮುಖ್ಯವಾಗಿ, ಬೆಳಕು ಮಣ್ಣಿನ ತೇವಾಂಶ ಹಾಗೂ ಪೋಷಕಾಂಶಗಳಿಗಾಗಿ ಸ್ಪರ್ಧಿಸುವುದರಿಂದ ಬೆಳೆಗಳ ಇಳುವರಿ ಕುಂಠಿತಗೊಳಿಸುತ್ತವೆ. ಇದಲ್ಲದೇ ಬೆಳೆಗಳನ್ನು ಬಾಧಿಸುವ ಕೀಟಗಳಿಗೆ ಹಾಗೂ ರೋಗಕಾರಕಗಳಿಗೆ ಆಸರೆ ನೀಡುತ್ತವೆ.
ಕಳೆಗಳನ್ನು ಅಂತರ ಬೇಸಾಯ, ಕೈಗಳೆ, ಹೊದಿಕೆ ಕ್ರಮಗಳಿಂದ ಹಾಗೂ ಕಳೆನಾಶಕಗಳಿಂದ ನಿಯಂತ್ರಣ ಮಾಡಬಹುದಾಗಿದೆ. ಕೃಷಿ ಕ್ಷೇತ್ರದಲ್ಲಿನ ಆಳುಗಳ ಕೊರತೆಯಿಂದಾಗಿ ರಾಸಾಯನಿಕ ಕಳೆನಾಶಕಗಳ ಬಳಕೆಯಿಂದ ಕಳೆಗಳನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ. ಪ್ರತಿಯೊಂದೂ ಬೆಳೆಯಲ್ಲಿ ನಿರ್ಧಿಷ್ಟವಾದ ಕಳೆನಾಶಕಗಳ ಬಳಕೆಯಿಂದ ಕಳೆಗಳನ್ನು ಸಮರ್ಥವಾಗಿ ನಿಯಂತ್ರಿಸಬಹುದಾಗಿದೆ. ಕಳೆನಾಶಕಗಳು ಕಳೆಗಳ ಬೆಳವಣಿಗೆಯನ್ನು ಪ್ರಾರಂಭದಲ್ಲಿಯೇ ಕುಂಠಿತಗೊಳಿಸುವುದರಿಂದ ಬೆಳೆಗಳು ಸಧೃಡವಾಗಿ ಬೆಳೆಯಲು ಅನುಕೂಲವಾಗುವುದು.
ವಿವಿಧ ಬೆಳೆಗಳಲ್ಲಿ ಶಿಫಾರಸು ಮಾಡಲಾದ ಕಳೆನಾಶಕಗಳ ಬಳಕೆಯ ಪ್ರಮಾಣ
ಹಾಗೂ ಸಿಂಪರಣೆಯ ಸಮಯ ಮುಂತಾದವುಗಳನ್ನು “ಕಳೆನಾಶಕಗಳ ಪಟ್ಟಿ” ಯಲ್ಲಿ
ವಿವರಿಸಲಾಗಿದೆ. ಆಯಾ ಬೆಳೆಗಳಲ್ಲಿ ಶಿಫಾರಸಿದ ಕಳೆನಾಶಕ ಬಳಸುವ ಸಮಯ
ಹಾಗೂ ಪ್ರಮಾಣವನ್ನು ಸೂಕ್ತವಾಗಿ ಅನುಸರಿಸುವುದು ಅಗತ್ಯ.
ಸಾಮಾನ್ಯವಾಗಿ ಕೃಷಿ ಕ್ಷೇತ್ರಗಳಲ್ಲಿ ಕಂಡು ಬರುವ ಕೆಲವು ಸಮಸ್ಯಾತ್ಮಕ ವಾರ್ಷಿಕ ಹಾಗೂ ಬಹುವಾರ್ಷಿಕ ಕಳೆಗಳ ವಿವರ ಹಾಗೂ ನಿರ್ವಹಣೆಯನ್ನು ಈ ಕೆಳಗೆ ವಿವರಿಸಿದೆ.
