ನೀವು ಟಗರು ಕುರಿ ಸಾಕಿದ್ದೀರಾ?

ಕುರಿ ಟಗರಿಗೆ ಈ ರೋಗ ಬರದಂತೆ ಎಚ್ಚರಿಕೆವಹಿಸಿ!

ನಮಸ್ಕಾರ ರೈತ ಬಾಂಧವರೇ!

ಈಗ ನಾವು ಚರ್ಚಿಸುವ ವಿಷಯ ಕುರಿ ಮತ್ತು ಟಗರು ಗಳ ಆರೋಗ್ಯ ಕಾಪಾಡುವುದು ಹೇಗೆ?

ರೈತರು ಕುರಿಗಳನ್ನು ಸಾಕು ಅದರೊಂದಿಗೆ ಧನಾಕಾರ ಅವುಗಳನ್ನು ಕೂಡ ಸಾಗುತ್ತಾರೆ ಮತ್ತು ಅವುಗಳನ್ನು ಆರೋಗ್ಯಕರವಾಗಿ ಇಡುವುದು ತುಂಬಾ ಅತಿ ಅವಶ್ಯಕ

1)ಕುರಿಗಳಲ್ಲಿ ನೀಲಿ ನಾಲಿಗೆಯ ರೋಗ:

ಇದು ವೈರಾಣುವಿನಿಂದಾಗುವ ಖಾಯಿಲೆ. ಈ ವೈರಾಣುವು ಕ್ಯೂಲಿಕಾಯಡ್ಸ್ ಎಂಬ ಕುರುಡು ನೊಣಗಳಿಂದ ಹರಡಲ್ಪಡುತ್ತದೆ. ಈ ರೋಗವು ಮಳೆಗಾಲ ಅಥವಾ ಆನಂತರ ತೇವಾಂಶ ಹೆಚ್ಚಿರುವ ಚೌಗು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ರೋಗ ಲಕ್ಷಣಗಳು :

ರೋಗ ಪೀಡಿತ ಕುರಿಗಳಲ್ಲಿ ಹೆಚ್ಚು ಜ್ವರವಿದ್ದು, ತುಟಿ ಗದ್ದೆ ಹಾಗೂ ಕಿವಿಗಳಲ್ಲಿ ಊತ ಕಾಣಿಸಿಕೊಳ್ಳವುದು. ಬಾಯಲ್ಲಿ ಜೊಲ್ಲು ಸೋರುವಿಕೆ ಕಾಣಿಸಿಕೊಳ್ಳುತ್ತದೆ. ನಾಲಿಗೆ ನೀಲಿ ವರ್ಣದಂತೆ ಕಾಣುವುದು. ಕಾಲು ಕುಂಟುವಿಕೆ ಮತ್ತು ಉಣ್ಣೆ ಉದುರುವಿಕೆ ಇರುತ್ತದೆ. ಸಾಮಾನ್ಯವಾಗಿ ಶೇಕಡಾ 20-30 ಕುರಿಗಳಲ್ಲಿ ಈ ರೋಗ ಕಂಡು ಬರುತ್ತದೆ. ಆದರೆ ಇತರೆ ಸೋಂಕು ರೋಗಗಳಿಂದ ಹಾಗೂ ಆಹಾರ ಸೇವನೆ ಮಾಡಲಾಗದೆ ಕುರಿಗಳು ಸಾಯುತ್ತವೆ.

ಚಿಕಿತ್ಸೆ : ಈ ರೋಗ ಕಂಡು ಬಂದಾಗ

ರೋಗಗ್ರಸ್ಥ ಕುರಿಗಳನ್ನು ಪ್ರತ್ಯೇಕಿಸಬೇಕು. ಕೂಡಲೇ ಪಶುವೈದ್ಯರ ಸಲಹೆ ಪಡೆದು ಔಷಧೋಪಚಾರದ ಜೊತೆಗೆ ಅವುಗಳಿಗಾಗಿ ರಾಗಿ ಗಂಜಿ, ಮೆತ್ತನೆಯ ಹುಲ್ಲು ಹಾಗೂ ಸೊಪ್ಪನ್ನು ನೀಡಬೇಕು.

ನಿಯಂತ್ರಣ :

ಈ ರೋಗಕ್ಕೆ ಸೂಕ್ತ ಲಸಿಕೆ ನಮ್ಮ ದೇಶದಲ್ಲಿ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಆದುದರಿಂದ ಮುಂಜಾಗ್ರತಾ ಕ್ರಮಗಳು ಮುಖ್ಯ. ಇವುಗಳೆಂದರೆ ಕುರಿಗಳನ್ನು ಮಳೆಗಾಲದಲ್ಲಿ ಮುಂಜಾನೆ ಮತ್ತು ಮುಸ್ಸಂಜೆಯಲ್ಲಿ ತಗ್ಗು ಚೌಗು ಪ್ರದೇಶದಲ್ಲಿ ಮೇಯಿಸಬಾರದು ಹಾಗೂ ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಉಣ್ಣೆ ಕತ್ತರಿಸಬಾರದು. ಇದಲ್ಲದೆ ನೀಲಿ ನಾಲಿಗೆ ರೋಗ ಹರಡದಂತೆ ಸೊಳ್ಳೆ ನೊಣ ಮುಂತಾದ ಕೀಟಗಳ ಹಾವಳಿಯಿಂದ ಕುರಿಗಳನ್ನು ರಕ್ಷಿಸಬೇಕು. ಇದಕ್ಕಾಗಿ 80 ಮಿ.ಲೀ. ಸೀಮೆ ಎಣ್ಣೆ, 10 ಗ್ರಾಂ. ನುಸಿ ಗುಳಿಗೆ, 5 ಮಿ.ಲೀ. ನೀಲಿಗಿರಿ ತೈಲ ಹಾಗೂ 5 ಮಿ.ಲೀ. ಬೇವಿನ ಎಣ್ಣೆಯನ್ನು ಮಿತ್ರಣ ಮಾಡಿ ದ್ರಾವಣವನ್ನು ಕುರಿ ರೊಪ್ಪಕ್ಕೂ ಸಹ ಸಿಂಪಡಿಸಬಹುದು. ಆದರೆ ಈ ದ್ರಾವಣವನ್ನು ಮೇವು ಮತ್ತು ಕುಡಿಯುವ ನೀರಿಗೆ ಸಿಂಪಡಿಸದಂತೆ ಎಚ್ಚರ ವಹಿಸಬೇಕು.

2)ಕುರಿಸಿಡುಬು (ಕುರಿ ಮೈಲಿ, ದೇವಿ, ಅಮ್ಮ):

ಈ ರೋಗವು ವೈರಾಣುವಿನಿಂದ ಹರಡಲ್ಪಡುತ್ತದೆ. ಇದು ಒಂದು ಸಾಂಕ್ರಾಮಿಕ ರೋಗ, ವೈರಾಣವು ಗಾಳಿ, ಗೊಣ್ಣೆ, ಚರ್ಮದ ಹೊಟ್ಟು (ಬೊಬ್ಬೆ) ಜೊಲ್ಲಿನಿಂದ ಹಾಗೂ ರೋಗಗ್ರಸ್ಥ ಕುರಿಗಳ ಸಂಪರ್ಕದ ವಸ್ತುಗಳು ಹಾಗೂ ಜನರಿಂದ ಹರಡುತ್ತದೆ.

