ರೈತ ಬಾಂಧವರೇ ನಿಮ್ಮ ತೋಟದಲ್ಲಿ  ಸಸ್ಯಗಳು. ಏಕೆ ಹೀಗಾಗುತ್ತವೆ..?ಇದರ ಬಗ್ಗೆ ನಿಮಗೇನಾದರೂ ಗೊತ್ತಾ…?

ನಮಸ್ಕಾರ ರೈತ ಬಾಂಧವರೇ…….!


ನಾವು ಒಕ್ಕಲುತನ ಮಾಡಬೇಕಾದರೆ ಕೃಷಿಯಲ್ಲಿ ಅನುಭವ ಬೇಕಾಗುತ್ತದೆ ಅನುಭವ ಇಲ್ಲದಿದ್ದರೆ ನಷ್ಟ ಉಂಟಾಗುವುದು ಖಚಿತ ಯಾವ ಸಮಯದಲ್ಲಿ ಬೆತ್ತಲೆ ಮಾಡಬೇಕು ಹಾಗೂ ಯಾವ ರೀತಿ ಬೀಜೋಪಚಾರ ಮಾಡಬೇಕು ಮತ್ತು ಯಾವ ರೀತಿ ಉಳುಮೆ ಮಾಡಿ ಭೂಮಿಯನ್ನು ಸಿದ್ಧಗೊಳಿಸಬೇಕು ಎನ್ನುವುದರ ಬಗ್ಗೆ ರೈತರು ಮುಖ್ಯವಾಗಿ ತಿಳಿದುಕೊಂಡಿರಬೇಕು ಇಲ್ಲವಾದರೆ ನಷ್ಟ ಅನುಭವಿಸುವುದು ಖಚಿತ ರೈತರು ಭೂಮಿಯಲ್ಲಿ ಬೀಜವನ್ನು ಹಾಕಿದಾಗ ಆ  ದೊಡ್ಡದಾಗಿ ಉತ್ತಮವಾದ ಫಲವನ್ನು ಕೊಡಬೇಕಾದರೆ ಹಲವಾರು ಉಪಚಾರಗಳನ್ನು ನಾವು ಮಾಡಬೇಕಾಗುತ್ತದೆ ಎಷ್ಟು ಉಪಚಾರ ಮಾಡುತ್ತೇವೋ ಅಷ್ಟು ನಮಗೆ ಉತ್ತಮ ಆದಾಯ ಕೊಡಲು ಸಸಿಗಳು ಸಿದ್ಧವಾಗಿರುತ್ತವೆ ಎಷ್ಟು ಬೇಜವಾಬ್ದಾರಿಯಿಂದ ಕೃಷಿಯಲ್ಲಿ ನಾವು ರೈತರು ತಡೆದುಕೊಳ್ಳುತ್ತೇವೆ ಅಷ್ಟು ನಮಗೆ ಆದಾಯ ಫಲಿಸುವುದಿಲ್ಲ ಏಕೆಂದರೆ ಒಂದು ಸಸಿ ಬೆಳೆದು ದೊಡ್ಡದಾಗಿ ಅದರ ಇಳುವರಿನ್ನು ಪಡೆಯಬೇಕಾದರೆ ಸಸಿ ಅತಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ರೈತರ ಕರ್ತವವಾಗಿದೆ ಪ್ರತಿಯೊಂದು ಬೆಳೆಗೆ ತನ್ನದೇ ಆದಂತಹ ರೋಗಗಳು ಮತ್ತು ಕೀಟ ಹಾವಳಿಗಳು ಉಂಟಾಗುವ ಸಂಭವವಿರುತ್ತದೆ ಮತ್ತು ಅದರ ನಿರ್ವಹಣೆ ಕೂಡ ಅತಿ ಅಷ್ಟೇ ಮುಖ್ಯವಾಗಿದೆ ಸರಿಯಾದ ಸಮಯದಲ್ಲಿ ರೋಗಗಳ ಹತೋಟಿ ಕ್ರಮವನ್ನು ನಾವು ಕೈಗೊಳ್ಳಬೇಕು ರೋಗಗಳ ಹತೋಟಿಯನ್ನು ಕೈಗೊಳ್ಳದಿದ್ದರೆ ರೋಗಗಳು ಬೀಳುತ್ತವೆ ಇದರಿಂದ ಸಸಿಗಳು ನಾಶವಾಗಿ ಇಳುವರಿಯಲ್ಲಿ ಅತಿ ಕಡಿಮೆ ಇಳುವರಿ ತಂದುಕೊಡುತ್ತದೆ ಕೀಟನಾಶಕ ಹಾಗೂ ರೋಗಗಳ ನಿರ್ವಹಣೆಯಲ್ಲಿ ಮಾಡಿದರು ಕೂಡ ಕೆಲವೊಂದು ಭೂಮಿಯಲ್ಲಿ ಪೋಷಕಾಂಶಗಳು ಕಡಿಮೆ ಪ್ರಮಾಣದಲ್ಲಿ ಇರುತ್ತವೆ ಮತ್ತು ಸಸ್ಯಗೆ ಬೇಕಾಗುವಂತಹ ಪ್ರತಿಯೊಂದು ಪೋಷಕಾಂಶಗಳು ನಿಗದಿತ ಪ್ರಮಾಣದಲ್ಲಿ ಭೂಮಿಯಲ್ಲಿ ಇರುವುದಿಲ್ಲ ಹಾಗಾಗಿ ಅವುಗಳನ್ನು ನಾವು ಕಂಡು ಹಿಡಿಯುವುದು ಹೇಗೆ ಮತ್ತು ಅವುಗಳ ಪೋಷಕಾಂಶಗಳ ಬಗ್ಗೆ ಅರಿವುವನ್ನು ಈ ವಿಷಯದಲ್ಲಿ ಚರ್ಚಿಸೋಣ ಯಾವ ಶೇಷಗಳಿಗೆ ಎಷ್ಟು ಪೋಷಕಾಂಶಗಳು ಕೊಟ್ಟರೆ ಅದು ಆರೋಗ್ಯವಾಗಿ ಇರುತ್ತದೆ?
ಒಂದು ಸತ್ಯ ಉತ್ತಮವಾಗಿ ಫಲ ಕೊಡಬೇಕಾದರೆ ಅದಕ್ಕೆ ಪೋಷಕಾಂಶಗಳು ಅತಿ ಮುಖ್ಯವಾಗಿ ಬೇಕಾಗುತ್ತದೆ ಪೋಷಕಾಂಶಗಳು ಕಡಿಮೆ ಪ್ರಮಾಣದಲ್ಲಿ ದೊರಕಿದರೆ ಸಸ್ಯಗಳು ತಾವಾಗಿಯೇ ಸೂಚನೆಗಳನ್ನು ತೋರಿಸುತ್ತವೆ  ಸಸ್ಯಗೆ ಬೇಕಾಗುವಂತಹ ಪೋಷಕಾಂಶಗಳನ್ನು ಒದಗಿಸಬೇಕಾಗುತ್ತದೆ ಮೊದಲನೇದಾಗಿ ಎನ್ ಪಿ ಕೆ ಅತಿ ಮುಖ್ಯವಾದ ಪೋಷಕಾಂಶಗಳು ಆಗಿರುತ್ತವೆ  ಮೈಕ್ರೋ ನ್ಯೂಟ್ರನ್ ಕೂಡ  ಸಸ್ಯಗಳಿಗೆ ಬೆಳವಣಿಗೆಯಲ್ಲಿ ಅತಿ ಮುಖ್ಯವಾದ ಅಂಶವಾಗಿವೆ
ಈ ಎಲ್ಲಾ ಪೋಷಕಾಂಶಗಳನ್ನು ಸರಿಯಾದ ರೀತಿಯಲ್ಲಿ ಸರಿಯಾದ ಪ್ರಮಾಣದಲ್ಲಿ ಕೊಟ್ಟರೆ ಲಾಭ  ನಿಮ್ಮದಾಗುತ್ತದೆ ಸಸ್ಯಗಳ ಬೆಳವಣಿಗೆಯಲ್ಲಿ ಅನೇಕ ಪೋಷಕಾಂಶಗಳು ಅಗತ್ಯವಿದ್ದು, ಅವುಗಳ ಕೊರತೆಯಿಂದ ಬೆಳೆಗಳ ಇಳುವರಿ ಉತ್ಪನ್ನದ ಗುಣಮಟ್ಟದ ಮೇಲೆ ಸಾಕಷ್ಟು ಪರಿಣಾಮಗಳಾಗುತ್ತವೆ. ಕೃಷಿಯಲ್ಲಿ ಅತೀ ಅವಶ್ಯವಿರುವ ಪೋಷಕಾಂಶಗಳು, ಅವುಗಳ ಕೊರತೆಯಿಂದ ವಿವಿಧ ಬೆಳೆಗಳಲ್ಲಿ ಕಾಣುವ ಲಕ್ಷಣಗಳು ಹಾಗೂ ಅವುಗಳನ್ನು ನಿವಾರಿಸುವ ಕ್ರಮಗಳ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ

1)ಸಸ್ಯ ಪೋಷಕಾಂಶಗಳ ಲಕ್ಷಣಗಳು:

ಸಸ್ಯಗಳ ಬೆಳವಣಿಗೆಯಲ್ಲಿ ಅನೇಕ ಪೋಷಕಾಂಶಗಳು ಅಗತ್ಯವಿದ್ದು, ಅವುಗಳ ಕೊರತೆಯಿಂದ ಬೆಳೆಗಳ ಇಳುವರಿ ಉತ್ಪನ್ನದ ಗುಣಮಟ್ಟದ ಮೇಲೆ ಸಾಕಷ್ಟು ಪರಿಣಾಮಗಳಾಗುತ್ತವೆ. ಕೃಷಿಯಲ್ಲಿ ಅತೀ ಅವಶ್ಯವಿರುವ ಪೋಷಕಾಂಶಗಳು, ಅವುಗಳ ಕೊರತೆಯಿಂದ ವಿವಿಧ ಬೆಳೆಗಳಲ್ಲಿ ಕಾಣುವ ಲಕ್ಷಣಗಳು ಹಾಗೂ ಅವುಗಳನ್ನು ನಿವಾರಿಸುವ ಕ್ರಮಗಳ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ

1)ಸಾರಜನಕ

ಸಾರಜನಕವು ಸಸ್ಯ ಬೆಳವಣಿಗೆಯಲ್ಲಿ ಪ್ರಧಾನ ಪೋಷಕ ವಾಗಿದ್ದು, ಪತ್ರ ಹರಿತ್ತು. ಪ್ರೋಟೋಪ್ಲಾಸಂ, ಪ್ರೋಟಿನ್ ಮತ್ತು ನ್ಯೂಕ್ಲಿಕ್ ಆ್ಯಸಿಡ್‌ ಅಂಶವಾಗಿದೆ.

ಕೊರತೆಯ ಲಕ್ಷಣಗಳು

ಬೆಳವಣಿಗೆ ಕುಂಠಿತವಾಗುವುದು

ಕೆಳಭಾಗದ ಎಲೆಗಳು ತುದಿಯಿಂದ ತಳಭಾಗಕ್ಕೆ ತಿಳಿ ಹಸಿರು ಅಥವಾ ಹಳದಿ ಬಣ್ಣಕ್ಕೆ ತಿರುಗುವುವು ನಂತರ ಎಲೆ ಒಣಗಿ ಉದುರುವುದು.