1}ಬಿಳಿ ಕಸ ಇದರ ನಿಯಂತ್ರಣ:
ಈ ಕಳೆಯ ವಂಶಕ್ಕೆ ಸೇರಿದ 24 ಸಂತತಿಗಳಲ್ಲಿ ಕೈಗಾ ಏಸಿಯಾಟಿಕಾ” ಎಂಬುದು ಬೇರು ಪರಾವಲಂಬಿಯಾಗಿ ಜೋಳ, ಸಜ್ಜೆ, ಕಬ್ಬು, ಭತ್ತ ಮುಸುಕಿನ ಜೋಳ ಮತ್ತು ಕೆಲವು ಹುಲ್ಲುಗಳ (ಮಾರವೆಲ್) ಜೊತೆಯಲ್ಲಿ ಬೆಳೆಯುತ್ತದೆ. ಒಂದು ಗಿಡದಿಂದ 4 ಲಕ್ಷ ಬೀಜೋತ್ಪಾದನೆ ಆಗುತ್ತದೆ. ಬಿಳಿಕಸದ ಬೀಜಗಳು ಸುಮಾರು 20 ವರ್ಷಗಳ ಕಾಲ ಜೀವಂತವಿರುತ್ತವೆ. ಇದರ ಬಾಧೆ. ಸ್ಥಳೀಯ ಜೋಳದ ತಳಿಗಳಿಗಿಂತ ಸುಧಾರಿತ ಜೋಳದ ತಳಿಗಳಲ್ಲಿ ಹೆಚ್ಚಾಗಿದೆ ಹಾಗೂ ಕಪ್ಪು ಮಣ್ಣಿನ ಪ್ರದೇಶಕ್ಕಿಂತ ಕೆಂಪು ಮಣ್ಣಿನ ಪ್ರದೇಶದಲ್ಲಿ ಹೆಚ್ಚು, ಮಳೆ ಕಡಿಮೆಯಾದ ವರ್ಷಗಳಲ್ಲಿ ಇದರ ಬಾಧೆ ಹೆಚ್ಚು, ಬೀಜ ಬಿತ್ತಿದ 50 ರಿಂದ 60 ದಿವಸಗಳ ನಂತರ ಪರಾವಲಂಬಿ ಸ್ಥೆಗಾಕಾಣಿಸಿಕೊಳ್ಳುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬೆಳಗಾವಿ, ಬಾಗಲಕೋಟೆ ಹಾಗೂ ಬಿಜಾಪುರ ಜಿಲ್ಲೆಗಳಲ್ಲಿ ಕಬ್ಬು ಬೆಳೆಯಲ್ಲಿ ಭಾರಿ ಹಾನಿಯನ್ನು ಉಂಟು ಮಾಡುತ್ತಿದೆ.
ನಿಯಂತ್ರಣ:
1. ಭೂಮಿಯನ್ನು ಆಳವಾಗಿ ಉಳುಮೆ ಮಾಡುವುದು ಹಾಗೂ ಬೆಳೆಯನ್ನು ಪರಿವರ್ತನೆಯಲ್ಲಿ ಬಳಸುವುದು.
2. ಜಮೀನು, ಬದು ಮತ್ತು ಕಾಲುವೆಗಳಲ್ಲಿ ಬಿಳಿ ಕಸ ಇಲ್ಲದಂತೆ ಎಚ್ಚರವಹಿಸಿ, ಬಿಳಿ ಕಸವನ್ನು ಹೂವು ಬಿಡುವ ಮೊದಲೇ ಕಿತ್ತುಹಾಕುವುದು.
3. ಬಿಳಿ ಕಸ ಹೂ ಬಿಡುವ ಸಮಯದಲ್ಲಿ ನೀರು ಹಾಯಿಸಿ, ಎರಡು ದಿನಗಳವರೆಗೆ ನೀರು ನಿಲ್ಲಿಸುವುದು.
