ಯಾವ ಕೋಳಿ ಸಾಕಿದರೆ ಎಷ್ಟು ಉತ್ಪನ್ನ,
1)ಈ ಎಲ್ಲ ವಿಚಾರವಾಗಿ ಸ್ವಲ್ಪ ಚರ್ಚಿಸೋಣ.
ನಮಸ್ಕಾರ ರೈತ ಬಾಂಧವರೇ!
ಕೃಷಿ ಪರಿಸರ ಒಂದು ಜೀವವೈವಿಧ್ಯತೆಯ ದೊಡ್ಡ ಸಾಗರ ಇಲ್ಲಿ ಮಾನವನೊಂದಿಗೆ ಗಿಡ-ಮರ-ಪ್ರಾಣಿ-ಪಕ್ಷಿಗಳಿಗೆ ಸಮಾನ ಆದ್ಯತೆ ಇರುತ್ತದೆ. ಹಸು-ಎಮ್ಮೆ, ಅಡು-ಕುರಿ-ಕೋಳಿ, ನಾಯಿ ಬೆಕ್ಕುಗಳು ಕೃಷಿ ಕುಟುಂಬದ ಸದಸ್ಯರುಗಳು. ತೀರ ಇತ್ತೀಚಿನವರೆಗೆ ಪ್ರತಿ ಹಳ್ಳಿ ಮನೆಯಲ್ಲೂ ಹತ್ತಿಪ್ಪತ್ತು ನಾಟಿ ಕೋಳಿಗಳು ಸುತ್ತಾಡಿಕೊಂಡಿರುತ್ತಿದ್ದವು.
ವಾಣಿಜ್ಯ ಮಾಂಸದ ಬಿಳಿ ಕೋಳಿ ಜನಪ್ರಿಯವಾಗುತ್ತಿದ್ದಂತೆಲ್ಲ ಈ ಗ್ರಾಮೀಣ ಕೋಳಿಗಳು ಜೀವನಮಟ್ಟ ಸುಧಾರಣೆ, ಹೆಚ್ಚುತ್ತಿರುವ ವಿಭಕ್ತ ಕುಟುಂಬಗಳು, ಎಲ್ಲೆಂದರಲ್ಲಿ ಕಾಣಸಿಗುವ ಮಾಂಸದ ಕೋಳಿ ಫಾರಂಗಳು ಈ ಸ್ಥಿತ್ಯಂತದಕ್ಕೆ ಕೊಡುಗೆ ನೀಡುತ್ತಿವೆ. ಇನ್ನು ಔಷಧಕ್ಕೆ ಕೂಡಾಧಾರಂ ಕೋಳಿ ಮೊಟ್ಟೆಯೇ ಬಳಕೆಯಾಗುತ್ತಿದೆ. ಸರಿಯೊ-ತಪ್ಪೋ.ಒಟ್ಟಿನಲ್ಲಿ ಬದಲಾವಣೆಯಾಗಿದ್ದಂತೂನಿಶ್ಚಿತ.
2.ಮಾನವನ ಅಭಿರುಚಿ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ ಕಳೆದ ಮೂರು ದಶಕಗಳಿಂದ ಬಿಳಿ ಬಣ್ಣದ ಫಾರಂ ಕೋಳಿ ತಿಂದು ಬೇಜಾರದ ಹಲವರಿಗೆ ಮತ್ತೆ ನಾಟಿ ಕೋಳಿ ರುಚಿಯೆನಿಸತೊಡಗಿದೆ. ಇತ್ತ ದೊಡ್ಡ ಕಂಪನಿಗಳ ಏಕಸ್ವಾಮ್ಯ – ಮೇಟ್ಟೆಗಳಿಂದ ಬೇಸತ್ತ ಕೋಳಿ ಸಾಕಣೆದಾರರೂ ಕೂಡ ಪರ್ಯಾಯಗಳತ್ತ ಚಿಂತಿಸಿದ್ದಾರೆ. ಪಶುವಿಜ್ಞಾನಿಗಳು ವೈವಿಧ್ಯತೆಗೆ ಉತ್ತೇಜನ ನೀಡಲೆಂದು ಗ್ರಾಮೀಣ ಕೋಳಿಗಳ ಕುರಿತು ಸಾಕಷ್ಟು ಸಂಶೋಧನಾ ಕಾರ್ಯ ನಡೆಸಿದ್ದಾರೆ. ಇವೆಲ್ಲದರ ಪರಿಣಾಮವಾಗಿ ಮನೆಮಟ್ಟಿಗಿದ್ದ ನಾಟಿ ಕೋಳಿ ಬಾತುಕೋಳಿ ಟರ್ಕಿ-ಗೌಜುಗನ ಹಕ್ಕಿಗಳು ವಾಣಿಜ್ಯ ಮಾರುಕಟ್ಟೆ ಪ್ರವೇಶಿಸಿವೆ. ಈ ಬದಲಾವಣೆ ನಮ್ಮ ರಾಜ್ಯಕ್ಕಿಂತ ತಮಿಳು ನಾಡು, ಕೇರಳ ಮುಂತಾದೆಡೆ ಹೆಚ್ಚಾಗಿ ಕಂಡುಬರುತ್ತಿದೆ. ವಾಣಿಜ್ಯ ಬ್ರಾಯ್ಕರ್-ಲೇಯರ್ ಗಳಿಗೆ ಇವು ಪ್ರತಿಸ್ಪರ್ಧಿಗಳೆಂದು ತಿಳಿಯಬೇಕಿಲ್ಲ, ಬದಲಿಗೆ ಚಿಕನ್ ಬಿರಿಯಾನಿ ಪ್ರಿಯರಿಗೆ ಒಂದಿಷ್ಟು ವೈವಿಧ್ಯತೆ ಎಂದು ವರಿಗಣಿಸಬಹುದು. ತಮಿಳುನಾಡಿನಲ್ಲಿ ದೊಡ್ಡ ಉದ್ಯಮದ ಮಟ್ಟಕ್ಕೇರಿರುವ ಹಾಗೂ ನಮ್ಮ ರಾಜ್ಯದಲ್ಲಿ ವಿಪುಲ ಅವಕಾಶಗಳಿರುವ ಈ ಗ್ರಾಮೀಣ ಕೋಳಿಗಳನ್ನು ತಮಗೆ ಇಲ್ಲಿ ಪರಿಚಯಿಸುತ್ತೇನೆ.