ರೋಗ ಲಕ್ಷಣಗಳು:

ರೋಗಗ್ರಸ್ಥ ಕುರಿಗಳಲ್ಲಿ ಜ್ವರ, ಕಣ್ಣಲ್ಲಿ ನೀರು ಸೋರುವಿಕೆ, ಮೂಗಲ್ಲಿ ಗೊಣ್ಣೆ ಹಾಗೂ ಬಾಯಲ್ಲಿ ಜೊಲ್ಲು ಸೋರುವಿಕೆ ಕಂಡು ಬರುತ್ತದೆ. ನಂತರ ಬಾಲದ ಬುಡ, ಕಣ್ಣಿನ ಸುತ್ತ, ಕೆಚ್ಚಲು ತುಟಗಳ ಮೇಲೆ ಮತ್ತು ತೊಡೆಗಳ ಚರ್ಮದ ಮೇಲೆ ಬೊಕ್ಕೆಗಳು ಕಾಣಿಸಿಕೊಳ್ಳುತ್ತವೆ. ಈ ಬೊಕೈಗಳು ನಂತರ ಇತರೆ ಸೋಂಕಿನಿಂದ ಹುಣ್ಣಾಗಿ ಮಾರ್ಪಾಡಾಗುತ್ತವೆ. ಪುಪ್ಪುಸ ಹಾಗು ಶ್ವಾಸನಾಳಗಳಲ್ಲಿ ಬೊಕ್ಕೆಗಳು ಕಂಡು ಬಂದಲ್ಲಿ ಕೆಮ್ಮು ಕಾಣಿಸಿಕೊಳ್ಳಬಹುದು. ಕುರಿ ಮರಿಗಳಲ್ಲಿ ರೋಗ ಉಲ್ಬಣ ಹೆಚ್ಚಾಗಿ ಕಂಡು ಬರುತ್ತದೆ. ರೋಗಗ್ರಸ್ಥ ಮಂದೆಗಳಲ್ಲಿ ಶೇಕಡಾ 50 ಕುರಿಗಳು ಸಾಯುತ್ತವೆ. ಗಬ್ಬದ ಕುರಿಗಳು ಕಂದು ಹಾಕಬಹುದು.

ಚಿಕಿತ್ಸೆ: ರೋಗಗ್ರಸ್ಥ ಕುರಿಗಳನ್ನು ಮಂದೆಯಿಂದ ಬೇರ್ಪಡಿಸಬೇಕು, ತಕ್ಷಣ ಪಶುವೈದ್ಯರನ್ನು ಸಂಪರ್ಕಿಸಿ ಸೂಕ್ತ ಔಷಧೋಪಚಾರ ಮಾಡಿಸಬೇಕು

ಮುಂಜಾಗ್ರತಾ ಕ್ರಮ. ರೋಗ ತಡೆಗಟ್ಟಲು ಕುರಿಗಳಿಗೆ ಬೇಸಿಗೆ ಕಾಲಕ್ಕೆ ಮುಂಚೆಯೇ ಕುರಿ ಸಿಡುಬು ಲಸಿಕೆ ಹಾಕಿಸಬೇಕು.

3)ಕುರಿಗಳಲ್ಲಿ ದೊಡ್ಡರೋಗ ಮತ್ತು ಪಿಪಿಆರ್ ರೋಗ (ಹಿರೇಬೇನೆ):

ಇದು ವೈರಾಣುಗಳಿಂದ ಬರುವ ಖಾಯಿಲೆ. ಈ ರೋಗವು ಕುರಿ ಮತ್ತು ಮೇಕೆಗಳಿಗೆ ಹರಡುವ ಸಾಂಕ್ರಾಮಿಕ ರೋಗ. ಈ ರೋಗ ಎಲ್ಲಾ ಋತುಗಳಲ್ಲೂ ಕಂಡು ಬರುವುದು.

ರೋಗ ಲಕ್ಷಣಗಳು:

ರೋಗಗ್ರಸ್ಥ ಕುರಿಗಳಲ್ಲಿ ಅತಿಯಾದ ಜ್ವರವಿದ್ದು ಕಣ್ಣು ಕೆಂಪಾಗಿ ನೀರು ಸೋರುತ್ತದೆ. ನಂತರ ಗೀಜು ಕಟ್ಟುವಿಕೆ ಕಂಡು ಬರುತ್ತದೆ. ಬಾಯಲ್ಲಿ ಹುಣ್ಣಾಗಿ ನೊರೆಯುಕ್ತ ಜೊಲ್ಲನ್ನು ಸುರಿಸುತ್ತಿರುತ್ತವೆ. ಕುರಿಗಳು ಮೇವು ಬಿಟ್ಟು ನಿಶ್ಯಕ್ತಿಯಿಂದ ಮಂಕಾಗುತ್ತದೆ. ಪುಪ್ಪುಸ ರೋಗದಿಂದ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಜ್ವರ ಕಡಿಮೆಯಾಗುತ್ತಿದ್ದಂತೆ ಬೇಧಿ ಅಥವಾ ಆಮಶಂಕೆ ಕಾಣಿಸಿ, ನಿತ್ರಾಣಗೊಂಡು ಸಾಯುತ್ತವೆ.

ಚಿಕಿತ್ಸೆ ಮತ್ತು ನಿಯಂತ್ರಣ:

ರೋಗಗ್ರಸ್ಥ ಪ್ರಾಣಿಗಳು ಕಂಡು ಬಂದರೆ ಅವುಗಳನ್ನು ಪ್ರತ್ಯೇಕಿಸಿ. ಪಶುವೈದ್ಯರ ಸಲಹೆ ಪಡೆಯಬೇಕು. ರೋಗ ನಿಯಂತ್ರಿಸಲು ಪಶುವೈದ್ಯರ ಸಹಾಯದಿಂದ ಪಿ.ಪಿ.ಆರ್ ಲಸಿಕೆ ಹಾಕಿಸಬೇಕು. ಮುಂಜಾಗ್ರತಾ ಕ್ರಮವಾಗಿ ದೊಡ್ಡ ರೋಗದ ಲಸಿಕೆಯನ್ನು ಎಲ್ಲಾ ಕುರಿಗಳಿಗೆ ನೀಡಿದಲ್ಲಿ ದೊಡ್ಡರೋಗ ಹಾಗೂ ಪಿ.ಪಿ.ಆರ್. ಎರಡನ್ನೂ ತಡೆಗಟ್ಟಬಹುದು.