ಅತಿ ಹೆಚ್ಚಿನ ಕೊರತೆ ಇದ್ದಾಗ ಹೂ ಬಿಡುವುದು ಕಡಿಮೆಯಾಗಿ ಇಳುವರಿ ಕಡಿಮೆಯಾಗುತ್ತದೆ.

ನಿರ್ವಹಣೆ : ಕೊರತೆಯ ಲಕ್ಷಣಗಳು ಕಂಡ ತಕ್ಷಣ ಶೇ 2 ರ ಯೂರಿಯಾ ದ್ರಾವಣ (20 ಗ್ರಾಂ. ಯೂರಿಯಾವನ್ನು 1 ಲೀ. ನೀರಿನಲ್ಲಿ ಕರಗಿಸುವುದು) ಸಿಂಪಡಿಸುವುದು. ಆಯಾ ಬೆಳೆಗೆ ಶಿಫಾರಸು ಮಾಡಿದ ಪ್ರಮಾಣದಲ್ಲಿ ಸಾರಜನಕಯುಕ್ತ ರಸಗೊಬ್ಬರಗಳನ್ನು ಇತರ ಸಸ್ಯ ಪೋಷಕಾಂಶಗಳೊಂದಿಗೆ ಒದಗಿಸಬೇಕು.

2)ರಂಜಕ

ಸಸ್ಯಗಳ ಹಾಗೂ ಬೇರುಗಳ ಬೆಳವಣಿಗೆಯನ್ನು ವೃದ್ಧಿ ಮಾಡುತ್ತದೆ. ಕಾಳು ಮತ್ತು ಹಣ್ಣುಗಳ ಉತ್ಪಾದನಾ ಕಾರ್ಯದಲ್ಲಿ ಸಹಕಾರಿ ಹಾಗೂ ಬೆಳೆ ಇಳುವರಿ ಹೆಚ್ಚಳಕ್ಕೆ ಪ್ರೇರಕ. ನ್ಯೂಕ್ಲಿಕ್ ಆಸಿಡ್ಸ್, ಪ್ರೋಟಿನ್ ಫಾಸ್ಟೋಲಿಪಿಡ್ಸ್ ಎನ್.ಎ.ಡಿ., ಎನ್‌.ಎ.ಡಿ.ಪಿ ಮತ್ತು ಎ.ಟಿ.ಪಿ ಗಳ ಅಂಶವಾಗಿದೆ.

ಕೊರತೆಯ ಲಕ್ಷಣಗಳು

ಬೇರುಗಳು ಸರಿಯಾಗಿ ಬೆಳೆಯದೇ ಎಲೆ ಮತ್ತು ಕಾಂಡಗಳ ಕುಂಠಿತ ಬೆಳವಣಿಗೆ

ಎಲೆ ಮತ್ತು ಕಾಂಡಗಳು ಕಂದು ಬಣ್ಣಕ್ಕೆ ತಿರುಗುವುದು

ಮಾಗಿದ ಎಲೆಗಳು ನೀಲಿ ಮಿಶ್ರಿತ ಹಳದಿ ಬಣ್ಣಕ್ಕೆ ತಿರುಗುವುದು

ತಡವಾಗಿ ಕೊಯ್ಲಿಗೆ ಬರುವಿಕೆ

ಸರಿಯಾಗಿ ಕಾಳು ಅಥವಾ ಕಾಯಿ ಕಚ್ಚದಿರುವುದುನಿರ್ವಹಣೆ : ಕೊರತೆಯ ಲಕ್ಷಣಗಳು ಕಂಡಾಗ ಶೇ 2 ರ ಡಿಎಪಿ ದ್ರಾವಣ ಸಿಂಪಡಿಸುವುದು/ಶಿಫಾರಸು ಮಾಡಿದ ಪ್ರಮಾಣದಲ್ಲಿ ರಂಜಕಯುಕ್ತ ರಸಗೊಬ್ಬರಗಳನ್ನು ಇತರೆ ಸಸ್ಯ ಪೋಷಕಾಂಶಗಳೊಂದಿಗೆ ಒದಗಿಸಬೇಕು.

ಹುಳಿ ಮಣ್ಣಿಗೆ ರಂಜಕವನ್ನು ಬೇಸಿಕ್‌ಸ್ಲಾಗ್ ಅಥವಾ ಶಿಲಾರಂಜಕದ ಮೂಲಕ ಒದಗಿಸುವುದು.

3)ಪೋಟ್ಯಾಪ್

ಸಸ್ಯಗಳ ಬೆಳವಣಿಗೆಯಲ್ಲಿ ಉಪಯೋಗವಾಗುವ ಪ್ರಧಾನ ಆಹಾರಾಂಶವಾಗಿದೆ. ಎಲೆ ಹಸಿರು (ಪತ್ರ ಹರಿತ್ತು) ವೃದ್ಧಿಗೆ, ಬೆಳೆ ಸರಿಯಾಗಿ ಬೆಳೆಯಲು ಹಾಗೂ ರೋಗರುಜಿಗಳ ಭಾದೆಯನ್ನು ತಡೆಯುವ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ. ಇದು ಸಸ್ಯಗಳ ಕಾಂಡಗಳಲ್ಲಿ ಬಿರುಸುತನವನ್ನು ಒದಗಿಸುತ್ತದೆ ಹಾಗೂ ಪಿಷ್ಠ, ಸಕ್ಕರೆ ಹಾಗೂ ಎಣ್ಣೆಗಳ ನಿರ್ಮಾಣ ಮತ್ತು ಸಾಗಾಣಿಕೆಗೆ ನೆರವಾಗುತ್ತದೆ. ತರಕಾರಿ ಮತ್ತು ಹಣ್ಣುಗಳ ಗುಣಮಟ್ಟವನ್ನು ವೃದ್ಧಿಸುತ್ತದೆ.

