ದ್ರಾಕ್ಷಿಯ ಬಿಡು ವಿಜಯಪುರ

  ದ್ರಾಕ್ಷಿ ನಾಡು ಬಿಜಾಪುರ ದ್ರಾಕ್ಷಿ ನಾಡು ಎಂದು ಖ್ಯಾತಿ ಪಡೆದ ವಿಜಯಪುರ ನಗರದ ಎಲ್ಲಾ ರೈತ ಬಾಂಧವರಿಗೆ ನಮಸ್ಕಾರಗಳು  ಉನ್ನತ ಸ್ಥಾನಗಳನ್ನು ಹೊಂದಿರುವಂತಹ ದ್ರಾಕ್ಷಿ ಬಿಡು ಈಗ ಕರ್ನಾಟಕದಲ್ಲಿ ಅತಿ ಹೆಚ್ಚು ದ್ರಾಕ್ಷಿಯನ್ನು ಬೆಳೆಯುವ ನಾಡಾಗಿ ಹೊರಹೊಮ್ಮಿದೆ ಮತ್ತು ಅದೇ ರೀತಿ ಒಣ ದ್ರಾಕ್ಷಿ ಕೂಡ ಅತಿ ಹೆಚ್ಚು ಬೆಳೆಯುವ ನಾಡಿಗೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ ಅದರಲ್ಲಿ ದ್ರಾಕ್ಷಿ ಬೆಳೆಯಬೇಕಾದರೆ ರೈತರು ಹಲವಾರು ರೀತಿಯ ಆಧುನಿಕ ಕ್ರಮಗಳನ್ನು ನಿರ್ವಹಿಸುತ್ತಾರೆ ಬಿಜಾಪುರ ಜಿಲ್ಲೆಯ ತಿಕೋಟಾ ಹಾಗೂ ಬಬಲೇಶ್ವರ ತಾಲೂಕುಗಳು ಅತಿ ಉತ್ತಮವಾದಂತಹ ಮುಂದುವರೆದ ಹಳ್ಳಿಗಳಾಗಿವೆ ಐದರಿಂದ ಆರು ಟನ್ ಪ್ರತೀ ಎಕರೆಗೆ ಒಣ ದ್ರಾಕ್ಷಿ ರೈತರು ಬೆಳೆಯುತ್ತಿದ್ದಾರೆ ಇದು ಸಂತೋಷದ ವಿಚಾರವೂ ಕೂಡ ಇದು ನಮ್ಮ ನಾಡಿನ ಹೆಮ್ಮೆ ಹೆಚ್ಚಿಸುತ್ತದೆ

1}ಈಗ ಅಕ್ಟೋಬರ್  ದ್ರಾಕ್ಷಿ ಚಾಟನಿಯಲ್ಲಿ  ಪ್ರಮುಖ ಅಂಶ ಈ ಕೆಳಕಂಡ ಅಂಶಗಳು ಅತಿ ಉಪಯುಕ್ತ

ಯುರೋಪ್ ದೇಶದ ಮಾರುಕಟ್ಟೆಗಳಲ್ಲಿ ಇಲ್ಲಿಂದ ರಪ್ತಾದ ದ್ರಾಕ್ಷಿ ಹಣ್ಣಿಗೆ ಒಳ್ಳೆಯ ಅವಕಾಶವಿರುತ್ತದೆ ಏಕೆಂದರೆ ಕ್ರಿಸ್ಮಸ್ ಮತ್ತು ಹೊಸ ವರ್ಷ ಹಬ್ಬಗಳ ದಿನಾಚರಣೆಯಲ್ಲಿ ಒಳ್ಳೆಯ ಬೇಡಿಕೆ ಮತ್ತು ಒಳ್ಳೆಯ ಬೆಲೆ ಸಿಗುತ್ತದೆ ಈ ಈ ಪ್ರದೇಶಗಳಲ್ಲಿ ದೊರಕುವಂತೆ ಮಾಡಲು ಅಕ್ಟೋಬರ್ ಅಗಸ್ಟ್ ಒಂದರಲ್ಲಿ ಕೈಗೊಳ್ಳಬೇಕು ಅಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಮಳೆ ಮತ್ತು ಮೋಡಕವಿದ ವಾತಾವರಣ ಇರುವುದರಿಂದ  ಹೆಚ್ಚಾಗಿ ರೋಗ ಹಾನಿಕಾರಕ ಕೀಟ ತಗಲುವ ಸಾಧ್ಯತೆ ಇರುತ್ತದೆ ಬೇಗ ಚಾಟ್ನೇ ಮಾಡಿದ ದ್ರಾಕ್ಷಿ ಬೆಳೆಯ ಅತಿ ಕಡಿಮೆ ಉಷ್ಣಾಂಶಕ್ಕೆ ಸಿಲುಕುವುದಲ್ಲದೆ ದಿನದ ಅವಧಿಗಳು ಕೂಡ ಕಡಿಮೆ ಇರುವುದರಿಂದ ದ್ರಾಕ್ಷಿ ಹಣ್ಣಿನಲ್ಲಿ ಸಕ್ಕರೆ ಅಂಶ ಕೂಡ ಹೆಚ್ಚಾಗಿ ಬರುತ್ತದೆ ಮತ್ತು ದ್ರಾಕ್ಷಿ ಗೊಂಚಲುಗಳು ಹಸಿರಾಗುವ ಸಾಧ್ಯತೆಗಳಿರುತ್ತವೆ


ನಮ್ಮ ಪ್ರದೇಶಗಳಲ್ಲಿ ಹಳೆಯ ದ್ರಾಕ್ಷಿ ತಳಿಗಳನ್ನು ಬೆಳೆಯಲಾಗುತ್ತಿದ್ದು ಮತ್ತು ಸುಧಾರಿತ ತಳಿಗಳಾದ ಕಾಶ್ಮೀರಿ ಚೂರಿ ಸುನಾಕ ಮತ್ತು ಮಾಣಿಕ್ ಚಮ್ಮನ್ ಬೆಳೆ ಗಳನ್ನು ಬೆಳೆಯುತ್ತಿದ್ದಾರೆ ಇವುಗಳನ್ನು ಒಂದೆರಡು ವಾರ ಮುಂಚೆ ಕಟಾವು ಮುಂಚೆ ಕಟಾವು ಮಾಡಲಾಗುತ್ತಿದೆ ಈ ಚಳಿಗಳಲ್ಲಿ ಒಟ್ಟು ಕರಗುವ ಶರ್ಕರ ಪಿಷ್ಟ ಅಂಶವು ಶೇಕಡ 22 ರಿಂದ 24ರ ವರೆಗೆ
ರಫ್ತು ಮಾಡಲು ಶೇಕಡಾ 18ರಷ್ಟಿದ್ದರೂ ಸಹ ನಡೆಯುವುದರಿಂದ ಈ ತಳಿಗಳು ಸೂಕ್ತವಾಗಿವೆ

2}ಬೇಗನೆ ಕೈಗೊಳ್ಳಬೇಕಾದ ಚಾಟನಿ ಕಾರ್ಯಕ್ರಮ ಮತ್ತು ಸೂಕ್ತವಾದ ತಳಿಗಳು:

ಅಕ್ಟೋಬರ್ ಚಾಟನೆಯ ಮುಂಚೆ ಸಸ್ಯ  ಪ್ರಚೋದಕ ಸಿಂಪಡಿಸುವ ಅವಶ್ಯಕತೆ:

ಬೇಗನೆ ಚಾಟನಿ ಕಾರ್ಯಕ್ರಮ ಸರಿಯಾದ ವೇಳೆಯಲ್ಲಿ ಕೈಗಳನ್ನು ನಿರ್ಧಾರ ಮಾಡಿದಾಗ ಗಿಡಗಳಿಗೆ ನೀರು ಬಿಡುವ ಅವಶ್ಯಕತೆ ಇದೆ ಆಗ ಎಲೆಗಳ ಮತ್ತು ಹೂಗಳ ತೊಟ್ಟು ಗಟ್ಟಿಯಾಗಿ ಗಿಡಗಳಿಗೆ ಅಂಟಿಕೊಂಡು ಎಲೆಗಳು ಬರುವುದು ಕಷ್ಟವಾಗಬಹುದು ಏಕೆಂದರೆ ಗಿಡಗಳ ಒಳಭಾಗದಲ್ಲಿ ಸಾರಂಶವೂ ಸರಗವಾಗಿ ಹರಿದು ಹಣ್ಣು ಬಿಡುವ ಕುಡಿಗಳಿಗೆ ಆಸ್ಪದ ಕೊಟ್ಟು ಹೊಸದಾಗಿ ಚಿಗುರುವಾ ಕುಡಿಗಳಿಗೆ ಕ್ಲಿಷ್ಟ ಪರಿಸ್ಥಿತಿ ಉಂಟಾಗುತ್ತದೆ ಆದ್ದರಿಂದ ಚಾಟನೆ ಕೈಗೊಳ್ಳುವ ಮುಂಚೆ ಸಸ್ಯ ಪ್ರಚೋದಕ ದ್ರಾವಣ ಸಿಂಪಡಿಸುವ ಹೊತ್ತಿನಲ್ಲಿ ಎಲೆಗಳು ಕೀಳದಂತೆ ಜಾಗರೂಕತೆಯಿಂದ ವಹಿಸಬೇಕು ಏಕೆಂದರೆ ವಯಸ್ಸಾದಂತೆ ಎಲೆಗಳು ತಾನಾಗಿ ಉದುರುವ ಸಂಭವಿಸುತ್ತದೆ ಬೇಗನೆ ಚಾಟ್ನಿ ಕಾರ್ಯಕ್ರಮಕ್ಕೆ ಈ ತರಹದ ಸಿಂಪರಣೆಗಳು ಉಪಯುಕ್ತವಾಗಿವೆ ಆಳ್ವಚ್ಚಿ ಇಲಿಗಳನ್ನು ಕೀಳು ಖರ್ಚು ಕಡಿಮೆ ಮಾಡಬಹುದು ರಾಸಾಯನಿಕ ವಸ್ತುಗಳಲ್ಲಿ
ಥ ಯೋ ಯೂರಿಯಾ ಪೊಟ್ಯಾಶಿಯಂ ನೈಟ್ರೇಟ್ ಶೇಕಡ ಮೂರರಿಂದ ಐದರಷ್ಟು ಮಾತ್ರ ಹಾರ್ಮೋನ್ ದ್ರಾವಣಗಳಾದ 39 ಎಸ್ಎಲ್ ಅನ್ನು 2.5 ರಿಂದ ಎಂಟು ಮಿಲಿಯಂತೆ ಪ್ರತಿ ಲೀಟರ್ ನೀರಿನೊಂದಿಗೆ ಬೆರಸಿ ಸಿಂಪಡಿಸುವ ಅವಶ್ಯಕತೆ ಇದೆ ಬಣ್ಣದ ಹಣ್ಣಿನ ತಳಿಗಳಿಗೆ ಎ ತ್ರಿ ಲ್ ಮುಕ್ತ ತಯೋ ಯೂರಿಯಾ ಹಾಗೂ ಪೊಟ್ಯಾಷಿಯಂ ನೈಟ್ರೇಟ್ ದ್ರಾವಣಗಳ ಅವಶ್ಯಕತೆ ಇದೆ ಆದರೆ ಬಿಳಿ ಹಣ್ಣುಗಳಿಗೆ ಇದೇ ಸಿಂಪಡಿಸುವುದರಿಂದ ಬಣ್ಣಕ್ಕೆ ತಿರುಗುವ ಸಮಸ್ಯೆ ಇದೆ ಆದ್ದರಿಂದ ಥಾಮ್ಸನ್ ಗಳಿಗೆ ಎತ್ತುಲಿ ಸಿಂಪಡಿಸುವಿಕೆ ಎಲೆಗಳ ಉದುರಿಸುವಿಕೆ ಈ ದ್ರಾವಣವನ್ನು ಸಿಂಪಡಿಸುವ ಮೊದಲು ಯಾವುದೇ ರೋಗಗಳ ಸಮಸ್ಯೆ ಇದ್ದರೆ ಮೊದಲು ಶಿಲೀಂದ್ರನಾಶಕವನ್ನು ಸಿಂಪಡಿಸುವುದು ಒಳ್ಳೆಯದು