4)ಕಾಲು ಮತ್ತು ಬಾಯಿ ನೋವು (ಕಾಲು ಮತ್ತು ಬಾಯಿ ರೋಗ):

ಇದು ವೈರಾಣುವಿನಿಂದ ಹರಡಲ್ಪಡುವ ಸಾಂಕ್ರಾಮಿಕ ರೋಗ ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಣಬರುವ ರೋಗ ಎಲ್ಲಾ ವಯಸ್ಸಿನ ಎಲ್ಲಾ ಜಾತಿಯ ಕುರಿಗಳಲ್ಲಿ ಕಂಡುಬರುತ್ತದೆ. ರೋಗಗ್ರಸ್ಥ ಕುರಿಗಳ ಸಂಪರ್ಕ, ಅವುಗಳ ಜೊಲ್ಲು, ಸಿಂಬಳ, ದೂಷಿತ ಹುಲ್ಲು ಇವುಗಳ ಮುಖಾಂತರ ಹರಡಲ್ಪಡುತ್ತದೆ.

ರೋಗ ಲಕ್ಷಣಗಳು:

ರೋಗಗ್ರಸ್ಥ ಕುರಿಗಳಲ್ಲಿ ಜ್ವರ ಕಾಣಿಸಿಕೊಳ್ಳುವುದು ಹಾಗೂ ಜೊಲ್ಲು ಸೋರುವಿಕೆ ಕಂಡು ಬರುವುದು. ಕಾಲಿನ ಗೊರಸುಗಳ ಮಧ್ಯೆ ದ್ರವ ತುಂಬಿದ ಗುಳ್ಳೆಗಳು ಕಾಣಿಸಿಕೊಂಡು ನೋವಿನಿಂದ ಕುಂಟುವುದು, ಗುಳ್ಳೆಗಳ ತೀವ್ರತೆ ಇವುಗಳಲ್ಲಿ ಇರುವುದಿಲ್ಲ. ಕೆಚ್ಚಲು ಮೇಲೆ ಕೂಡ ಇದೇ ತರಹದ ಗುಳ್ಳೆಗಳು ಕಾಣಿಸಿಕೊಳ್ಳಬಹುದು.  

ಚಿಕಿತ್ಸೆ :

ರೋಗಗ್ರಸ್ಥ ಕುರಿಗಳನ್ನು ಬೇರ್ಪಡಿಸಿ ಅವುಗಳಿಗೆ ಪಶುವೈದ್ಯರಿಂದ ಸೂಕ್ತ ಔಷಧೋಪಚಾರ ಮಾಡಿಸಬೇಕು. ರೋಗಗ್ರಸ್ಥ ಕುರಿಗಳ ಬಾಯಿ ಮತ್ತು ಕಾಲನ್ನು ಶೇಕಡ 4ರ ಬಟ್ಟೆಸೋಡಾ (ಸೋಡಾಕಾರ್ಬ) ದ್ರಾವಣದಿಂದ ತೊಳೆಯಬೇಕು. ದನ ಹಾಗೂ ಎಮ್ಮೆಗಳಲ್ಲಿ ಈ ರೋಗ ಕಂಡು ಬಂದಾಗ ಕುರಿ ಮಂದೆಯನ್ನು ಇವುಗಳಿಂದ ದೂರವಿಡಬೇಕು.

5)ಕುರಿಗಳಲ್ಲಿ ಗಂಟಲು ಬೇನೆ (ಗಳಲೆ ರೋಗ):

ಈ ರೋಗವು ವಿಷಾಣು ಜಿವಿಗಳಿಂದ ಹರಡಲ್ಪಡುವ ಒಂದು ಸಾಂಕ್ರಾಮಿಕ ರೋಗ, ಕಲುಷಿತ ನೀರು ಆಹಾರ, ರೋಗಗ್ರಸ್ಥ ಕುರಿಗಳ ಸಂಪರ್ಕದಿಂದ ಒಂದು ಕುರಿಯಿಂದ ಇನ್ನೊಂದು ಕುರಿಗೆ ಈ ರೋಗ ಹರಡುತ್ತದೆ. ಮಳೆಗಾಲದ ಪ್ರಾರಂಭದಲ್ಲಿ ಅಥವಾ ತಂಪು ಹವೆಯಲ್ಲಿ ಕುರಿಗಳನ್ನು ಸ್ಥಳದಿಂದ ಸ್ಥಳಕ್ಕೆ ಸಾಗಣೆ ಮಾಡುವುದರಿಂದ ಪ್ರಯಾಸಕ್ಕೆ ಸಿಕ್ಕಿ ಈ ರೋಗದಿಂದ ನರಳುವುವು.

ರೋಗ ಲಕ್ಷಣಗಳು:

ರೋಗಗ್ರಸ್ಥ ಕುರಿಗಳು ಮೇಯುವುದನ್ನು ಬಿಡುತ್ತವೆ. ಜ್ವರವಿರುವುದಲ್ಲದೆ, ಉಸಿರಾಟಕ್ಕೆ ತೊಂದರೆ ಹೆಚ್ಚಾಗಿರುತ್ತೆದೆ. ಒಮ್ಮೊಮ್ಮೆ ಬೇಧಿ ಅಥವಾ ರಕ್ತ ಮಿಶ್ರಿತ ಬೇಧಿ ಕಾಣಬಹುದು. ಗಬ್ಬದ ಕುರಿಗಳು ಕಂದು ಹಾಕಬಹುದು. 2-3 ಸಾವನ್ನಪ್ಪುವವು.

ಚಿಕಿತ್ಸೆ ಮುಂಜಾಗ್ರತಾ ಕ್ರಮ:

ಈ ರೋಗ ಕಂಡು ಬಂದ ಕೂಡಲೇ ಪಶುವೈದ್ಯರನ್ನು ಸಂಪರ್ಕಿಸಿ ಸೂಕ್ತ ಔಷಧೋಪಚಾರದಿಂದ ಅವುಗಳನ್ನು ಗುಣಪಡಿಸಬಹುದು, ಮುಂಜಾಗ್ರತೆಗಾಗಿ ಗಳಲೆ ರೋಗ ಲಸಿಕೆಯನ್ನು ಕುರಿಗಳಿಗೆ ಮಳೆಗಾಲಕ್ಕೆ ಮುಂಚೆ ಹಾಕಿಸಿದರೆ ರೋಗವನ್ನು ತಡೆಗಟ್ಟಬಹುದು.

6)ಕುರಿಗಳಲ್ಲಿ ಕರಳು ಬೇನೆ (ಎಂಟಿರೋಟಾಕ್ಷೀಮಿಯ):