4. ಪ್ರತಿ ಹೆಕ್ಟರಿಗೆ 2.5 ಕಿಲೋಗ್ರಾಂ 2.4D ಸೋಡಿಯಂ ಲವಣವನ್ನು1000 . ಲೀಟರ್ ನೀರಿನಲ್ಲಿ ಬೆರೆಸಿ ಬಿಳಿ ಕಸ ಇರುವ ಪ್ರದೇಶದಲ್ಲಿ ಸಿಂಪರಿಸಬೇಕು. ಜೋಳ ಮತ್ತು ಬೇಳೆ ಕಾಳಿನ ಬೆಳೆಗಳನ್ನು ಮಿಶ್ರ ಬೆಳೆಯಾಗಿ ಬೆಳೆಯುವಾಗ ಈ ಸಿಂಪರಣೆಯನ್ನು ಮಾಡಬಾರದು.
2}ಪಾರ್ಥೇನಿಯಂ (ಗಜ್ಜರಿ ಕಸ):
ಈ ವಿಷಪೂರಿತ ಕಳೆಯನ್ನು ರಾಜ್ಯದ ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಇತರೆ ಪ್ರದೇಶಗಳಲ್ಲಿ ನೋಡಬಹುದು. ಇದು ವರ್ಷದ ಎಲ್ಲಾ ಕಾಲಗಳಲ್ಲಿಯೂ ಹೂ ಬಿಟ್ಟು ಬೀಜೋತ್ಪತ್ತಿ ಮಾಡುತ್ತದೆ. ಇದನ್ನು ಕಾಂಗ್ರೇಸ್ ಕಸ, ಚಟಕ್ ಚಂದನ್ ಮತ್ತು ಗಜ್ಜರಿ ಕಸ ಎಂದೂ ಕರೆಯಲಾಗುತ್ತಿದೆ. ಇದು ಚರ್ಮರೋಗವನ್ನುಂಟು ಮಾಡುವುದಲ್ಲದೇ, ಬೆಳೆಯ ಮತ್ತು ಹುಲ್ಲಿನ ಇಳುವರಿಯನ್ನು ಕಡಿಮೆ ಮಾಡುತ್ತದೆ.
ವಿಶೇಷ ಅಂಶಗಳು:
* ಪಾರ್ಥೇನಿಯಂ ಸಸ್ಯ ಒಂದು ಮೀಟರ್ ದಷ್ಟು ಎತ್ತರ ಬೆಳೆಯುತ್ತಿದ್ದು, ಈ ಗಿಡದ ಎಲೆಗಳು ಸಸಿಯಾಗಿರುವಾಗ ಹಳದಿ ಕಾಸ್ಸಾಸ್ ಅಥವಾ ಕುಸುಮೆ ಅಥವಾ ಚೆಂಡು ಮಲ್ಲಿಗೆಯ ಎಲೆಗಳ ಆಕಾರವಾಗಿರುತ್ತವೆ. ಇದರ ಹೂ ಅರ್ಧ ಸೆಂಟಿ ಮೀಟರ್ ಅಗಲವಾಗಿದ್ದು, ಪಂಚ ಭುಜಾಕೃತಿ ಹೊಂದಿರುವುದಲ್ಲದೇ ಬೆಳ್ಳಗಿರುತ್ತದೆ. ಪ್ರತಿ ಗಿಡವೂ ಸಾವಿರಾರು ಬೀಜಗಳನ್ನು ಉತ್ಪಾದನೆ ಮಾಡುತ್ತದೆ.
ಇದು ಸಾಮಾನ್ಯವಾಗಿ ಬೀಳು ಭೂಮಿ, ರೈಲು ದಾರಿಗಳು ಮತ್ತು ರಸ್ತೆಗಳ ಪಕ್ಕದಲ್ಲಿ ಹಾಗೂ ಖಾಲಿ ನಿವೇಶನಗಳಲ್ಲಿ ಕಂಡುಬರುತ್ತದೆ. ಇದು ಸಾಗುವಳಿ ಪ್ರದೇಶಗಳಿಗೆ ಹರಡಿ ಬೆಳೆಯಲ್ಲಿ ಹಾನಿ ಉಂಟು ಮಾಡುತ್ತದೆ. ಕೃಷಿ ಕ್ಷೇತ್ರದಲ್ಲಿ ಈ ಕಳೆಯಿಂದ ಬೆಳೆಗಳ ಉತ್ಪಾದನೆ ಕಡಿಮೆಯಾಗುವುದು.ಇದರಿಂದ ಶೀಘ್ರ ಗ್ರಾಹಿಗಳಿಗೆ ಚರ್ಮರೋಗ, ಗೂರಲು ಮತ್ತು ಇತರ ವಿಧವಾದ ಬಾಧೆಯುಂಟಾಗುವ ಸಂಭವ ಹೆಚ್ಚು.