3}ಮುಂದಿನ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಚಾಟನೆಯನ್ನು ಯೋಜನೆ ಗಳಿಸಬೇಕು:

1) ಚಾಟನಿ ಕಾರ್ಯಕ್ರಮದ ಮುಂಚೆ ಸಿದ್ಧತೆಗೊಳ್ಳುವುದು
2) ಗಿಡಗಳ ಮಧ್ಯ ಭೂಮಿ ಹದ ಮಾಡುವುದು
3) ಲಘು ನೀರಾವರಿ
4) ಕೊಟ್ಟಿಗೆ ಗೊಬ್ಬರ ಹಾಕುವುದು
5) ರೋಗ ಬಿದ್ದಂತಹ ಎಲೇ ಗಳನ್ನು ಉದುರಿಸುವುದು
6) ರೋಗ ಮತ್ತು ಕೀಟ ಗಳನ್ನು ಹತೋಟಿಯಲ್ಲಿ ಇಡಲು ಸಿಲಿಂದ್ರನಾಶಕವನ್ನು ಸಿಂಪಡಿಸುವುದು ಉತ್ತಮ
8) ಚಾಟನಿ ಕಾರ್ಯಗಳನ್ನು ಕೈಗೊಳ್ಳುವುದು ರಾಸಾಯನಿಕ ವಸ್ತುಗಳು ಒಂದೇ ಸಮನ ಕುಡಿಗಳು ಹೊರಬರಲು ಬಳಸುವುದು
9) ರಘುವಾಗಿ ಗಿಡಗಳ ಮಧ್ಯ ಭೂಮಿಯನ್ನು ಸ್ವಚ್ಛಗೊಳಿಸುವುದಲ್ಲದೆ ಭೂಮಿಯನ್ನು ಹಾದುಗೊಳಿಸಬೇಕು

4}ಅಕ್ಟೋಬರ್ ಚಾಟನಿ ಹೇಗೆಲ್ಲಾ ಮಾಡಬೇಕು…..?

ಪ್ರತಿ ಎಕರೆಗೆ ಬಳಸಲ್ಪಡುವಂತಹ ಕೊಟ್ಟಿಗೆ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರ :

1) ಕೊಟ್ಟಿಗೆ ಗೊಬ್ಬರ 10 ಟನ್
2)  ಡಿ ಎ ಪಿ 100 kg
3) ಮೆಗ್ನೀಷಿಯಂ ಸಲ್ಫೇಟ್ 30 kg
4) ರಂಜಕ,ಜಿಂಕ್ ಬೋರಾನ್  10 kg
5)  ಹುಮಿ ಕ್ ಆಸಿಡ್, 1kg
ಈ ರೀತಿ ಪ್ರತಿಯ ಕರೆಗೆ ಎಲ್ಲವನ್ನು ಮಿಕ್ಸ್ ಮಾಡಿ  ಸರಿಯಾದ ಪ್ರಮಾಣದಲ್ಲಿಯೇ ಹಾಕಬೇಕು

ಪ್ರತಿಯೊಂದು ಕಾಂಡದಲ್ಲಿ ಬೇಕಾಗುವಷ್ಟು ಕುಡಿಗಳನ್ನು ಹೊಂದಿದ್ದು ಖಂಡಗಳ ಭಾಗವನ್ನು ಬಿಟ್ಟು ಅಕ್ಟೋಬರ್ ಚಾಟನಿ ಯನ್ನು ಕೈಗೊಳ್ಳಬೇಕು

ಅಕ್ಟೋಬರ್ ಚಾಟನಿ ಕಾರ್ಯಕ್ರಮದಲ್ಲಿ ನಂತರ ಲೇಪನ ಮಾಡುವುದು ಅವಶ್ಯಕ?

•  ತುದಿಯ ಭಾಗದಲ್ಲಿ ಪ್ರಬಲತೆ ಜಾಸ್ತಿ ಇದ್ದಾಗ ಅದನ್ನು ನಿವಾರಿಸಲು ತಿಯು ಇರಿಯ ಅಥವಾ ಡೋರ್ಮೇಕ್ಸ್ ಅಗತ್ಯವಿದೆ


•  Dormax ಅನ್ನೋ ಪ್ರತಿ ಲೀಟರ್ಗೆ 50 ರಿಂದ 70 ಎಂಎಲ್


• ಅದಲ್ಲದೆ ವಾತಾವರಣಕ್ಕೆ ತಕ್ಕಂತೆ ಉಪಯೋಗಿಸಬೇಕು


•  ಒಂದು ವೇಳೆ ಅಕ್ಟೋಬರ್ 15ರೊಳಗೆ ಹೆಚ್ಚಾಗಿ ಮಳೆ ಬಿದ್ದ ಪಕ್ಷದಲ್ಲಿ ಹಾಗೂ ಅಕ್ಟೋಬರ್ ಚಾಟನೆ ಕಾರ್ಯಕ್ರಮಗಳು ಒಂದೇ ಸಮಯದಲ್ಲಿ ಕೈಗೂಡಿದಗಲು ಚಿಗುರು ಹೊಡೆಯಲು ನಿಧನವಾಗಬಹುದು ಮತ್ತು ಮಣ್ಣಿನಲ್ಲಿ ನೀರಿನಂಶ ಜಾಸ್ತಿ ಇದ್ದಾಗ ಕೂಡ ಚಿಗುರು ಹೊಡೆಯುವುದು ನಿಧಾನಗತಿಯಲ್ಲಿ ಆಗುತ್ತದ
•  ಕಡ್ಡಿಗಳ ಮೇಲೆ ಮೂರರಿಂದ ನಾಲ್ಕು ಕೂಡಿಗಳು ಹೂ ಗೊಂಚಲುಗಳು ಕಡಿಮೆ ಪ್ರಮಾಣದಲ್ಲಿ ಸಿಗುತ್ತವೆ ಇದರಿಂದ ಹೋಗಲು ಕಡಿಮೆ ಇರುತ್ತದೆ ಆದ್ದರಿಂದ ಅದು ಯಾವುದೇ ತಳಿ ಯಾಗಿರಲಿ ಮತ್ತು ಯಾವುದೇ ಚಾಟನಿ ಕೈಗೊಳ್ಳುವ ಸಮಯದಲ್ಲಿ ಚಿಗುರು ಹೊಡೆಯುವಿಕೆಯನ್ನು ವೃದ್ಧಿಗೊಳಿಸಲು ಹಾಗೂ ಕಾ೦ಡಗಳ
•  ಬಂಜೆತನ ನಿವಾರಣೆಗೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಲೇಪನ ಮಾಡಬೇಕು
•  ತಯುರಿಯಾ ಅಥವಾ ಕಪ್ಪು ಬಾರ್ಡಕ್ಸ್ ಲೇಪನ ಮತ್ತು ಗವರ್ನಮೆಂಟ್ಸ್ ಮಿಶ್ರಣ ಬಳಸುವುದರಿಂದ ಕಾಣದ ತುದಿ ಪ್ರಬಲತೆ ಸಮಸ್ಯೆಯನ್ನು ನಿವಾರಿಸಿದರು ಹೆಚ್ಚು ವ್ಯತ್ಯಾಸಗಳೆನಿಲ್ಲ
•   ತುತ್ತೇ ಹಾಗೂ ಸುಣ್ಣ ಇದರೊಂದಿಗೆ ಕ್ಲೋರೋ ಪರಿಪಾಸ್ ಸೇರಿಸಿ ಚಾಟನಿಯಾದ ಮೂರರಿಂದ ನಾಲ್ಕು ದಿವಸದಲ್ಲಿ ಒಂದು ಸ್ಪ್ರೇ ಕೈಗೊಳ್ಳಬೇಕು
•  ಈ ಮಿಶ್ರಣಸಿಂಪಡಿಸುವುದರಿಂದಉಷ್ಣಾಂಶ ಹಾಗೂ ಸೂರ್ಯನ ಬೆಳಕು  ಇರುವುದರಿಂದ ಒಳ್ಳೆ ರೀತಿಯಾಗಿ ಮೊಗ್ಗು ಹೊಡೆಯುವಿಕೆಆಗುತ್ತದೆ.
•  ಇದರಿಂದ ಒಂದೇ ರೀತಿಯಾಗಿ ಮೊಗ್ಗು ಒಡೆಯುವದು ಕಂಡುಬರುತ್ತದೆ
•  Dormax ಲೇಪನವನ್ನು ಮಧ್ಯಾಹ್ನ 3 ರಿಂದ 5 ರವರೆಗೆ ಕೈಗೊಳ್ಳಬೇಕು
•  ಮಿಶ್ರಣವನ್ನು ತುದಿಯ ಎರಡರಿಂದ ಮೂರು ಕುಡಿಗಳಿಗೆ ಮಾತ್ರ ಲೇಪನ ಮಾಡಬೇಕು
•  ಲೇಪನ ಮಾಡುವಾಗ ರೈತರು ಮುನ್ನೆಚ್ಚರಿಕೆ ವಾಗಿ ಕೈಗಳಿಗೆ ರಬ್ಬರ್ ಚೀಲಗಳನ್ನು ಹಾಗೂ ಹತ್ತಿ ಬಟ್ಟೆಯ ಬಳಸಬೇಕು
ಇದರಿಂದ ಚರ್ಮದ ಮೇಲೆ ಯಾವುದೇ ರೀತಿ ಹಾನಿಉಂಟು ಆಗುವುದಿಲ್ಲ•  ಈ ಸಮಯದಲ್ಲಿ ಮೊಗ್ಗುಗಳು ಅತಿ ಶಕ್ತಿ ಯುತ ವಾಗಿ ಬೆಳೆಯಬೇಕಾದರೆ  ರಾಸಾಯನಿಕ ಗೊಬ್ಬರಗಳ ಬಳಕೆ ಮಾಡಬೇಕು ಈ ಹಂತದಲ್ಲಿ ಎನ್‌ಪಿಕೆ ಪ್ರಮಾಣವು ಸರಿಯಾದ ರೀತಿಯಲ್ಲಿ ಒದಗಿಸಬೇಕು
•  19 19 19 + uria  10 ಕೆಜಿ ಡ್ರಿಪ್ ಮುಖಾಂತರ ಕೊಡಬೇಕು
•  ಇದರಿಂದ ಬೆಳೆಯಲ್ಲಿ ಬೆಳವಣಿಗೆ ಆಗುವ ಸಾಧ್ಯತೆಗಳು ಹೆಚ್ಚಾಗುತ್ತದೆ
•  ಈ ಹಂತದಲ್ಲಿ ರೈತರು ಮೊಗ್ಗು ಬಿಟ್ಟಿರುವಂತಹ ಕುಡಿಗಳನ್ನು ಮಾತ್ರ ಬಿಡಬೇಕು ಇನ್ನು ಇದ ಕುಡಿಗಳನ್ನು ತೆಗೆದು ಹಾಕಬೇಕು
ಈ ರೀತಿ ಮಾಡುವುದರಿಂದ  ಹೂ ಬೆಳವಣಿಗೆ ಆಗಲು ಸಹಾಯಕಾರಿ ಆಗುತ್ತದೆ .