ಕೊರತೆಯ ಲಕ್ಷಣಗಳು

ಬೆಳೆ ಕಂದು ಬಣ್ಣಕ್ಕೆ ತಿರುಗಿ ಸುಟ್ಟಂತಾಗಿ ಬೆಳವಣಿಗೆ ಕುಂಠಿತವಾಗುವುದು ಕೆಳಗಿನ ಎಲೆಗಳು ತುದಿಯಿಂದ ಒಣಗಲು ಪ್ರಾರಂಭವಾಗಿ ಅಂಚುಗಳನ್ನು

ಆವರಿಸುವುದು ಹಾಗೂ ಮಧ್ಯದ ಭಾಗ ಹಸಿರಾಗಿಯೇ ಇರುವುದು.

ತೆನೆಗಳ ಕುಂಠಿತ ಬೆಳವಣಿಗೆ

ಹಣ್ಣುಗಳಲ್ಲಿ ಯೋಗ್ಯ ಬಣ್ಣ, ರುಚಿ ಮತ್ತು ಪರಿಮಳ ಬರುವುದಿಲ್ಲ ಹಾಗೂ ಸಂಗ್ರಹಣಾ ಶಕ್ತಿ ಕಡಿಮೆಯಾಗುವುದು

ನಿರ್ವಹಣೆ : ಅಗತ್ಯಕ್ಕನುಗುಣವಾಗಿ ಶಿಫಾರಸು ಮಾಡಿದ ಪ್ರಮಾಣದಲ್ಲಿ ಪೋಟ್ಯಾಷ್‌ ಯುಕ್ತ ರಸಗೊಬ್ಬರವನ್ನು ಇತರೆ ಪೋಷಕಾಂಶಗಳ ಜೊತೆಗೆ ಬೆಳೆಗೆ ಹಾಕಬೇಕು.

4)ಸುಣ್ಣ (ಕ್ಯಾಲ್ಸಿಯಂ)

ಸುಣ್ಣವು ಸಸ್ಯ ಜೀವಕೋಶಗಳ ಗೋಡೆಗಳ ಒಂದು ಅಂಶವಾಗಿದ್ದು

ಕ್ಯಾಲ್ಸಿಯಂ ಪೆಕ್ಟೇಟ್ ರೂಪದಲ್ಲಿರುತ್ತದೆ. ಇದು ಜೀವಕೋಶಗಳ ವಿಭಜನೆಯಲ್ಲಿ

ಅಗತ್ಯವಾಗಿರುತ್ತದೆ. ಹಲವಾರು ಕಿಣ್ವಗಳ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತದೆ. ಸಸ್ಯಗಳ ಬೆಳವಣಿಗೆಯಲ್ಲಿ ಸುಣ್ಣದ ಪ್ರಾಮುಖ್ಯತೆ ಕೆಳಗಿನಂತಿದೆ.

ಪ್ರಾರಂಭದಲ್ಲಿ ಬೇರು ಮತ್ತು ಕುಡಿಗಳ ಬೆಳವಣಿಗೆಗೆ ನೆರವಾಗುತ್ತದೆ.

ಭೂಮಿಯಲ್ಲಿ ಸಸ್ಯ ವಸ್ತು ಕಳಿಯಲು ಹಾಗೂ ಆ ವಸ್ತುಗಳಿಂದ ನೈಟ್ರೇಟ್ ಸಿದ್ಧವಾಗಲು ಸಹಾಯವಾಗಿ ಮಣ್ಣಿನ ಭೌತಿಕ ಸ್ಥಿತಿಯನ್ನು ಸುಧಾರಿಸುತ್ತದೆಆಮ್ಲತೆಯನ್ನು ಕಡಿಮೆ ಮಾಡಿ ನಂಜಿನ ವಸ್ತುಗಳಿಂದಾಗುವ ಹಾನಿಯನ್ನು ತಪ್ಪಿಸುತ್ತದೆ.

ಎಲೆ ಮುದುರುವಿಕೆ ಮೊದಲಾದ ರೋಗಗಳಿಂದ ಸಸ್ಯಗಳನ್ನು ರಕ್ಷಿಸುತ್ತದೆ

ಇತರೆ ಸಸ್ಯ ಪೋಷಕಾಂಶಗಳನ್ನು ಬೆಳೆಗಳು ಪಡೆಯಲು ನೆರವಾಗುತ್ತದೆ.

ಕೊರತೆಯ ಲಕ್ಷಣಗಳು

ಕೊರತೆಯ ಲಕ್ಷಣಗಳು ಸಾಮಾನ್ಯವಾಗಿ ಹುಳಿ ಮಣ್ಣುಗಳಲ್ಲಿ ಕಂಡುಬರುತ್ತದೆ.

ಸಸ್ಯಗಳ ತುದಿಗಳು ಸರಿಯಾಗಿ ಬೆಳೆಯುವುದಿಲ್ಲ ಹಾಗೂ ಬಾಡಿದಂತೆ

ಕಾಣುತ್ತವೆ ಹಾಗೂ ಸರಿಯಾಗಿ ಹೂವು ಬಿಡುವುದಿಲ್ಲ

ಎಲೆಗಳ ಅಂಚುಗಳು ವಿಕೃತಗೊಂಡು ಎಳೆ ಎಲೆಗಳು ಹಳದಿ ಕಪ್ಪು ವರ್ಣದಿಂದ ಮುದುರಿಕೊಂಡಿರುತ್ತವೆ.

ನಿರ್ವಹಣೆ : ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಭೂಮಿಗೆ ಸುಣ್ಣ ಹಾಕುವುದು.