ಈ ರೋಗವು ಕ್ಲಾಸ್ಟ್ರಿಡಿಯಂ ಜಾತಿಗೆ ಸೇರಿದ ವಿಷಾಣುವಿನಿಂದ ಹರಡುತ್ತವೆ. ಆರೋಗ್ಯವಂತ ಮತ್ತು ಚೆನ್ನಾಗಿ ಮೇಯುತ್ತಿರುವ ವಯಸ್ತ ಹಾಗೂ ಕುರಿ ಮರಿಗಳು ಈ ರೋಗಕ್ಕೆ ಬೇಗ ತುತ್ತಾಗುತ್ತವೆ. ಈ ರೋಗಕ್ಕೆ ಕಾರಣ ಕುರಿಗಳು ಅವಶ್ಯಕತೆಗಿಂತ ಹೆಚ್ಚಾಗಿ ಹಸಿರು ಮೇವು ಮೇಯ್ದಾಗ, ಕರುಳಿನಲ್ಲಿ ಸತ್ವಯುತ ಅಪಾರ ಪ್ರಮಾಣದಲ್ಲಿ ವೈರಾಣುಗಳು ಬೆಳೆಯಲು ಕಾರಣವಾಗುತ್ತದೆ. ಈ ವಿಷಾಣುಗಳ ವಿಷದಿಂದ ಕುರಿಗಳು ಸಾಯುತ್ತವೆ. ಈ ರೋಗವು ಸಾಧಾರಣವಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತವೆ.ಚೆನ್ನಾಗಿ ಮೇಯುತ್ತಿರುವ ಆರೋಗ್ಯವಂತ ಕುರಿಗಳು ಒಮ್ಮೆಲೆ ಸುತ್ತ ತಿರುಗಿ ಕೆಳಗೆ ಬಿದ್ದು ಸಾಯುವವು. ತೀವ್ರತರ ರೋಗದಲ್ಲಿ ಈ ರೋಗಕ್ಕೆ ಚಿಕಿತ್ಸೆ ಮಾಡುವಷ್ಟು ಸಮಯವಿರುವುದಿಲ್ಲ, ರೋಗಗ್ರಸ್ಥ ಕುರಿಗಳಲ್ಲಿ ಹಲ್ಲು ಕಡಿಯುವಿಕೆ, ತಲೆ ಒಂದು ಕಡೆ ತಿರುಗಿಸುವುದು ಹಾಗೂ ಒಮ್ಮೊಮ್ಮೆ ಬೇಧಿ ಸಹ ಕಾಣಬರುವುದು, ತ್ರಾಣವಿಲ್ಲದೆ ಬಿದ್ದು ಕಾಲುಗಳನ್ನು ಜೋರಾಗಿ ಆಡಿಸಿ ಸಾವನ್ನಪ್ಪುವವು.

ಮುಂಜಾಗ್ರತಾ ಕ್ರಮ:

ವರ್ಷಕ್ಕೊಮ್ಮೆ ಮಳೆಗಾಲಕ್ಕೆ ಮುಂಚೆ 3 ತಿಂಗಳು ಮೇಲ್ಪಟ್ಟ ಕುರಿಗಳಿಗೆ ಲಸಿಕೆ ಹಾಕಿಸಬೇಕು. ಮೊದಲನೆ ವರ್ಷದಲ್ಲಿ ಎರಡು ಬಾರಿ (ಹದಿನಾಲ್ಕು ದಿನಗಳ ಅಂತರದಲ್ಲಿ) ನಂತರ ವರ್ಷಕ್ಕೊಮ್ಮೆ ಹಾಕಿಸಬೇಕು ಈ ರೋಗ ಕಂಡುಬಂದಾಗ ಕುರಿ ಮಂದೆಯನ್ನು ಒಣ ಹುಲ್ಲು ಇರುವ ಪ್ರದೇಶಕ್ಕೆ ಮೇಯಲು ಸಾಗಿಸಬೇಕು.

7)ಬ್ರುಸೆಲ್ಲೋಸಿಸ್ (ಕಂದು ಹಾಕುವ ಕಾಯಿಲೆ)

ಈ ರೋಗವು ಕುರಿಯಲ್ಲಿ ಬ್ರುಸೆಲ್ಲಾ ಓಎಸ್ ಎಂಬ ಬ್ಯಾಕ್ಟಿರಿಯಾದಿಂದ ಹಾಗೂ ಮೇಕೆಯಲ್ಲಿ ಬ್ರುಸೆಲ್ಲಾ ಮೆಲೆಟೆನ್ಸಿಸ್ ಎಂಬ ಬ್ಯಾಕ್ಟಿರಿಯಾದಿಂದ ಹರಡುತ್ತದೆ.ಈ ರೋಗವು ಮನುಷ್ಯರಿಗೆ ಹರಡಬಹುದಾದ್ದರಿಂದ ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಹೆಚ್ಚಿನ ಕಾಳಜಿ ಮುಖ್ಯ

ರೋಗಲಕ್ಷಣ:

ಗರ್ಭಸ್ಥ ಕುರಿ ಕಂದು ಹಾಕುತ್ತದೆ. ಜ್ವರದಿಂದ ನರಳುತ್ತದೆ.

ಚಿಕಿತ್ಸೆ ಚಿಕಿತ್ಸೆ ಉಪಯೋಗಕಾರಿಯಲ್ಲ ಹಾಗೂ ತುಂಬಾ ದುಬಾರಿಯಾದ ಚಿಕಿತ್ಸೆ

ನಿಯಂತ್ರಣ ಕಂದು ಹಾಕಿದ ಪ್ರಾಣಿಗಳ ರಕ್ತ ತಪಾಸಣೆ ನಡೆಸಿ ಬ್ರುಸೆಲ್ಲಾ ಎಂದು ಪತ್ತೆ ಹಚ್ಚಿದರೆ ಅವುಗಳ ವಧೆ ಮಾಡುವುದು. ಮೇಲ್ನೋಟಕ್ಕೆ ರೋಗ ಲಕ್ಷಣಗಳು ಕಾಣದೇ ರೋಗಾಣುಗಳನ್ನು ಹರಡುವ ಕುರಿ ಮೇಕೆಗಳು ಹಿಂಡಿನಲ್ಲಿರಬಹುದು. ಆದ್ದರಿಂದ ಕುರಿ/ ಮೇಕೆಗಳ ರಕ್ತವನ್ನು ಪ್ರಯೋಗ ಶಾಲೆಯಿಂದ ತಪಾಸಣೆ ಮಾಡಿ ರೋಗವಿಲ್ಲದಿರುವಿಕೆಯನ್ನು ಖಚಿತಪಡಿಸಿಕೊಳ್ಳುವುದು ಸೂಕ್ತ.

ಕುರಿ/ಮೇಕೆಗಳಲ್ಲಿ ಪರಾವಲಂಬಿ ಜೀವಿಗಳು

ಕುರಿ/ಮೇಕೆಗಳ ದೇಹದಲ್ಲಿ ಅನೇಕ ಪ್ರಕಾರದ ಪರಾವಲಂಬಿ

ಜೀವಿಗಳು ಜೀವಿಸುತ್ತವೆ. ಇವುಗಳಲ್ಲಿ ಎರಡು ವಿಧಾ

* ಒಳ ಪರಾವಲಂಬಿ ಜೀವಿಗಳು

* ಹೊದ ಪರಾವಲಂಬಿ ಜೀವಿಗಳು

ಇವು ದೇಹಾಂಗ ಕಾರ್ಯಗಳಿಗೆ ಹಾನಿಕಾರಕ ಇವು ತಮ್ಮ ಚಲನವಲನ ಸಾಮರ್ಥ್ಯದಿಂದ ದೇಹದಲ್ಲಿ ಪ್ರವೇಶ ಮಾರ್ಗಗಳನ್ನು ಕಲ್ಪಿಸಿಕೊಂಡು ಬೇಕಾದ ಜಾಗಕ್ಕೆ ಅನಾಯಾಸವಾಗಿ ಹೋಗಬಲ್ಲವು ಸದೃಡ ದೇಹದಲ್ಲಿ ಯಾವು ಕಾಲಕ್ಕೂ ಪರಾವಲಂಬಿಗಳು ನಿರಾತಂಕವಾಗಿ ಜೀವಿಸಲಾರವು. ಆದರೆ ದೇಹ ಶಕ್ತಿಯು ಕ್ಷೀಣಿಸಿದಂತೆ ಇವುಗಳ ಬೆಳವಣಿಗೆ ಹೆಚ್ಚಾಗಿ ವಿನಾಶ ಕಾರ್ಯವು ಹೆಚ್ಚು ತ್ವರಿತವಾಗಿ ಸಾಗುತ್ತದೆ. ರೋಗಗ್ರಸ್ಥ ಕುರಿಗಳಲ್ಲಿ ಮೈಹಿಡಿಯದೆ ಮಾಂಸದ ಪ್ರಮಾಣ ಕಮ್ಮಿಯಾಗುತ್ತದೆ.