2)ವಾಣಿಜ್ಯ ಕುಕ್ಕುಟೋದ್ಯಮದ ಸ್ಥಿತಿಗತಿ:
ವಾಣಿಜ್ಯ ಕೋಳಿ ಸಾಕಣೆ ಈಗ ಒಂದು ದೊಡ್ಡ ಉದ್ಯಮ. ನಮ್ಮ ದೇಶದಲ್ಲಿ ಸುಮಾರು 60 ಲಕ್ಷ ಜನರಿಗೆ ಇದು ಜೀವನಾಧಾರ, 1.5 ಲಕ್ಷ ಕೋಟಿ ರೂಪಾಯಿ ಕುಕ್ಕುಟೋದ್ಯಮದ ವಾರ್ಷಿಕ ವಹಿವಾಟು. ಪ್ರತಿ ದಿನ ಸುಮಾರು 35 ಕೋಟಿ ಮೊಟ್ಟೆ ಉತ್ಪಾದಿಸುವ ಭಾರತ, ಚೈನಾದ ನಂತರ ಎರಡನೇ ಸ್ಥಾನದಲ್ಲಿದೆ. ಜಾಗತಿಕವಾಗಿ ಪ್ರತಿದಿನ ಸುಮಾರು 350 ಕೋಟಿ ಮೊಟ್ಟೆ ಉತ್ಪಾದನೆಯಾಗುತ್ತದೆ. ಪ್ರತಿದಿನ 1.1 ಕೋಟಿ ಮಾಂಸದ ಕೋಳಿ ಉತ್ಪಾದನೆಯೊಂದಿಗೆ ನಮ್ಮ ದೇಶದ್ದು ಅಮೇರಿಕಾ, ಚೈನಾ, ಬ್ರೆಸಿಲ್, ಮೆಕ್ಸಿಕೊ ನಂತರದ 5ನೇ ಸ್ನಾನ. ಯೂರೋಪ್ ಒಕ್ಕೂಟ ಪರಿಗಣಿಸಿದರೆ ನಮ್ಮದು 6ನೇ ಸ್ಥಾನ. ಆದಾಗ್ಯೂ ಕುಕ್ಕುಟ ಉತ್ಪನ್ನಗಳ ರಫ್ರಿನಲ್ಲಿ ನಾವು ಬಹಳ ಹಿಂದೆ. ವಾರ್ಷಿಕ ಕೇವಲ 500 ಕೋಟಿ ರೂಪಾಯಿ ಮೊಟ್ಟೆ ಉತ್ಪಾದಿಸಿ ಅವುಗಳನ್ನು ಭಾರತದಲ್ಲಿ ಉಪಯೋಗಿಸುತ್ತಿದ್ದಾರೆ ದಕ್ಷಿಣ ಭಾರತದ್ದು ಕಾರಣ ವಾತಾವರಣ ಉನ್ನತೆ 35° ಮೀರಿದರೆ ಅಥವಾ 20 ಸೆಂಟಿಗ್ರೇಡ್ ಗಿಂತ ಕಡಿಮೆಯಾದರೆ ಕೋಳಿ ಸಾಕಣೆ ಕನ್ನ ಅಥವಾ ದುಬಾರಿ. ಉತ್ತರ ಭಾರತದ ವಾತಾವರಣ ವೈಪರೀತ್ಯ ವಾಣಿಜ್ಯ ಕೋಳಿ ಉದ್ಯಮಕ್ಕೆ ತೊಂದರೆದಾಯಕ ವಾಣಿಜ್ಯ ಮಾಂಸದ ಕೋಳಿಯನ್ನು 6 ವಾರಕ್ಕೆ ಮಾರಿದರೆ, ಮೊಟ್ಟೆ ಕೋಳಿಯ ವಾಣಿಜ್ಯಕ ಅಯಸ್ಸು 72 ವಾರ. ಅಂದರೆ ಸುಮಾರು ಒಂದೂವರೆ ವರ್ಷ.
ಉತ್ಪಾದನೆಯಲ್ಲಿ ತಮಿಳು ನಾಡು ಮೊದಲ ಸ್ಥಾನದಲ್ಲಿದೆ. ಮೊಟ್ಟೆಯಲ್ಲಿ ಪ್ರತಿ ದಿನ 8 ಕೋಟಿ
3)ಬ್ರಾಯ್ಸರ್ (ಮಾಂಸದ ಕೋಳಿ)
ಮೊಟ್ಟೆಯೊಂದಿಗೆ ಅವಿಭಜಿತ ಅಂಧ್ರ ಪ್ರದೇಶದ್ದು (ತೆಲಂಗಾಣ ಆಂಧ್ರ ಪ್ರದೇಶ) ಪ್ರಥಮ ಸ್ಥಾನ. ತಮಿಳು ನಾಡಿನಲ್ಲಿ ಪ್ರತಿ ದಿನ 4 ಕೋಟಿ ಮೊಟ್ಟೆ
ಉತ್ಪಾದನೆಯಾಗುತ್ತದೆ. ಪಂಜಾಬ್, ಮಹಾರಾಷ್ಟ್ರ ಮತ್ತು ಕರ್ನಾಟಕಗಳಲ್ಲಿ ದಿನಕ್ಕೆ ತಲಾ 1.5 ಕೋಟಿ ಮೊಟ್ಟೆ ಸಿಗುತ್ತದೆ. ನಮ್ಮ ರಾಜ್ಯದ ಪ್ರತಿದಿನದ ಮಾಂಸದ ಕೋಳಿಗಳ ಉತ್ಪಾದನೆ 10 ಲಕ್ಷ, ಮೈಸೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ ಕೊಪ್ಪಳ, ಬಳ್ಳಾರಿ-ಹೊಸಪೇಟೆಗಳು ಮೊಟ್ಟೆ ಉತ್ಪಾದನೆಯಲ್ಲಿ ಮುಂದಿವೆ. ಮಾಂಸದ ಕೋಳಿ ಫಾರಂಗಳು ರಾಜ್ಯದ ಎಲ್ಲೆಡೆ ಹರಡಿವೆ. ಆದರೆ ಇದೆಲ್ಲ ಫಾರಂ ತೋಳಿಯ ಕಥೆ. ಇತ್ತೀಚೆಗೆ ನಾಟಿ ನಾಟಿ ಕೋಳಿ ಫಾರಂಗಳು ವಾಣಿಜ್ಯ ಬ್ರಾಯ್ಸರ್ ಫಾರಂಗಳಿಗೆ ಯಾವರೀತಿಯಲ್ಲೂ ಕಡಿಮೆಯಿಲ್ಲ, ವ್ಯತ್ಯಾಸವೆಂದರೆ ಇಲ್ಲಿರುವುದು ಬಣ್ಣ ಬಣ್ಣದ ನಾಟಿ ಕೋಳಿಗಳು.