1}ಚಾಟನೆ ಮಾಡಿದ 12ರಿಂದ 15 ದಿವಸಗಳ ವರೆಗೆ

ರಸ ಗೊಬ್ಬರಗಳ ಬಳಕೆ!

•  ಚಾಟನಿ ಕೈಗೊಂಡ ನಂತರ ಮೂರು ನಾಲ್ಕು ವಾರಗಳಲ್ಲಿ ಹೊಸ ಚಿಗುರು ಬಂದಾಗ ಪ್ರತಿ ಹೆಕ್ಟರಿಗೆ ಸಾರಜನಕ, ಮೆಗ್ನಿಸಿಯಂ, ಮ್ಯಾಗ್ನಿಷಿಯಂ,50 ಕಿಲೋ ಗ್ರಾಂಮನೆನಲ್ಲಿ ಹಾಕುವುದು
•  ಚಾಟನೆಯದ ನಾಲ್ಕ ರಿಂದ ಎಂಟು ವಾರಗಳಲ್ಲಿ ಗೊಂಚಲುಗಳು ಬೆಳವಣಿಗೆ ಹಣ್ಣುಗಳು ರಚನೆ ಕೊಳ್ಳಲು ಪ್ರತಿಭಟನೆಗೆ ಸಾರಜನಕ 50 ಕೆಜಿ ರಂಜಕ 50 ಕೆಜಿ ಮಣ್ಣಿನಲ್ಲಿ  ಹಾಕುವದು.
•  ಚಟನಿ ಕೈಗೊಂಡ ನಂತರ 8 ರಿಂದ 10 ವಾರಗಳಲ್ಲಿ ಹಣ್ಣುಗಳ ಬೆಳವಣಿಗೆಗೆ ಸಾರಜನಕ  50 ಕಿಲೋ ಗ್ರಾಂ ರಂಜಕ 50 ಕಿಲೋ ಗ್ರಾಂ ಮಣ್ಣಿನಲ್ಲಿ ಕೊಡಬೇಕು
•  ನಂತರ 10 ರಿಂದ 12 ವಾರಗಳಲ್ಲಿ ಹಣ್ಣುಗಳು ಹಣ್ಣಾಗುವ ಸಂದರ್ಭದಲ್ಲಿ ಪ್ರತಿ ನೆಕ್ಟರಿಗೆ ಪೊಟ್ಯಾಚ್ 50 ರಿಂದ್ 150 ಕಿಲೋ ಗ್ರಾಂ ಮಣ್ಣಿನಲ್ಲಿ ಹಾಕಬೇಕು.


•  ದ್ರಾಕ್ಷಿ ಬೆಳೆಯಬೇಕಾದರೆ ಹಲವಾರು ದ್ರಾಕ್ಷಿ ಬೆಳೆಯಲ್ಲಿ ರೋಗಗಳು ಮತ್ತು ವಾತಾವರಣದ ಏರು ಪೆರು ರೈತರಿಗೆ ಕಾಡುತ್ತದೆ ಹಾಗೂ ಇದರ ಮಧ್ಯೆ ದ್ರಾಕ್ಷಿ ಬೆಳೆಯಲು ರೈತರ ದ್ರಾಕ್ಷಿ ಬೆಳೆ ತೆಗೆಯಲು ಹರಸಾಹಸ ಪಡುತ್ತಾರೆ

2}ದ್ರಾಕ್ಷಿಯಲ್ಲಿ ಬರುವಂತಹ ರೋಗಗಳು?

ಚಿಬ್ಬು ರೋಗ ಅಥವಾ ಕರಪಾ ರೋಗ:


ದಕ್ಷಿಣ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ದ್ರಾಕ್ಷಿಯಲ್ಲಿ ಕಂಡುಬರುವ ಒಂದು ಅತಿ ಮುಖ್ಯವಾದ ರೋಗವಾಗಿದ್ದು ಇದನ್ನು ಸಾಮಾನ್ಯವಾಗಿ ಪಕ್ಷಿ ಕಣ್ಣಿನ ರೋಗವೆಂದು ಸಹ ಕರೆಯಲಾಗುತ್ತದೆ ದ್ರಾಕ್ಷಿ ಬಳಿಯ ಬೆಳವಣಿಗೆಯ ಪ್ರಾರಂಭಿಕ ಹಂತದಲ್ಲಿ ಹೆಚ್ಚಿನ ಮಳೆ ಹಾಗೂ ಮೋಡ ಕವಿದ ವಾತಾವರಣ ಈ ರೋಗ ಹೊರಡಲು ಸಹಾಯವಾಗುತ್ತದೆ ಈ ರೋಗ ಸಾಮಾನ್ಯವಾಗಿ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ
ಎಲೆಗಳ ಮೇಲೆ ಕಂದು ಬಣ್ಣದ ಚುಕ್ಕಿಗಳಿರುತ್ತವೆ, ಕಡ್ಡಿ ಎಲೆಯ ತೊಟ್ಟುಗಳು ಮತ್ತು ತಂತುಗಳ ಮೇಲೆ ಉದ್ದವಾದ ಕಂದು ಬಣ್ಣದ ಚುಕ್ಕಿಗಳು ಕಾಣಿಸಿಕೊಳ್ಳುತ್ತವೆ
ಕಾಯಿಗಳ ಮೇಲು ಕಂದು ಬಣ್ಣದ ಗುಳಿಗಳನ್ನು ನೋಡುವುದು ಇಂತಹ ಕಾಯಿಗಳ ತಿರುಳು ದೃಢವಾಗಿರುವುದರಿಂದ ಈ ರೋಗ ಬಿಡಿತ ಕಾಯಿಗಳಿಗೆ ಬೆಳವಣಿಗೆ ಕುಂಠಿತಗೊಳ್ಳುತ್ತದೆ.

ಈ ರೋಗಕ್ಕೆ ಔಷಧಿಗಳ:  ಡಿಫಿನೋ ಕೋನಾಜೋಲ್ ಸರಿಯಾದ ಪ್ರಮಾಣದಲ್ಲಿ ಸಿಂಪರಣೆ ಮಾಡಬೇಕು.

1}ಡೌನಿ ರೋಗ :


ಈ ರೋಗದ ಲಕ್ಷಣಗಳೆಂದರೆ ಎಲೆಗಳ ಮೇಲ್ಭಾಗದಲ್ಲಿ ಹಳದಿ ಹಸಿರು ಬಣ್ಣದ ಯಾವುದೇ ಸ್ಪಷ್ಟ ಆಕಾರವಿಲ್ಲದ ಉಣ್ಣೆ ಯುಕ್ತ ಚುಕ್ಕಿಗಳಿರುತ್ತವೆ ಈ ಚುಕ್ಕಿಗಳಿರುವ ಎಲೆಯ ಕೆಳಭಾಗದಲ್ಲಿ ಬಿಳಿ ಬೊಜ್ಜು ಇರುತ್ತದೆ ಕೃತಿಗಳು ದೊಡ್ಡದರಂತೆ ಅಡ್ಡ ಕೆಂಪು ಗೆರೆಗಳು ಮೂಡುತ್ತವೆ ರೋಗ ಪೀಡಿತ ಬಳ್ಳಿಗಳು ಕಂಡು ಬಣ್ಣತ್ತಿರುವ ಒಣಗುತ್ತವೆ ಈ ಸೋಂಕು ಎಳೆ ಕಡ್ಡಿಗಳ ಮೇಲೆ ಎಲಿಯ ತೊಟ್ಟು ಹೂ ಗಂಚಲಿನ ಮೇಲು ಹರಡಿಈ ಬಳ್ಳಿಗಳು ಒಣಗುವಂತೆ  ಮಾಡುತ್ತದೆ.

ಈ ರೋಗದ ನಿಯಂತ್ರಣ!


•  ತೋಟದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು
•  ರೋಗ ತಗಳಲಿ ದ ಎಲೆ ಕಡ್ಡಿಗಳನ್ನು ಆಯದು ಸುಡ್ಬೇಕು
•  ಅಲಿಯಟ 2.5 ಗ್ರಾಂ ಪ್ರತಿ ಲೀಟರ್ ನಿರಿಗೆ ಮತ್ತು M 45 2.gm ರಾಕಿ ಸಿಪಡಿಸಬೇಕು
•  ರೈನ್ ಮ್ಯಾನ್, ಮೆಲೋಡಿ, ಅಕ್ರೋ ಬ್ಯಾಕ್, ಅಂಟ್ರಕಲ್, ಅಳಿಯಟ, ಕುಮಾನ್ ಎಲ್, ಮೆರೆವನ್ ಮುಂತಾದ ಹಲವಾರು ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ
ಇವುಗಳನ್ನು ಸರಿಯಾದ ಪ್ರಮಾಣದಲ್ಲಿ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು

2}ಬೂದು ರೋಗ:

ಇದು ದ್ರಾಕ್ಷಿ ಬೆಳೆಗಾರರಿಗೆ ಕಾಡುತ್ತಿರುವ ಅತಿ ಭಯಂಕರ ಶಿಲೀಂದ್ರ ರೋಗ ರೋಗ ಹರಡಲು ಸೂಕ್ತ ವಾತಾವರಣ ಇದ್ದರಂತೂ ಸಾಂಕ್ರಾಮಿಕ ರೂಪ ಪಡೆದುಕೊಳ್ಳುವುದು ಜಾಸ್ತಿ ಹೆಚ್ಚಾಗಿ ಈ ರೋಗವು ಡಿಸೆಂಬರ್ ನಿಂದ ಮಾರ್ಚ್ ಮಧ್ಯಭಾಗದವರೆಗೆ ಹೆಚ್ಚಿನ ರೀತಿಯಲ್ಲಿ ಕಂಡು ಬರುತ್ತದೆ
ಈ ರೋಗ ಹರಡಲು ರಾತ್ರಿ ವೇಳೆಯಲ್ಲಿ ಉಷ್ಣಾಂಶದ ಪ್ರಮಾಣ ಕಡಿಮೆಯಾಗುತ್ತದೆ ಅತಿಯಾದ ಚಳಿ ಮಧ್ಯಾಹ್ನದ ಬಿಸಿಲಿನ ತಾಪ ಅಧಿಕಗೊಂಡು ಸಾಯಂಕಾಲ ಹಾಗೂ ರಾತ್ರಿ ಕೊರೆಯುವ ಚಳಿ ಈ ರೋಗ ಹರಡುವಲಿ. ಪ್ರಮುಖ ಪಾತ್ರವಹಿಸುತ್ತದೆ. ಈ ರೋಗದ ಲಕ್ಷಣ ಎಲ್ಲೇ ಕಡ್ಡಿಗಳು ಹಾಗೂ ಎಳೆ ಕಾಯಿಗಳ ಗೊಂಚಲುಗಳ ಮೇಲೆ ಬೂದಿ ಬೂದಿ ತರಹದ ಬೆಳವಣಿಗೆ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ
ಬೂದು ಮಚ್ಚೆಗಳು ದೊಡ್ಡದಾಗಿ ಎಲೆಗಳ ಮೇಲ್ಭಾಗದಲ್ಲಿ ಧೂಳಿನಂತೆ ಕಂಡು ಕೆಳಭಾಗದಲ್ಲಿ ಬಿಳಿ ಬೂಸ್ಟ್ ತರಹ ಬೆಳವಣಿಗೆಯನ್ನು ನೋಡಬಹುದು
ರೋಗ ತಗಲಿದ ಎಲೆಗಳು ಒಣ ವಾತಾವರಣದಲ್ಲಿ ಮೇಲ್ಭಾಗಕ್ಕೆ ಮಡಚಿಕೊಳ್ಳುತ್ತವೆ ಮತ್ತು ವಿರೂಪ ಗೊಳ್ಳುತ್ತವೆ ಜೊತೆಗೆ ಬಣ್ಣವನ್ನು ಕಳೆದುಕೊಳ್ಳಬಹುದು ರೋಗ ಜಾಸ್ತಿ ಕಾ ಣಿಸಿಕೊಂಡ ಬಳ್ಳಿಗಳು ಹಳ್ಳಿಗಳು ಬತ್ತಿದಂತೆ ಕಾಣುತ್ತವೆ ಮತ್ತು ಬೆಳವಣಿಗೆ ಕುಂಠಿತವಾಗುತ್ತದೆ
ಕಡ್ಡಿಗಳು ಕಂದು ಬಣ್ಣಕ್ಕೆ ತಿರುಗುತ್ತವೆ ರೋಗಪೀಡಿತ ಕಾಯಿಗಳ ಹೊರಮೆ ಒರಟಗಿದ್ದು ಧೂಳಿನಿಂದ ಕೂಡಿದ್ದು ಹಣ್ಣುಗಳು ಬಿರುಸಿನಲ್ಲಿ ಕಾಣತೊಡುತ್ತದೆ.

ಈ ರೋಗದ ನಿಯಂತ್ರಣ!

•  ತೋಟದ ಸ್ವಚ್ಛತೆ ಮುಖ್ಯವಾಗುತ್ತದೆ
•  ರೋಗ ಬಿದ್ದಭಾಗಗಳನ್ನು ಕಿತ್ತು ನಾಶಪಡಿಸಬೇಕು
•  ನೀರಿನಲ್ಲಿ ಕರಗುವ ಗಂಧಕ ಮೂರು ಗ್ರಾಂ ಪ್ರತಿ ಲೀಟರ್ ನೀರಿಗೆ ಸಿಂಪಡಿಸುವುದರಿಂದ ಸ್ವಲ್ಪ ಹತೋಟಿಗೆ ಸಿಗುತ್ತದೆ
•  ಸಿಲಿಂದ್ರ ನಾಶಕಗಳಾದ ರೂಬಿಗನ್, ಒಂದು ಗ್ರಾಂ ಒಂದು ಲೀಟರ್ ಸಿಂಪಡಿಸಬೇಕು
ಲೋನಾ ಎಸ್ಪಿರಿಎನ್ಸ್  ಎಕ್ರೆಶಿಯು ಮೇರಿ ಒನ್, ಮುಂತಾದ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ ಸರಿಯಾದ ಪ್ರಮಾಣದಲ್ಲಿ ಸಿಂಪರಣೆ ಮಾಡಬೇಕು.

ದ್ರಾಕ್ಷಿ ಹೆಚ್ಚು ರುಚಿಕರವಾದ. ಮನಶ್ವೇತನ ನೀಡುವ ಮತ್ತು ದೇಹ ಪೋಷಣೆಗೆ ಬೇಕಾದ ಅವಶ್ಯ ಪೋಷಕಾಂಶಗಳನ್ನು ಒದಗಿಸಬಲ್ಲ ಹಣ್ಣಿನ ಬೆಳೆಯಾಗಿದ್ದು, ಇದು ಸುಲಭವಾಗಿ ಜೀರ್ಣವೂ ಆಗುತ್ತದೆ. ದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣ ಮುಂತಾದ ಖನಿಜಾಂಶಗಳು ಇವೆ. ದ್ರಾಕ್ಷಿ ಬೆಳೆಯಲು ಬಿಜಾಪೂರ, ಕೋಲಾರ್, ಚಿತ್ರದುರ್ಗ, ಬಾಗಲಕೋಟೆ, ರಾಯಚೂರು, ಬಳ್ಳಾರಿ. ಕೊಪ್ಪಳ ಮತ್ತು ಗುಲ್ಬರ್ಗ ಪ್ರದೇಶಗಳು ಅತೀ ಸೂಕ್ತವಾಗಿವೆ. ಕರಾವಳಿ ಪ್ರದೇಶ ಮತ್ತು ಹೆಚ್ಚು ಮಳೆ ಬೀಳುವ ಪ್ರದೇಶಗಳು ದ್ರಾಕ್ಷಿ ಬೆಳೆಯಲು ಯೋಗ್ಯವಲ್ಲ.

ಮಣ್ಣು : ದ್ರಾಕ್ಷಿಯನ್ನು ವಿವಿಧ ತರಹದ ಮಣ್ಣಿನಲ್ಲಿ ಬೆಳೆಯಬಹುದು. ಚೆನ್ನಾಗಿ ನೀರು ಬಸಿದು ಹೋಗುವಂತಹ ಗೋಡು ಮಣ್ಣು ಅತ್ಯುತ್ತಮ. ಕಡಿಮೆ ಆಳದ ಮಧ್ಯಮ ಕಪ್ಪು ಗೋಡು ಮಣ್ಣು. ಸ್ವಲ್ಪ ಭಾಗ ಸುಣ್ಣದ ಅಂಶವಿದ್ದರೂ ದ್ರಾಕ್ಷಿಯನ್ನು ಬೆಳೆಯಬಹುದು. ಆಳವಾದ ಮರಳು ಮಿಶ್ರಿತ ಗೋಡು ಮಣ್ಣು ಕೂಡಾ ಈ ಬೆಳೆಗೆ ಸೂಕ್ತ.

ಹವಾಗುಣ ಮತ್ತು ನಾಟಿ ಕಾಲ : ದ್ರಾಕ್ಷಿ ಉಷ್ಣವಲಯದ ಬೆಳೆ. ಸಮಶೀತೋಷ್ಣ ವಲಯದ ಪ್ರದೇಶಗಳಲ್ಲೂ ಸಹ ಇದನ್ನು ಯಶಸ್ವಿಯಾಗಿ ಬೆಳೆಯಲಾಗುತ್ತಿದೆ. ದ್ರಾಕ್ಷಿ ಬೆಳೆಯಲ್ಲಿ ಹವಾಗುಣ ಬಹುಮುಖ್ಯ ಪಾತ್ರ ವಹಿಸುತ್ತದೆ. ಹಣ್ಣು ಬಿಡುವ ಕಾಲದಲ್ಲಿ ಇದಕ್ಕೆ ಮಳೆ ಇಲ್ಲದ ಶುಷ್ಕ ಹವಾಗುಣ ಅಗತ್ಯ. ಹೂವು ಬಿಟ್ಟ ನಂತರ ಹಣ್ಣು ಆಗುವವರೆಗಿನ ಕಾಲದಲ್ಲಿ ಮಳೆಯಾದರೆ ಇದನ್ನು ಬಾಧಿಸುವ ರೋಗಗಳು ವೃದ್ಧಿಯಾಗುತ್ತವೆ. ಅಕ್ಟೋಬರ್ ತಿಂಗಳ ಎರಡನೇ ಭಾಗದಿಂದ ಜನೇವರಿ ತಿಂಗಳವರೆಗಿನ ಕಾಲ ನಾಟಿಗೆ ಸೂಕ್ತ.

ದ್ರಾಕ್ಷಿಯಲ್ಲಿ ಅನೇಕ ತಳಿಗಳಿದ್ದು, ಈ ಕೆಳಗಿನವು ಜನಪ್ರಿಯವಾಗಿವೆ.

1. ಥಾನ್ಸನ್ ಸೀಡ್‌ಲೆಸ್ :

ಇದು ಸಣ್ಣದಾದ, ಗುಂಡನೆಯ ಹಳದಿ ಮಿಶ್ರಿತ ಹಣ್ಣುಗಳುಳ್ಳ ತಳಿ. ಹಣ್ಣುಗಳಲ್ಲಿ ಬೀಜಗಳಿರುವುದಿಲ್ಲ. ತಿನ್ನಲು ಬಹಳ ಅತ್ಯುತ್ತಮವಾದ ತಳಿ. ಗೊಂಚಲುಗಳು ಸಾಧಾರಣ ಗಾತ್ರವಿದ್ದು, ಹಣ್ಣುಗಳು ಒತ್ತಾಗಿರುತ್ತವೆ. ಈ ತಳಿಯು ಒಣ ದ್ರಾಕ್ಷಿ ತಯಾರಿಸಲು ಯೋಗ್ಯವಾಗಿದೆ.

2. ಸೋನಾಕಾ :

ಇದು ಥಾಯ್ಸನ್ ಸೀಡ್ ಲೆಸ್ ತಳಿಯಿಂದ ಅಭಿವೃದ್ಧಿಪಡಿಸಿದ ತಳಿಯಾಗಿದ್ದು ಅಧಿಕ ಇಳುವರಿ ಕೊಡಬಲ್ಲದು, ಹಣ್ಣುಗಳು ಉದ್ದವಾಗಿದ್ದು, ರುಚಿಕರವಾಗಿಯು ಮತ್ತು ಬೀಜ ರಹಿತವಾಗಿಯೂ ಇರುತ್ತವೆ.