:

5)ಮೆಗ್ನಿಷಿಯಂ:

ಮೆಗ್ನಿಷಿಯಂ ಪತ್ರ ಹರಿತ್ತಿನ ಒಂದು ಭಾಗವಾಗಿದ್ದು, ಬೆಳೆಗಳಿಗೆ ದಟ್ಟ ಹಸಿರು ಬಣ್ಣ ಬರಲು ಕಾರಣವಾಗಿದೆ. ಹಲವಾರು ಕಿಣ್ವಗಳ ಕ್ರಿಯೆಯಲ್ಲಿ ಪಾತ್ರವಹಿಸುತ್ತದೆ. ಮೆಗ್ನಿಷಿಯಂ ತೆನೆಗಳ ನಿರ್ಮಾಣ ಹಾಗೂ ಬೆಳೆಗಳ ಮಾಗುವಿಕೆಯಲ್ಲಿ, ದ್ವಿದಳ ಧಾನ್ಯಗಳ ಬೇರುಗಳ ಮೇಲಿನ ಗಂಟುಗಳ ನಿರ್ಮಾಣ, ತೆಂಡೆಗಳು ಹೊಡೆಯುವುದಕ್ಕೆ ನೆರವಾಗುತ್ತದೆ.

ಅವುಗಳ ಲಕ್ಷಣ ಕೆಳಗಿನಂತಿವೆ

ಕೊರತೆಯ ಲಕ್ಷಣಗಳು

ಕೆಳಗಿನ ಎಲೆಗಳ ಕೆಳಭಾಗವು ತೆಳು ನೇರಳೆ ಬಣ್ಣಕ್ಕೆ ತಿರುಗುವುದು

ಎಲೆಗಳು ಬಹಳ ತೆಳುವಾಗುತ್ತವೆ ಹಾಗೂ ಮೇಲ್ಬಾಗಕ್ಕೆ ಮುದುರಿಕೊಳ್ಳುತ್ತವೆ.

ಎಳೆ ಎಲೆಗಳು ಒಣಗಿ ಉದುರುತ್ತವೆ.

ನಿರ್ವಹಣೆ : ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಮೆಗ್ನಿಷಿಯಂ ಸಟ್ ಉಪಯೋಗಿಸುವುದು.

ಸಾಕಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರದ ಬಳಕೆ ಮಾಡುವುದು

ಹುಳಿ ಮಣ್ಣಿಗೆ ಡೋಲೋಮೈಟ್ ಸುಣ್ಣ ಬೆರೆಸುವುದು.

6)ಗಂಧಕ

ಗಂಧಕವು ಪ್ರತಿ ವರ್ಷ ಮಳೆ ನೀರಿನ ಜೊತೆಗೆ ಹಾಗೂ ಸಾವಯವ ಗೊಬ್ಬರಗಳೊಂದಿಗೆ ಮಣ್ಣಿನಲ್ಲಿ ಸೇರುವುದು. ಇದು ಸಸ್ಯಗಳಲ್ಲಿನ ಅಮಿನೋ ಆಮ್ಲ ಮತ್ತು ಪ್ರೋಟಿನ್ ಜೀವಕಣಗಳ ಒಂದಂಶವಾಗಿದೆ. ಬೇರುಗಳ ಬೆಳವಣಿಗೆಯಲ್ಲಿನೆರವಾಗುತ್ತದೆ ಹಾಗೂ ಬೀಜಗಳ ಬೆಳವಣಿಗೆಯಲ್ಲೂ ಚೇತನ ನೀಡುವುದು. ಬೀಜಗಳಲ್ಲಿ ಎಣ್ಣೆ ಅಂಶ ಹೆಚ್ಚಿಸಲು ಸಹಾಯವಾಗಿ ಪೈರು ಶಕ್ತಿಯುತವಾಗಿ ಬೆಳೆಯಲು ಸಹಕಾರಿ.

ಕೊರತೆಯ ಲಕ್ಷಣಗಳು

ಎಳೆ ಎಲೆಗಳು ತಿಳಿ ಹಸಿರು ಬಣ್ಣದ್ದಿದ್ದು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಾಂಡಗಳು ಚಿಕ್ಕದಾಗಿ ಮೃದುವಾಗಿ ಬೆಳವಣಿಗೆ ಕುಂಠಿತಗೊಳ್ಳುವುದು

ಕಾಯಿಗಳು ಸರಿಯಾಗಿ ಮಾಗದೆ ತಿಳಿ ಹಸಿರು ಬಣ್ಣಕ್ಕೆ ತಿರುಗುತ್ತವೆ.

ತೆನೆಗಳು ಚಿಕ್ಕದಾಗಿ ಕಾಳುಗಳು ಸಂಖ್ಯೆ ಕಡಿಮೆಯಾಗುತ್ತದೆ.

ಬೆಳೆ ಮಾಗುವುದು ನಿಧಾನವಾಗುವುದು

ನಿರ್ವಹಣೆ : ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಗಂಧಕವನ್ನು (ಜಿಪ್ಪಂ) ಬೆಳೆಗೆ ಒದಗಿಸಬೇಕು ಹಾಗೂ ಶಿಫಾರಸು ಮಾಡಿದ ಪ್ರಮಾಣದಲ್ಲಿ ಸಾವಯವ ಗೊಬ್ಬರಗಳನ್ನು ಹಾಕಬೇಕು.



7)ಕಬ್ಬಿಣ

ಕಬ್ಬಿಣವು ಪತ್ರ ಹರಿತ್ತಿನ ತಯಾರಿಕೆಯಲ್ಲಿ ಅವಶ್ಯಕವಾಗಿದೆ. ಆದರೆ ಇದು ಪತ್ರ ಹರಿತ್ತಿನಲ್ಲಿರುವುದಿಲ್ಲ. ಇದು ಹಲವಾರು ಕಿಣ್ವಗಳ ಕ್ರಿಯೆಗಳಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಸಸ್ಯಗಳ ಉಸಿರಾಡುವಿಕೆ, ದ್ಯುತಿ ಸಂಶ್ಲೇಷಣಾ ಕ್ರಿಯೆಗಳನ್ನು ನಿಯಂತ್ರಿಸುವಲ್ಲಿ ಪಾತ್ರವಹಿಸುತ್ತದೆ.

