ಮೊಬೈಲ್ ಇದ್ದರೆ ಕೃಷಿ ಸುದ್ದಿ ನಿಮ್ಮ ಕೈಯಲ್ಲಿ!
ಕೃಷಿಯಲ್ಲಿ ರೈತೋಪಯೋಗಿ ಆ್ಯಪ್ಗಳು ಕೃಷಿಯಲ್ಲಿನ ಅಡೆತಡೆಗಳನ್ನು ನಿವಾರಿಸಿಕೊಳ್ಳಲು ಹಲವಾರು ಆಪ್ ಗಳು ಲಭ್ಯ ಇವೆ ಇದರಿಂದ ಬೆಳೆ ವಿಮೆ ಆಗಿರಬಹುದು ಮತ್ತು ರೋಗಗಳ ನಿರ್ವಹಣೆ ಕೀಟಬಾದೆಗಳ ನಿರ್ವಹಣೆ ರೈತರ ಕಾಲ್ ಸೆಂಟರ್ ಮಾರುಕಟ್ಟೆಯ ಧಾರಣೆ ತಮ್ಮ ಮೊಬೈಲ್ ನಲ್ಲಿ ಪಡೆದುಕೊಳ್ಳಬಹುದು ಇಂತಹ ತಂತ್ರಜ್ಞಾನವು ಬಹಳ ದಿನಗಳಿಂದ ಚಾಲ್ತಿಯಲ್ಲಿ ಇರುತ್ತದೆ
ನಮಸ್ಕಾರ ರೈತ ಬಾಂಧವರೇ!
ನಾವು ಚರ್ಚಿಸಲ್ಪಡುವ ವಿಷಯವೇನೆಂದರೆ ರೈತರು ತಮಗೋಸ್ಕರ ಹಲವಾರು ಸರ್ಕಾರದಿಂದ ಮಾನ್ಯತೆ ಪಡೆದಿರುವ ಕೆಲವೊಂದು ಆಪ್ಸ್ ಗಳು ಮೊಬೈಲಲ್ಲಿ ಉಪಯೋಗಿಸಲು ಇರುತ್ತವೆ ಅವುಗಳು ಯಾವ ರೀತಿ ಉಪಯೋಗವಿದೆ ಎಂಬುದನ್ನು ರೈತರು ಇದನ್ನು ತಿಳಿದುಕೊಳ್ಳಲೇಬೇಕು ಅದರಲ್ಲಿ ನನಗೆ ಗೊತ್ತಿರುವಷ್ಟು ವಿಷಯವನ್ನು ಹಂಚಿಕೊಂಡಿದ್ದೇನೆ ಇದರಿಂದ ಕೃಷಿಗೆ ಸಂಬಂಧಪಟ್ಟ ಮಾಹಿತಿಯನ್ನು ಅಪ್ಸ್ ಗಳಲ್ಲಿ ಪಡೆಯಬಹುದು.
ಮಾಹಿತಿ ತಂತ್ರಜ್ಞಾನವು ಇಂದಿನ ಆಧುನಿಕ ಜಗತ್ತಿನಲ್ಲಿ ಪ್ರತಿ ಕ್ಷೇತ್ರದಲ್ಲಿ ಪರಸರಿಸಿದೆ. ಅದರಂತೆ ಕೃಷಿ ಕ್ಷೇತ್ರದಲ್ಲಿಯೂ ಸಹ ಮಾಹಿತಿ ತಂತ್ರಜ್ಞಾನವನ್ನು ಈಗ ಹೆಚ್ಚಿನ ಪ್ರಮಾಣದಲ್ಲಿ ರೈತರು ಬಳಸುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಸ್ಮಾರ್ಟಫೋನ್, ಲ್ಯಾಪಟಾಪ್ ಮತ್ತು ಟ್ಯಾಬ್ಲೆಟ ಸಾಧನೆಗಳು. ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟಫೋನ್ ಅವಶ್ಯಕವಾಗಿದೆ ಇದನ್ನು ರೈತಬಾಂಧವರು ಕೃಷಿ ಚಟುವಟಿಕೆಗಳ ಮಾಹಿತಿ, ಕೃಷಿ ಉತ್ಪನ್ನಗಳ ಮಾರುಕಟ್ಟೆಂದು ಮಾಹಿತಿ ತಿಳಿಯಲು ಉಪಯೋಗಿಸಬಹುದು. ಡಿಜಿಟಲ್ ಉಪಯೋಗಿಸುವ ಕೆಲವು ಮೋಬೈಲ ಆಫ್ ಮತ್ತು ಜಾಲತಾಣಗಳ ಬಳಕೆ ಮತ್ತು ಉಪಯೋಗಿಸುವ ವಿಧಾನಗಳ ಬಗ್ಗೆ ಈ ಒಂದು ಲೇಖನದಲ್ಲಿ ಪ್ರಯತ್ನಿಸಲಾಗಿದೆ. ಇಂಟರನೆಟ ಸಂಪರ್ಕ ಇಲ್ಲದ ರೈತರು ಸಹ ಕಿಸಾನ ಕಾಲ್ ಸೆಂಟರ (1800-180-1551) ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯದ ರೈತ ಚೇತನ ಸಹಾಯವಾಣಿ (1800-425- 1150)ಯಿಂದ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಮಾಹಿತಿ ತಂತ್ರಜ್ಞಾನವು ಒಂದು ವರವಾಗಿ ಪರಿಣಮಿಸಿದೆ.
1)ಕಿಸಾನ್ ಸುವಿಧಾ :
ಈ ಮೊಬೈಲ್ ಆ್ಯಫ್ 2016 ರಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಇದರ ಸಹಾಯದಿಂದ ರೈತರು ಪ್ರಸಕ್ತ ಹವಾಮಾನ, ಮುಂದಿನ ಐದು ದಿನಗಳ ಹವಾಮಾನ, ಹತ್ತಿರದ ಪಟ್ಟಣಗಳಲ್ಲಿರುವ ಮಾರುಕಟ್ಟೆ ದರ, ರಾಜ್ಯದ ಗರಿಷ್ಠ ಮತ್ತು ರಾಷ್ಟ್ರದ ಗರಿಷ್ಠ ದರದ ಕುರಿತು ಮಾಹಿತಿ ಒದಗಿಸುತ್ತದೆ. ಕೃಷಿ ಸಲಹೆಗಳು, ಸಸ್ಯ ಸಂರಕ್ಷಣೆ, ಸಮಗ್ರ ಪೀಡೆ ನಿರ್ವಹಣೆ, ಮಣ್ಣು ಆರೋಗ್ಯ ಚೀಟಿ ಮಾಹಿತಿ, ಬೆಳೆ ವಿಮೆಗೆ ಸಂಬಂದಿಸಿದ ಮಾಹಿತಿ ಹಾಗೂ ಕೃಷಿ ಯಂತ್ರೋಪಕರಣಗಳ ಮಾಹಿತಿ ನೀಡುತ್ತದೆ. ದೇಶದ ನಾನಾ ಭಾಷೆಗಳಲ್ಲಿ ಈ ಆಫ್ ಮಾಹಿತಿಯನ್ನು ನೀಡುತ್ತದೆ. ಈ ಆ್ಯಪನ್ನು ಗೂಗಲ್ ಪ್ಲೇಸ್ಟೋರನಿಂದ ಡೌನಲೋಡ ಮಾಡಿಕೊಳ್ಳಬಹುದು ಅಥವಾ ಕೆಳಗಿನ ಲಿಂಕದಿಂದ ಪಡೆದುಕೊಳ್ಳಬಹುದು.