ಗ್ರಾಮೀಣ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ಹೆಚ್ಚು ಖರ್ಚಿಲ್ಲದೆ ಸಣ್ಣ ಪ್ರಮಾಣದಲ್ಲಿ ಮನೆ ಬಳಕೆಗೆ, ಹೆಚ್ಚಿದ್ದರೆ ಮಾರಲು ಸಾಕಣೆ ಮಾಡುವ ಬಾತುಕೋಳಿ, ಗೌಜುಗ ಮುಂತಾದವನ್ನು ಈ ಪಟ್ಟಿಯಲ್ಲಿ ಸೇರಿಸಬಹುದು. ಸರ್ಕಾರಗಳು ಕೂಡ ತಮ್ಮ ಗ್ರಾಮೀಣಾಭಿವೃದ್ಧಿ ಯೋಜನೆಗಳಲ್ಲಿ ಇವಕ್ಕೆ ಹೆಚ್ಚಿನ ಒತ್ತು ನೀಡುತ್ತಿವೆ. ಹೆಚ್ಚಾಗಿ ಇವುಗಳನ್ನು ಹೊರಬಿಟ್ಟು ಮೇಯಿಸುವ – ಫ್ರೀ ರೇಂಜ್ ಪದ್ಧತಿಯಲ್ಲಿ ಸಾಕಲಾಗುತ್ತದೆ. ಮನೆಯಲ್ಲಿ ಸ್ವಲ್ಪ ಕಾಳು ಹಾಕಿದರೆ ಸಾಕು. ಇವುಗಳಿಂದ ಕೃಷಿಯೊಂದಿಗೆ ನಿರಂತರ ಉಪ ಆದಾಯ ಸಾಧ್ಯ. ರೋಗ ಕಡಿಮೆ. ಹೆಚ್ಚು ಕಾಳಜಿ ಬೇಕಿಲ್ಲ. ಅವು ಓಡಾಡುತ್ತ ಹುಳುಹುಪಡಿಗಳನ್ನು ತಿನ್ನುವುದರಿಂದ ಕೀಟ ನಿಯಂತ್ರಣಕ್ಕೆ ಸಹಕಾರಿ. ಈ ಹಕ್ಕಿಗಳ ಹಿಕ್ಕೆ ಉತ್ತಮ ಗೊಬ್ಬದ, ಆದರೆ ಈ ನಾಟಿ ಹಕ್ಕಿಗಳು ತೂಕ ಬರುವುದು ಮತ್ತು ಮೊಟ್ಟೆಯ ಸಂಖ್ಯೆ ಕಡಿಮೆ. ಆದಾಗ್ಯೂ ರಾತ್ರಿ ಮನೆಯಲ್ಲಿ ಅಲ್ಪಸ್ವಲ್ಪ ಕಾಳು ಹಾಕಿದರೆ ಹೆಚ್ಚು ಬೆಳೆಯುತ್ತವೆ. ಇವು ಹೊರಗಡೆ ಮೇಯುವಾಗ ವೈವಿಧ್ಯಮಯ ಆಹಾರ ತಿನ್ನುವುದರಿಂದ ಮಾಂಸಕ್ಕೆ ವಿಶೇಷ ರುಚಿ ಬರುತ್ತದೆ ಮತ್ತು ಮೊಟ್ಟೆ ಹೆಚ್ಚು ಪೌಷ್ಟಿಕಾಂಶಯುಕ್ತ ಎನ್ನಬಹುದು. ಆರೆಂಟು ತಿಂಗಳು ಬೆಳೆಸಿ ತಿನ್ನುವುದರಿಂದ ಗ್ರಾಮೀಣ ಕೋಳಿಗಳ ಮಾಂಸ ಹೆಚ್ಚು ಗಟ್ಟಿ
ಗ್ರಾಮೀಣ ಉದ್ಯೋಗ ಸೃಷ್ಟಿ ಮತ್ತು ಆದಾಯ ವೃದ್ಧಿಗೆ ಈ ಗ್ರಾಮೀಣ ಕೋಳಿ ಸಾಕಣೆ ಉಪಯುಕ್ತ ಹಾಗಾಗಿ ಕೇಂದ್ರ – ರಾಜ್ಯ ಸರ್ಕಾರಗಳು ಈ ಹಕ್ಕಿಗಳ ಸಾಕಣೆಗೆ ಸಾಕಷ್ಟು ಯೋಜನೆ ಸಹಾಯ ಮಾಡುತ್ತವೆ. ಇವುಗಳ ಕುರಿತ ಸಂಶೋಧನೆ, ತಳಿ ಅಭಿವೃದ್ಧಿ, ತರಬೇತಿ ಮತ್ತು ಮರಿ ಉತ್ಪಾದನೆ ಮಾರಾಟ ಕೆಲಸವನ್ನು ಸರ್ಕಾರಿ ಸಂಸ್ಥೆಗಳಾದ ಸಿ.ಪಿ.ಡಿ.ಒ.. ಕೃಷಿ ಮತ್ತು ಪನು ವಿವಿ ಮತ್ತಿತರೆ ವಿಜ್ಞಾನ ಸಂಸ್ಥೆಗಳು ನಡೆಸುತ್ತವೆ. ರಾಜ್ಯ ಪಶುಪಾಲನಾ ಇಲಾಖೆ ತರಬೇತಿ, ಕೋಳಿ ಮರಿ ತರಣೆ, ಲಸಿಕೆ ನೀಡುವುದು, ಚಿಕಿತ್ಸೆ ಮುಂತಾದ ಕೆಲಸ ನೋಡಿಕೊಳ್ಳುತ್ತದೆ. ಸಾಲದ ಯೋಜನಾ ವರದಿ ಮತ್ತು ಇತರೆ ದಾಖಲೆಪತ್ರಗಳನ್ನು ‘ಉದ್ಯಮಿ ಮಿತ್ರ’ ಪಾಲತಾಣದಲ್ಲಿ ಅಪ್ಲೋಡ್ ಮಾಡಿ ಬ್ಯಾಂಕಿನಿಂದ ಸಾಲಪಡೆಯಬೇಕು. ಇನ್ನು ನ್ಯಾಶನಲ್ ಲೈವ್ ಸ್ಟಾಕ್ ವಿಂತನ್ (NLM National Livestock Mission) ಅಡಿಯಲ್ಲಿ ಹೊಸದಾಗಿ ಸಾಹನೋದ್ಯಮ ಬಂಡವಾಳ – ವೆಂಚರ್ ಕ್ಯಾಪಿಟಲ್ ಕೊಡಲಾಗುತ್ತಿದೆ. ಕೋಳಿ ಸಾಕಣೆಗೆ ಮನೆ, ಹ್ಯಾಚರಿ ಮತ್ತಿತರೆ ಮೂಲಭೂತ ಸೌಕರ್ಯ ಸೃಷ್ಟಿಸಲು ಯೋಜನಾ ಮೊತ್ತದ 50%, ಆದರೆ ಗರಿಷ್ಠ 25 ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿ ಸಿಗುತ್ತದೆ. ರಾಜ್ಯ ಸರ್ಕಾರದಿಂದ ಪ್ರತ್ಯೇಶ ಸಹಾಯಧನ ಇಲ್ಲ