ಕೊರತೆಯ ಲಕ್ಷಣಗಳು

ಚಿಗುರೆಲೆಗಳ ನರಗಳು ಹಸಿರಿದ್ದು ನರಗಳ ಮಧ್ಯಭಾಗ ಹಳದಿಯಾಗಿರುತ್ತದೆ. ಹೆಚ್ಚಿನ ಕೊರತೆಯಾದಾಗ ಎಳೆ ಎಲೆಗಳು ಪತ್ರ ಹರಿತ್ತಿಲ್ಲದ ಕಾರಣ ಬಿಳಿಚಿಕೊಳ್ಳುತ್ತವೆ. ನಂತರ ಒಣಗಿ ಕಾಗದದ ಹಾಗೆ ಆಗಿ ಉದುರುತ್ತವೆ.

ಕಾಳಿನ ಬೆಳೆಗಳಲ್ಲಿ ಕಾಳು ಸರಿಯಾಗಿ ಆಗುವುದಿಲ್ಲ.

ಸಾರಜನಕ ಸಾಕಷ್ಟು ಇದ್ದಾಗಲೂ ಕೊರತೆ ಲಕ್ಷಣಗಳು ಕಂಡುಬಂದರೆ ಕಬ್ಬಿಣದ ಕೊರತೆಯನ್ನು ಎತ್ತಿ ತೋರಿಸುತ್ತದೆ.

ಮಣ್ಣಿನಲ್ಲಿ ಪೋಟ್ಯಾಷ್, ಸುಣ್ಣ ಇಲ್ಲವೇ ಮ್ಯಾಂಗನೀಸ್ ಹೆಚ್ಚಿರುವಾಗ ಕಬ್ಬಿಣದ ಕೊರತೆಗಳು ಕಾಣಿಸುವುವು.

ನಿರ್ವಹಣೆ : ಮಣ್ಣಿನಲ್ಲಿ ಕಬ್ಬಿಣದ ಕೊರತೆ ಇದ್ದಲ್ಲಿ ಶೇ 0.5 ರಿಂದ 1 ರ ಫೆರಸ್ ಸಲ್ವೇಟ್ ಮತ್ತು ಶೇ. 0.5 ರ ಸಿಟ್ರಿಕ್ ಆಮ್ಲ ದ್ರಾವಣವನ್ನು 25 ರಿಂದ 30 ದಿನಗಳ ಬೆಳೆಗೆ ಸಿಂಪಡಿಸುವುದರಿಂದ ಕೊರತೆಯನ್ನು ನಿವಾರಿಸಬಹುದು.

ಪ್ರತಿ ಹೆಕ್ಟೇರಿಗೆ 20-25 ಕಿ.ಗ್ರಾಂ ಫೆರಸ್ ಸಲ್ವೇಟ್‌ನ್ನು ಅಷ್ಟೇ ಪ್ರಮಾಣದ ಎರೆಗೊಬ್ಬರದ ಜೊತೆ ಮಿಶ್ರಣ ಮಾಡಿ ಬೆಳೆಗೆ ಬಿತ್ತುವ ಸಮಯದಲ್ಲಿ ಒದಗಿಸುವುದು.ಮ್ಯಾಂಗನೀಸ್

ಮ್ಯಾಂಗನೀಸ್ ಪತ್ರಹರಿತ್ತಿನ ಒಂದು ಅಂಶವಾಗಿದ್ದು, ಸಸ್ಯಗಳಲ್ಲಿ ಎಣ್ಣೆ ಮತ್ತು ಕೊಬ್ಬಿನ ಉತ್ಪಾದನೆಯಲ್ಲಿ ಅವಶ್ಯಕ. ಪೋಷಕಾಂಶಗಳನ್ನು ಹೀರುವ ಹಾಗೂ ಸಸ್ಯಗಳು ಇವುಗಳನ್ನು ಬಳಸುವುದರಲ್ಲಿ ಪಾತ್ರವಹಿಸುತ್ತದೆ. ಇದು ದ್ಯುತಿ ಸಂಶ್ಲೇಷಣಾ ಕ್ರಿಯೆ ಹಾಗೂ ಸಸ್ಯಗಳಲ್ಲಿ ‘ಆಕ್ಸಿಡೇಶನ್’, ರಿಡಕ್ಷನ್ ಕ್ರಿಯೆಗಳಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.

ಕೊರತೆಯ ಲಕ್ಷಣಗಳು

ಎಲೆಗಳ ನರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಭಾಗವು ಬಿಳಿಚಿಕೊಳ್ಳುವುದು ಕೆಲವು ಸಾರಿ ಎಲೆಗಳು ಪೂರ್ತಿ ಬಿಳುಪಾಗುವವು

ಚಿಗುರು ಎಲೆಗಳಲ್ಲಿ ಮೊದಲು ಕೊರತೆಯ ಚಿಟ್ಟೆಗಳು ಕಂಡುಬರುತ್ತವೆ.

ನಿರ್ವಹಣೆ : ಶೇ. 0.5 ರಿಂದ ಶೇ. 1 ಮ್ಯಾಂಗನೀಸ್ ಸಲ್ವೇಟ್ನ್ನು ಸುಣ್ಣದಿಂದ ತಟಸ್ವೀಕರಿಸಿ 25-30 ದಿನಗಳ ಬೆಳೆಗೆ ಸಿಂಪಡಿಸುವುದು. 2 ರಿಂದ 3 ಸಿಂಪರಣೆಯನ್ನು 7-10 ದಿನಗಳ ಅಂತರದಲ್ಲಿ ಮಾಡುವುದು.