2)ಪುಸಾ ಕೃಷಿ:
ಈ ಆ್ಯಪ ಸಹಾಯದಿಂದ ರೈತರಿಗೆ ಕೃಷಿ ವಿಜ್ಞಾನಿಗಳು ಮಾಡಿದ ಹೊಸ ಸಂಶೋಧನೆಗಳನ್ನು ವಾಣಿಜ್ಯಕರಣಗೊಳಿಸಲು ಲಭ್ಯವಿರುವ ತಂತ್ರಜ್ಞಾನ
ಮತ್ತು ಮಾರುಕಟ್ಟೆ ಮಾಡಲು ಲಭ್ಯವಿರುವ
ಹೊಸ ತಂತ್ರಜ್ಞಾನದ ಕುರಿತು ಮಾಹಿತಿ ಒದಗಿಸುತ್ತದೆ. ಈ ತಂತ್ರಾಂಶದಲ್ಲಿ ತಳಿಗಳು, ಉತ್ಪಾದನಾ ತಾಂತ್ರಿಕತೆ, ಸಸ್ಯ ಸಂರಕ್ಷಣೆ ತಂತ್ರಜ್ಞಾನ, ಕೃಷಿ ಯಂತ್ರಗಳ ವಿವರಗಳನ್ನು ತಿಳಿದುಕೊಳ್ಳಬಹುದು. ಈ ಆ್ಯಪನ್ನು ಗೂಗಲ್ ಪ್ಲೇಸ್ಟೋರನಿಂದ ಡೌನಲೋಡ ಮಾಡಿಕೊಳ್ಳಬಹುದು.
3) ಎಂ-ಕಿಸಾನ್:
.” ಈ ಮೊಬೈಲ್ ಆ್ಯಪ ತಂತ್ರಜ್ಞಾನವನ್ನು ಸಿ-ಡ್ಯಾಕ ಪುಣೆ ಇವರು ಅಭಿವೃದ್ಧಿ ಪಡಿಸಿರುತ್ತಾರೆ. ಈ ತಂತ್ರಜ್ಞಾನದ ಸಹಾಯದಿಂದ ಕೃಷಿಯಲ್ಲಿ ನುರಿತ * ತಂತ್ರಜ್ಞರಿಂದ ಸಲಹೆಗಳನ್ನು ರೈತರು ಮತ್ತು ಸರ್ಕಾರಿ ಅಧಿಕಾರಿಗಳ ಮೊಬೈಲಗಳಿಗೆ ಪಠ್ಯ ಸಂದೇಶಗಳನ್ನು ಕಳುಹಿಸಲಾಗುತ್ತದೆ. ಕೃಷಿ ವಿಜ್ಞಾನ ಕೇಂದ್ರ, ವಿಜಯಪುರ ಈ ತಂತ್ರಜ್ಞಾನದ ಸಹಾಯದಿಂದ ವಿಜಯಪುರ ಜಿಲ್ಲೆಯ ಸುಮಾರು 45000 ರೈತರಿಗೆ ಈ ಪಠ್ಯ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಈ ಆ್ಯಪನ್ನು ಗೂಗಲ್ ಪ್ಲೇಸ್ಟೋರನಿಂದ ಡೌನಲೋಡ ಮಾಡಿಕೊಳ್ಳಬಹುದು.
4)ಬೆಳೆ ವಿಮೆ ಮೊಬೈಲ್ ಅಪ್ಲಿಕೇಶನ್:
ಈ ಆಪ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು ಡೌನ್ಲೋಡ್ ಮಾಡಿಕೊಂಡು ರೈತರು ಬೆಳೆದಿರುವಂತಹ ಬೆಳೆಗಳಿಗೆ ಹಾನಿ ಉಂಟು ಆದಲ್ಲಿ ಈ ಆಪ್ ನಲ್ಲಿ ರೈತರು ಅಪ್ಲೋಡ್ ಮಾಡಬೇಕಾಗುತ್ತದೆ ತಮಗೆ ದೊರೆಯುವಂತಹ ವಿಮೆ ಸೌಲಭ್ಯ ದೊರೆಯುತ್ತದೆ ವಿಮೆಯನ್ನು ಪಡೆಯಬಹುದು
ಹೆಸರೇ ಸೂಚಿಸುವಂತೆ ಇದು ಬೆಳೆ ವಿಮೆಗೆ ಸಂಬಂಧಿಸಿದ ಮಾಹಿತಿ ಒದಗಿಸುವ ಆ್ಯಪ್ ಅಧಿಸೂಚಿತ ಬೆಳೆಗಳ ಇನ್ಸೂರೆನ್ನ ಪ್ರೀಮೀಯಂ ಅನ್ನು ಲೆಕ್ಕ ಹಾಕಲು ಈ ಆಫ್ ನೆರವಾಗುತ್ತದೆ. ಕಟ್-ಆಫ್ ಡೇಟ್ಲಿ ಮತ್ತು ಬೆಳೆ ಹಾಗೂ ಸ್ಥಳದ ಬಗ್ಗೆ ಕಂಪನಿ ಸಂಪರ್ಕದ ಬಗ್ಗೆ ಮಾಹಿತಿ ನೀಡುತ್ತದೆ. ಈ ಆ್ಯಪನ್ನು ಗೂಗಲ್ ಪ್ಲೇಸ್ಟೋರನಿಂದ ಡೌನಲೋಡ ಮಾಡಿಕೊಳ್ಳಬಹುದು.