ಒಳ ಪರಾವಲಂಬಿ ಜೀವಿಗಳು
ದುಂಡು ಬಂತುಯೇಲು
ಲಾಡಿ ಹುಳು
ಕಾರಲು ಮಳು
ಆಂಫಿಸ್ಟೋಮ್ ಹುಳುಗಳು
ದುಂಡು ಜಂತು ಹುಳುಗಳು

ಸ್ಟಾಂಗೈಲ್ ಜಾತಿಗೆ ಸೇರಿದ ಮಂಡು ಜಂತು ಹುಳುಗಳು ಗ್ರಂಥಿ, ಉದರ ಹಾಗೂ ಸಣ್ಣ ಕರುಳಲ್ಲಿ ವಾಸಿಸುತ್ತವೆ. ಇವುಗಳ ಸೋಂಕು ಹೊಂದಿರುವ ಹುಲ್ಲುಗಾವಲುಗಳಲ್ಲಿ ಮೇಯುವುದರಿಂದ ಕುರಿಗಳ ದೇಹವನ್ನು ಪ್ರವೇಶಿಸುತ್ತವೆ.

ಈ ಜಂತುಗಳಿರುವ ಕುರಿಗಳಲ್ಲಿ ಅಜೀರ್ಣ ಕಂಡು ಬಂದು ಕೃತವಾಗುವಿಕೆ. ಹಾಗೂ ಗದ್ದ ಊದಿಕೊಳ್ಳಲು ತೊಡಗುತ್ತವೆ. ಕೂದಲು ಒರಟಾಗುತ್ತದೆ. ನಂತರ ಬೇಧಿ ಕಂಡು ಬರುತ್ತದೆ. ಕೆಲವು ಜಂತು ಹುಳುಗಳು ರಕ್ತ ಹೀರುತ್ತವೆ. ಸೂಕ್ತ ಸಮಯದಲ್ಲಿ ಔಷಧೋಪಚಾರ ಮಾಡದಿದ್ದರೆ ಕುರಿಗಳು ಸಾಯಲೂಬಹುದು.

ಚಿಕಿತ್ಸೆ ಮುಂಜಾಗ್ರತಾ ಕ್ರಮ

ಕುರಿಗಳಿಗೆ 2-3 ತಿಂಗಳಿಗೊಮ್ಮೆ ಪಶುವೈದ್ಯರ ಸಲಹೆಯಂತೆ ಎಲ್ಲಾ ಕುರಿಗಳಿಗೆ ಸೂಕ್ತ ಬಂತು ಹುಳುವಿನ ಔಷಧಿ ಕೊಡಿಸಬೇಕು.

1}ಲಾಡಿ ಹುಳು:

ಈ ಹುಳುಗಳು ಕರುಳಿನಲ್ಲಿ ವಾಸಿಸುತ್ತವೆ. ಇವುಗಳು ಅರಬ್ಯಾಟಡ್ ನುಸಿಗಳಿಂದ ಹರಡಲ್ಪಡುತ್ತವೆ. ಸಾಮಾನ್ಯವಾಗಿ ಕುರಿ ಮರಿಗಳಲ್ಲಿ ಹೆಚ್ಚು ತೊಂದರೆಯಾಗುತ್ತದೆ. ನಿಷ್ಪತ್ತಿ ಅಜೀರ್ಣ ಕಂಡು ಬಂದು ಮರಿಗಳ ಬೆಳವಣಿಗೆಗೆ ಅಡ್ಡಿಯುಂಟಾಗುತ್ತದೆ.

ಚಿಕಿತ್ಸೆ:

ಮರಿಗಳಿಗೆ ಲಾಡಿ ಹುಳುವಿನ ಔಷಧಿಯನ್ನು 1 ವರ್ಷದೊಳಗೆ ಎರಡು ಬಾರಿ ಕೊಡಿಸಬೇಕು. ಲಾಡಿ ಹುಳು ಕಂಡು ಬಂದ ವಯಸ್ಕ ಕುರಿಗಳಿಗೆ ಸೂಕ್ತ ಔಷಧಿ ಕೊಡಿಸಬೇಕು.

2}ಕಾರಲು ಹುಳು:

ಈ ಹುಳುಗಳು ಕುರಿಗಳ ಪಿತ್ತ ನಾಳಗಳಲ್ಲಾಗಲಿ ಅಥವಾ ಯಕೃತ್ತಿನಲ್ಲಾಗಲೀ ವಾಸಿಸುತ್ತವೆ. ಈ ಹುಳುಗಳು ಬಸವನ ಹುಳುವಿನ ಸಾಮಾನ್ಯವಾಗಿ ಕೊಳಚೆ ನೀರಿನ ಅಥವಾ ಚೌಗು ಪ್ರದೇಶಗಳಲ್ಲಿ ವಿಶೇಷವಾಗಿರುತ್ತದೆ. ಕಾರಲು ಹುಳುವಿನಿಂದ ನರಳುತ್ತಿರುವ ಕುರಿಗಳಲ್ಲಿ ರಕ್ತಹೀನತೆ, ಗದ್ದ, ಕೈಕಾಲುಗಳಲ್ಲಿ ಬಾವು ಕಂಡುಬರುತ್ತವೆ. ಕೆಲವೊಮ್ಮೆ ಭೇಧಿ ಕಂಡುಬರುತ್ತದೆ. ಅಥವಾ ಹುಳುಗಳು ಹೆಚ್ಚಾಗಿದ್ದರೆ ಕುರಿಗಳು ಸಾಯಲೂಬಹುದು. ಈ ಖಾಯಿಲೆ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಂಡುಬರುವುದು.

ಚಿಕಿತ್ಸೆ ಮುಂಜಾಗ್ರತಾ ಕ್ರಮ

ಪಶುವೈದ್ಯರ ಸಲಹೆ ಪಡೆದು ಸೂಕ್ತ ಜಂತು ಹುಳುವಿನ ಔಷಧಿ 3-4 ತಿಂಗಳಿಗೊಮ್ಮೆ ಕೊಡಿಸಬೇಕು. ಹಾಗೂ ಚೌಗು ಪ್ರದೇಶದಲ್ಲಿ ಕುರಿಗಳನ್ನು ಮೇಯಿಸಬಾರದು.