3. ಪ್ಲೇಮ್ ಸೀಡಲೆಸ್ :

ಇದು ಮಧ್ಯಮ ಗಾತ್ರದ ಗೊಂಚಲುಗಳನ್ನು ಹೊಂದಿದ್ದು, ತಿಳಿಗೆಂಪು ವರ್ಣದ, ಅತ್ಯುತ್ತಮ ಸುವಾಸನೆಯುಳ್ಳ, ರುಚಿಕರವಾದ ಗಟ್ಟಿ ಹಣ್ಣುಗಳನ್ನು ಹೊಂದಿದೆ. ಹಣ್ಣುಗಳನ್ನು ತಾಜಾ ರೂಪದಲ್ಲಿ ತಿನ್ನಲು ಅಥವಾ ಒಣದ್ರಾಕ್ಷಿ ತಯಾರಿಸಲು ಉಪಯೋಗಿಸಬಹುದು. ಇದು ಹೆಚ್ಚು ಉಷ್ಣತೆ ಬಯಸುವ ತಳಿಯಾಗಿದ್ದು, ಥಾಮ್‌ನ್ ಸೀಡ್‌ಲೆಸ್ ತಳಿಗಿಂತ ಬೇಗ ಮಾಗುವುದು. ಅಧಿಕ ಇಳುವರಿ ನೀಡುವ ಶಕ್ತಿಯುತ ತಳಿ ಇದಾಗಿದೆ.

4. ಬೆಂಗಳೂರು ಬ್ಲೂ :

ಈ ತಳಿಯ ಹಣ್ಣುಗಳು ಕಪ್ಪು ಮಿಶ್ರಿತ ನೀಲಿ ಬಣ್ಣ ಹೊಂದಿದ್ದು ಗುಂಡಗಿರುತ್ತವೆ. ಇದರ ರುಚಿ ಸ್ವಲ್ಪ ಹುಳಿ. ಇದರ ರಸ ಕಂದು ಬಣ್ಣದಿಂದ ಕೂಡಿದ್ದು ಬಹುಕಾಲ ಶೇಖರಿಸಿಡಬಹುದು. ಇದರ ಗೊಂಚಲುಗಳು ಸಾಧಾರಣ ಗಾತ್ರವಾಗಿದ್ದು ಹಣ್ಣುಗಳು ಒತ್ತಾಗಿರುತ್ತವೆ. ವರ್ಷದಲ್ಲಿ ಎರಡು ಬೆಳೆಗಳನ್ನು ಯಶಸ್ವಿಯಾಗಿ ಪಡೆಯಬಹುದು. ಈ ತಳಿಗೆ ಹಲವಾರು ರೋಗಗಳನ್ನು ಸಹಿಸಿಕೊಳ್ಳುವ ಶಕ್ತಿ ಇದೆ.

5. ಅನಾಬ್ -ಇ-ಪಾಹಿ :

ಈ ತಳಿಯ ಹಣ್ಣುಗಳು ಅಂಡಾಕಾರದಲ್ಲಿರುತ್ತವೆ. ಹಣ್ಣುಗಳು ತಿಳಿ ಹಳದಿಯಿಂದ ಕೂಡಿರುತ್ತವೆ. ಇವು ಸಿಹಿಯಾಗಿರುತ್ತವೆ ಮತ್ತು ಮಾರುಕಟ್ಟೆಗೆ ಉತ್ತಮವೆನಿಸಿವೆ. ಈ ತಳಿ ಅತೀ ಹೆಚ್ಚು ಇಳುವರಿ ಕೊಡಬಲ್ಲದು. ಇದರ ಗೊಂಚಲುಗಳು ದೊಡ್ಡವಾಗಿದ್ದು ಹಣ್ಣುಗಳು ಒತ್ತಾಗಿರುತ್ತವೆ.

6. ದಿಲ್ ಕುಷ್ :

ಇದನ್ನು ಅನಾಬ್-ಇ-ಪಾಹಿ ತಳಿಯಿಂದ ಆಯ್ಕೆ ಮಾಡಲಾಗಿದೆ. ಈ ತಳಿಯ ಹಣ್ಣುಗಳು ಬಹಳ ಉದ್ದವಾಗಿದ್ದು, ಅತಿ ಆಕರ್ಷಣೆಯಿಂದ ಕೂಡಿರುತ್ತವೆ ಹಾಗೂ ಅಧಿಕ ಇಳುವರಿ ಕೊಡಬಲ್ಲದು.

7. ತರದ ಸೀಡ್ ಲೆಸ್ :

ಕಡುನೀಲಿ ಬಣ್ಣ ಹೊಂದಿದ. ಬೀಜರಹಿತ ತಳಿ, ಉತ್ತಮ ಗುಣಮಟ್ಟದ ಹಣ್ಣುಗಳನ್ನು ಕೊಡಬಲ್ಲದಾಗಿದ್ದು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಲ್ಲಿದೆ.

8. ಗುಲಾಬಿ :

ಕಂದು ಬಣ್ಣದ ದುಂಡನೆಯ ಹಣ್ಣುಗಳನ್ನು ಹೊಂದಿದ್ದು, ಹಣ್ಣಿನ ಸಿಪ್ಪೆ ದಪ್ಪವಾಗಿರುವದು. ಇದರ ಹಣ್ಣು ಸಿಹಿಯಾಗಿರುವುದಲ್ಲದೆ ಒಂದು ವಿಧವಾದ ಗುಲಾಬಿ ಹೂವಿನ ವಾಸನೆ ಇರುತ್ತದೆ ಹಾಗೂ ಸಾಮಾನ್ಯ ಗಾತ್ರವುಳ್ಳ ಗೊಂಚಲುಗಳನ್ನು ಹೊಂದಿರುತ್ತದೆ. ಗೊಂಚಲುಗಳಲ್ಲಿ ಹಣ್ಣುಗಳು ವಿರಳವಾಗಿರುತ್ತವೆ. ಇದು ಅಲ್ಪಾವಧಿಯಲ್ಲಿ ಕೊಯಿಲಿಗೆ ಬರುವ ತಳಿಯಾಗಿದ್ದು, ಉತ್ತಮ ಇಳುವರಿ ಕೊಡಬಲ್ಲದು ಹಾಗೂ ವರ್ಷದಲ್ಲಿ ಎರಡು ಬೆಳೆಗಳನ್ನು ತೆಗೆಯಬಹುದು. ಈ ತಳಿಯಲ್ಲಿ ಗೊಂಚಲಿನಲ್ಲಿರುವ ಎಲ್ಲಾ ಕಾಯಿಗಳು ಒಟ್ಟಿಗೆ ಮಾಗುವುದಿಲ್ಲ.

9. ಬ್ಲ್ಯಾಕ್ ಚಂಪ :

ಇದು ಇತ್ತೀಚೆಗೆ ಬೆಂಗಳೂರಿನ ಸುತ್ತಮುತ್ತಲಿರುವ ಪ್ರದೇಶಗಳಲ್ಲಿ ಬಳಕೆಗೆ ಬರುತ್ತಿರುವ ಹೊಸ ತಳಿ, ಇದರ ಹಣ್ಣುಗಳು ಸಣ್ಣದಾಗಿರುವುಲ್ಲದೆ ಕಪ್ಪು ಮಿಶ್ರಿತ ನೀಲಿ ಬಣ್ಣದಿಂದ ಕೂಡಿರುತ್ತವೆ. ಇದು ಸಹ ಹೆಚ್ಚು ಇಳುವರಿ ಕೊಡಬಲ್ಲದು.


ಅ) ಇತ್ತೀಚಿನ ದಿನಗಳಲ್ಲಿ ನಾಟಿ ಅಂತರವನ್ನು ಕಡಿಮೆಗೊಳಿಸಿ ಹೆಚ್ಚು ಬಳ್ಳಿಗಳನ್ನು ನಾಟಿ ಮಾಡಿ ಹೆಚ್ಚಿನ ಇಳುವರಿ ಮತ್ತು ಆದಾಯವನ್ನು ಆರಂಭದ ವರ್ಷಗಳಲ್ಲಿ ಪಡೆಯುವ ವಾಡಿಕೆ ಬಳಕೆಯಲ್ಲಿದೆ.

ಅ) ದ್ರಾಕ್ಷಿ ಬೆಳೆಯಲು ಪ್ರದೇಶದ ಆಯ್ಕೆ ಮತ್ತು ಲೇಔಟ್ ಸಲುವಾಗಿ ವಿಸ್ತರಣಾ ನಿರ್ದೇಶಕರು, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ, ಕೃಷಿ ವಿಶ್ವವಿದ್ಯಾಲಯ, ಧಾರವಾಡ, ರಾಯಚೂರು, ಬೆಂಗಳೂರು, ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ಅಥವಾ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಹೇಸರಘಟ್ಟ, ಬೆಂಗಳೂರು ಇವರನ್ನು ಸಂಪರ್ಕಿಸಲು ಸೂಚಿಸಲಾಗಿದೆ,



ನಾಟಿಯ ಸಮಯದಲ್ಲಿ ಪ್ರತಿ ಬಳ್ಳಿಗೆ 20 ಕಿ. ಗ್ರಾಂ. ಕೊಟ್ಟಿಗೆ ಗೊಬ್ಬರ ಮತ್ತು ನಂತರ ಪ್ರತಿ ವರ್ಷ ಪ್ರತಿ ಬಳ್ಳಿಗೆ 20 ಕಿ.ಗ್ರಾಂ. ಕೊಟ್ಟಿಗೆ ಗೊಬ್ಬರ ಕೊಡಬೇಕು. ಬೇವಿನ ಹಿಂಡಿ, ಎರೆಹುಳು ಗೊಬ್ಬರ ಹಾಗೂ ದೋನ್ ಮೀಲ್ (ಎಲುವಿನ ಗೊಬ್ಬರ) ಇತ್ಯಾದಿ ಮಿಶ್ರಣವನ್ನು (1 ಕಿಲೋ) ಕೊಟ್ಟಿಗೆ ಗೊಬ್ಬರ ಜೊತೆಗೆ ಸೇರಿಸಬೇಕು.