ಮ್ಯಾಂಗನೀಸ್ ಕೊರತೆ ಇದ್ದ ಮಣ್ಣಿಗೆ ಪ್ರತಿ ಹೆಕ್ಟೇರಿಗೆ 20-25 ಕಿ.ಗ್ರಾಂ ಮ್ಯಾಂಗನೀಸ್ ಸಲ್ವೇಟ್‌ನ್ನು ಅಷ್ಟೇ ಪ್ರಮಾಣದ ಎರೆಗೊಬ್ಬರದ ಜೊತೆ ಮಿಶ್ರಣ ಮಾಡಿ ಬೆಳೆಗಳಿಗೆ ಬಿತ್ತುವ ಸಮಯದಲ್ಲಿ ಒದಗಿಸುವುದು.

8)ಸತುವು

ಸತುವು. ಪ್ರೋಟೀನ್ ಮತ್ತು ಪಿಷ್ಠ ತಯಾರಿಕೆಯ ಕಿಣ್ವಗಳ ನಿರ್ಮಾಣಕ್ಕೆ ಅವಶ್ಯಕ. ಕಬ್ಬಿಣ ಮತ್ತು ಮ್ಯಾಂಗನೀಸ್‌ನೊಂದಿಗೆ ಪತ್ರಹರಿತ್ತಿನ ತಯಾರಿಕೆಯಲ್ಲಿ ಪಾತ್ರವಹಿಸುತ್ತದೆ. ಮುಖ್ಯವಾಗಿ ಸತುವು ಪತ್ರಹರಿತ್ತಿನ ಸಂಶ್ಲೇಷಣೆಯಲ್ಲಿ ಭಾಗವಹಿಸುತ್ತದೆ ಹಾಗೂ ಐ.ಎ.ಎ ಬೆಳವಣಿಗೆ ಹಾರ್ಮೋನ್‌ ಜೈವಿಕ ಸಂಶ್ಲೇಷಣೆಯಲ್ಲಿ ಪಾಲ್ಗೊಳ್ಳುತ್ತದೆ. ಸಾರಜನಕದ ‘ಮೆಟಬಾಲಿಸಮ್’, ದ್ಯುತಿಸಂಶ್ಲೇಷಣಾ ಕ್ರಿಯೆ ಹಾಗೂ ಕಾಳುಗಳ ಉತ್ಪಾದನೆಯಲ್ಲಿ ಪಾತ್ರವಹಿಸುತ್ತದೆ.

ಕೊರತೆಯ ಲಕ್ಷಣಗಳು

ಕೊರತೆಯ ಚಿನೆಗಳು ಸಸ್ಯದ ತುದಿಯಿಂದ ಎರಡನೆಯ ಅಥವಾ ಮೂರನೆಯ ಬಲಿತ ಎಲೆಗಳಲ್ಲಿ ಮೊದಲು ಕಂಡುಬರುತ್ತದೆ.

ಸುಳಿಗಳ ನರಗಳ ಮಧ್ಯ ಭಾಗ ಹಳದಿಯಾಗುವುದು ಹಾಗೂ ಬಿಳಿಚಿಕೊಳ್ಳುವುದು

ಹಾಗೂ ಚಿಗರೆಲೆಗಳ ಗಾತ್ರ ಕಡಿಮೆಯಾಗುವುದು.

ಸಸ್ಯಗಳಲ್ಲಿನ ಗೆಣ್ಣುಗಳ ನಡುವಿನ ಭಾಗ ಹತ್ತಿರವಾಗಿ ಕುಂಠಿತ ಬೆಳವಣಿಗೆಯಿಂದ ಸಸ್ಯಗಳು ಗಿಡ್ಡದಾಗಿ ಕಾಣುತ್ತವೆ.

ಹೂ ಬಿಡುವುದು. ಕಾಯಿಯಾಗುವುದು ಹಾಗೂ ಮಾಗುವುದು ತಡವಾಗುವುದು. ಕುಡಿಗಳು ಬಾಡಿ ಸಾಯುವುದು ಹಾಗೂ ಎಲೆಗಳು ಉದುರುವವು.ನಿರ್ವಹಣೆ : ಸತುವಿನ ಕೊರತೆ ಇದ್ದ ಮಣ್ಣಿಗೆ ಶೇ 0.5 ರಿಂದ ಶೇ 1 ರ ಜಿಂಕ್ ಸಟ್‌ನ್ನು ಸುಣ್ಣದಿಂದ ತಟಸ್ಥಗೊಳಿಸಿ 25-30 ದಿನದ ಬೆಳೆಗೆ ಸಿಂಪರಿಸುವುದು. 2 ರಿಂದ 3 ಸಿಂಪರಣೆಯನ್ನು 7-10 ದಿನಗಳ ಅಂತರದಲ್ಲಿ ಮಾಡಬೇಕು. ಪ್ರತಿ ಹೆಕ್ಟೇರಿಗೆ 20-25 ಕಿ. ಗ್ರಾಂ. ಜಿಂಕ್ ಸಲ್ವೇಟ್‌ನ್ನು ಅಷ್ಟೇ ಪ್ರಮಾಣದ ಎರೆಗೊಬ್ಬರ ಜೊತೆ ಮಿಶ್ರಣ ಮಾಡಿ ಬಿತ್ತುವ ಸಮಯದಲ್ಲಿ ಒದಗಿಸುವುದು.

9)ತಾಮ್ರ:(COPER)

ತಾಮ್ರವು ಪತ್ರ ಹರಿತ್ತಿನ ಒಂದು ಅಂಶವಾಗಿದ್ದು, ಪತ್ರ ಹರಿತ್ತಿನ ತಯಾರಿಕೆಯಲ್ಲಿ ಸಹಕಾರಿ ಸಸ್ಯದಲ್ಲಿರುವ ಹಲವು ಕಿಣ್ವಗಳ ಉತ್ಪತ್ತಿಯ ಕಾರ್ಯದಲ್ಲಿ ಉತ್ತೇಜಿತ ವಸ್ತು, ವಿಟಾಮಿನ್ ‘ಎ’ ತಯಾರಿಕೆಯಲ್ಲಿ ತಾಮ್ರ ಅಗತ್ಯ. ಪತ್ರ ಹರಿತ್ತಿನ ಸಂಶ್ಲೇಷಣೆಗೆ ಅಗತ್ಯವಾದ ಕಬ್ಬಿಣದ ಸಂಯುಕ್ತಗಳನ್ನು ಸಸ್ಯ ಉತ್ಪಾದಿಸಲು ಇದು ಅತ್ಯಗತ್ಯ.