1)ನಾಟಿ ಕೋಳಿ:
ಮೊದಲಿಗೆ ನಾಟಿ ಕೋಳಿಯ ಕುರಿತು ವಿವರವಾಗಿ ತಿಳಿದುಕೊಳ್ಳೋಣ. ಇದರಲ್ಲಿ ಮೂಲತಃ ನಿರ್ಧಿಷ್ಟ ತಳಿಯೆಂಬುದಿಲ್ಲ. ಬೇರೆ ಬೇರೆ ಪ್ರದೇಶ-ರಾಜ್ಯಗಳಲ್ಲಿ ಹಲವಾರು ಸ್ಥಳೀಯ ನಾಟಿಕೋಳಿ ತಳಿಗಳು ಕಂಡುಬರುತ್ತವೆ. ಆದಾಗ್ಯೂ ಅಸೀಲ್ ಎಂಬುದು ಹೆಚ್ಚು ಜನಪ್ರಿಯ. ಕೋಳಿಯ ಬೆಳವಣಿಗೆಯ ಆಧಾರದಲ್ಲಿ ಚಿಕ್ಕ ಮಧ್ಯಮ ಮತ್ತು ದೊಡ್ಡ ಎಂದು ವರ್ಗೀಕರಿಸಲಾಗುತ್ತದೆ. ಇವೆಲ್ಲವೂ ಆಕರ್ಷಕ ಮಿಶ್ರ ಬಣ್ಣದ ಕೋಳಿಗಳು ಅಂದಹಾಗೆ ಈ ನಾಟಿ ಕೋಳಿಯಲ್ಲಿ ಮಾಂಸ ಮತ್ತು ಮೊಟ್ಟೆಗೆ ಪ್ರತ್ಯೇಕ ತಳಿಗಳಿಲ್ಲ. ಆದರಿವು ಮನೆಯ ಮಟ್ಟದಲ್ಲಿ ಸಾಕಣೆಗಷ್ಟೇ ಸೀಮಿತವಾಗಿವೆ. ವಾಣಿಜ್ಯ ನಾಟಿ ಕೋಳಿ ಸಾಕಣೆಯಲ್ಲಿ ಈ ತಳಿಗಳು ಬಳಕೆಯಾಗುತ್ತಿಲ್ಲ. ನಮ್ಮ ಪಡುವಿಜ್ಞಾನಿಗಳು ಶುದ್ಧ ನಾಟಿ ತಳಿಗಳನ್ನು ಸುಧಾರಿತ ಅಥವಾವಿದೇಶಿ ಕೋಳಿಗಳೊಂದಿಗೆ ಸಂಕರಗೊಳಿಸಿ ಹಲವಾರು ಮಾಂಸ ಮತ್ತು ಮೊಟ್ಟೆಯ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ
ಸಾಕಣೆ ವಿಧಾನ
ವಾಣಿಜ್ಯ ಬ್ರಾಯ್ಡರ್-ಲೀಯರ್ ತಳಿಗಳನ್ನು ಈ ವಿಧಾನದಲ್ಲಿ ಸಾಕಲಾಗದು. ಅವು ತುಂಬ ಸೂಕ್ಷ್ಮ ಮೇಯಲು ಹೊರಬಿಟ್ಟರೆ
ಬದುಕುವುದು ಕಷ್ಟ, ಕುಕ್ಕುಟ ವಿಜ್ಞಾನ ಸಂಸ್ಥೆಗಳ ಸುಧಾರಿತ ಹೈಬ್ರಿಡ್ ನಾಟಿ ಕೋಳಿ ಮರಿಗಳನ್ನು ತಂದು ಈ ವಿಧಾನದಲ್ಲಿ ಸಾಕಲಾಗುತ್ತದೆ. ಇಲ್ಲಿ ಹಗಲೆಲ್ಲ ತೋಟ-ಗದ್ದೆಗಳಲ್ಲಿ ಓಡಾಡಿ ಮೇಯಲು ಬಿಡುವುದು. ರಾತ್ರಿ ಸ್ವಲ್ಪ ಸಿದ್ಧ ಕೋಳಿ ಆಹಾರ ಕೊಡುವುದು. ಇವು ಮನೆಸುತ್ತ ತೋಟಗಳಲ್ಲಿ ಓಡಾಡಿಕೊಂಡಿದ್ದು ಹುಳ ಹುಪ್ಪಡಿ, ಬೀಜಗಳು, ಎರೆಹುಳು ಹುಲ್ಲು ಕಳೆಗಳ ಎಳೆ ಚಿಗುರುಗಳನ್ನು ತಿನ್ನುತ್ತವೆ. ಮನೆಯಲ್ಲಿ ಕಾಳು-ಪೀಸ್ಟ್ ಹಾಕದಿದ್ದರೆ ಇವುಗಳ ಬೆಳವಣಿಗೆ ತುಂಬಾ ನಿಧಾನ, 1-1.25 ಕಿಲೊಗ್ರಾಂ ಬೆಳೆಯಲು ಕನಿಷ್ಠ ಆರೆಂಟು ತಿಂಗಳು ಬೇಕು. ಹೀಗೆ ನಿಧಾನವಾಗಿ ನೈಸರ್ಗಿಕವಾಗಿ ಬೆಳೆದ ನಾಟಿಕೋಳಿಯ ಮಾಂಸಕ್ಕೆ ರುಚಿ-ಬೆಲೆ ಹೆಚ್ಚು. ನಾಟಿಕೋಳಿಯ ನೈಜತೆ ಉಳಿಸಿಕೊಳ್ಳುವಲ್ಲಿ ತಳಿ ಗುಣದೊಂದಿಗೆ ಹೊರಗಡೆ ಓಡಾಡಿ ಮೇಯುವುದು ಮತ್ತು