2. ಸಾವಯವ ಗೊಬ್ಬರಗಳು

ಬೇಸಾಯ ಕ್ರಮಗಳು :

ಸಸ್ಯಾಭಿವೃದ್ಧಿ

1. ಕಡ್ಡಿಗಳಿಂದ :

ಸುಮಾರು ಆರು ತಿಂಗಳ ಕಾಲ ಬೆಳೆದ ಬಲಿತ 4-6 ಕಣ್ಣುಗಳುಳ್ಳ ಕಡ್ಡಿಯನ್ನು ಸಸ್ಯಾಭಿವೃದ್ಧಿಗಾಗಿ ಬಳಸುತ್ತಾರೆ. ಎರಡು ಗೆಣ್ಣುಗಳ ನಡುವೆ ಕಡಿಮೆ ಅಂತರವಿರುವ ಕಾಂಡದಿಂದ ಬಲಿತ ಕಡ್ಡಿಗಳನ್ನು ಆರಿಸಬೇಕು. ಎರಡು ಗೆಣ್ಣುಗಳನ್ನು ಮಣ್ಣಿನಲ್ಲಿ ಇರುವಂತೆ ಪಾತಿಗಳಲ್ಲಿ ನಾಟಿ ಮಾಡಬೇಕು. ಚೆನ್ನಾಗಿ ಬೇರು ಬಿಡಲು ಥಾಟ್ಸನ್ ಸೀಡ್‌ಲೆಸ್ ತಳಿಯ ಕಡ್ಡಿಯ ಕೆಳಭಾಗವನ್ನು 24 ರಿಂದ 48 ತಾಸುಗಳ ಕಾಲ ಅಥವಾ 12 ತಾಸುಗಳ ಕಾಲ 250 ಪಿ.ಪಿ.ಎಮ್. ಇಂಡೋಲ್ ಬ್ಯುಟೆರಿಕ್ ಆಮ್ಲ (250 ಮಿ. ಗ್ರಾಂ. 1 ಲೀ. ನೀರಿನಲ್ಲಿ) ದ್ರಾವಣದಲ್ಲಿ ನೆನೆಹಾಕಿ ನಾಟಿಗೆ ಉಪಯೋಗಿಸಬೇಕು.

2. ಕಣ್ಣು ಕಸಿ ವಿಧಾನ :

ಇತ್ತೀಚಿನ ದಿನಗಳಲ್ಲಿ ಬೀಜರಹಿತ ತಳಿಗಳನ್ನು ತೋಟದಲ್ಲೇ ಕಣ್ಣು ಕಸಿ ವಿಧಾನ ಅನುಸರಿಸಿ ಗಿಡಗಳನ್ನು ಬೆಳೆಯುತ್ತಿದ್ದಾರೆ. ಇದರಿಂದ ಆನೇಕ ಉಪಯೋಗಗಳಿವೆ.

ಡಾಗ್‌ರಿಡ್ಜ್ (Dogridge) ಬೇರು ಸಸಿಗಳನ್ನು ತೋಟದ ಗುಂಡಿಗಳಲ್ಲಿ (ಅಕ್ಟೋಬರ್-ಜನವರಿ) ನಾಟಿ ಮಾಡಬೇಕು. ಒಂದು ವರ್ಷದ ನಂತರ, ಬೆಳೆದ ಬೇರು ಕಾಂಡಗಳ ಮೇಲೆ (ಭೂಮಿಯಿಂದ 1 ಅಡಿ ಎತ್ತರದಲ್ಲಿ ) ಆಯ್ದ ತಳಿಗಳ ಕಣ್ಣುಗಳನ್ನು (Buds) ತಂದು ಕಣ್ಣು ಕಸಿ ಮಾಡಬೇಕು (ಸೆಪ್ಟೆಂಬರ್/ಅಕ್ಟೋಬರ್) ಮತ್ತು ಚಿಗುರಿದ ಕಣ್ಣು ಕಸಿಯನ್ನು ಚಪ್ಪರದ ಎತ್ತರಕ್ಕೆ ಬೆಳೆಸಿಕೊಳ್ಳಬೇಕು.

ನಾಟಿ ಮಾಡುವುದು :

ಉತ್ತಮವಾಗಿ ಬೇರುಬಿಟ್ಟ ಮೂರು ಕಣ್ಣುಳ್ಳ ಕಡ್ಡಿಗಳನ್ನು ನಾಟಿಮಾಡಬೇಕು. ಆಕ್ಟೋಬರ್ ತಿಂಗಳ ಎರಡನೇ ವಾರದಿಂದ ಜನವರಿ ತಿಂಗಳ ಕೊನೆಯವರೆಗೆ ನಾಟಿಗೆ ಸೂಕ್ತ, ಅಕ್ಟೋಬರ್ ತಿಂಗಳಲ್ಲಿ ನಿರ್ದಿಷ್ಟ ಪಡಿಸಿದ ಅಂತರದಲ್ಲಿ 90 x 90 x 90 ಸೆಂ.ಮೀ. ಆಳತೆಯ ಗುಣಿಗಳನ್ನು 15 ದಿವಸ ಮುಂಚಿತವಾಗಿ ತಯಾರಿಸಬೇಕು. ಕಡಿಮೆ ಅಂತರದಲ್ಲಿ ನಾಟಿ ಮಾಡುವ ಪಕ್ಷದಲ್ಲಿ ಸಾಲಿನುದ್ದಕ್ಕೂ, ಹರಿ/ಕಾಲುವೆಗಳನ್ನು 60 ಸೆಂ.ಮೀ. ಆಳ ಮತ್ತು 60 ಸೆಂ.ಮೀ. ಅಗಲ ತೆಗೆಯುವುದು ಒಳ್ಳೆಯದು. ಗುಣಿಗಳನ್ನು ಒಂದು ಪದರ ಹಸಿರೆಲೆ ಗೊಬ್ಬರ (ಹೊಂಗೆ ಸೊಪ್ಪು ಅಥವಾ ಗಿರಿಸೀಡಿಯ ಎಲೆಗಳು) ಹಾಕಿ ಮೇಲುಭಾಗದಲ್ಲಿ ಒಂದು ಪದರು ಮೇಲ್ಕಣ್ಣು ಹಾಕಿ ಮುಚ್ಚಬೇಕು. ಇದೇ ಸಮಯದಲ್ಲಿ ಪ್ರತಿ ಗುಣಿಗೆ / ಪ್ರತಿ ನಾಟಿ ಸ್ಥಳಕ್ಕೆ 400 ಗ್ರಾಂ. ಬೋನ್‌ಮೀಲ್ ಅಥವಾ 400ಗ್ರಾಂ ಸೂಪರ್ ಫಾಸ್ಟೇಟ್ ಮತ್ತು 1 ಕಿ. ಗ್ರಾಂ. ಬೇವಿನ ಹಿಂಡಿಯನ್ನು ಹಾಕಬೇಕು. ನಂತರ ತೆಳುವಾಗಿ ನೀರು ಹಾಯಿಸಿ ಮಣ್ಣು ಚೆನ್ನಾಗಿ ಕುಳಿತುಕೊಳ್ಳುವಂತೆ ಮಾಡಬೇಕು. ಒಂದು ವಾರದ ನಂತರ ಬೇರು ಬಂದ ಕಡ್ಡಿಗಳನ್ನು ನಾಟಿ ಮಾಡಬೇಕು.

ಬಳ್ಳಿ ಹಬ್ಬಿಸುವುದು : ದ್ರಾಕ್ಷಿ ಬಳ್ಳಿಗಳು ಚಪ್ಪರ (ಪೆಂಡಾಲ್) ವಿಧಾನದಲ್ಲಿ ಹಬ್ಬಿಸಿದಲ್ಲಿ ಉಳಿದ ವಿಧಾನಗಳಿಗಿಂತ (ಟೆಲಿಫೋನ್, ನಿಫಿನ್, ಕಾರ್ಡಾನ್ ಮತ್ತು ಹೆಡ್) ಹೆಚ್ಚಿನ ಇಳುವರಿ ಕೊಡುತ್ತವೆ. ಹೀಗಾಗಿ ಹೆಚ್ಚಾಗಿ ಚಪ್ಪರ ವಿಧಾನದಿಂದ ದ್ರಾಕ್ಷಿಯನ್ನು ಬೆಳೆಯುವುದು ರೂಢಿ.

ಚಪ್ಪರ ವಿಧಾನ : ಈ ವಿಧಾನದಲ್ಲಿ ಸಾಮಾನ್ಯವಾಗಿ ಬುಡದಿಂದ ಒಂದು ಬಳ್ಳಿಯನ್ನು ಮಾತ್ರ ಬೆಳೆಯಲು ಬಿಟ್ಟು ಅದು ಚಪ್ಪರದ ಎತ್ತರ ತಲುಪುವವರೆಗೆ ಬಿದಿರುಬೊಂಬಿನ ಸಹಾಯದಿಂದ ಆಸರೆ ಒದಗಿಸಿ ಪಕ್ಕದಲ್ಲಿ ಬರುವ ಚಿಗುರುಗಳನ್ನು ತೆಗೆಯುತ್ತಿರಬೇಕು. ಬಳ್ಳಿಯು ಚಪ್ಪರ ತಲುಪಲು ಸುಮಾರು 15 ಸೆಂ.ಮೀ. (6 ಅಂಗುಲ) ಇದ್ದಾಗಲೇ ಅದರ ತುದಿಯನ್ನು ಕತ್ತರಿಸಿ ಎರಡು ಕವಲುಗಳನ್ನು ಚಪ್ಪರದ ಮೇಲೆ ಬೆಳೆಯಲು ಬಿಡಬೇಕು. ಇವೆರಡು ಕವಲುಗಳು ವಿರುದ್ಧ ದಿಕ್ಕಿನಲ್ಲಿ ಹಬ್ಬುವಂತೆ ಅಳವಡಿಸಬೇಕು. ಕೊನೆಗೆ ಈ ಕವಲುಗಳು ರೆಂಬೆಗಳಾಗುತ್ತವೆ. ಈ ರೆಂಬೆಗಳು ಹಬ್ಬಿದಂತೆಲ್ಲ ಪ್ರತಿ 45 ಸೆಂ.ಮೀ. ಅಂತರದಲ್ಲಿ ಸಣ್ಣ ರೆಂಬೆಗಳು ಬೆಳೆಯುವಂತೆ ನೋಡಿಕೊಳ್ಳಬೇಕು. ಈ ಸಣ್ಣ ರೆಂಬೆಗಳ ಮೇಲೆ ಬರುವ ಚಿಕ್ಕ ಕಡ್ಡಿಗಳು ಬಲಿತು ಹಣ್ಣುಗಳನ್ನು ಕೊಡುತ್ತವೆ. ಈ ಬಳ್ಳಿ ಹಬ್ಬಿಸುವ ಅವಧಿಯಲ್ಲಿ ನಿಯಮಿತವಾಗಿ ಬಳ್ಳಿ ಮತ್ತು ರೆಂಬೆಗಳನ್ನು ಬಾಳೆನಾರು ಅಥವಾ ದಾರದಿಂದ ಕಟ್ಟಬೇಕು. ಅಲ್ಲದೇ ಅನವಶ್ಯಕವಾದ ಚಿಗುರುಗಳನ್ನು ತೆಗೆಯಬೇಕು. ಕಡಿಮೆ ರಭಸದಿಂದ ಬೆಳೆಯುವ ಬಳ್ಳಿ ಅಥವಾ ತಳಿಗಳನ್ನು ಈ ವಿಧಾನದಲ್ಲಿ ಬೆಳೆಯಬಹುದಾಗಿದೆ. ಈ ವಿಧಾನವನ್ನು ಆಳವಡಿಸಿಕೊಳ್ಳುವುದರಿಂದ ಔಷಧಿ ಸಿಂಪರಣೆ, ಬಳ್ಳಿ ಕತ್ತರಿಸುವುದು ಮುಂತಾದ ಕೆಲಸಗಳಿಗೆ ಸುಲಭ.