ಕೊರತೆಯ ಲಕ್ಷಣಗಳು

ತಾಮ್ರದ ಕೊರತೆಯ ಚಿಹ್ನೆಗಳು ಮೊದಲು ಚಿಗುರೆಲೆಗಳಲ್ಲಿ ಕಂಡುಬರುತ್ತದೆ. ಎಲೆಗಳ ನರಗಳು ಹಸಿರಿದ್ದು ಮಧ್ಯದ ಭಾಗ ಹಳದಿಯಾಗುವುದು ಅಥವಾ ಈ ಚಿಟ್ಟೆಗಳು ಕೆಲವು ವೇಳೆ ಕಂಡು ಬರದೇ ಇರಬಹುದು. ಮಧ್ಯಮ ಅಥವಾ ಅತಿ ಹೆಚ್ಚಿನ ಕೊರತೆಯಾದ ಸಂದರ್ಭದಲ್ಲಿ ಸಸ್ಯದ ತುದಿಗಳು ಬೆಳವಣಿಗೆಯಾಗದೆ ಸಾಯುವವು. ದ್ಯುತಿ ಸಂಶ್ಲೇಷಣೆ ಕ್ರಿಯೆಯಿಂದ ಆಹಾರ ಉತ್ಪಾದನೆ ಕುಂಠಿತಗೊಳ್ಳುವುದು. ಬಹು ಎಲೆ ಮೊಗ್ಗುಗಳು ಎಲೆ ಸಂದಿಗಳಲ್ಲಿ ಆಗುವುವು ಎಲೆಗಳು ವಿರೂಪಗೊಂಡು ಹಣ್ಣುಗಳು ಬಿರುಕು ಬಿಡುವುದು ಮತ್ತು ತುದಿ ಒಣಗುವುದು

ನಿರ್ವಹಣೆ : ಬೆಳೆಗೆ ಶೇ. 0.1 ರಿಂದ ಶೇ 0.5 ತಾಮ್ರದ ಸಲ್ವೇಟ್ ಸಿಂಪರಣೆ ತಾಮ್ರದ ಕೊರತೆ ಇದ್ದ ಮಣ್ಣಿಗೆ ಪ್ರತಿ ಹೆಕ್ಟೇರಿಗೆ 20-25 ಕಿ. ಗ್ರಾಂ. ತಾಮ್ರದ ಸಟ್‌ನ್ನು ಅಷ್ಟೇ ಪ್ರಮಾಣದಲ್ಲಿ ಎರೆಗೊಬ್ಬರ ಜೊತೆ ಮಿಶ್ರಣಮಾಡಿ ಬೆಳೆಗೆ ಬಿತ್ತುವ ಸಮಯದಲ್ಲಿ ಒದಗಿಸುವುದು. ತಾಮ್ರಯುಕ್ತ ಶಿಲೀಂದ್ರ ನಾಶಕದ ಬಳಕೆ ಮಾಡುವುದು ಸಾಕಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರಗಳನ್ನು ಬಳಸುವುದು.

10)ಬೋರಾನ್:BORAN

ಬೋರಾನ್ ಬೀಟ್‌ರೂಟ್, ಹತ್ತಿ ಮತ್ತು ದ್ವಿದಳ ಬೆಳೆಗಳಿಗೆ ಹೆಚ್ಚು ಅವಶ್ಯಕ. ದ್ವಿದಳ ಧಾನ್ಯಗಳಲ್ಲಿ ಗಾಳಿಯಿಂದ ಸಾರಜನಕ ಹೀರಿಕೊಳ್ಳುವ ಸೂಕ್ಷ್ಮ ಜೀವಿಗಳ ಕ್ರಿಯೆಗೆ ಇದು ಸಹಾಯಕ ಇದರ ಕೊರತೆಯು ತರಕಾರಿ. ದ್ವಿದಳ ಧಾನ್ಯ ಹಾಗೂ ಹಣ್ಣಿನ ಬೆಳೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಬೋರಾನ್ ಸಸ್ಯಗಳ ಅಂಗಾಂಶಗಳ ಬೆಳವಣಿಗೆ ಹಾಗೂ ವ್ಯತ್ಯಾಸದಲ್ಲಿ ಮುಖ್ಯವಾದ ಪಾತ್ರವಹಿಸುತ್ತದೆ. ಪಿಷ್ಠದ ಮೆಟಬಾಲಿಸಮ್ ಹಾಗೂ ಸಕ್ಕರೆಯ ಸಾಗಾಣಿಕೆಯಲ್ಲಿ ಕೂಡಾ ಪಾತ್ರವಹಿಸುತ್ತದೆ. ಬೇರುಗಳು ಹೂವಿನ ಬೆಳವಣಿಗೆ ಸಹಾಯವಾಗುತ್ತದೆ.
ಈ ಎಲ್ಲ ಕ್ರಮಗಳನ್ನು ಅನುಸರಿಸಿದರೆ ಉತ್ತಮವಾದ ಬೆಳೆಗಳನ್ನು ಬೆಳೆಯಲು ಸಹಾಯವಾಗುತ್ತದೆ ಇನ್ನು ಹೆಚ್ಚಿನ ಮಾಹಿತಿ ಬೇಕಾದರೆ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಕೊಡಿ ಧನ್ಯವಾದಗಳು

Leave a Reply

Your email address will not be published. Required fields are marked *