ನಿಧಾನ ಬೆಳವಣಿಗೆ ಮಹತ್ವದ ಪಾತ್ರವಹಿಸುತ್ತವೆ. ಆದರೆ ನಮಗೆ ರುಚಿಯೊಂದಿಗೆ ತೂಕ ಮತ್ತು ಹೆಚ್ಚು ಮೊಟ್ಟೆ ಬೇಕು. ಹಾಗಾಗಿ ರಾತ್ರಿ ಗೂಡಿನಲ್ಲಿ ಸ್ವಲ್ಪ ಸಿದ್ಧ ಕೋಳಿ ಆಹಾರ, ಕಾಳುಕಡಿ ಕೊಡಬೇಕು. ನಾಟಿ ಕೋಳಿಗಳಿಗೆ ಅಧಿಕ ಶಕ್ತಿ ಕೊಡುವ ವಾಣಿಜ್ಯ ಬ್ರಾಯ್ಸರ್ ಫೀರ್ ಕೊಡಬಾರದು. ಬದಲಿಗೆ ಅಧಿಕ ಪ್ರೋಟಿನ್ ಇರುವ ಲೇಯರ್ ಫೀಡ್ ಸೂಕ್ತ. ಮೇಯಲು ಹೊರಬಿಟ್ಟಾಗ ಈ ಕೋಳಿಗಳು ನಾರಿನ ಸಲುವಾಗಿ ಹುಲ್ಲು-ಎಲೆ ತಿನ್ನುತ್ತವೆ. ಆದರಿದು ಜೀರ್ಣವಾಗಿ ಬೆಳವಣಿಗೆಗೆ ಉಪಯೋಗವಾಗುವುದಿಲ್ಲ. ಅಂದಹಾಗೆ ಅಧಿಕ ಪ್ರೋಟೀನ್ ಇರುವ ಅಜ್ವಲಾ ಸ್ಪ್ರೇರುಲೋನ ಮುಂತಾದವುಗಳನ್ನು ತಿನ್ನಿಸಬಹುದು.ನಾಟಿ ಕೋಳಿಯ ವಾಣಿಜ್ಯ ಸಾಕಣೆ
ತಮಿಳು ನಾಡಿನಲ್ಲಿ ದೊಡ್ಡ ಫಾರಂಗಳಲ್ಲಿ ನಾಟಿ ಕೋಳಿಯನ್ನೂ ವಾಣಿಜ್ಯ ಬ್ರಾಯರ್ ನಂತೆಯೇ ಸಾಕುತ್ತಾರೆ. ಆರಂಭದಲ್ಲಿ ವ್ಯವಸ್ಥಿತವಾದ ಬ್ಯೂಡಿಂಗ್ ಮಾಡಲಾಗುತ್ತದೆ.
ನಾಟಿ ಕೋಳಿಯಲ್ಲಿ ಒಟ್ಟಾರೆ ಮರಿ ಸಾವಿನ ಪ್ರಮಾಣ ಶೇಕಡಾ 8 ರಿಂದ 10 ರಷ್ಟು, 5 ನೇ ದಿನಕ್ಕೆ ಕಣ್ಣು ಮತ್ತು ಮೂಗಿನಲ್ಲಿ ಹನಿಬಿಡುವ ಮೂಲಕ ರಾಣಿಕೇಟ್ ಅಥವಾ ಕೊಕ್ಕರೆ ರೋಗದ ವಿರುದ್ಧ ಲಸಿಕೆ ಹಾಕುತ್ತಾರೆ. 15 ನೇ ದಿನಕ್ಕೆ ಐಬಿಡಿ ಲಸಿಕೆ, 35 ಮತ್ತು 65 ನೇ ದಿನದ ಹಂತದಲ್ಲಿ ಲಸೋಟಾ ಲಸಿಕೆ ಹಾಕುತ್ತಾರೆ. ಇನ್ನು 4-5 ವಾರಗಳ ಹಂತದಲ್ಲಿ ಲಿವರ್ ಟಾನಿಕ್ಕು ಕೊಡುತ್ತಾರೆ, ಗ್ರಾಮೀಣ ಕೋಳಿಗಳಿಗೆ ಇಷ್ಟೊಂದು ಔಷಧೋಪಚಾರ ಬೇಕಾಗಿಲ್ಲ. ಆದರೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ನಾಟಿಕೋಳಿ ಬೆಳೆಸುವ ರೈತರು ಯಾವುದೇ ಅಪಾಯ ಎದುರಿಸಲು ಸಿದ್ಧರಿಲ್ಲ. ಆಹಾರ ಯಾವುದೇ ಇದ್ದರೂ 2 ತಿಂಗಳಿಗೊಮ್ಮೆ ಡಿ-ವರ್ಮಿಂಗ್ ಮಾಡಬೇಕು. ಈ ಉದ್ದೇಶಕ್ಕೆ ಕುಡಿಯುವ ನೀರಿನಲ್ಲಿ ವೈವರ್ಜಿನ್ ಅಥವಾ ಅಫ್ರೆಂಡಾಜೋಲ್ ನಂತ ಬಂತುನಿವಾರಕ ಔಷಧವನ್ನು ಮಿಶ್ರಮಾಡಿ ಕುಡಿಸಲಾಗುತ್ತದೆ.
8 ದಿನಗಳ ಬೂಡಿಂಗ್ ನಂತರ 1 ಚದರಡಿಗೆ 5 ಮರಿ ಪ್ರಮಾಣದಲ್ಲಿ ದೊಡ್ಡ ಶೆಡ್ ನಲ್ಲಿ ಬಿಡಲಾಗುತ್ತದೆಮಾಂಸದ ಉದ್ದೇಶಕ್ಕೆ ನಾಟಿಕೋಳಿ ಸಾಕಲು ಮಾಮೂಲಿ ಬ್ರಾಯ್ಡರ್ ರೆಡ್ಡುಗಳೇ ಬಳಕೆಯಲ್ಲಿವೆ. ಭತ್ತದ ಹೊಟ್ಟು ಹಾಸಿ ದಪ್ಪ ಸತ್ತ ವಿಧಾನದಲ್ಲಿ ಬೆಳೆಸಲಾಗುತ್ತದೆ. ಕೋಳಿಮರಿಗಳು ಬೆಳೆದಂತೆಲ್ಲ ಸ್ಥಳಾವಕಾಶ ಹೆಚ್ಚಿಸುತ್ತ ಹೋಗಬೇಕು. 3 ತಿಂಗಳು ಬೆಳೆದ ನಾಟಿಕೋಳಿಯೊಂದಕ್ಕೆ 1 ಚದರಡಿ ಜಾಗ ಬೇಕು.