5) ಅಗ್ರಿ ಮಾರ್ಕೆಟ್ ಆಪ್:
(ಕೃಷಿ ಮಾರುಕಟ್ಟೆ):
ಕ್ರಾಫ್ ಇನ್ಸೂರೆನ್ಸ್ ಜತೆಗೆ ಅಗ್ರಿ ಮಾರ್ಕೇಟ ಆ್ಯಪ್ ಅನ್ನು ಭಾರತ
ಸರಕಾರವು ಬಿಡುಗಡೆ ಮಾಡಿತ್ತು. ಬೆಳೆಗಳ ಧಾರಣೆ ಬಗ್ಗೆ ಸಂಪೂರ್ಣವಾದ ಮಾಹಿತಿ ರೈತರು ತಮ್ಮ ಮೊಬೈಲ್ ನಲ್ಲಿ ಪಡೆದುಕೊಳ್ಳಬಹುದು ಯಾವುದೇ ಬೆಳೆಯಾಗಲಿ ಅದರ ಪಡೆಯಬಹುದು ಮಾರುಕಟ್ಟೆಯ ಧಾರಣೆಯನ್ನು ನೀಡುವ ಉದ್ದೇಶದಿಂದಲೆ ಇದನ್ನು ಅಭಿವೃದ್ಧಿ ಪಡಿಸಲಾಗಿದೆ. ರೈತರು ತಮ್ಮ ಸುತ್ತಲಿನ ಅಂದರೆ 50 ಕಿ.ಮಿ. ವ್ಯಾಪ್ತಿಯ ಮಾರುಕಟ್ಟೆಯಲ್ಲಿರುವ ಬೆಳೆಗಳ ಧಾರಣೆಯನ್ನು ಇದರ ಮೂಲಕ ತಿಳಿಯಬಹುದು. ಇದಲ್ಲದೇ, ಯಾವುದೇ ಮಾರುಕಟ್ಟೆ ಬೆಳೆಯ ದರವನ್ನು ಸಹ ನೋಡಲು ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಆಪ್ ನಿಂದ ಮೊಬೈಲ್ನಲ್ಲಿ ದಿನದಿಂದ ದಿನಕ್ಕೆ ಏರುಪೇರು ಆಗುವಂತಹ ದವಸ ಧಾನ್ಯಗಳ ಎಷ್ಟು ರೇಟ್ ಎಂದು ತಿಳಿದುಕೊಳ್ಳಬಹುದು ಧಾನ್ಯಗಳಈ ಆ್ಯಪ್ ಅನ್ನು ಗೂಗಲ್ ಪ್ಲೇಸ್ಟೋರನಿಂದ ಡೌನಲೋಡ ಮಾಡಿಕೊಳ್ಳಬಹುದು ಅಥವಾ ಕೆಳಗಿನ ಲಿಂಕದಿಂದ ಕ ಪಡೆದುಕೊಳ್ಳಬಹುದು.