ಸಾಕು ಪ್ರಾಣಿಗಳು ಇದನ್ನು ಮೇಯುವುದರಿಂದ ಅವುಗಳಿಗೆ ಅಪಾಯಕಾರಿ. ಗಜ್ಜರಿ ಕಸದಲ್ಲಿರುವ ರಾಸಾಯನಿಕದಿಂದಾಗಿ ಹಾಲು ಕಲ್ಮಷವಾಗಿರುತ್ತದೆ.
ನಿಯಂತ್ರಣ
1. ಪ್ರತಿ ಹೆಕ್ಟೇರ್ ಪ್ರದೇಶಕ್ಕೆ 2.5 ಕಿ.ಗ್ರಾಂ 2.4-ಡಿ ಸೋಡಿಯಂ ಲವಣವನ್ನು 1000 ಲೀ. ನೀರಿನಲ್ಲಿ ಬೆರಿಸಿ ಕಳೆಯು ಚಿಕ್ಕದಾಗಿದ್ದಾಗ ಸಿಂಪರಣೆ ಮಾಡಬೇಕು.
2. ಕಳೆಯು ದೊಡ್ಡ ಸಸ್ಯವಾದಾಗ 7.5 ಲೀ. 2.4-ಡಿ ಅಮೈನ್, 2.5 ಲೀ. ಟೀಪಾಲ್ ಮತ್ತು 5 ಕಿ.ಗ್ರಾಂ. ಯೂರಿಯಾವನ್ನು 1000 ಲೀ. ನೀರಿನಲ್ಲಿ ಬೆರೆಸಿ. ಸಿಂಪರಣೆ ಮಾಡಬೇಕು.
3. ಮಣ್ಣಿನಲ್ಲಿ ಉಳಿದಿದ್ದ ಬೀಜದಿಂದ ವೃದ್ಧಿಯಾಗುವ ಕಳೆಗಳ ಹತೋಟಿಗಾಗಿ ಮೇಲೆ 1 ರಲ್ಲಿ ಸೂಚಿಸಿದ ಕಳೆನಾಶಕವನ್ನು ಸಿಂಪಡಿಸಬೇಕು.
4. ಕೆಲವೇ ಗಿಡಗಳು ಇದ್ದಲ್ಲಿ ಕೈ ಚೀಲಗಳನ್ನು ಹಾಕಿಕೊಂಡು ಕಿತ್ತು ಹಾಕಬೇಕು. ಕಿತ್ತು ಹಾಕುವಾಗ ಗಿಡದ ಯಾವ ಭಾಗವೂ ಶರೀರದ ಭಾಗಗಳಿಗೆ ತಗುಲದಂತೆ ಎಚ್ಚರವಹಿಸುವುದು ಮುಖ್ಯ.
3}ಕರಿಕೆ ನಿಯಂತ್ರಣ:
ಕರಿಕೆಯು ಸಮಸ್ಯಾತ್ಮಕ ಬಹುವಾರ್ಷಿಕ ಕಳೆಯಾಗಿದೆ. ಈ ಕಳೆಯು ಬೀಜಗಳಿಂದ ನೆಲದೊಳಗಿನ ಕಾಂಡದ ತುಂಡುಗಳಿಂದಲೂ ಸಹ ವೃದ್ಧಿಸುವುದು. ಆದುದರಿಂದ, ಭೌತಿಕ ಹಾಗೂ ಬೇಸಾಯ ಕ್ರಮಗಳಿಂದ ಪರಿಣಾಮಕಾರಿ ಹತೋಟಿ ಕಷ್ಟ.