ವಾಣಿಜ್ಯ ಬ್ರಾಯ್ಸರ್ ಪೀಡು ದುಬಾರಿ ಮತ್ತು ಇದರಿಂದ ಸಾಟಿಕೋಳಿ ಅತಿ ಶೀಘ್ರವಾಗಿ ತೂಕ. ಪಡೆದುಬಿಡುತ್ತದೆ. ಇವು ನಿಧಾನವಾಗಿ ಬೆಳೆದರೆ ಮಾತ್ರ ಮಾಂಸ ರುಚಿಯಾಗಿರುತ್ತದೆ
ಅಂದಹಾಗೆ ನಾಟಿಕೋಳಿ ಸಾಕಣೆ ಭಾರಿ ಲಾಭದಾಯಕ ಎಂದೇನಿಲ್ಲ, ವಾಣಿಜ್ಯ ಬ್ರಾಯ್ಸರ್ ನ ದುಪ್ಪಟ್ಟು ದರ ಸಿಗುವುದಾದರೂ ಬೆಳವಣಿಗೆಗೆ ಎರಡರಷ್ಟು ಸಮಯ ಬೇಕು. ಆಹಾರದ ಖರ್ಚು ಕಡಿಮೆಯೆಂದಾದರೂ ದೊಡ್ಡ ಪ್ರಮಾಣದಲ್ಲಿ ಸಾಕಿದಾಗ ಇಂಟಿಗ್ರೇಶನ್ ಇಲ್ಲದೆ ಸ್ಥಳೀಯವಾಗಿ ಮಾರುಕಟ್ಟೆ ಕುದುರಿಸಬಹುದು. ನಾಚಿಕೋಳಿಯ ರುಚಿ ಎಲ್ಲರಿಗೆ ಗೊತ್ತಿರುವುದರಿಂದ ಹೆಚ್ಚಿನ ಪ್ರಚಾರ ಬೇಕಿಲ್ಲ, ಇತರೆ ಕೃಷಿ ಕೆಲಸಗಳೊಂದಿಗೆ ಉಪ ಉದ್ಯೋಗವಾಗಿ ನಡೆಸಿದರೂ ನಷ್ಟವಿಲ್ಲ, ಉಷ್ಣತೆ ಮತ್ತು ಹವಾಮಾನಗಳಲ್ಲಿ ಏರುಪೇರಾದರೂ ಅಂಥ ಸಮಸ್ಯೆಯಿಲ್ಲ, ಜೊತೆಗೆ ಕೋಳಿ ಗೊಬ್ಬರ ಕೃಷಿ ಬೆಳೆಗಳನ್ನು ಸಮೃದ್ಧಗೊಳಿಸುತ್ತದೆ. ತೋಟದಲ್ಲಿ ಮೇಯಲುಬಿಟ್ಟರೆ ಕ್ರಿಮಿ-ಕೀಟಗಳು ನಿಯಂತ್ರಣವಾಗುತ್ತವೆ. ಸಣ್ಣಣ್ಣ ಪ್ರಮಾಣದಲ್ಲಿ ಸಾಕುವಾಗ ಹಣ ಹೂಡಿಕೆ ತುಂಬಾ ಕಡಿಮೆ ಸಾಕು.
ಆರಂಭದಲ್ಲಿ ವಾಣಿಜ್ಯ ಬ್ರಾಯ್ಸರ್ ಕೋಳಿಗಳನ್ನು ಜನಪ್ರಿಯಗೊಳಿಸಲು ಉತ್ಪಾದಕರು ಸಾಕಷ್ಟು ಬೆವರು ಹರಿಸಿದ್ದಾರೆ. ಇದೀಗ ನಾಟಿಕೋಳಿಯಲ್ಲಿ ಈ ಪ್ರಯತ್ನ ಪಟ್ಟರೆ ತೂಕ 2 ಕಿಲೊಗ್ರಾಂ ಇದ್ದರೂ ಅದು 45 ದಿನಗಳ ಕೋಳಿಮರಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯಿರುವವರು ಈಗ ನಾಟಿಕೋಳಿಯನ್ನು ಇಷ್ಟಪಡುತ್ತಿದ್ದಾರೆ. ಹಾಗಾಗಿ ನಾಟಿಕೋಳಿ ಸಾಕಣೆಗೆ ಉಜ್ವಲ ಭವಿಷ್ಯವಿದೆ. ಆದರೆ ಇದೂಕೂಡ ಮತ್ತೊಂದು ಬ್ರಾಯ್ಸರ್ ಕೋಳಿ ಉದ್ಯಮ ಆಗಬಹುದೆಂಬ ಅತಂಕ ಚಿಕ್ಕ ರೈತರನ್ನು ಬದಲಿಗೆ ಹಸಿರು ಮೇಯಿಸುವ ನೂರಾರು ಚಿಕ್ಕ ರೈತರು ಸಂಘಟಿತರಾದರೆ ವ್ಯವಸ್ಥಿತ ಮಾರುಕಟ್ಟಿ ಸಾಧ್ಯ ಅಂದಹಾಗೆ ಗ್ರಾಮೀಣ ಕೋಳಿ ಚಿತ್ರವಟಕ್ಕಷ್ಟೇ ಸೀಮಿತವಾಯಿತೆಂಬ ಹಂತದಲ್ಲಿ ಅದರ ಪುನರುತ್ಥಾನವಾದದ್ದು ನಮ್ಮ ನಿಸರ್ಗ ವ್ಯವಸ್ಥೆಯ ಅಚ್ಚರಿಯ ಸಮತೋಲನ ತಮಿಳು ನಾಡಿನಂತೆಯೇ ನಮ್ಮ ರೈತರೂ
ಕೂಡ ನಾಟಿ ಕೋಳಿಸಾಕಣೆಗೆ ಮುಂದಾಗುತ್ತಾರಾ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಿದೆ.