6) ಡಿಜಿಟಲ್ ಮಂಡಿ ಇಂಡಿಯಾ:
ಈ ಮೊಬೈಲ್ ತಂತ್ರಜ್ಞಾನದ ಸಹಾಯದಿಂದ ಭಾರತೀಯ ಮಾರುಕಟ್ಟೆ ಇತ್ತೀಚಿನ ಬೇರೆ ಬೇರೆ ರಾಜ್ಯ ಮತ್ತು ಜಿಲ್ಲೆಗಳ ಮಾಹಿತಿ ಪಡೆಯಲು ಸಹಾಯಕವಾಗುತ್ತದೆ. ಉಪಯೋಗಿಸಲು ಬಹಳ ಸರಳ, ರೈತ ಸ್ನೇಹಿ, ವರ್ತಕರಿಗೂ ಅನುಕೂಲಕವಾಗಿದೆ. ತಂತ್ರಾಂಶದ ಪ್ರಮುಖ ಅಂಶಗಳು ಈ ಕೆಳಗಿನಂತಿದೆ. ಈ
ಬೇರೆ ಬೇರೆ ಸರಕುಗಳು ವಿವರ ನೋಡಲು
ಬೇರೆ ರಾಜ್ಯದ ದರಗಳನ್ನು ವೀಕ್ಷಿಸಲು
ತಮಗೆ ಬೇಕಾದ ನಿರ್ದಿಷ್ಟ ಸರಕಿನ ಮಾಹಿತಿ ಪಡೆಯಲು
ಈ ದರಗಳನ್ನು ಒಂದು ಕಡೆ ಸಂಗ್ರಹಿಸಲು
ಭಾರತ ಸರ್ಕಾರದ Agmarknet.nic.in ಪೋರ್ಟಲಗೆ ಡಾಟಾ ಜೋಡಿಸಲು ಸಹಕಾರಿಯಾಗಿದೆ.
7) ಕರ್ನಾಟಕ ಭೂಮಿ:
ಈ ತಂತ್ರಾಂಶದ ಸಹಾಯದಿಂದ ರೈತರು ತಮ್ಮ ಜಮೀನಿನ ದಾಖಲಾತಿ ಪಡೆಯಲು ಸಲ್ಲಿಸಿದ ಅರ್ಜಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಎಸ್.ಎಂ.ಎಸ್. ಅಥವಾ ಇಂರ್ಟನೆಟ ಮುಖಾಂತರ ತಕ್ಷಣ ಮಾಹಿತಿಯನ್ನು ಪಡೆಯಬಹುದು.
8) ಪಶು ಪೋಷಣ ಆಪ್:
ಪಶು ಪೋಷಣ:* (Pashu Poshan):
ಅಂಡ್ರಾಯಿಡ್ ತಂತ್ರಾಂಶದ ಆಧಾರಿತ ತಂತ್ರಜ್ಞಾನದಿಂದ ಪಶುಗಳ ತಳಿಗಳ ಆಧಾರದ ಮೇಲೆ ಹಾಲಿನ ಉತ್ಪಾದನೆ, ಕೊಬ್ಬಿನ ಪ್ರಮಾಣ. ಆಹಾರ ಕ್ರಮ ಇತ್ಯಾದಿಗಳ ಕುರಿತು ಸಲಹೆಗಳನ್ನು, ಸ್ಥಳಿಯವಾಗಿ ದೊರೆಯುವ ಮೇವು ಮತ್ತು ಖನಿಜಗಳ ಮಿಶ್ರಣದ ಕುರಿತು ಮಾಹಿತಿಯನ್ನು ಪಡೆಯಬಹುದಾಗಿದೆ. ಈ ಆ್ಯಪನ್ನು ಗೂಗಲ್ ಪ್ಲೇಸ್ಟೋರನಿಂದ ಡೌನಲೋಡ ಮಾಡಿಕೊಳ್ಳಬಹುದು.