ರೈಫೋಸೇಟ್ ಎಂಬ ಕಳೆನಾಶಕಗಳನ್ನು ಸರಿಯಾದ ಪ್ರಮಾಣದಲ್ಲಿ ಕರಿಕೆ ಹಚ್ಚು ಹಸುರಾಗಿದ್ದಾಗ ಸಿಂಪಡಿಸಿದರೆ ಕರಿಕೆ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಮಾಡಬಹುದು.
ನಿಯಂತ್ರಣ:
ಪ್ರತಿ ಲೀ. ನೀರಿಗೆ 12-15 ಮೀ.ಲೀ. ಗ್ಲೈಫೋಸೆಟ್ 41 ಎಸ್ಎಲ್ ಹಾಗೂ 20 ಗ್ರಾಂ ಯೂರಿಯಾ ಅಥವಾ 6 ಗ್ರಾಂ ಅಮೋನಿಯಂ ಸಲೆಟ್‌ನ್ನು ಬೆರೆಸಿ ಈ ಕೆಳಗೆ ವಿವರಿಸಿದಂತೆ ಮೂರು ಬಾರಿ ಸಿಂಪರಣೆ ಮಾಡಬೇಕು.
ಮೊದಲನೆಯ ಸಿಂಪರಣೆಯನ್ನು ಮುಂಗಾರು ಮಳೆಯಾದ ನಂತರ ಕರಿಕೆಯು 10-15 ಸೆಂ.ಮೀ. ಎತ್ತರವಾಗಿ ಬೆಳೆದು ಹೆಚ್ಚು ಹಸುರಾಗಿದ್ದಾಗ ಕರಿಕೆ ಮಾತ್ರ ತೊಯ್ಯುವಂತೆ ಚೆನ್ನಾಗಿ ಸಿಂಪರಣೆ ದ್ರಾವಣವನ್ನು ಉಪಯೋಗಿಸಬೇಕು.
ಶೇಖರಿಸಿಟ್ಟುಕೊಂಡಿರುವ ಕಳೆನಾಶಕಗಳನ್ನು ಜಾಗ್ರತೆಯಿಂದ ಸುರಕ್ಷಿತ ಸ್ಥಳದಲ್ಲಿಡಬೇಕು. ಕೀಟನಾಶಕದ ಬದಲಾಗಿ ಕಳೆನಾಶಕಗಳನ್ನು ಸಿಂಪಡಿಸಿ ಬೆಳೆ ಹಾನಿಯನ್ನು ಮಾಡಿಕೊಂಡ ಅನೇಕ ಉದಾಹರಣೆಗಳಿವೆ.
5. ಕಳೆನಾಶಕಗಳನ್ನು ಸಿಂಪರಣೆ ಮಾಡುವಾಗ ಸಲಕರಣೆಯಲ್ಲಿ ಏನಾದರೂ ತೊಂದರೆಯಾದಲ್ಲಿ ಬಾಯಿಯಿಂದ ಊದಿ ತೆಗೆಯಲು ಪ್ರಯತ್ನಿಸಬಾರದು. ಸೂಜಿ ಅಥವಾ ತಂತಿಯನ್ನು ಉಪಯೋಗಿಸಿ ರಂಧ್ರವನ್ನು ಸರಿಪಡಿಸಬೇಕು.
6. ಆಯಾ ಬೆಳೆಗೆ ಸೂಚಿಸಿದ ಕಳೆನಾಶಕಗಳನ್ನು ಮಾತ್ರ ಉಪಯೋಗಿಸಿ, ಸಿಂಪರಣೆ ಮಾಡುವಾಗ ಅಕ್ಕಪಕ್ಕದಲ್ಲಿರುವ ಬೆಳೆಗಳಿಗೆ ಬೀಳದಂತೆ ಎಚ್ಚರವಹಿಸುವುದು ಮುಖ್ಯ. ಬಿಸಿಲು ಹೆಚ್ಚಾಗಿರುವ ಸಮಯದಲ್ಲಿ ಸಿಂಪರಣೆ ಮಾಡಬಾರದು.