3}ಅಂಪಿಸ್ಟೋಮ್ ಹುಳು:

ಈ ಹುಳುಗಳು ಸಾಮಾನ್ಯವಾಗಿ ದೊಡ್ಡ ಮೇವಿನ ಚೀಲದಲ್ಲಿ (ಖಣಬಂಟ) ವಾಸಿಸುತ್ತದೆ. ಕಾರಲು ಹುಳುಗಳಂತೆ ಇವೂ ಕೂಡಬಸವನ ಹುಳುಗಳಿಂದ ಹರಡಲ್ಪಡುತ್ತವೆ. ಈ ಹುಳುಗಳ ಮರಿಗಳು ಕುರಿಗಳ ದೇಹ ಪ್ರವೇಶಿಸಿದ ನಂತರ ಕರುಳಿನಲ್ಲಿ ಹೆಚ್ಚಾಗಿ ತೊಂದರೆಯುಂಟು ಮಾಡಿ ಬೇದಿ ಕಂಡು ಬರುತ್ತದೆ. ನಂತರ ವಯಸ್ಕ ಹುಳುಗಳು ದೊಡ್ಡ ಮೇವಿನ ಚೀಲದಲ್ಲಿ ಕಂಡು ಬರುತ್ತವೆ.

ಚಿಕಿತ್ಸೆ/ ಮುಂಜಾಗ್ರತಾ ಕ್ರಮ ಕುರಿ/ಮೇಕೆಗಳ ಹಿಕ್ಕೆ ಆಗಿಂದಾಗ್ಗೆ ಪ್ರಯೋಗ ಶಾಲೆಗಳಿಂದ ತಪಾಸಣೆ ಮಾಡಿಸಿದಲ್ಲಿ ಜಂತು ಹುಳುಗಳ ಪತ್ತೆ ಹಚ್ಚಿ ಸೂಕ್ತವಾದ ಜಂತುನಾಶಕ ಔಷಧಿ ಉಪಯೋಗಿಸುವುದರಿಂದ ಹೆಚ್ಚು ಪರಿಣಾಮಕಾರಿ ಕ್ರಮ, ಒಟ್ಟಿನಲ್ಲಿ ಪರೋಪ ಜೀವಿಗಳಿಂದಾಗುವ ಹಾನಿ ಆಪಾರ ಜೊತೆಗೆ ಇವುಗಳಿಗೆ ಲಸಿಕೆ ಇಲ್ಲದಿರುವುದರಿಂದ 2- 3 ತಿಂಗಳಿಗೊಮ್ಮೆ ಸೂಕ್ತ ಜಂತುಹುಳುವಿನ ಔಷಧಿ ಕೊಡಿಸುವುದರಿಂದ ಕುರಿಗಳಿಗಾಗುವ ಹಾನಿ ತಪ್ಪಿಸಬಹುದು. ಈ ಔಷಧೋಪಚಾರದಿಂದ ಕುರಿ ಮಾಂಸ ಮತ್ತು ಉಣ್ಣೆ ಇಳುವರಿ ಹೆಚ್ಚಾಗುತ್ತದೆ. ಸೂಕ್ತ ಸಮಯದಲ್ಲಿ ಜಂತುನಾಶಕ ಔಷಧಿಗಳ ಬಳಕೆಯಿಂದ ಬರುವ ಲಾಭ ಅಪಾರ
ಕುರಿಗಳಲ್ಲಿ ಹೊರ ಪರಾವಲಂಬಿ ಜೀವಿಗಳುಕುರಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪರಾವಲಂಬಿ ಜೀವಿಗಳೆಂದರೆ:

1. ಉಣ್ಣೆ, 2. ಮಸಿ, 3. ಹೇನು, 4. ಚಿಗಟ ಈ ಪರಾವಲಂಬಿ ಜೀವಿಗಳು ಕುರಿಗಳ ಚರ್ಮಕ್ಕೆ

ಹಾನಿಯುಂಟುಮಾಡುತ್ತವೆ. ಕೆಲವು ವೈರಾಣು. ಸೂಕ್ಷ್ಮಾಣು ಹಾಗೂ ಮಲೇರಿಯಾಗಳಂತಹ ಕಾಯಿಲೆಗಳು ಕೂಡ ಉಣ್ಣೆಗಳಿಂದ (Tieks) ಕುರಿಗಳಿಗೆ ಹರಡುತ್ತವೆ. ಈ ಹೊರ ಪರಾವಲಂಬಿ ಪೀಡಿತ ಕುರಿಗಳಲ್ಲಿ ಚರ್ಮ ರೋಗದ ಜೊತೆಗೆ ನಿವೃತ್ತಿ ಕಂಡು ಬರುತ್ತದೆ. ಇವುಗಳನ್ನು ಹತೋಟಿಗೆ ತರಲು ಪಶುವೈದ್ಯರನ್ನು ಸಂಪರ್ಕಿಸಿ ಸೂಕ್ತ ಕೀಟನಾಶಕ ಔಷಧಿಗಳನ್ನು ಉಪಯೋಗಿಸಬೇಕು.

ರೋಗಗಳು ಕಾಣಿಸಿಕೊಂಡಾಗ ಕುರಿಗಾರರು ಅನುಸರಿಸಬೇಕಾದ ಕ್ರಮಗಳು

1. ರೋಗಗ್ರಸ್ಥ ಪ್ರಾಣಿಗಳನ್ನು ಪ್ರತ್ಯೇಕಿಸಬೇಕು.

2. ರೋಗದಿಂದ ಮರಣಿಸಿದ ಪ್ರಾಣಿಗಳನ್ನು ಸರಿಯಾದ ರೀತಿಯಲ್ಲಿ ವಿಲೇ ಮಾಡುವುದು. (ಹೂಳುವುದು/

ಸುಡುವುದು)

3. ಸ್ಥಳೀಯ ಪಶುವೈದ್ಯಾಧಿಕಾರಿಗಳಿಗೆ/ಸ್ಥಳೀಯ ಪಂಚಾಯತ್ ಅಧಿಕಾರಿ ತಕ್ಷಣವೇ ಮಾಹಿತಿ ನೀಡುವುದು.

4. ಪಶುವೈದ್ಯರ ಸಲಹೆಯಂತೆ ರೋಗಗ್ರಸ್ತ ಪ್ರಾಣಿಗಳಿಗೆ ಸೂಕ್ತ ಚಿಕಿತ್ಸೆಯನ್ನು ಕೊಡಿಸುವುದು.
5. ಉಳಿದ ಪ್ರಾಣಿಗಳಿಗೆ ಲಸಿಕೆ ಹಾಕಿಸುವುದು.

6. ವಲಸೆ ಕುರಿಗಾರರು ರೋಗ ಪೂರ್ಣವಾಗಿ ಗುಣವಾಗುವವರೆಗೆ ರೋಗಮುಕ್ತ ಪ್ರದೇಶಗಳಿಗೆ ತೆರಳಬಾರದು.