ವಾಯ್ (Y) ಆಕಾರದ ಪದ್ಧತಿ :

ದ್ರಾಕ್ಷಿ ಬಳ್ಳಿಯನ್ನು ವಿವಿಧ ಆಕಾರದಲ್ಲಿ ಹಬ್ಬಿಸಲಾಗುತ್ತದೆ. ಅದರಲ್ಲಿ “ವಾಯ್” (y) ಆಕಾರದ ಪದ್ಧತಿ ಹೆಚ್ಚು ಪ್ರಚಲಿತವಾಗುತ್ತಿದೆ. “ವಾಯ್” ಆಕಾರದಲ್ಲಿ 1.75 ಮೀ. (ಐದು ಅಡಿ) ಕಲ್ಲಿನ ಕಂಬಕ್ಕೆ ಒಂದು ಮೀಟರ್ ಉದ್ದದ ಎರಡು ಕಬ್ಬಿಣದ ತುಂಡುಗಳನ್ನು 60′ ಕೋನಾಕಾರದಲ್ಲಿ ಮಾಡಿ ಕಂಬಕ್ಕೆ ಅಳವಡಿಸಬೇಕು. ನಂತರ “ವಾಯ್” ಆಕಾರದ ಕಬ್ಬಿಣದ ಪಟ್ಟಿಯ ಕೆಳತುದಿಗೆ ಒಂದು ತಂತಿಯನ್ನು ಮತ್ತು ಪಕ್ಕದ ಎಡ ಹಾಗೂ ಬಲ ಭಾಗದ ಪಟ್ಟಿಗಳಿಗೆ ಮೂರು ತಂತಿಗಳಂತೆ ಒಟ್ಟು 7 ತಂತಿಗಳನ್ನು ಎಳೆಯಬೇಕು, ಕೆಳ ತುದಿಯ ತಂತಿಯ ಮೇಲೆ ಮುಖ್ಯ ಎರಡು ಕವಲುಗಳನ್ನು ವಿರುದ್ಧ ದಿಕ್ಕಿನಲ್ಲಿ ಹಬ್ಬುವಂತೆ ಮಾಡಬೇಕು. ಕವಲುಗಳ ಮೇಲೆ ಬಂದಂತಹ ಚಿಕ್ಕ ಕಾಂಡಗಳು (ಕಡ್ಡಿಗಳು) ಪಕ್ಕದಲ್ಲಿದ್ದ ಎಡ ಹಾಗೂ ಬಲ ತಂತಿಯ ಮೇಲೆ ಹರಡುವಂತೆ ಮಾಡಿಕೊಳ್ಳಬೇಕು. ಈ ಬಳ್ಳಿ ಹಬ್ಬಿಸುವ ಅವಧಿಯಲ್ಲಿ

ನಿಯಮಿತವಾಗಿ ಬಳ್ಳಿ ಹಾಗೂ ರೆಂಬೆಗಳನ್ನು ಬಾಳೆ ನಾರು ಅಥವಾ ನಾರಿನಿಂದ ಕಟ್ಟಬೇಕು. ಅಲ್ಲದೇ ಅನವಶ್ಯಕವಾದ ಚಿಗುರುಗಳನ್ನು

ತೆಗೆಯಬೇಕು. ಈ ಪದ್ಧತಿಯಲ್ಲಿ ರೋಗ ಹಾಗೂ ಕೀಟಗಳ ಬಾಧೆಯನ್ನು ಕಡಿಮೆಗೊಳಿಸಬಹುದಲ್ಲದೇ, ಸಾಕಷ್ಟು ಪ್ರಮಾಣದ ಸೂರ್ಯನ

ಬೆಳಕನ್ನು ಉಪಯೋಗಿಸಿಕೊಳ್ಳುವಂತಹ ಸಾಮರ್ಥ್ಯವನ್ನು ಹೊಂದಿದೆ.ಬಳ್ಳಿ ಕತ್ತರಿಸುವುದು (ಚಾಟನಿ ಮಾಡುವುದು) : ಸಾಮಾನ್ಯವಾಗಿ ನಾಟಿ ಮಾಡಿದ ಒಂದೂವರೆಯಿಂದ ಎರಡು ವರ್ಷಗಳಲ್ಲಿ ಬಳ್ಳಿಗಳ ಗಾತ್ರ

ಮುಂಗೈದಪ್ಪಗಿಂತ ಸ್ವಲ್ಪ ಕಡಿಮೆ ಇದ್ದಾಗ ಹಣ್ಣು ಪಡೆಯಲು ಬಳ್ಳಿಗಳನ್ನು ಚಾಟನಿ ಮಾಡುತ್ತಾರೆ. ಇದನ್ನು ಉತ್ತಮ ಇಳುವರಿ ಮತ್ತು ಬಳ್ಳಿಗಳ

ಬೆಳವಣಿಗೆಯನ್ನು ನಿಯಂತ್ರಿಸಲು ಕೈಗೊಳ್ಳುತ್ತಾರೆ. ಬಳ್ಳಿಯನ್ನು ವರ್ಷದಲ್ಲಿ ಎರಡು ಬಾರಿ ಅಂದರೆ ಒಮ್ಮೆ ಏಪ್ರಿಲ್ (ಬೇಸಿಗೆ) ತಿಂಗಳಲ್ಲಿ ಮತ್ತು

ಇನ್ನೊಮ್ಮೆ ಅಕ್ಟೋಬರ್ (ಚಳಿಗಾಲ) ತಿಂಗಳಲ್ಲಿ ಕತ್ತರಿಸುತ್ತಾರೆ.

ಬೇಸಿಗೆ ಚಾಟನಿ (ಬಳ್ಳಿ ಕತ್ತರಿಸುವುದು) : ಸಾಮಾನ್ಯವಾಗಿ ಬಳ್ಳಿಯ ಮುಖ್ಯ ರೆಂಬೆಗಳು ಹಾಗೂ ಸಣ್ಣ ರೆಂಬೆಗಳ ಮೇಲೆ ಒಂದು ವರ್ಷ

ಹಳೆಯ ಮತ್ತು ಹೊಸದಾಗಿ ಬೆಳೆದ ಕಡ್ಡಿಗಳನ್ನು ಒಂದು ಕಣ್ಣು ಬಿಟ್ಟು ಕತ್ತರಿಸಬೇಕು. ನಂತರ ಬಳ್ಳಿಯ ಮೇಲೆ ಉಳಿದ ಎಲ್ಲಾ ಎಲೆಗಳನ್ನು

ತೆಗೆದುಹಾಕಿ. ಇದನ್ನು ‘ಹಿಂಜಾಟಿನಿ’ ಅಥವಾ ‘ತಳಪಾಯ ಚಾಟನಿ’ ಎಂದು ಕರೆಯುತ್ತಾರೆ.

ಚಳಿಗಾಲ ಚಾಟನಿ : ಇದನ್ನು ಅಕ್ಟೋಬರ್ ತಿಂಗಳಲ್ಲಿ ಕೈಗೊಳ್ಳುತ್ತಾರೆ. ಬಳ್ಳಿ ಕತ್ತರಿಸುವುದಕ್ಕೆ ಮೂರು ವಾರ ಮುಂಚೆ ನೀರು ಹಾಯಿಸುವುದು

ನಿಲ್ಲಿಸಿ, ಬಳ್ಳಿಗಳಿಗೆ ವಿಶ್ರಾಂತಿ ಕೊಡಬೇಕು. ಬಳ್ಳಿಗಳ ಬುಡದ ಸುತ್ತಲೂ 10-15 ಸೆಂ.ಮೀ. ಆಳದ ಪಾತಿ ಮಾಡಬೇಕು. ಚೆನ್ನಾಗಿ ಬಲಿತ ಕಂದು

ಬಣ್ಣದ ಪೆನ್ಸಿಲ್ ಗಾತ್ರದ ಕಡ್ಡಿಗಳಲ್ಲಿ ಅನಾಬ್ -ಎ-ಶಾಹಿ ತಳಿಯಾದಲ್ಲಿ 5-7 ಕಣ್ಣು ಬಿಟ್ಟು, ಥಾಮ್ಲನ್ ಸೀಡ್‌ಲೆಸ್ ತಳಿಯಾದಲ್ಲಿ 8-10 ಕಣ್ಣು

ಬಿಟ್ಟು ಮೇಲ್ಬಾಗವನ್ನು ಚಾಟನಿ ಮಾಡಬೇಕು. ಆರ್ಕಾವತಿ ಮುಂತಾದ ಸಂಕರಣ ತಳಿಗಳಲ್ಲಿ 5-6 ಕಣ್ಣು ಬಿಟ್ಟು ಚಾಟನಿ ಮಾಡುತ್ತಾರೆ.

ಕಣ್ಣುಗಳಲ್ಲಿ ಹಣ್ಣು ಬಿಡುವ ಸಾಮರ್ಥ್ಯ ವರ್ಷದಿಂದ ವರ್ಷಕ್ಕೆ ವಾತಾವರಣ, ಪೋಷಣೆ, ಹಿಂದಿನ ವರ್ಷದ ಬೆಳೆಯ ಹೊರೆ

ಮುಂತಾದವುಗಳನ್ನವಲಂಬಿಸಿ ವ್ಯತ್ಯಾಸವಾಗುತ್ತದೆ. ಆದ್ದರಿಂದ ರೈತರು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ, ಕೃಷಿ ಇವರ ಸಹಾಯ ಪಡೆಯಬೇಕು

ಡಾರ್ಮ್ಯಾರ್ಕ್ಸ ಬಳಕೆ :

ಶೇಕಡ 2ರ ಹೈಡೋಜನ್ ಸೈನಾಮೈಡ್ ರಾಸಾಯನಿಕ ದ್ರಾವಣದಲ್ಲಿ ಅರಳೆ (ಹತ್ತಿ)ಯನ್ನು ಅದ್ದಿ, ಅಕ್ಟೋಬರ್

ಚಾಟನಿಯಾದ ನಂತರ ಆರನೇ ಹಾಗೂ ನಂತರದ ಕಣ್ಣುಗಳಿಗೆ ಲೇಪಿಸುವುದರಿಂದ ಬೀಜರಹಿತ ದ್ರಾಕ್ಷಿ ಬೆಳೆಯಲ್ಲಿ ಕಣ್ಣು ಚಿಗುರುವಿಕೆಯಪ್ರಮಾಣ ಹೆಚ್ಚುತ್ತದೆ. ದ್ರಾವಣವನ್ನು ಲೇಪನ ಮಾಡುವಾಗ ಕೈಗಳಿಗೆ ರಬ್ಬರ ಕವಚ ಹಾಕಿಕೊಳ್ಳಬೇಕು.