2}ಕಡಕನಾಥ ಕಪ್ಪು ಕೋಳಿ:
ಕಡಕನಾಥ ಕೋಳಿ ಮಾಮೂಲಿ ನಾಟಿ ಕೋಳಿಯೇ ಮೆಲನಿನ್ ಅಂಶ ಹೆಚ್ಚಿರುವುದರಿಂದ ಚರ್ಮ, ರಕ್ತ ಕಪ್ಪಿರುತ್ತದೆ. ಅಷ್ಟೇ. ಮಧ್ಯ ಪ್ರದೇಶ ಜಾಬ್ಬಾದ ಕಡಕನಾಥ ಇದರ ಮೂಲ ಊರು ಈ ಕೋಳಿಗೆ ಅಲ್ಲಿ ಕಾಲಾಮಾಸಿ ಎಂದು ಹೆಸರು. ಚೈನಾದವರು ಈ ಕಪ್ಪು ಕೋಳಿಯನ್ನು ಔಷಧಕ್ಕಾಗಿ ಬಳಸುತ್ತಾರೆ. ಹಾಗಾಗಿ ನಮ್ಮಲ್ಲೂ ಔಷಧಿಯುಕ್ತ ಕೋಳಿ ಎಂದು ಕಥೆ ಹೇಳಿ 800 ರಿಂದ 1000 ರೂಪಾಯಿಗೆ ಮಾರಾಟ ಮಾಡುವ ನೆಟ್ವರ್ಕ್ ದಂಧೆ (ಪಾಂಜಿ ಸ್ವೀಮ್) ಸ್ವಲ್ಪ ಕಾಲ ನಡೆಯಿತು. ನಂಬಿ ಹಣ ಹಾಕಿ ಕೆಲವರು ಕಳೆದುಕೊಂಡರು ಅಷ್ಟು ಬೆಲೆ ಕೊಟ್ಟು ನಮ್ಮಲ್ಲಿ ತಿನ್ನುವವರು ಸಿಗಲಿಲ್ಲ ಮಧ್ಯ ಪ್ರದೇಶ, ಉತ್ತರ ಪ್ರದೇಶ, ಪಂಜಾಬ್ ಮುಂತಾದೆಡೆ ಈ ಕಡಕನಾಥ ಕೋಳಿ ಜನಪ್ರಿಯ. ಆದರೆ ದಕ್ಷಿಣ ಭಾರತದಲ್ಲಿ ಯಶಸ್ವಿ ಜನಪ್ರಿಯ ಆಗಲಿಲ್ಲ.
3}ಟರ್ಕಿ ಕೋಳಿ:
ಟರ್ಕಿ ಕೋಳಿಯ ಹುಟ್ಟೂರು ಟರ್ಕಿ ದೇಶವಲ್ಲ, ಮೆಕ್ಸಿಕೊ, ನಮ್ಮ ದೇಶದ ಒಟ್ಟಾರೆ ಕೋಳಿಮಾಂಸದ ಉತ್ಪಾದನೆಯಲ್ಲಿ ಇದರ ಪಾಲು ಸದ್ಯ ಕೇವಲ 2% ಮಾತ್ರ. ಅಂದಕ್ಕಾಗಿ ಮತ್ತು ಮಾಂಸಕ್ಕಾಗಿ ಟರ್ಕಿ ಸಾಕಣೆ ಇತ್ತೀಚೆಗೆ ಹೆಚ್ಚುತ್ತಿದೆ. ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವಾಣಿಜ್ಯಕ ಟರ್ಕಿ ಫಾರಂಗಳು ಕಂಡುಬರುತ್ತವೆ. ಜಾಗತಿಕವಾಗಿ ಅಮೇರಿಕ, ಕೆನಡಾ ಮತ್ತು ಯೂರೋಪು ರಾಷ್ಟ್ರಗಳಲ್ಲಿ ಇದರ ಮಾಂಸ ಹೆಚ್ಚು ಪ್ರಚಲಿತ. ಅಮೇರಿಕಾದಲ್ಲಿ ಟರ್ಕಿ ಕೋಳಿಯೇ ನಂಬರ್ ಒನ್. ನಮ್ಮ ದೇಶದಲ್ಲಿ ಇದಕ್ಕೆ ಡಿಸೆಂಬರ್ ಹಕ್ಕಿ ಎಂಬ ಹೆಸರಿದೆ. ಕಾರಣ ಕ್ರಿಸ್ಟನ್ ಸಮಯದಲ್ಲಿ ಕ್ರಿಶ್ಚಿಯನ್ನರು ಟರ್ಕಿ ಮಾಂಸವನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಕ್ರಮೇಣ ಡಾಬಾಗಳಲ್ಲಿ ಮತ್ತು ಮಹಾನಗರಗಳ ದೊಡ್ಡ ಹೊಟೆಲ್ ಗಳಲ್ಲಿ ವರ್ಷವಿಡೀ ಟರ್ಕಿ ಬಿರಿಯಾನಿ ಮತ್ತಿತರ ಖಾದ್ಯಗಳು ತಯಾರಾಗುತ್ತಿವೆ, ಹೀಗೆ ಕೇವಲ ಡಿಸೆಂಬರ್ ಹಕ್ಕಿಯಾಗಿದ್ದ ಟರ್ಕಿ ಸ್ವಲ್ಪಮಟ್ಟಿಗೆ ಸಮ ಕಾಲದ ಕೋಳಿಯಾಗುತ್ತಿದೆ. ಇದರನ್ನು ಮೃದುವಾದ ಮಾಂಸ ಕೋಳಿ ನಾರಿಗೆ ಅಷ್ಟು ಸೂಕ್ತವೆಲ್ಲ ವಿದೇಶಗಳಲ್ಲಿ ಟರ್ಕಿ ಹೆಚ್ಚಾಗಿ ಬರ್ಗರ್, ರೋಸ್ಟ್, ಬಾರ್ದಿಕ್ಯೂಗಳಿಗೆ ಬಳಕೆಯಾಗುತ್ತದೆ. ಇದರ ನಿವ್ವಳ ಮಾಂಸದ ಪ್ರಮಾಣ ಕೋಳಿಗಳಲ್ಲೇ ಅತಿ ಹೆಚ್ಚು ಸರಾಸರಿ 75-80%