7. ಶೇ 100 ಎಲ್ಲಾ ಕುರಿ/ಮೇಕೆಗಳಿಗೆ ಲಸಿಕೆ ಹಾಕಿಸುವುದರಿಂದ ಮಂದೆಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಮೂಢನಂಬಿಕೆಗಳು:

ಸಿಡುಬಿನಿಂದ ಮರಣಿಸಿದ ಕುರಿ/ಮೇಕೆಗಳ ಶವಗಳನ್ನು ಊರ ಹೊರಗಿನ ಮರಗಳಿಗೆ ನೇತು ಹಾಕುವುದು ಪದೇ ಪದೇ (ಪ್ರತಿ ತಿಂಗಳು) ಲಸಿಕೆ ಹಾಕಿಸುತ್ತಿದ್ದರೆ ರೋಗ ನಿಯಂತ್ರಣಕ್ಕೆ ಬರುತ್ತದೆ.

2}ಕುರಿ ಮತ್ತು ಮೇಕೆಗಳಲ್ಲಿ ಕಾಯಿಲೆಗಳು: ಬರದಂತೆ ಅನುಸರಿಸಬೇಕಾದ ಕ್ರಮಗಳು:

• ವೇಳಾಪಟ್ಟಿಯಂತೆ ಲಸಿಕೆಗಳನ್ನು ಹಾಕಿಸುವುದು.

* ಲಸಿಕಾ ಕಾರ್ಯಕ್ರಮಕ್ಕೆ ಮುಂಚೆ ಜಂತುನಾಶಕ ಔಷಧಿಗಳನ್ನು ಪಶುವೈದ್ಯರ ಸಲಹೆಯಂತೆ ನೀಡುವುದು.

* ರೋಗ ಪೀಡಿತ ಪ್ರದೇಶಗಳಿಗೆ ವಲಸೆ ಹೋಗದಿರುವುದು.

• ಬಯಲು ಪ್ರದೇಶದಲ್ಲಿರುವಾಗ ರಾತ್ರಿ ಮಂದೆಯಲ್ಲಿ ಬೇವಿನ ಸೊಪ್ಪಿನ ಹೊಗೆ ಹಾಕುವುದು (ಕ್ಯುಲಿಕಾಯ್ ನೊಣಗಳು ಬಾರದಂತೆ)

* ಬೀಜದ ಟಗರು/ಹೋತಗಳನ್ನು, ಹೆಣ್ಣು ಕುರಿ/ಮೇಕೆಗಳನ್ನು
ಸಂವರ್ಧನೆಗೆ ಖರೀದಿಸುವಾಗ ಪಶುವೈದ್ಯರ ಸಲಹೆ/ಸೂಚನೆ

• ಕಂದು ರೋಗಕ್ಕೆ ರಕ್ತ ಪರೀಕ್ಷೆ ಮಾಡಿಸಿ,

• ತಳಿನೀತಿ ಅನುಸಾರ ಪ್ರದೇಶಕ್ಕೆ ಸೂಕ್ತವಾದ ತಳಿಯನ್ನು ಸಾಕುವುದು.

*ಒಳಸಂಕರಣವನ್ನು ತಡೆಯುವ ಸಲುವಾಗಿ ಟಗರುಗಳನ್ನು 2. ವರ್ಷಕ್ಕೊಮ್ಮೆ ಬದಲಿಸುವುದು.

* ಕುರಿಗಳು ನಿರೋಗಿಯಾಗಿ ಬದುಕಿ ಅಧಿಕ ಉತ್ಪನ್ನ ಮತ್ತು ಆದಾಯ ನೀಡಬೇಕಾದರೆ ಸರಿಯಾದ ಆಹಾರ ಒದಗಿಸಬೇಕು.

ಜವಳು ಇಲ್ಲದ ಭೂಮಿಯಲ್ಲಿ ಚೊಕ್ಕಟವಾದ ಹುಲ್ಲುಗಾವಲುಗಳಲ್ಲಿ ಮೇಯಿಸಬೇಕು. • ಶುರಿಗಳಿಗೆ ಹರಿಯುವ ನೀರಿನಲ್ಲಿ ನೀರು ಕುಡಿಸಬೇಕು. ಈ

ಸೌಕರ್ಯ ಇಲ್ಲದಿದ್ದರೆ ಶುಚಿಯಾದ ನೀರನ್ನು ಒದಗಿಸಬೇಕು.
* ಕುರಿಗಳಿಗೆ ನೀಡುವ ಆಹಾರದಲ್ಲಿ ಒಮ್ಮಿಂದೊಮ್ಮೆ ಬದಲಾವಣೆ ಮಾಡಬಾರದು

* ಯಾವುದೇ ರೋಗ ತಗುಲಿದ ಕುರಿಯನ್ನು ಕೂಡಲೇ ನಿರೋಗಿ ಕುರಿಗಳಿಂದ ದೂರ ಹಾಗೂ ಪ್ರತ್ಯೇಕವಾಗಿಡಬೇಕು.

• ಕುರಿಗಳಲ್ಲಿ ಪರೋಪ ಜೀವಿಗಳ ನಿರ್ಮೂಲಕ್ಕಾಗಿ ಕನಿಷ್ಠ ಪಕ್ಷ ವರ್ಷದಲ್ಲಿ ಮೂರು ಬಾರಿ ಸೂಕ್ತ ಔಷಧಿ ನೀಡಬೇಕು. ಪರೋಪ ಜೀವಿಗಳ ವಿರುದ್ಧದ ಈ ಔಷದೋಪಚಾರವನ್ನು ಬಹುತೇಕ ಬೇಸಿಗೆ ಅಂತ್ಯಗೊಂಡ ತಕ್ಷಣ ಬೀಳುವ ಮಳೆಯ ನಂತರ ಮುಂಗಾರು ಮತ್ತು ಹಿಂಗಾರು ಮಳೆಯ ಪ್ರಾರಂಭದಲ್ಲಿ ನೀಡಬೇಕು.

• ಸಾಂಕ್ರಾಮಿಕ ರೋಗ ತಗುಲಿದ ಕುರಿಯ ಹಿಕ್ಕೆ, ರಕ್ತ, ಜೊಲ್ಲು ಮೂತ್ರ ಇತ್ಯಾದಿಯು ಆರೋಗ್ಯವಂತ ಕುರಿಗಳ ಮತ್ತು ನೀರು ಮೇವಿನ ಜೊತೆ ಬೆರೆಯದಂತೆ ಸುಡಬೇಕು ಅಥವಾ ರೋಗಾಣು ನಾತಕ ಔಷಧ ರಾಸಾಯನಿಕ ಬಳಸಿ ಸಂಪರ್ಕ ತಡೆಗಟ್ಟಬೇಕು.