ಹಂತ ಹಂತವಾಗಿ ಬಳ್ಳಿ ಕತ್ತರಿಸುವುದು : ದ್ರಾಕ್ಷಿ ಹಣ್ಣುಗಳು ಮಾರುಕಟ್ಟೆಯಲ್ಲಿ ದೀರ್ಘಾವಧಿಯವರೆಗೆ ದೊರೆಯುವಂತೆ ಮಾಡಲು ಬೆಂಗಳೂರು

ಬ್ಲೂ ತಳಿಯನ್ನು ಹಂತ ಹಂತವಾಗಿ ವರ್ಷವಿಡೀ ಚಾಟನಿ ಮಾಡುತ್ತಾರೆ. ಹೀಗಾಗಿ ಒಂದೇ ದ್ರಾಕ್ಷಿ ತೋಟದಲ್ಲಿ ಏಕಕಾಲದಲ್ಲಿ ಕೆಲ ಭಾಗಗಳಲ್ಲಿ ಚಾಟನಿ ಮಾಡುತ್ತಿರುವುದು. ಇನ್ನು ಕೆಲವು ಭಾಗಗಳಲ್ಲಿ ಹಣ್ಣಿರುವುದು ಹಾಗೂ ಕೆಲವುಗಳಲ್ಲಿ ಕೊಯ್ದು ಮಾಡುತ್ತಿರುವುದು ಕಂಡುಬರುತ್ತದೆ.

ಗೊಬ್ಬರ ಹಾಕುವುದು : ಸಾರಜನಕ ಮತ್ತು ರಂಜಕ ಉತ್ತಮ ಬೆಳವಣಿಗೆಗೆ ಹಾಗೂ ಹಣ್ಣು ಬಿಡಲು ಸಹಾಯವಾಗುತ್ತವೆ. ಪೊಟ್ಯಾಷ್ ಅಂಶವು ಹಣ್ಣುಗಳ ಬಣ್ಣ ಮತ್ತು ಗುಣಮಟ್ಟ ಸುಧಾರಣೆಗೆ ಬೇಕು. ಈ ಕೆಳಗೆ ಸೂಚಿಸಿದ ವಿಧಾನಗಳನ್ನು ಸಾಮಾನ್ಯವಾಗಿ ಎಲ್ಲಾ ತಳಿಗಳಿಗೂ ಅನುಸರಿಸಬೇಕು.

ಮೊದಲನೇ ವರ್ಷ : ನಾಟಿಗೆ ಮೊದಲು ಪ್ರತಿ ಗುಣಿಗೆ ಒದಗಿಸಿದ ಗೊಬ್ಬರಗಳ ಜೊತೆಗೆ ಪ್ರತಿ ಬಳಿಗೆ ಪ್ರತಿ ತಿಂಗಳು 25 ಗ್ರಾಂ. ಯೂರಿಯಾ, 50 ಗ್ರಾಂ. ಸೂಪರ್ ಫಾಸ್ಟೇಟ್ ಒದಗಿಸಬೇಕು. ಇವುಗಳನ್ನು ಬಳ್ಳಿಯಿಂದ ಒಂದು ಅಡಿ ದೂರದಲ್ಲಿ ಹಾಕಬೇಕು. ಇದರಿಂದ ದ್ರಾಕ್ಷಿ ಬಳ್ಳಿ ತ್ವರಿತವಾಗಿ ಬೆಳೆದು ಹಂದರವನ್ನು ಬೇಗ ತಲುಪುತ್ತದೆ.

ಎರಡನೇ ವರ್ಷ : ಹಣ್ಣು ಕೊಡುವ ಬಳ್ಳಿಗಳಿಗೆ ತಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರಗಳ ಶೇಕಡ 50 ರಷ್ಟು ಈ ಹಂತದಲ್ಲಿ ಕೊಡಬೇಕು, ರಸಗೊಬ್ಬರಗಳನ್ನು ಎರಡು ಸಮಕಂತುಗಳಲ್ಲಿ, ಪ್ರತಿ ಚಾಟನಿಯ ನಂತರ ಕೊಡಬೇಕು.

ಮೂರನೇ ವರ್ಷ ಹಾಗೂ ನಂತರ : ಮೂರನೇ ವರ್ಷದಿಂದ ಬಳ್ಳಿಗಳಿಗೆ ಶಿಫಾರಸ್ಸು ಮಾಡಿದ ಪೂರ್ಣ ಪ್ರಮಾಣದ ರಾಸಾಯನಿಕ ಗೊಬ್ಬರಗಳನ್ನು ಒದಗಿಸಬೇಕು. ಬೇಸಿಗೆ ಚಾಟನಿಯ ನಂತರ ಏಪ್ರೀಲ್ ತಿಂಗಳಲ್ಲಿ ಶಿಫಾರಸ್ಸು ಮಾಡಿದ ಪ್ರಮಾಣದ ಶೇಕಡ 60 ರಷ್ಟು

ಸಾರಜನಕ, ಶೇ. 50 ರಷ್ಟು ರಂಜಕ ಶೇ. 40 ರಷ್ಟು ಪೊಟ್ಯಾಷ್‌ಗಳನ್ನೊದಗಿಸುವ ರಾಸಾಯನಿಕ ಗೊಬ್ಬರಗಳನ್ನು ಕೊಡಬೇಕು. ಅಕ್ಟೋಬರ್ ತಿಂಗಳಲ್ಲಿ ಚಳಿಗಾಲದ ಚಾಟನಿಯ ನಂತರ ಉಳಿದ ಶೇಕಡ 40 ರಷ್ಟು ಸಾರಜನಕ, ಶೇಕಡ 50 ರಷ್ಟು ರಂಜಕ ಮತ್ತು ಶೇಕಡ 30 ರಷ್ಟು ಪೊಟ್ಯಾಷ್‌ಗಳನ್ನೊದಗಿಸುವ ರಾಸಾಯನಿಕ ಗೊಬ್ಬರ ಕೊಡಬೇಕು. ಇನ್ನುಳಿದ ಶೇಕಡ 30 ರಷ್ಟು ಪೊಟ್ಯಾಪ್‌ನ್ನು ಚಳಿಗಾಲದ ಚಾಟನಿಯಾದ 45 ದಿನಗಳ ನಂತರ ಒದಗಿಸಬೇಕು. ಈ ರೀತಿ ಕಂತುಗಳಲ್ಲಿ ರಾಸಾಯನಿಕ ಗೊಬ್ಬರಗಳನ್ನು ನೀಡುವುದು, ಒಟ್ಟಿಗೆ ಏಕಕಾಲದಲ್ಲಿ ಒದಗಿಸುವುದಕ್ಕಿಂತ ಬಹಳ ಪ್ರಯೋಜನಕಾರಿಯಾಗಿತ್ತದೆ.

ನೀರಾವರಿ : ಚಾಟನಿ ಮಾಡಿದ ಮತ್ತು ರಾಸಾಯನಿಕ ಗೊಬ್ಬರಗಳನ್ನು ಪೂರೈಸಿದ ಕೂಡಲೇ ನೀರನ್ನು ಒದಗಿಸಿ ದ್ರಾಕ್ಷಿ ಕಾಯಿಗಳು ಬಟಾಣಿ ಗಾತ್ರದ ತಲುಪುವತನಕ 5-7 ದಿನಗಳಿಗೊಮ್ಮೆ ನೀರು ಕೊಟ್ಟು, ತದನಂತರ ಪ್ರತಿ 10 ದಿನಗಳಿಗೊಮ್ಮೆ ನೀರು ಕೊಡಬೇಕು. ಕೊಯ್ದು ಮಾಡುವ ಒಂದು ವಾರಕ್ಕೆ ಮುಂಚೆ ನೀರು ಕೊಡದೇ ಇರುವುದರಿಂದ ಹಣ್ಣುಗಳು ಹೆಚ್ಚು ಸಿಹಿಯಾಗಿರುತ್ತವೆ.

ದ್ರಾಕ್ಷಿ ಬೆಳೆಗೆ ಹನಿ ನೀರಾವರಿಯನ್ನು ಅಳವಡಿಸಿಕೊಂಡರೆ ಸೂಕ್ತ. ಇದರಿಂದ ನೀರಿನ ಉಳಿತಾಯವಾಗುವುದಲ್ಲದೆ, ಬೇಕಾದ ಹಂತಗಳಲ್ಲಿ ನೀರನ್ನು ಸೂಕ್ತ ಪ್ರಮಾಣಗಳಲ್ಲಿ ಕೊಡಬಹುದು. ಇತ್ತೀಚೆಗೆ ಮಾರುಕಟ್ಟೆಗೆ ಬರಲಾರಂಭಿಸಿರುವ ನೀರಿನಲ್ಲಿ ಕರಗಬಹುದಾದ ರಸಗೊಬ್ಬರಗಳನ್ನು ಸುಲಭವಾಗಿ ಡ್ರಿಪ್ ಮೂಲಕ ಕೊಡಬಹುದು.

ಗೊಂಚಲಿನ ಗಾತ್ರ ಮತ್ತು ಹಣ್ಣುಗಳ ಗುಣಮಟ್ಟ ಹೆಚ್ಚಿಸುವುದು : ಥಾಮ್ರನ್ ಸೀಡ್‌ಲೆಸ್ ತಳಿಯಲ್ಲಿ ಗೊಂಚಲುಗಳನ್ನು ಪೂರ್ತಿ ಹೂ ಅರಳಿದ

ಹಂತದಲ್ಲಿ 20 ಪಿ.ಪಿ.ಎಂ. ಮತ್ತು ನಂತರ ಕಾಯಿ ಕಚ್ಚುವ ಹಂತದಲ್ಲಿ 50 ಪಿ.ಪಿ.ಎಂ. ಜಿಬ್ಬರ್ಲಿಕ್ (Gibberlic acid) ಆಮ್ಲದ ದ್ರಾವಣದಲ್ಲಿ ಅದ್ದುವುದರಿಂದ, ಗೊಂಚಲಿನಲ್ಲಿ ಹಣ್ಣು ಒತ್ತಾಗಿರುವುದು ಕಡಿಮೆಯಾಗುವುದಲ್ಲದೇ ಗೊಂಚಲು ಹಾಗೂ ಹಣ್ಣುಗಳ ಗಾತ್ರ ದ್ವಿಗುಣಗೊಳ್ಳುವುದು (20 ಪಿ.ಪಿ.ಎಂ. ಅಂದರೆ 20 ಮಿ. ಗ್ರಾಂ. 1 ಲೀಟರ್ ನೀರಿನಲ್ಲಿ ಹಾಗೂ 50 ಪಿ.ಪಿ.ಎಂ. ಅಂದರೆ 50 ಮಿ. ಗ್ರಾಂ. 1 ಲೀಟರ್ ನೀರಿನಲ್ಲಿ).

ಕಳೆ ನಿರ್ವಹಣೆ :

ಸಾಲುಗಳ ಮಧ್ಯೆ ಅಂತರಬೇಸಾಯ ಮಾಡಿ ಕೈಯಿಂದ ಕಳೆ ತೆಗೆಯಬಹುದು. ಇಲ್ಲವೆ ಕಳೆನಾಶಕಗಳನ್ನು ಬಳಸಬಹುದು.

Leave a Reply

Your email address will not be published. Required fields are marked *