ನಮ್ಮ ದೇಶದಲ್ಲಿ ಟರ್ಕಿ ಕೋಳಿಗಳಲ್ಲಿ ಮೂರು ಬಗೆಯ ತಳಿಗಳು ಚಾಲ್ತಿಯಲ್ಲಿವೆ ಬೆಂಗಳೂರು ಹೆಸರಘಟ್ಟ ಸಿ.ಪಿ.ಡಿ.ಒ.ದ ಲಾರ್ಜ್, ಐ.ವಿ.ಆರ್.ಐ.ನ ಮೀಡಿಯಂ ಮತ್ತು ಚನ್ನೆ ನಂದನಂನ ಮಿನಿ ತಳಿಗಳು ಬಳಕೆಯಲ್ಲಿವೆ. ಇವುಗಳಲ್ಲಿ ಸಿ.ಪಿ.ಡಿ.ಒ.ದ ಲಾರ್ಜ್ ತಳಿ ಹೆಚ್ಚು ಜನಪ್ರಿಯ, ಇದರಲ್ಲಿ ಒಂದು ಬ್ರಾಡ್ ಬ್ರೆಸ್ಟೆಡ್ ಬೊಂಜ್ ಹಾಗೂ ಮತ್ತೊಂದು ಬ್ರಾಡ್ ಬ್ರೆಸ್ಟೆಡ್ ವೈಟ್, ಆಕರ್ಷಕ ಪುಕ್ಕ ಮೂಗು ಮತ್ತು ಮೂಗಿನ ಕೆಳಗಡೆ ಜೋತು ಬಿದ್ದಿರುವ ತೊಗಲು ಇರುವ ದೊಡ್ಡ ಕೋಳಿ ಗಂಡು ಟರ್ಕಿ, ಈ ಕೋಳಿಯ ರೋಗನಿರೋಧಕ ಶಕ್ತಿ ಹೆಚ್ಚು. ಹಾಗಾಗಿ ಮನೆಸುತ್ತ ತೋಟ ಹೊಂದಿರುವ ರೈತರಿಗೆ ಟರ್ಕಿ ಸಾಕಣೆ ತುಂಬ ಸುಲಭ ಎನ್ನಬಹುದು. ಟರ್ಕಿಯ ವಾಣಿಜ್ಯ ಸಾಕಣೆಗೆ ಮಾಮೂಲಿ ಕೋಳಿ ಶೆಡ್ ಗಳು ಬಳಕೆಯಾಗುತ್ತವೆ. ಬ್ರಾಯರ್ ಕೋಳಿಯಂತೆ ದಪ್ಪ ಸತ್ತ ವಿಧಾನ ಅನುಸರಿಸಲಾಗುತ್ತದೆ. ಕೋಳಿಯ ಗಾತ್ರ ದೊಡ್ಡದಿರುವುದರಿಂದ ಪೂರ್ತಿ ಬೆಳೆದ ಟರ್ಕಿಯೊಂದಕ್ಕೆ 3 ರಿಂದ 4 ಚದರಡಿ ಜಾಗ ಆಗತ್ಯ. ಮನೆ ಮಟ್ಟದಲ್ಲಿ ನಾಕುವಾಗ ನಾಟಿ ಕೋಳಿ ಮತ್ತು ಟರ್ಕಿಗಳನ್ನು ಒಟ್ಟಿಗೆ ಸಾಕಬಹುದಾದರೂ ವಾಣಿಜ್ಯ ಸಾಕಣೆಯಲ್ಲಿ ಎರಡೂ ಒಂದೆಡೆ ಬೇಡ. ರೋಗ ಹರಡಬಹುದು
ಟರ್ಕಿಯ ಸಾಕಣೆ ಸುಲಭ. ಮಾರ್ಚ್-ಏಪ್ರಿಲ್ ನಲ್ಲಿ 40-45 ರೂಪಾಯಿ ಕೊಟ್ಟು 1 ದಿನದ ಮರಿ ತನ್ನಿ, 6 ರಿಂದ 8 ವಾರ ಹೆಚ್ಚಿನ ಪ್ರೋಟಿನ್ ಕೊಟ್ಟು ಜಾಗೃತೆಯಿಂದ ಸಾಕಿ. ಹಸಿರು ಬಟಾಣಿ, ಬೇಯಿಸಿದ ಕೋಳಿ ಮೊಟ್ಟೆ ತಿನ್ನಿಸಬಹುದು. 8 ವಾರದ ನಂತರ ಹೊರಗಡೆ ನೆರಳಿನಲ್ಲಿ ಮೇಯಲು ಬಿಡಿ. ಟರ್ಕಿ ಹಸಿದು ಮೇವು ಇಷ್ಟಪಡುತ್ತದೆ. ಹಾಗಾಗಿ 25% ಹಾಳು, 75% ಹಸಿರು ತಿನ್ನಿಸಬಹುದು, ಒಂದೆಕರೆ ತೋಟದಲ್ಲಿ 200 ರಿಂದ 250 ದೊಡ್ಡ ಟರ್ಕಿ ಕೋಳಿ: ಮೇಯಿಸಬಹುದು. ಇವು ಹುಲ್ಲು ಎಲೆಗಳಲ್ಲದೆ ಎರೆಹುಳು, ಬಸವನ ಹುಳು, ಗೆದ್ದಲು ಮತ್ತಿತರ ಹುಳು ಹುಪ್ಪಡಿಗಳನ್ನು ಆಯ್ದುಕೊಂಡು ತಿನ್ನುತ್ತದೆ ಜೊತೆಗೆ ಕುದುರೆ ಮೆಂತೆ ಸ್ಟೈಲೋಸಾಂತನ್, ಅಜೋಲಾ ಮುಂತಾದ ಪ್ರೋಟೀನು ಭರಿತ ಮೇವುಗಳನ್ನು ಬೆಳೆಸಿ ತಿನ್ನಿಸಬಹುದು. ದಿನಕ್ಕೆ ಪ್ರತಿ ಕೋಳಿಗೆ 30 ರಿಂದ 40 ಗ್ರಾಂ ಕೆಲ್ ಗ್ರೀಟ್ ಕೊಟ್ಟರೆ ಕ್ಯಾಲ್ಸಿಯಂ ಪೂರೈಕೆ ಉತ್ತಮವಾಗಿ ಕಾಲುಗಳು ಬಲವಾಗುತ್ತವೆ. ಈ ಕೋಳಿಗಳು ವರ್ಷಕ್ಕೆ 50 ರಿಂದ 60 ಮೊಟ್ಟೆಯಿಡುತ್ತವೆ. ಮೊಟ್ಟೆಯ ಗಾತ್ರ ದೊಡ್ಡದು. ಈ ಮೊಟ್ಟೆ ನಿನ್ನಲು ರುಚಿಯಿದ್ದರೂ ಮಾರಾಟಕ್ಕೆ ಮೊಟ್ಟೆ ಉತ್ಪಾದನೆ ಲಾಭದಾಯಕವಲ್ಲ, ಉತ್ತಮ ನಿರ್ವಹಣೆಯಲ್ಲಿ ದೊಡ್ಡ ತಳಿಯ ಗಂಡು ಟರ್ಕಿ 6 ತಿಂಗಳಲ್ಲಿ 10 ರಿಂದ 12 ಕಿಲೋಗ್ರಾಂ ಮತ್ತು ಹೆಣ್ಣು 6 ರಿಂದ ಏಳು ಸರಾಸರಿ ಒಂದು ಟರ್ಕಿ 1500 ರಿಂದ2000 ಸಿಗುತ್ತದೆ ಇದರ ಸಾಗಣೆಯ ವೆಚ್ಚ ಪ್ರತಿ ಹೋಳಿಗೆ. 500 ರೂಪಾಯಿ.
ಕೋಳಿಗೆ 1000 ದಿಂದ 1500 ರೂಪಾಯಿ ಲಾಭ ಬೆಂಗಳೂರಿನ ಶಿವಾಜಿನಗರ ಮತ್ತು ಗೋವಾ ರಾಜ್ಯ ಟರ್ಕಿಗೆ ಉತ್ತಮ ಮಾರುಕಟ್ಟೆಗಳು.