* ಸಾಂಕ್ರಾಮಿಕ ರೋಗದಿಂದ ಸತ್ತ ಕುರಿಯನ್ನು ಜಲಾಶಯ, ಹುಲ್ಲುಗಾವಲುಗಳಿಂದ ಮಾರವಿರುವ ಸ್ಥಳದಲ್ಲಿ ಸುಟ್ಟುಬಿಡಬೇಕು ಅಥವಾ ಆಳವಾದ ಗುಂಡಿಯಲ್ಲಿ ಸುಣ್ಣದ ಜತೆ ಹೂಳಬೇಕು. ಅಂತಹ ಕುರಿಗಳ ಚರ್ಮವನ್ನು ಯಾವ ಕಾರಣಕ್ಕೂ ಉಪಯೋಗಿಸಬಾರದು.ಕುರಿ, ಮೇಕೆ ಮಾರುಕಟ್ಟೆ

ಕುರಿ/ಮೇಕೆ ಸಾಕಾಣಿಕೆಯು ರೈತರಿಗೆ ನಿರಂತರ ಹಾಗೂ ಖಚಿತವಾದ ಆದಾಯ ತರುವಂತ ಕಸುಬಾಗಿದೆ. ಹೈನುಗಾರರಿಗೆ ಹಾಲಿನ ಬೆಲೆಯನ್ನು ವೈಜ್ಞಾನಿಕವಾಗಿ ಕೊಬ್ಬಿನ ಅಂತದ ಮೇಲೆ ಬೆಲೆ ನಿಗದಿ ಮಾಡಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ನಿಶ್ಚಿತ ಬೆಲೆಗೆ ಮಾರಾಟ ಮಾಡುವ ಪದ್ಧತಿಯನ್ನು ಹಾಲು ಮಹಾಮಂಡಳಿ ಅಳವಡಿಸಿಕೊಂಡಿದೆ.

ಕುರಿ ಮೇಕೆ ಸಾಕಾಣಿಕೆದಾರರಿಗೂ ಸಹ ವೈಜ್ಞಾನಿಕವಾಗಿ ಮಾರಾಟದ ವ್ಯವಸ್ಥೆ ರೂಪಿಸಲು ಸರ್ಕಾರವು ರಚಿಸಿದ ಕುರಿ, ಮೇಕೆ ಮಾರುಕಟ್ಟೆ ಸುಧಾರಣಾ ಸಮಿತಿಯು ಸೂಕ್ತ ಶಿಫಾರಸ್ಸುಗಳನ್ನು ಮಾಡಿದ್ದು ಅವುಗಳನ್ನು ಅನುಷ್ಠಾನ ಮಾಡಲಾಗುತ್ತಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಮತ್ತು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ರಾಜ್ಯದ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ (ಎ.ಪಿ.ಎಂ.ಸಿ) ವೈಜ್ಞಾನಿಕ ಮಾರುಕಟ್ಟೆ ವ್ಯವಸ್ಥೆ ಮಾಡಲು ಹಂತ ಹಂತವಾಗಿ ಆಯ್ದ ಮಾರುಕಟ್ಟೆಗಳಲ್ಲಿ ಜಾರಿಗೆ ತರಲಾಗುತ್ತದೆ. ವಾರದ ಸಂತೆಗಳಲ್ಲೂ ಇದೇ ಮಾರಾಟದ ವ್ಯವಸ್ಥೆ ಮಾಡಲಾಗುತ್ತದೆ.

* ಕುರಿ, ಮೇಕೆ ಮಾರಾಟ ಮಾಡಲು ಮಾರುಕಟ್ಟೆಗೆ ಬರುವ ರೈತರು ಬಂದಾಕ್ಷಣ ಕುರಿ, ಮೇಕೆಗಳ ಆರೋಗ್ಯ ತಪಾಸಣೆಯನ್ನು ಪಶುವೈದ್ಯಾಧಿಕಾರಿಗಳು ಮಾಡಿ ಆರೋಗ್ಯವಂತ ಪ್ರಾಣಿಗಳನ್ನು ಮಾತ್ರ ಮಾರಾಟಕ್ಕೆ ಬಿಡಲಾಗುವುದು. ರೋಗ ಪೀಡಿತ ಪ್ರಾಣಿಗಳನ್ನು ಬೇರ್ಪಡಿಸಲಾಗುವುದು.

* ಪರೀಕ್ಷೆಯ ನಂತರ ಕುರಿ, ಮೇಕೆಗಳ ಸಜೀವ ದೇಹ ತೂಕವನ್ನು ಸ್ವಯಂಚಾಲಿತ ತೂಕದ ಯಂತ್ರಗಳಿಂದ ಮಾಡಿ ಅವುಗಳ ದೇಹ ತೂಕ ಮತ್ತು ಮಾರಾಟದ ಬೆಲೆಯನ್ನು ತಿಳಿಸುವಡಿಜಟಲೀಕರಿಸಿದ ಗುರ್ತಿನ ಚೀಟಗಳನ್ನು ಪ್ರತಿ ಪ್ರಾಣಿಯ ಕೊರಳಿಗೆ ಹಾಕಲಾಗುವುದು, ಕೊಳ್ಳುವವರು ಮತ್ತು ಮಾರಾಟಗಾರರಿಗೆ ಒಪ್ಪಿಗೆಯಾದ ಬೆಲೆಗೆ ಮಾರಾಟ

* ಸಜೀವ ದೇಹ ತೂಕದ 50% ಮಾಂಸವಿರುತ್ತದೆಯೆಂದು ಭಾವಿಸಿ ಅಂದಿನ ಮಾರುಕಟ್ಟೆಯ ಮಾಂಸದ ಬೆಲೆ ಆಧಾರದ ಮೇಲೆ ಕುರಿ, ಮೇಕೆಗಳ ಮಾರಾಟದ ಬೆಲೆಯನ್ನು ನಿಗದಿಗೊಳಿಸಲಾಗುತ್ತದೆ. ಅಲ್ಲದೆ ತಳಿ, ವಯಸ್ಸು, ಲಿಂಗದ ಅನುಗುಣವಾಗಿಯೂ ಬೆಲೆ ನಿಗದಿಯನ್ನು ತಜ್ಞರಿಂದ ಕೂಡಿದ ಬೆಲೆ ನಿಗದಿ ಸಮಿತಿಯು ಮಾಡುತ್ತದೆ.

* ಮಾರುಕಟ್ಟೆಗೆ ಬರುವ ಪ್ರತಿ ಕುರಿ, ಮೇಕೆಗೆ ರೂ 5.00 ಶುಲ್ಕ ವಿಧಿಸಿ ರೂ 100ನ್ನು ಎ.ಪಿ.ಎಂ.ಸಿ ಗೆ ನೀಡಿ ರೂ 400 ಅನ್ನು ನಿಗಮದಿಂದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಿಗೆ ನೀಡಲಾಗುವುದು. ಇದರಿಂದ ಸಂಘಗಳನ್ನು ಸಶಕ್ತಗೊಳಿಸಲಾಗುವುದು.

* ಕುರಿ, ಮೇಕೆಗಳನ್ನು ತೂಕ ಮಾಡಲು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಯನ್ನೇ ನಿಯೋಜಿಸಲಾಗುವುದು. ಇದರಿಂದ ಕುರಿ, ಮೇಕೆ ಸಾಕಾಣಿಕೆದಾರರು ಮಾರುಕಟ್ಟೆಯಲ್ಲಿ ಸರಳವಾಗಿ ಮೋಸವಾಗದೆ ವೈಜ್ಞಾನಿಕ, ಪಾರದರ್ಶಕವಾಗಿ ಹೆಚ್ಚಿನ ಬೆಲೆ ಸಿಗುವಂತಾಗುತ್ತದೆ.

Leave a Reply

Your email address will not be published. Required fields are marked *