9) ಪಿಎಂ ಕಿಸಾನ್ ಆಪ್
ಕಿಸಾನ್ ಕರೆ ಕೇಂದ್ರಗಳು:
ರೈತನಿಗಾಗಿ ಕಾಲ್ ಸೆಂಟರ್ಗಳು ಸೇವೆಯಲ್ಲಿ ಇರುತ್ತವೆ
ಕಿಸಾನ ಕಾಲ ಸೆಂಟರ್ 21.01.2004 ಕೃಷಿ ಮತ್ತು ಸಹಕಾರ ಇಲಾಖೆ ಅಭಿವೃದ್ಧಿಪಡಿಸಿರುತ್ತಾರೆ. ಈ ತಂತ್ರಾಂಶದ ಮುಖ್ಯ ಗುರಿ ರೈತರಿಗೆ ವಿಸ್ತರಣಾ ಸೇವೆಗಳನ್ನು ಸ್ಥಳೀಯ ಭಾಷೆಗಳಲ್ಲಿ ಒದಗಿಸುವುದು ಇದರ ಗುರಿಯಾಗಿದೆ. ರೈತರು ಉಚಿತ ಸಹಾಯವಾಣಿ ಸಂಖ್ಯೆಗಳಾದ 1800-180-1551 ಸಂಪರ್ಕಿಸಿ ಕೃಷಿ ಪದವಿದರರಿಂದ ಮಾಹಿತಿಯನ್ನು ನೀಡಲಾಗುವುದು ಒಂದು ವೇಳೆ ರೈತರಿಗೆ ಹೆಚ್ಚಿನ ಮಾಹಿತಿ ಅವಶ್ಯಕವಿದ್ದಲ್ಲಿ ಅದನ್ನು ಲೆವೆಲ-2 ಮತ್ತು ಲೆವೆಲ-3 ಅಧಿಕಾರಿಗಳಿಂದ ಮಾಹಿತಿಯನ್ನು ನೀಡಲಾಗುವುದು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಗ್ರಿವಾರ ರೂಮ್ ಮತ್ತು ರೈತ ಚೇತನ ಸಹಾಯವಾಣಿ ಸಂಖ್ಯೆ 1800-425-1150 ಕೃಷಿ ವಿಜ್ಞಾನ ಕೇಂದ್ರ, ವಿಜಯಪುರ ಮಾಹಿತಿ ತಂತ್ರಜ್ಞಾನದ ಪಕ್ಷಿನೋಟ
ರೈತರ ಉಪಯೋಗಕ್ಕಾಗಿ ಕೃಷಿ ವಿಜ್ಞಾನ ಕೇಂದ್ರ, ವಿಜಯಪುರ ತನ್ನದೇ ಆದ ವೈಬಸೈಟ ಹೊಂದಿರುತ್ತದೆ. vijayapura.org ಇದರಲ್ಲಿ ಫೀಡಬ್ಯಾಕ ಎಂಬ ಅವಕಾಶ ಕಲ್ಪಿಸಲಾಗಿದ್ದು, ಇದರಿಂದ, ರೈತರು ತಮ್ಮ ಹೆಸರು, ಊರು, ಮೊಬೈಲ ಸಂಖ್ಯೆ, ಇ-ಮೇಲ ಐಡಿ ಮತ್ತು ಅವರ ಪ್ರಶ್ನೆಗಳನ್ನು ತುಂಬಿ ಸಲ್ಲಿಸಿದಲ್ಲಿ ಅವರಿಗೆ ಮರು ಉತ್ತರವನ್ನು ಅವರ ಇ-ಮೇಲ್ ಐಡಿಗೆ ಕಳುಹಿಸಲಾಗುವುದು.
10) ಎಂ ಕಿಸಾನ ವೆಬ್ಸೈಟ್:
ಸಹಾಯದಿಂದ ಕೃಷಿ ವಿಜ್ಞಾನ ಕೇಂದ್ರವು ನೊಂದಣಿ ಮಾಡಿಸಿದ ಅ. ರೈತರ ಮೊಬೈಲ್ ಸಂಖ್ಯೆಗೆ ಕೃಷಿ ಸಂದೇಶಗಳನ್ನು ಕಳುಹಿಸಲಾತ್ತಿದೆ.
• ಭಾರತ ಸರಕಾರ ಅಭಿವೃದ್ಧಿ ಪಡಿಸಿರುವ ಕೆವಿಕೆ ಪೊರ್ಟಲನಿಂದ ಭಾರತಾದ್ಯಾಂತ ಕಾರ್ಯ ನಿರ್ವಹಿಸುತ್ತಿರುವ ಕೃಷಿ ವಿಜ್ಞಾನ ಕೇಂದ್ರಗಳ ಮಾಹಿತಿ ಹಾಗೂ ಅಲ್ಲಿ ರೈತರಿಸಿಗುವ ತಾಂತ್ರಿಕ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.
ಕೃಷಿ ವಿಜ್ಞಾನ ಕೇಂದ್ರದ ವಿಜಯಪುರ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ವಿಜಯಪುರ: 08352-230758