7. ಕಳೆನಾಶಕಗಳನ್ನು ಉಪಯೋಗಿಸುವುದಕ್ಕೆ ಮುಂಚೆ ನೀರಿನೊಡನೆ ಚೆನ್ನಾಗಿ ಬೆರೆಸಿ, ಕಳೆಗಳ ಎಲೆಯ ಭಾಗದ ಮೇಲೆಲ್ಲಾ ಸರಿಯಾಗಿ ಬೀಳುವಂತೆ ಸಿಂಪರಿಸಬೇಕು.
8. ಕಳೆಗಳು ಮೊಳಕೆ ಬಂದ ನಂತರ ಬಳಸಬಹುದಾದ ಕಳೆನಾಶಕಗಳನ್ನು ಉಪಯೋಗಿಸುವುದಾದಲ್ಲಿ ಅದನ್ನು ಶುದ್ಧಮಾಡುವ ವಸ್ತುವನ್ನು (ಡಿಟರಜೆಂಟ್) ಅಂದರೆ ಶೇ. 0.1 ಟೀಪಾಲ್ ಮಿಶ್ರಮಾಡಿ ಉಪಯೋಗಿಸಬೇಕು. ಕಳೆನಾಶಕದೊಡನೆ ಈ ವಸ್ತು ಮಿಶ್ರವಾಗಿದೆ ಎಂಬ ತಯಾರಕರ ಸೂಚನೆ ಇದ್ದಾಗ ಈ ವಸ್ತುವನ್ನು ಮಿಶ್ರ ಮಾಡುವ ಅಗತ್ಯವಿಲ್ಲ.
9. ಕಳೆನಾಶಕವು ನೀರಿನಲ್ಲಿ ಬೆರೆಯುವ ಪುಡಿಯಾಗಿದ್ದಲ್ಲಿ ಮತ್ತು ಟ್ಯಾಂಕರ್ ಸಿಂಪರಣೆ ಯಂತ್ರವನ್ನು ಉಪಯೋಗಿಸುವುದಾದಲ್ಲಿ ಕಳೆಯ ಮಿಶ್ರಣವನ್ನು ಸಿಂಪರಣೆಯ ಸಮಯದಲ್ಲಿ ಸತತವಾಗಿ ಕಲುಕುತ್ತಿರಬೇಕು.
10. ಸಿಂಪರಕವನ್ನು ಸಿಂಪರಣೆಯ ನಂತರ ಚೆನ್ನಾಗಿ ತೊಳೆದು ಇಡಬೇಕು. ಕಳೆನಾಶಕಗಳನ್ನು ಸಿಂಪರಣೆ ಮಾಡಲು ಪ್ರತ್ಯೇಕ ಸಿಂಪರಕ ಇಡುವುದು ಸೂಕ್ತ.
11. ಕಳೆನಾಶಕಗಳನ್ನು ತಣ್ಣನೆ ಮತ್ತು ಒಣ ವಾತಾವರಣವಿರುವ ಪ್ರದೇಶಗಳಲ್ಲಿ ಶೇಖರಿಸುವುದು ಉತ್ತಮ.
12. ಕಳೆನಾಶಕಗಳನ್ನು ಉಪಯೋಗಿಸುವ ಮುಂಚೆ ಮತ್ತು ಬಿತ್ತುವ ಬಹು ಮುಂಚೆಯೇ ರೈತರು ತಜ್ಞರನ್ನೂ ಸಂಪರ್ಕಿಸಿ ಸಮರ್ಪಕ ಮಾಹಿತಿ ಪಡೆದುಕೊಂಡಿರಬೇಕು.
ವಿಶೇಷ ಸೂಚನೆ:
ರೈತರು ಬೆಳೆಗೆ ಔಷಧಿ ಸಿಂಪರಣೆ ಯಾಗದಂತೆ ನೋಡಿಕೊಳ್ಳಬೇಕು ಇಲ್ಲವಾದಲ್ಲಿ ಬೆಳಗ್ಗೆ ಹಾನಿ ಉಂಟು ಮಾಡುವ ಸಾಧ್ಯತೆಗಳು ಇವೆ ಮತ್ತು ನೀವು ಔಷಧಿಯನ್ನು ಖರೀದಿಸುವಾಗ ಅದರ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಉಪಯೋಗಿಸುವುದು ಅತಿ ಸೂಕ್ತವಾಗಿದೆ.